Amruthadhaare:ಭೂಮಿಕಾ-ಗೌತಮ್ ಸತ್ಯ ಬಯಲು; ಮೊಮ್ಮಗನ ಸಂಸಾರ ಸರಿಪಡಿಸಲು ಪಣತೊಟ್ಟ ಅಜ್ಜಿ
ಭೂಮಿಕಾ ಹಾಗೂ ಗೌತಮ್ ಒಬ್ಬರನ್ನೊಬ್ಬರು ಬಹಳ ಇಷ್ಟ ಪಡುತ್ತಿದ್ದಾರೆ. ಅವರಿಬ್ಬರೂ ತನ್ನ ಇಷ್ಟ ಕಷ್ಟಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುತ್ತಿರುವ ವೇಳೆ ಶಕುಂತಲಾ ದೇವಿ ಮತ್ತೆ ಡ್ರಾಮ ಮಾಡುತ್ತಿದ್ದಾಳೆ. ಶಕುಂತಲಾ ದೇವಿ ಆಡುತ್ತಿರುವ ನಾಟಕಕ್ಕೆ ಈ ಬಾರಿ ತೆರೆ ಎಳೆಯಲೇ ಬೇಕು ಎಂದು ಭೂಮಿಕಾ ಅಂದುಕೊಂಡು ಇರುತ್ತಾಳೆ.
ಹಾಗೆಯೇ ಮಲ್ಲಿಗೆ ಕರೆ ಮಾಡಿ, ಅತ್ತೆ ಹುಷಾರು ಇದ್ದಾರಾ ಅಥವಾ ಇಲ್ಲವೇ ಎಂಬುವುದನ್ನು ತಿಳಿದುಕೊಳ್ಳುತ್ತಾರೆ. ಆಗ ಮಲ್ಲಿ ಅಲ್ಲಿ ನಡೆಯುತ್ತಿರುವ ವಿಚಾರವನ್ನು ಹೇಳಿದಾಗ ಭೂಮಿಕಾಗೆ ತಿಳಿಯುತ್ತದೆ. ಇದು ಪಕ್ಕ ಡ್ರಾಮ. ಈ ಬಾರಿ ಅತ್ತೆಗೆ ಸರಿಯಾದ ಪಾಠ ಕಲಿಸುತ್ತೇನೆ ಎಂದು ನಿರ್ಧಾರ ಮಾಡಿರುತ್ತಾಳೆ.

ಗೌತಮ್ ಮನೆಗೆ ಬಂದವನೇ ಡಾಕ್ಟರ್ ಅನ್ನು ಕರೆದುಕೊಂಡು ಬಂದು ಶಕುಂತಲಾ ದೇವಿಗೆ ಟ್ರೀಟ್ಮೆಂಟ್ ಕೊಡುತ್ತಾರೆ. ಹಾಗೆಯೇ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕೂಡ ದಾಖಲಿಸಲಾಗುತ್ತದೆ. ಶಕುಂತಲಾ ದೇವಿಗೆ ಯಾರ ಬಳಿಯೂ ನಿಜ ಹೇಳಲು ಆಗದೆ ತನ್ನೊಡಲಲ್ಲಿ ಎಲ್ಲವನ್ನೂ ಮುಚ್ಚಿಕೊಂಡು ಇರುತ್ತಾಳೆ. ಇತ್ತ ಭೂಮಿಕಾಗೆ ಮಾತ್ರ ನಗು ತಡೆಯಲು ಆಗುತ್ತಿಲ್ಲ. ಹಾಗೆಯೇ ಭೂಮಿಕಾ ಮಲ್ಲಿ ವಿಚಾರವಾಗಿ ಜೈ ದೇವ್‌ಗೆ ವಾರ್ನಿಂಗ್ ಕೂಡ ಮಾಡುತ್ತಾಳೆ. ಮಲ್ಲಿಗೆ ಏನಾದರೂ ಹೆಚ್ಚು ಕಮ್ಮಿ ಮಾಡಲು ಹೊರಟರೆ ಮಾತ್ರ ನಾನು ಯಾರನ್ನೂ ಸುಮ್ಮನೆ ಬಿಡುವುದು ಇಲ್ಲ. ಈ ವಿಚಾರ ನಿನಗೆ ನೆನಪಿರಲಿ ಎಂದು ಹೇಳಿ ಅಲ್ಲಿಂದ ಹೋಗುತ್ತಾಳೆ. ಇತ್ತ ಆನಂದ್ ತಾನು ಮಾಡಬೇಕಾದ ಕೆಲಸವನ್ನು ಮಾಡುತ್ತಾನೆ.
