Amruthadhaare: ಗೌತಮ್ ಕೈಗೆ ಸಿಕ್ಕಿ ಬಿದ್ದ ಜೈದೇವ್; ತಪ್ಪು ಮಾಡಿದರೂ ತಲೆ ತಗ್ಗಿಸದ ಜೈದೇವ್!
ಭೂಮಿಕಾ ಹಾಗೂ ಆನಂದ್ ಸೇರಿಕೊಂಡು ಜೈ ದೇವ್ ಮಾಡುತ್ತಿರುವ ತಂತ್ರಕ್ಕೆ ಎವಿಡೆನ್ಸ್ ಹುಡುಕುತಿದ್ದಾರೆ. ಈಗಾಗಲೇ ಅವರಿಗೆ ಅದಕ್ಕೆಲ್ಲ ಸಾಕ್ಷಿಗಳು ಕೂಡ ಸಿಕ್ಕಿದೆ. ಹೇಗಾದರೂ ಮಾಡಿ ಜೈದೇವ್ ಬಗ್ಗೆ ಗೌತಮ್ ದಿವಾನ್ ಬಳಿ ಎಲ್ಲಾ ವಿಚಾರವನ್ನು ಹೇಳಬೇಕು ಇಲ್ಲವಾದರೆ ಖಂಡಿತವಾಗಿಯೂ ಇನ್ನೂ ತಪ್ಪು ಮಾಡುವ ಚಾನ್ಸ್ ಹೆಚ್ಚು ಅಂದುಕೊಳ್ಳುತ್ತಾರೆ.
ಜೈದೇವ್ ಮಾಡುತ್ತಿರುವ ಕುತಂತ್ರವನ್ನು ಹೇಗಾದರೂ ಮಾಡಿ ತಿಳಿದುಕೊಳ್ಳಬೇಕು. ಇಲ್ಲವಾದರೆ ಖಂಡಿತವಾಗಿಯೂ ಯಾರಿಗೂ ಉಳಿಗಾಲವಿಲ್ಲ ಎಂದು ಭೂಮಿಕಾ ಅಂದುಕೊಂಡಿದ್ದಾಳೆ. ಹಾಗೆಯೇ ಎಲ್ಲಾ ಎವಿಡೆನ್ಸ್ ಸಿಕ್ಕ ನಂತರ ಗೌತಮ್ ದಿವಾನ್‌ರನ್ನು ಅಪರ್ಣ, ಆನಂದ್, ಭೂಮಿಕಾ ಮೀಟ್ ಆಗುತ್ತಾರೆ.

ಇವರಿಗಿಂತ ಮುಂಚಿತವಾಗಿ ಜೈದೇವ್ ತಾನು ಮೈಸೂರಿಗೆ ಹೋಗುವುದಾಗಿ ಗೌತಮ್ ಬಳಿ ಹೇಳಿ ಹೋಗಿರುತ್ತಾನೆ. ಆ ಬಳಿಕ ಭೂಮಿಕಾ, ಆನಂದ್, ಅಪರ್ಣಾರನ್ನು ನೋಡಿ ಬಹಳ ಆಶ್ಚರ್ಯ ಆಗುತ್ತೆ. "ಇದೇನಿದು ಮೂವರು ಒಟ್ಟಿಗೆ ಇದ್ದೀರಲ್ಲ. ಎಲ್ಲಿಗಾದರೂ ಹೋಗಿದ್ರಾ?" ಎಂದು ಗೌತಮ್ ಪ್ರಶ್ನೆ ಮಾಡುತ್ತಾರೆ. ಆಗ ಭೂಮಿಕಾ "ಒಂದು ಕೆಲಸದ ವಿಷಯವಾಗಿ ನಾವು ಹೋಗಿದ್ದೆವು. ನಿಮ್ಮ ಬಳಿ ನಾವೊಂದು ನಿಜ ವಿಚಾರವನ್ನು ಹೇಳಬೇಕಾಗಿದೆ. ನಾನು ನಿಮಗೆ ಈ ವಿಚಾರವನ್ನು ಯಾಕೆ ಹೇಳುತ್ತಿದ್ದೇನೆ ಎಂದರೆ, ಅದರಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಈ ಕಾರಣಕ್ಕೆ ವಿಚಾರವನ್ನು ನಿಮ್ಮ ಬಳಿ ಪ್ರಸ್ತಾಪ ಮಾಡುತ್ತಿದ್ದೇನೆ" ಎಂದು ಜೋರಾಗಿ ಹೇಳುತ್ತಾರೆ.
ಆಗ "ಗೌತಮ್ ಯಾಕೆ ಏನಾಯಿತು ಭೂಮಿಕಾ" ಎಂದು ಕೇಳಿದಾಗ ಗೌತಮ್ ಬಳಿ ಭೂಮಿಕಾ ಜೈ ದೇವ್ ಮಾಡಿದ ತಪ್ಪುಗಳನ್ನೆಲ್ಲ ಬಳಿ ಹೇಳುತ್ತಾಳೆ. ಜೈ ದೇವ್ ತನ್ನನ್ನು ಕಿಡ್ನಾಪ್ ಮಾಡಿದ ವಿಚಾರ, ಹಾಗೆಯೇ ಮಲ್ಲಿಯನ್ನು ಸಾಯಿಸಲು ಮಾಡಿದ ಸಂಚು, ಹಾಗೆಯೇ ಆಫೀಸ್‌ನಲ್ಲಿ ಆಗುತ್ತಿರುವ ತಪ್ಪುಗಳು, ಆನಂದ್‌ನನ್ನು ಕೊಲ್ಲಲು ಮಾಡಿದ ಸಂಚು, ಇದೆಲ್ಲವನ್ನೂ ಬಿಡಿ ಬಿಡಿಯಾಗಿಯೇ ಆತನ ಬಳಿ ಹೇಳಿದಾಗ ಗೌತಮ್‌ಗೆ ಶಾಕ್ ಆಗುತ್ತದೆ.
ಜೈ ದೇವ್ ಈ ರೀತಿ ಎಲ್ಲಾ ಮಾಡಿಬಿಟ್ಟೆಯಲ್ಲ. ಈ ಮನೆಯಲ್ಲಿ ಜೈ ದೇವ್‌ಗೆ ಏನು ಕಮ್ಮಿಯಾಗಿದೆ ಎಂದೆಲ್ಲ ಬಹಳ ಬೇಸರ ಪಟ್ಟುಕೊಳ್ಳುತ್ತಾರೆ. ಕೊನೆಗೂ ಜೈದೇವ್ ಮಾಡಿದ ತಪ್ಪುಗಳು ಗೌತಮ್‌ಗೆ ಗೊತ್ತಾಗಿ ಹೋಗಿದೆ. ತಮ್ಮನಿಗೆ ಶಿಕ್ಷೆ ಕೊಡಲು ಗೌತಮ್ ನಿರ್ಧರಿಸಿದ್ದಾರೆ. ಜೊತೆಗೆ ಕೋಪ ಉಕ್ಕಿ ಬಂದಿದೆ.

