Amruthadhaare Serial: ಆನಂದ್-ಗೌತಮ್ ಸ್ನೇಹಕ್ಕೆ ಕತ್ತು.. ವಂಶಪರಂಪರೆಯ ಹಾರವೀಗ ಶಕುಂತಲಾ ಸ್ವತ್ತು
'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ತಾತ ವಿಲ್ ಒಂದನ್ನು ಬರೆದಿದ್ದಾರೆ. ಅದರ ಪ್ರಕಾರ ಅವರ ವಂಶಪಾರಂಪರೆಯಿಂದ ಬಂದ ಬಂಗಾರದ ಹಾರವನ್ನು ಗೌತಮ್ ಹೆಂಡತಿಗೆ ನೀಡಬೇಕು ಎಂದು ಇರುತ್ತದೆ.
ಲಾಯರ್ ಬಂದು ವಿಲ್ ಪ್ರಕಾರ ಆ ಹಾರವನ್ನು ಗೌತಮ್‌ಗೆ ಒಪ್ಪಿಸುತ್ತಾರೆ. ಅಜ್ಜಿ ಇದನ್ನು ಭೂಮಿಕಾ ಹಾಕಬೇಕು ಎಂದು ಬಯಸುತ್ತಾರೆ. ಇದಕ್ಕೋಸ್ಕರ ದಿನವನ್ನೂ ನಿಗಧಿಪಡಿಸುತ್ತಾರೆ.

ದಸರಾ ಹಬ್ಬ ನಡೆಯುವ ಸಂದರ್ಭದಲ್ಲಿ ಎಲ್ಲರ ಎದುರು ಗೌತಮ್ ಈ ಹಾರವನ್ನು ಭೂಮಿಕಾ ಕೊರಳಿಗೆ ಹಾಕಲಿ ಎಂದು ಅಜ್ಜಿ ಹೇಳಿದ್ದಕ್ಕೆ ಎಲ್ಲರೂ ಒಪ್ಪುತ್ತಾರೆ.
ಆನಂದ್‌ಗಾಗಿ ಮಹಾಪ್ಲಾನ್
ಆ ಹಾರದ ಮೇಲೆ ಶಕುಂತಲಾ ಕಣ್ಣು ಬಿದ್ದಿದೆ. ತಾನೂ ಈ ಮನೆಯ ಸೊಸೆಯಾಗಿದ್ದು, ತನಗೆ ಈ ಹಾರ ಬೇಕೇ ಬೇಕು ಎಂದು ಮನದಲ್ಲೇ ಪ್ಲಾನ್ ಮಾಡುತ್ತಾಳೆ. ಇದೇ ವೇಳೆಗೆ ಮನೆಯಲ್ಲಿ ಜೈದೇವ ಹಾಗೂ ಶಕುಂತಲಾಳಿಗೆ ಆನಂದ್ ದೊಡ್ಡ ತಲೆ ನೋವಾಗಿದ್ದಾನೆ. ಎಲ್ಲಾ ಜವಾಬ್ದಾರಿಯನ್ನು ಗೌತಮ್ ಆನಂದ್‌ಗೆ ನೀಡುತ್ತಿದ್ದು, ಅವನಿಗೆ ಈ ಮನೆಯಿಂದ ಗೇಟ್ ಪಾಸ್ ಕೊಡಿಸಬೇಕು ಎಂದು ಶಕುಂತಲಾ ಅಂದುಕೊಂಡಿದ್ದಾಳೆ. ಅದೇ ಸಂದರ್ಭದಲ್ಲಿ ಈ ಹಾರ ಬಂದಿರುವುದಕ್ಕೆ, ಈಗ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಯನ್ನು ಒಡೆಯುವ ಪ್ಲಾನ್ ಮಾಡಿದ್ದಾರೆ. ಆನಂದ್ ಹಾರವನ್ನು ತೆಗೆದುಕೊಳ್ಳುವಂತೆ ಮಾಡಿ ಕೊನೆಗೆ ಆನಂದ್ ಹಾರ ಕದ್ದ ಎಂಬ ಪಟ್ಟ ಕೊಟ್ಟು ಮನೆಯಿಂದ ಹೊರಗೆ ಕಳಿಸಬೇಕು ಎಂದು ಅಂದುಕೊಂಡಿದ್ದಾರೆ. ಇದಕ್ಕೋಸ್ಕರ ಸೂಪರ್ ಪ್ಲಾನ್ ಮಾಡಿದ್ದಾರೆ.
ಮಹಿಮಾಳನ್ನು ಆಡಿಕೊಂಡ ಅಶ್ವಿನಿ
ಇನ್ನು ಅಶ್ವಿನಿ ಬೇಕಂತಲೇ ಮಹಿಮಾಳನ್ನು ಮಾತು ಮಾತಿನಲ್ಲೂ ಆಡಿಕೊಳ್ಳುತ್ತಿದ್ದಾಳೆ. ಮಹಿಮಾ ಮನೆಗೆ ಯಾವಾಗ ಎಂದರೆ ಆಗ ಬರಬಾರದು ಎಂದು ಶಕುಂತಲಾ ಕಂಡೀಷನ್ ಹಾಕಿದ್ದಾಳೆ. ಇದು ಗೊತ್ತಿದ್ದು, ಅಶ್ವಿನಿ ಯಾಕೆ ಮಹಿ ನೀನು ಇಲ್ಲಿಗೆ ಬರೋದೇ ಇಲ್ಲ. ಆ ಮನೆಯಲ್ಲಿ ಅಷ್ಟು ಬ್ಯುಸಿನಾ ಎಂದು ಆಡಿಕೊಳ್ಳುತ್ತಾಳೆ. ಬಳಿಕ ಮಹಿಮಾ ಪತಿ ಜೀವನ್ ಬಟ್ಟೆ ಹಾಗೂ ಅವನ ಕೆಲಸಕ್ಕೆ ಸಂಬಂಧ ಪಟ್ಟಹಾಗೆ ಹೀಯಾಳಿಸುತ್ತಾಳೆ. ಅಶ್ವಿನಿ ತನ್ನ ಪಿ ಎ ಅರುಣ್ ಬಳಿ ಮಹಿಮಾ ಅವರದ್ದು 2 ಬಿಎಚ್ ಕೆ ಫ್ಲ್ಯಾಟ್ ಇದೆ. ನಾವು ಒಂದು ದಿನ ಆ ಮನೆಗೆ ಹೋಗಲೇಬೇಕು. ತುಂಬಾ ಚೆನ್ನಾಗಿದೆ ಎಂದು ಹೇಳುತ್ತಾಳೆ. ಮಹಿಮಾಳಿಗೆ ಅಶ್ವಿನಿಯ ವ್ಯಂಗ್ಯದ ಮಾತುಗಳು ಅರ್ಥವಾಗುತ್ತದೆ.