ಆನಂದ್ ನೇರವಾಗಿ ಅಜ್ಜಿಯ ಬಳಿ ಬಂದು ಗೌತಮ್ ಹಾಗೂ ಭೂಮಿಕಾ ಮಧ್ಯೆ ಏನು ನಡೆದಿಲ್ಲ. ಅವರು ಒಬ್ಬರಿಗೊಬ್ಬರು ಬಹಳ ಇಷ್ಟ ಪಡುತ್ತಿದ್ದಾರೆ. ಮನಸಾರೆ ಇಬ್ಬರು ಕೂಡ ಪ್ರೀತಿ ಮಾಡುತ್ತಿದ್ದಾರೆ. ಆದರೆ, ಇನ್ನೂ ಬೆಡ್ ರೂಂನಲ್ಲಿ ಇಬ್ಬರು ಸಪರೇಟ್ ಆಗಿ ಮಲಗುತ್ತಾರೆ. ಗೌತಮ್ ಬೆಡ್ ಮೇಲೆ ಮಲಗಿದರೆ ಭೂಮಿಕಾ ಬೆಡ್ ಕೆಳಗೆ ಮಲಗುತ್ತಾರೆ. ಈ ವಿಚಾರ ನಿಮ್ಮ ಬಳಿ ಹೇಳಬೇಕು ಎಂದುಕೊಂಡಿದ್ದೆ. ಆದರೆ ಸಮಯ ಸಿಗಲಿಲ್ಲ ಎಂದು ಅಜ್ಜಿ ಬಳಿ ಆನಂದ್ ಹೇಳುತ್ತಾರೆ.
ಆನಂದ್ ಮಾತಿಗೆ ಅಜ್ಜಿ ಶಾಕ್
"ಏನೋ ಹೇಳುತ್ತಿದ್ದಿಯಾ ನೀನು. ನೀನು ಹೇಳುತ್ತಿರುವುದು ಸತ್ಯನಾ? ಯಾಕೆ ಇವರು ಹೀಗೆಲ್ಲ ಮಾಡುತ್ತಿದ್ದಾರೆ. ಅದೇ ನಾನು ಅಂದುಕೊಂಡಿದ್ದೆ. ಇದೇನು ಮರಿ ಮೊಮ್ಮಗನ ಸುದ್ದಿ ಇನ್ನೂ ನೀಡಿಲ್ಲವಲ್ಲ ಎಂದುಕೊಂಡಿದ್ದೆ. ಇವರಿಬ್ಬರೂ ಜೊತೆಗೆ ಮಲಗಿದರೆ ತಾನೇ ನಮಗೆ ಅದರ ವಿಚಾರ ಗೊತ್ತಾಗುವುದು. ಛೇ ಎಂತಹ ಸ್ಥಿತಿ ಬಂದು ಬಿಟ್ಟಿತು" ಎಂದು ಆಲೋಚಿಸುತ್ತಿರುತ್ತಾರೆ. ಕೊನೆಗೆ ಅಜ್ಜಿ, ಆನಂದ್ ಬಳಿ "ನೀನು ಇದೆಲ್ಲವನ್ನೂ ನನ್ನ ಬಳಿ ಹೇಳಿದ್ದು ಒಳ್ಳೆಯದೇ ಆಯಿತು. ನಾನು ಡುಮ್ಮ ಹಾಗೂ ಭೂಮಿಕಾ ಬಳಿ ಮಾತನಾಡುತ್ತೇನೆ. ಇವರಿಬ್ಬರೂ ಹೀಗೆಯೇ ಸಂಸಾರ ಮಾಡಿದರೆ ನನ್ನ ಮರಿ ಮೊಮ್ಮಗುವನ್ನು ನೋಡಲು ಆಗುವುದು ಇಲ್ಲ" ಎಂದು ಹೇಳುತ್ತಾರೆ.

