Amruthadhare : ಪಂಕಜಾ ರಹಸ್ಯ ತಿಳಿದ ಆನಂದ್ ಕಥೆ ಮುಕ್ತಾಯವಾಯ್ತಾ ? ಕುಚಿಕು ಗೆಳೆಯನನ್ನು ಕಾಪಾಡ್ತಾರಾ ಡುಮ್ಮ ಸರ್ ?

ಅಮೃತಧಾರೆ ಧಾರಾವಾಹಿ ದಿನಕ್ಕೊಂದು ತಿರುವನ್ನು ಪಡೆಯುತ್ತಿದೆ. ಪ್ರೇಕ್ಷಕರ ಕುತೂಹಲ ಕೆರಳಿಸಿದೆ. ಮುಂದೇನಾಗುತ್ತೆ ? ಧಾರಾವಾಹಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದೆಯಾ ಎನ್ನುವ ಪ್ರಶ್ನೆ ಕೂಡ ಹಲವರಲ್ಲಿ ಮನೆ ಮಾಡಿದೆ. ಯಾಕೆಂದರೆ... ಅಮೃತಧಾರೆಯಲ್ಲಿ ಸದ್ಯ ಪಂಕಜಾ ರಹಸ್ಯ ತಿಳಿಯಲು ಭೂಮಿಕಾ ಮುಂದಾಗಿದ್ದಾಳೆ. ಕನಕ ದುರ್ಗಕ್ಕೆ ಕಥೆ ಹೇಳಿ ತನ್ನ ಗಂಡ ಗೌತಮ್ ದಿವಾನ್ ಜೊತೆ ಹೋಗಿದ್ದಾಳೆ.

ಆನಂದ್ ಮತ್ತು ಅರ್ಪಣಾ ಕೂಡ ಈ ಪ್ರವಾಸದಲ್ಲಿ ಜೊತೆಯಾಗಿದ್ದು, ಭೂಮಿಕಾ ರಹಸ್ಯ ಕಾರ್ಯಾಚರಣೆಯಲ್ಲಿ ಆನಂದ್ ಜೊತೆ ನಿಂತಿದ್ದಾನೆ. ಕನಕ ದುರ್ಗಾಗೆ ಬಂದು ಊರೆಲ್ಲ ಪಂಕಜಾ ಮೂಲವನ್ನು ಹುಡಕಲು ಶುರು ಮಾಡುವ ಭೂಮಿಕಾ ಮತ್ತು ಆನಂದ್‌ಗೆ ನಂಜಮ್ಮನ ಕುಡುಕ ಗಂಡ ಸಿಕ್ಕಿದ್ದಾನೆ.

amruthadhaare-serial-may-26-episode-written-update

ಎಣ್ಣೆ ಕುಡಿಸಿದರೆ ಯಾವ ವಿಚಾರ ಬೇಕಾದರೂ ನಂಜಮ್ಮ ಕುಡುಕ ಗಂಡ ಹೇಳಬಲ್ಲ. ಅದರಲ್ಲಿಯೂ ಪಂಕಜಾ ಮೇಲೆ ನಂಜಮ್ಮ ಕುಡುಕ ಗಂಡನಿಗೆ ವಿಪರೀತ ಕೋಪ ಇದೆ. ಆದರೂ ಕೂಡ ಪಂಕಜಾ ರಹಸ್ಯವನ್ನು ನಂಜಮ್ಮ ತನ್ನ ಕುಡುಕ ಗಂಡನಿಗೆ ಹೇಳಿದ್ದಾಳೆ. ಈ ರಹಸ್ಯ ಮುಂದೆ ರಹಸ್ಯವಾಗಿಯೇ ಇದ್ದರೆ ನಮಗೆ ನಮ್ಮ ಜೀವನಕ್ಕಾಗುವಷ್ಟು ಹಣ ಬರುತ್ತೆ ಎಂದು ಹೇಳಿರುತ್ತಾಳೆ.

