Amruthadhaare; ಗೌತಮ್‌ಗೆ ಸಿಕ್ಕಿತು ಅಮ್ಮನ ಸುಳಿವು; ಆದರೆ ಶಕುಂತಲಾ ದೇವಿಗೆ ಈ ಸುಳಿವು ಕೊಡಲಿಲ್ಲ ಏಕೆ?
ಗೌತಮ್ ತನ್ನ ತಾಯಿ ಬದುಕಿರುವ ವಿಚಾರ ತಿಳಿದ ಖುಷಿಯಲ್ಲಿ ಇದ್ದಾನೆ. ಸುಮಾರು ಮೂವತ್ತೈದು ವರ್ಷಗಳ ಹಿಂದೆ ಗೌತಮ್ ತಾಯಿ ಹಾಗೂ ತಂಗಿ ಕಳೆದು ಹೋಗಿರುತ್ತಾರೆ. ತನ್ನ ತಾಯಿ, ತಂಗಿಯನ್ನು ಹುಡುಕದ ಜಾಗ ಇಲ್ಲ. ಎಲ್ಲ ಕಡೆಯೂ ತನ್ನ ತಾಯಿಯನ್ನು ಹುಡುಕಿಸುತ್ತಾನೆ. ಆದರೆ, ಎಲ್ಲಿಯೂ ಗೌತಮ್ ತಾಯಿಯ ಸುಳಿವು ಆತನಿಗೆ ಸಿಗುವುದಿಲ್ಲ. ಇದೀಗ ಮಾನ್ಯಾ ತಂಗಿ ಧನ್ಯಾಳಿಂದಾಗಿ ಗೌತಮ್‌ಗೆ ಆತನ ತಾಯಿ ಬದುಕಿರುವ ವಿಚಾರ ತಿಳಿಯುತ್ತೆ.
ಈ ಕಾರಣಕ್ಕೆ ಧನ್ಯಾಳನ್ನು ಸಾಯಿಸುವ ಪ್ಲಾನ್ ಅನ್ನು ಶಾಕುಂತಲಾ ದೇವಿ ಮಾಡುತ್ತಾಳೆ. ಆದರೆ, ಧನ್ಯಾ ಅದು ಹೇಗೋ ಶಕುಂತಲಾ ದೇವಿ ಕೈಯಿಂದ ತಪ್ಪಿಸಿಕೊಳ್ಳುವ ಪ್ಲಾನ್ ಮಾಡುತ್ತಾಳೆ. ಆದರೆ ಕೊನೆಗೆ ಆಕೆಯ ಕೈಗೆ ಸಿಕ್ಕಿ ಬೀಳುತ್ತಾಳೆ. ಶಕುಂತಲಾ ದೇವಿ ಧನ್ಯಾಳನ್ನು ಚಾಕುವಿನಿಂದ ಚುಚ್ಚಿ ಸಾಯಿಸಲು ಪ್ರಯತ್ನ ಪಡುತ್ತಾಳೆ. ಅದೇ ಸಮಯಕ್ಕೆ ಗೌತಮ್ ಹಾಗೂ ಭೂಮಿಕಾ ಅಲ್ಲಿಗೆ ಬರುತ್ತಾರೆ. ಅಲ್ಲಿ ನೋಡಿದಾಗ ಅವರೆಲ್ಲರಿಗೂ ಬಹಳ ದೊಡ್ಡ ಶಾಕ್ ಆಗುತ್ತೆ. ಧನ್ಯಾ ಗೌತಮ್‌ಗಾಗಿ ಉಸಿರು ಬಿಗಿ ಹಿಡಿದುಕೊಂಡು ಇರುತ್ತಾರೆ. ಧನ್ಯಾಳನ್ನು ಆ ಸ್ಥಿತಿಯಲ್ಲಿ ನೋಡಿದ ಮನೆ ಮಂದಿ ಶಾಕ್‌ಗೆ ಆಗುತ್ತೆ.