ಅಜ್ಜಿಯ ಮಾತನ್ನು ಕೇಳಿಸಿಕೊಂಡ ಕೆಲಸದಾಕೆ
ಹೀಗೆಲ್ಲ ಹೇಳುತ್ತಿರುವುದನ್ನು ಮನೆಯ ಕೆಲಸದಾಕೆ ಸರೋಜಾ ಕೇಳಿಸಿಕೊಂಡು ಶಕುಂತಲಾ ದೇವಿಯ ತಮ್ಮನ ಕಿವಿಯಲ್ಲಿ ಹೇಳುತ್ತಾಳೆ. ಹಣದ ಆಸೆಗೆ ಬಿದ್ದ ಸರೋಜಾ, ಶಕುಂತಲಾ ದೇವಿ ತಮ್ಮನ ಮಾತನ್ನು ಕೇಳುತ್ತಾಳೆ. ಇದೀಗ ಶಕುಂತಲಾ ದೇವಿ ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾಳೆ. ಆಕೆಗೆ ಮನೆಯದ್ದೆ ಚಿಂತೆ. ನನ್ನ ಪ್ಲಾನ್ ನನಗೆ ಉಲ್ಟಾ ಹೊಡೆದು ಬಿಟ್ಟಿತು ಎಂದು ಯೋಚನೆ ಮಾಡುತ್ತಾ ಕುಳಿತು ಇರುತ್ತಾಳೆ. ಆಗ ಅಲ್ಲಿಗೆ ಬಂದ ಶಕುಂತಲಾ ದೇವಿ ತಮ್ಮ, ಅಕ್ಕ ಮನೆಯಲ್ಲಿ ಮರಿ ಮೊಮ್ಮಗನ ಬರುವಿಕೆಗಾಗಿ ನಿಮ್ಮ ಅತ್ತೆಯವರು ಕಾಯುತ್ತಿದ್ದಾರೆ ಎಂದು ಹೇಳಿದಾಗ ಆಕೆಗೆ ಏನು ಹೇಳಬೇಕು ಎಂದು ತಿಳಿಯದಾಗುತ್ತದೆ.
ತಮ್ಮನ ಮಾತು ಕೇಳಿ ಆತಂಕ ಶುರು
"ಏನು ಹೇಳುತ್ತಿದ್ದಿಯಾ ನೀನು? ಸರಿಯಾಗಿ ಹೇಳು" ಎಂದಾಗ, "ಗೌತಮ್ ಹಾಗೂ ಭೂಮಿಕಾ ಇನ್ನೂ ಸಂಸಾರ ಶುರು ಮಾಡಿಲ್ಲ ಎನ್ನುವ ವಿಚಾರ ಅತ್ತೆಗೆ ತಿಳಿದುಬಿಟ್ಟಿದೆ. ಹೇಗಾದರೂ ಮಾಡಿ ಅವರಿಬ್ಬರ ನಡುವೆ ಇರುವ ಸಂಕೋಚವನ್ನು ದೂರ ಮಾಡಲೇ ಬೇಕು ಎಂದು ಅತ್ತೆ ಪಣತೊಟ್ಟಿದ್ದಾರೆ" ಎಂದಾಗ ಶಕುಂತಲಾ ದೇವಿಗೆ ಶಾಕ್ ಆಗುತ್ತದೆ. ಮುಂದೆ ಎನು ಮಾತನಾಡಬೇಕು ತಿಳಿಯದೇ ಮಂಕಾಗುತ್ತಾರೆ.


Click it and Unblock the Notifications