ಇದಲ್ಲದೇ ಯಾರ ಎದುರು ಕೂಡ ಮದ್ಯದ ಅಮಲಿನಲ್ಲಿ ಪಂಕಜಾ ಕುರಿತು ಮಾತನಾಡಬೇಡ ಎಂದು ತಾಕಿತ್ತು ಮಾಡಿರುತ್ತಾಳೆ. ಆದರೆ ಹುಟ್ಟು ಗುಣ ಸುಟ್ಟರೂ ಹೋಗದು. ಎಣ್ಣೆ ಕುಡಿಯಲು ಹೋದ ನಂಜಮ್ಮನ ಕುಡುಕ ಗಂಡನನ್ನು ಚೆನ್ನಾಗಿ ಕುಡಿಸಿ ಆನಂದ್ ಖೆಡ್ಡಾಗೆ ಕೆಡವಿದ್ದಾನೆ. ಎಲ್ಲ ವಿಚಾರಗಳನ್ನು ಬಾಯಿ ಬಿಡಿಸಿದ್ದಾನೆ.

ಆದರೆ. ಇದೇ ಸಮಯದಲ್ಲಿ ನಂಜಮ್ಮಗೆ ಎಲ್ಲ ವಿಚಾರ ಗೊತ್ತಾಗಿದೆ. ಕೂಡಲೇ ತಡ ಮಾಡದ ನಂಜಮ್ಮ. ಶಕುಂತಲಾಗೆ ಫೋನ್ ಮಾಡಿದ್ದಾಳೆ. ಪಂಕಜಾ ಹುಡುಕಿಕೊಂಡು ಯಾರೋ ಬಂದಿದ್ದಾರೆ ಎಂದು ಹೇಳುತ್ತಾಳೆ.

ರೌಡಿಗಳನ್ನು ಕಳುಹಿಸುವ ಶಕಂತಲಾ ?

ಪಂಕಜಾ ಹೇಳಿದ ಸುದ್ದಿಯನ್ನು ಕೇಳಿ, ಗಾಬರಿಯಾಗುವ ಶಕುಂತಲಾಗೆ ಅಲ್ಲಿ ಬಂದಿರುವುದು ಆನಂದ್ ಎಂದು ಗೊತ್ತಾಗುತ್ತೆ. ತನ್ನ ಮುಖವಾಡ ಕಳಚಿ ಬೀಳುವ ಭಯದಲ್ಲಿ ಶಕುಂತಲಾ ರೌಡಿಗಳಿಗೆ ಸುಪಾರಿ ಕೊಡ್ತಾಳೆ. ಆನಂದ್ ಇರುವ ಜಾಗಕ್ಕೆ ಕಳುಹಿಸಿದ್ದಾಳೆ.


ಆನಂದ್‌ಗೆ ಎದುರಾಗುವ ನಂಜಮ್ಮ

ಸತ್ಯವನ್ನು ಅರಿತ ಆನಂದ್, ಭೂಮಿಕಾಗೆ ವಿಷಯ ಹೇಳಬೇಕೆಂದು ಆತುರ ಆತುರವಾಗಿ ಹೊರಡುತ್ತಾನೆ. ಈ ಸಮಯದಲ್ಲಿ ಆನಂದ್‌ಗೆ ನಂಜಮ್ಮ ಎದುರಾಗ್ತಾಳೆ. ನಂಜಮ್ಮನನ್ನು ಕಂಡು ಬೆರಗಾಗುವ ಆನಂದ್ ಇವಳ್ಯಾಕೇ ಇಲ್ಲಿ ಬಂದಿದ್ದಾಳೆ ಎಂದು ಮನದಲ್ಲಿ ಅಂದುಕೊಳ್ತಾನೆ. ಇಲ್ಲಿಂದ ಆದಷ್ಟು ಬೇಗ ಜಾಗ ಖಾಲಿ ಮಾಡಬೇಕೆಂದುಕೊಂಡು ತಿರುಗಿ ಹೊರಡಲು ಮುಂದಾಗುತ್ತಾನೆ. ಈ ಸಮಯದಲ್ಲಿ ಆನಂದ್‌ಗೆ ರೌಡಿಗಳು ಎದುರಾಗುತ್ತಾರೆ.