ಮನೆಯಲ್ಲಿ ಹಾರ ಕಾಣಿಸುತ್ತಿಲ್ಲ
ದಸರಾ ಹಬ್ಬ ಮಾಡಿ ಕೊನೆಯಲ್ಲಿ ಹಾರವನ್ನು ಕೊರಳಿಗೆ ಹಾಕಲು ಗೌತಮ್ ಕೇಳುತ್ತಾನೆ. ಅಷ್ಟರಲ್ಲಿ ಜೈದೇವ ಆನಂದ್ ಲಾಕರ್‌ನಿಂದ ಹಾರ ತೆಗೆಯುವಂತೆ ಮಾಡಿ ಅದನ್ನು ತಾನು ಕದ್ದಿರುತ್ತಾನೆ. ಆನಂದ್‌ಗೆ ತನ್ನ ಬಳಿ ಇದ್ದ ಹಾರ ಕಾಣಿಸದಿರುವುದು ಶಾಕ್ ಆಗುತ್ತದೆ. ಮನೆಯಲ್ಲಿ ಎಲ್ಲರೂ ಹಾರ ಕಾಣುತ್ತಿಲ್ಲ ಎಂದು ಗಾಬರಿಯಾಗಿ ಹುಡುಕಾಡುತ್ತಾರೆ. ಆಗ ಶಕುಂತಲಾ, ಲಾಕರ್ ಬಳಿ ಸಿಸಿಟಿವಿ ಇದೆ. ಫುಟೇಜ್ ನೋಡಿದರೆ ಗೊತ್ತಾಗುತ್ತೆ ಎಂದು ಹೇಳುತ್ತಾಳೆ.
ಗೌತಮ್-ಆನಂದ್ ಸ್ನೇಹ ಮುಗಿಯುತ್ತಾ..?
ಗೌತಮ್ ಮನೆಯವರ ಮಾತು ನಂಬಿ ಫುಟೇಜ್ ನೋಡಿದಾಗ, ಲಾಕರ್‌ನಿಂದ ಆನಂದ್ ಹಾರವನ್ನು ತೆಗೆದುಕೊಂಡಿರುತ್ತಾನೆ. ಈಗ ಗೌತಮ್‌ಗೆ ಆನಂದ್ ಇಂತಹ ಕೆಲಸ ಮಾಡಿದ ಎಂಬ ಟೆಂಷನ್ ಒಂದು ಕಡೆಯಾಗಿದೆ. ಆದರೆ, ಜೈದೇವ ಹಾರವನ್ನು ಕದ್ದಿದ್ದು, ಅನ್ಯಾಯವಾಗಿ ಆನಂದ್ ಬಲಿಯಾಗಿದ್ದಾನೆ. ಗೌತಮ್ ಕೋಪಕ್ಕೆ ಆನಂದ್ ಮನೆಯಿಂದ ದೂರಾಗುತ್ತಾನಾ? ಇಲ್ಲ ಭೂಮಿಕಾ ಬುದ್ಧಿವಂತಿಕೆಯಿಂದ ಆನಂದ್ ಸ್ನೇಹವನ್ನು ಗೌತಮ್‌ಗೆ ಉಳಿಸಿಕೊಡುತ್ತಾಳಾ ಎಂದು ಕಾದು ನೋಡಬೇಕಿದೆ.


Click it and Unblock the Notifications