ಜೈ ದೇವ್‌ನನ್ನು ಕಂಡು ಕಿಡಿಕಾರಿದ ಗೌತಮ್
ಜೈ ದೇವ್‌ನನ್ನು ಚಿಕ್ಕ ವಯಸ್ಸಿನಿಂದಲೂ ಬೆಳೆಸಿದ ರೀತಿ ಸರಿ ಹೋಗಿಲ್ಲ ಹಾಗಾದರೆ ಎಂದು ಬಹಳ ಬೇಸರ ಪಟ್ಟುಕೊಳ್ಳುತ್ತಾರೆ. ಜೈ ದೇವ್‌ನನ್ನು ಹೇಗಾದರೂ ಮಾಡಿ ಸರಿ ದಾರಿಗೆ ತರಬೇಕು. ಆತ ಏನು ಮಾಡಿದರೂ ನಾನು ಕ್ಷಮಿಸುತ್ತೇನೆ ಎಂದು ಅಂದುಕೊಂಡಿರುತ್ತಾನೆ. ಆದರೆ, ಇಷ್ಟೆಲ್ಲ ಆದ ಬಳಿಕ ನಾನು ಮಾತ್ರ ಆತನನ್ನು ಸುಮ್ಮಗೆ ಬಿಡುವುದಿಲ್ಲ ಎಂದು ಮನದಲ್ಲಿ ಅಂದುಕೊಳ್ಳುತ್ತಾನೆ. ಇನ್ನು ಜೈ ದೇವ್ ಮನೆಗೆ ಬಂದಾಗ ಮಾತ್ರ ಆತನಿಗೆ ಹಬ್ಬ ಕಾದಿತ್ತು.
ಶಕುಂತಲಾ ಮಾತಿಗೆ ಸೊಪ್ಪು ಹಾಕದ ಗೌತಮ್
"ಜೈ ದೇವ್‌ನನ್ನು ನೋಡಿ ಗೌತಮ್ ಎಲ್ಲರ ಮುಂದೆ ಜೈ ದೇವ್ ನಿನ್ನ ಬಳಿ ನಾನು ಮಾತನಾಡಬೇಕು" ಎಂದು ಜೋರಾಗಿ ಕರೆಯುತ್ತಾನೆ. ಜೈ ದೇವ್ "ಏನು ಅಣ್ಣ? ಏನು ಮಾತಾಡಬೇಕ?" ಎಂದು ಹೇಳುತ್ತಾನೆ. ಆಗ ಗೌತಮ್ ಟೆಂಡರ್ ಬಗ್ಗೆ ವಿಚಾರಣೆ ಮಾಡಿ, "ನಮ್ಮ ಟೆಂಡರ್ ತಪ್ಪಿಸಿದ್ದು ಇವನೇ" ಎಂದು ಫೋಟೋ ತೋರಿಸುತ್ತಾನೆ. ಇದನ್ನು ನೋಡಿದ ಜೈ ದೇವ್‌ಗೆ ಶಾಕ್ ಆಗುತ್ತೆ. ಮನೆಯವರ ಮುಂದೆ ಜೈ ದೇವ್ ಮಾಡಿದ ಅನಚಾರವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾನೆ. ಇದನ್ನೆಲ್ಲ ಕೇಳುತ್ತಿರುವಾಗಲೇ ಶಕುಂತಲಾ ದೇವಿ, ಗೌತಮ್ ಎಂದು ಕರೆಯುತ್ತಾರೆ. ಆದರೆ, ಅದು ಯಾವುದನ್ನು ಕೇಳಲು ಗೌತಮ್ ರೆಡಿ ಇರಲಿಲ್ಲ. ಗೌತಮ್ ಮಾತ್ರ ಜೈ ದೇಮ್‌ಗೆ ಈ ಬಾರಿ ಕಠಿಣವಾದ ಶಿಕ್ಷೆ ನೀಡುವುದು ಖಚಿತ.


Click it and Unblock the Notifications