ಆಕೆ ಗೌತಮ್ ಬಳಿ ನಿಮ್ಮ ತಾಯಿ ಬದುಕಿದ್ದಾರೆ ಎಂದು ಹೇಳಿ ಉಸಿರು ನಿಲ್ಲಿಸಿ ಬಿಡುತ್ತಾಳೆ. ಇದೆಲ್ಲ ಆದ ಬಳಿಕ ಗೌತಮ್ ಹಾಗೂ ಭೂಮಿಕಾ ಮನೆಗೆ ಬರುತ್ತಾರೆ. ಗೌತಮ್ ಮನೆಗೆ ಬಂದ ಕೂಡಲೇ ಶಕುಂತಲಾ ದೇವಿ ಎಲ್ಲಾ ವಿಚಾರಣೆ ಮಾಡಲು ತೊಡಗುತ್ತಾಳೆ. ಆದರೆ ಎಲ್ಲೂ ಕೂಡ ತನ್ನ ತಾಯಿ ಬದುಕಿದ್ದಾರೆ ಎನ್ನುವ ವಿಚಾರವನ್ನು ಶಕುಂತಲಾ ದೇವಿ ಮುಂದೆ ಹೇಳದೆ "ನನಗೆ ಸ್ವಲ್ಪ ಕೆಲಸ ಇತ್ತು.
ಗೋಡಾನ್‌ಗೆ ಬೆಂಕಿ ಬಿದ್ದಿದ್ದು ನಿಜ ಆದರೆ ಅದೆಲ್ಲವನ್ನೂ ಆನಂದ್ ನೋಡಿಕೊಂಡಿದ್ದಾನೆ. ನಾನು ಧನ್ಯಾಳನ್ನು ಭೇಟಿ ಆಗಲು ಹೋಗಿದ್ದು, ಆದರೆ ನಾನು ಹೋಗುವಷ್ಟರಲ್ಲಿ ಯಾರೋ ಆಕೆಯನ್ನು ಕೊಲೆ ಮಾಡಿದ್ದಾರೆ. ನಾನು ಹೋಗಬೇಕಾದರೆ ಪೊಲೀಸರ ಜೊತೆಗೆ ಹೋಗಿದ್ದೆ. ಆದರೆ ನಾನು ಅಂದುಕೊಂಡಿದ್ದು ಒಂದು ಅಲ್ಲಿ ನಡೆದಿದ್ದು ಇನ್ನೊಂದು" ಎಂದು ಹೇಳುತ್ತಾನೆ.

ಗೌತಮನಿಂದ ಈ ಮಾತನ್ನು ಕೇಳಿ ಶಕುಂತಲಾ ದೇವಿಗೆ ಖುಷಿ ಆಗಿದೆ ಸದ್ಯ ಗೌತಮ್‌ಗೆ ಆತನ ತಾಯಿ ಬದುಕಿರುವ ಗೊತ್ತಾಗಲಿಲ್ಲ ಎಂದು ಮನಸ್ಸಿನಲ್ಲಿಯೇ ಖುಷಿ ಪಟ್ಟುಕೊಳ್ಳುತ್ತಾಳೆ. ಆದರೆ, ಭೂಮಿಕಾಗೆ ಆಶ್ಚರ್ಯ ಆಗುತ್ತದೆ. ಗೌತಮ್ ತಾಯಿ, ತಂಗಿ ಬದುಕಿದ್ದಾರೆ. ಆದರೆ ಯಾಕೆ ಇದನ್ನು ಅತ್ತೆಯ ಬಳಿ ಹೇಳುತ್ತಿಲ್ಲ ಎನ್ನುವುದು ಆಶ್ಚರ್ಯ ಆಗುತ್ತದೆ.
ಇತ್ತ ಗೌತಮ್ ಭೂಮಿಕಾ ಬಳಿ "ನನ್ನ ತಂಗಿಯ ಕಾಲಿನಲ್ಲಿ ಮಚ್ಚೆ ಇದೆ. ಆದ ಕಾರಣ ಆಕೆಯನ್ನು ನಾನು ಗುರುತಿಸಬಹುದು. ನನ್ನ ತಾಯಿಯನ್ನು ಹುಡುಕುವುದೇ ನನ್ನ ಗುರಿ" ಎಂದು ಆತ ಹೇಳಿಕೊಳ್ಳುತ್ತಾನೆ. ಇತ್ತ ಗೌತಮನ ತಂಗಿ ಅಮ್ಮನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಅಮ್ಮನ ಬಳಿ ಮಾತನಾಡಲು ಬಹಳ ಸಲ ಪ್ರಯತ್ನ ಪಡುತ್ತಾಳೆ. ಆದರೆ ಅದು ಸಾಧ್ಯವಾಗದ ಹಿನ್ನೆಲೆ ಆಕೆಗೆ ದಿಕ್ಕೇ ತೋಚದ ಹಾಗೆ ಆಗಿದೆ. ಆದರೆ, ಭಾಗ್ಯಾ ಅಮ್ಮ ಗುಂಡು, ಗುಂಡು ಎಂದು ಕನವರಿಸುವುದು ನೋಡಿ ಗುಂಡು ಅಂದರೆ ಯಾರು ಎನ್ನುವುದೇ ಸುಧಾ ಪ್ರಶ್ನೆ ಆಗಿದೆ.


Click it and Unblock the Notifications