ಆನಂದ್‌ಗೆ ಕರೆ ಮಾಡುವ ಗೌತಮ್

ರೌಡಿಗಳಿಂದ ತಪ್ಪಿಸಿಕೊಂಡು ಆನಂದ್ ಓಡಿ ಹೋಗುತ್ತಾನೆ. ಇದೇ ಸಮಯದಲ್ಲಿ ಆನಂದ್‌ಗೆ ಗೌತಮ್ ದಿವಾನ್‌ ಕರೆ ಮಾಡಿದ್ದು ಆಗ ಆನಂದ್ ಧ್ವನಿಯನ್ನು ಕೇಳಿದ ಗೌತಮ್ ದಿವಾನ್‌ಗೆ ಅನುಮಾನ ಬರುತ್ತೆ. ಯಾಕೆ ಎದೆಯುಸಿರು ಬಿಡುತ್ತಿದ್ದೀಯಾ ಎಂದು ಕೇಳುತ್ತಾನೆ. ಈ ಸಮಯದಲ್ಲಿ ಆನಂದ್ ಮೇಲೆ ಹಲ್ಲೆ ನಡೆದಿದ್ದು ಆತಂಕಕ್ಕೆ ಒಳಗಾಗುವ ಗೌತಮ್ ದಿವಾನ್, ಭೂಮಿಕಾ ಮತ್ತು ಅಪರ್ಣಾಗೆ ಆನಂದ್ ಸಂಕಷ್ಟದಲ್ಲಿದ್ದಾನೆ ಎಂದು ಹೇಳಿ ಆನಂದ್ ಹುಡುಕಾಟಕ್ಕೆ ತೆರಳುತ್ತಾನೆ.

ಆನಂದ್ ಪ್ರಾಣ ಉಳಿಸುತ್ತಾರಾ ಡುಮ್ಮ ಸರ್ ?

ತನ್ನ ಕುಚಿಕು ಗೆಳೆಯನನ್ನು ಹುಡುಕಿಕೊಂಡು ಗೌತಮ್ ದಿವಾನ್ ತೆರಳಿದ್ದಾನೆ. ಆನಂದ್ ಫೋಟೊವನ್ನು ಊರಿನವರ ಬಳಿ ತೋರಿಸಿ ಇವರನ್ನು ಎಲ್ಲಾದರೂ ನೋಡಿದ್ದೀರಾ ಎಂದು ಕೇಳುತ್ತಿದ್ದಾನೆ. ಮತ್ತೊಂದು ಕಡೆ ರೌಡಿಗಳ ಕೈಗೆ ಸಿಲುಕಿರುವ ಆನಂದ್ ರಕ್ತ ಸಿಕ್ತವಾಗಿ ಕೆಳಗೆ ಬಿದ್ದಿದ್ದಾನೆ. ಈ ಹಿನ್ನೆಲೆ ಆನಂದ್ ಪಾತ್ರ ಮುಕ್ತಾಯವಾಯ್ತಾ ? ಆನಂದ್ ನ ರೌಡಿಗಳಿಂದ ಗೌತಮ್ ಕಾಪಾಡುತ್ತಾನಾ ? ಎನ್ನುವ ಪ್ರಶ್ನೆ ಧಾರಾವಾಹಿ ಪ್ರೇಮಿಗಳನ್ನು ಕಾಡುತ್ತಿದ್ದು ಮುಂದೆ ಏನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
NR Ramesh, President of the All Karnataka Dr. Rajkumar Fan Associations Federation, has criticized actor Madenuru Manu following the circulation of an alleged audio clip. The audio reportedly contains derogatory remarks about prominent Kannada film stars. The incident has sparked backlash from fans and industry supporters.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X