Amruthadhaare:ಗೌತಮ್ ಭೂಮಿಕಾ ಪ್ಲಾನ್ ಸಕ್ಸಸ್; ಆದರೆ, ಅಕ್ಕನ ಬಗ್ಗೆಯೇ ಗಂಡನ ಬಳಿ ಚಾಡಿ ಹೇಳಿದ ಅಪ್ಪಿ
ಗೌತಮ್ ಹಾಗೂ ಭೂಮಿಕಾ ಹೇಗಾದರೂ ಮಾಡಿ ಪಾರ್ಥ ಜೀವನವನ್ನು ಸರಿ ಮಾಡಬೇಕು ಎಂದು ಅಂದುಕೊಂಡಿರುತ್ತಾರೆ. ಮದುವೆಗೆ ಮುಂಚೆ ಇದ್ದ ಅಪ್ಪಿಯೇ ಬೇರೆ. ಮದುವೆ ಆದ ಬಳಿಕ ಇರುವ ಅಪ್ಪಿಯೇ ಬೇರೆ. ಆದರೆ, ಇದಕ್ಕೆಲ್ಲ ಮೂಲ ಕಾರಣ ಶಕುಂತಲಾ ದೇವಿ ಎನ್ನುವುದು ಮಾತ್ರ ಯಾರಿಗೂ ತಿಳಿದಿರುವುದಿಲ್ಲ. ಶಕುಂತಲಾ ದೇವಿಯೇ ಅಪ್ಪಿಯ ಮನಸ್ಸನ್ನು ಕೆಡಿಸಿರುತ್ತಾಳೆ. ಭೂಮಿಕಾ ಹಾಗೆ ಅಪ್ಪಿಯ ನಡುವೆ ದ್ವೇಷ ಬೆಳೆದರೆ ಮನೆಯಲ್ಲಿ ಜಗಳ ಮೂಡುತ್ತೆ ಎನ್ನುವುದು ಶಕುಂತಲಾ ದೇವಿ ಅಭಿಪ್ರಾಯ
ಅದೇ ರೀತಿ ಅಕ್ಕ ತಂಗಿಯ ನಡುವೆ ತಂದಿಟ್ಟು ತಮಾಷೆ ನೋಡುತ್ತಿದ್ದಾಳೆ. ಅಪೇಕ್ಷಾ ಬದಲಾಗಿರುವುದನ್ನು ಕಂಡ ಪಾರ್ಥ ಬಹಳ ಬೇಸರ ಮಾಡಿಕೊಂಡಿರುತ್ತಾನೆ. ಬಹಳ ಒಳ್ಳೆಯವಳಾಗಿದ್ದ ಅಪ್ಪಿ, ಇದೀಗ ಸಡನ್ನಾಗಿ ತನ್ನ ಅಕ್ಕನ ವಿರುದ್ಧವೇ ಮಾಡುತ್ತಿದ್ದಾಳೆ ಎಂದು ಪಾರ್ಥಾಗೆ ಅನ್ನಿಸುತ್ತಿದೆ. ಈ ವಿಚಾರವಾಗಿ ಪಾರ್ಥ ಹಾಗೂ ಅಪ್ಪಿಯ ನಡುವೆ ಬಹಳ ವಾಕ್ ಸಮರ ನಡೆಯುತ್ತಿರುತ್ತದೆ. ಇದನ್ನು ಗಮನಿಸಿದ ಭೂಮಿಕಾ ಇವರಿಬ್ಬರನ್ನು ಒಂದು ಮಾಡಲೇಬೇಕೆಂದು ತೀರ್ಮಾನ ಮಾಡುತ್ತಾಳೆ. ಆ ಪ್ರಕಾರವಾಗಿ ಪಾರ್ಥ ಅಪ್ಪಿ, ನಡುವೆ ಕೊಂಚ ಅಂತರ ಕ್ರಿಯೇಟ್ ಆಗುವ ಹಾಗೆ ಮಾಡುತ್ತಾರೆ. ಪಾರ್ಥ ಮನೆಯಲ್ಲಿ ಇರುವುದರಿಂದ ಜಗಳ ಇನ್ನು ಹೆಚ್ಚಾಗುತ್ತಿದೆ. ಇದರಿಂದ ಗೌತಮ್ ಜೊತೆ ಮಾತನಾಡಿ ಪಾರ್ಥನನ್ನು ಆಫೀಸಿಗೆ ಕರೆದುಕೊಂಡು ಹೋಗಲು ಭೂಮಿಕಾ ಹೇಳುತ್ತಾರೆ.

ಗೌತಮ್ ಪಾರ್ಥನ ಆಫೀಸಿಗೆ ಕರೆದುಕೊಂಡು ಹೋಗಿ ಆತನಿಗೆ ಜೈದೇವ್‌ನ ಸ್ಥಾನವನ್ನು ಆಫೀಸ್‌ನಲ್ಲಿ ಕೊಡುತ್ತಾರೆ. ಇದನ್ನೆಲ್ಲ ನೋಡಿ ಜೈದೇವ್‌ಗೆ ಬಹಳ ಸಿಟ್ಟು ಬರುತ್ತೆ. ಆದರೆ, ಶಕುಂತಲಾ ದೇವಿ ಜೈ ದೇವ್ ಕೋಪಕ್ಕೆ ಸೊಪ್ಪು ಹಾಕುವುದಿಲ್ಲ. "ನೀನು ಮಾಡಿದ ತಪ್ಪನ್ನು ನೀನೇ ಸರಿ ಮಾಡಿಕೊ" ಎಂದು ಹೇಳುತ್ತಾಳೆ. ಇದನ್ನು ಕೇಳಿ ಜೈದೇವ್‌ಗೆ ಬಹಳ ಕೋಪ ಬರುತ್ತೆ. ಆದರೆ ಆತ ಏನು ಮಾಡಲಾಗದ ಸ್ಥಿತಿಯಲ್ಲಿರುತ್ತಾನೆ. ಇನ್ನು ಅಪ್ಪಿ, ಪಾರ್ಥನಿಗಾಗಿ ಊಟ ಮಾಡಿ ಕಳುಹಿಸುತ್ತಾಳೆ. ಅದನ್ನು ಗೌತಮ್ ತಿಂದು "ಅಪ್ಪಿ ಇಷ್ಟು ಚೆನ್ನಾಗಿ ಅಡುಗೆ ಮಾಡುತ್ತಾಳಂತ ಅಂದುಕೊಂಡಿರುತ್ತಾನೆ. ಆದರೆ, ಅಪ್ಪಿ ಮಾಡಿರುವ ಅಡುಗೆ ಗೌತಮ್ ಗಂಟಲಲ್ಲಿ ಇಳಿಯುವುದೇ ಇಲ್ಲ.
ಪಾರ್ಥಗೆ ಗೌತಮ್ ಹೇಳಿದ್ದೇನು?
ಈಗ ಗೌತಮ್‌ಗೆ ಅದನ್ನು ಪಾರ್ಥ ಜೊತೆ ಹೇಳಲು ಆಗುತ್ತಿಲ್ಲ. ಇನ್ನು ಭೂಮಿಕಾ ಕೊಟ್ಟಿರುವ ಊಟವನ್ನು ಪಾರ್ಥಗೆ ಈಗಾಗಲೇ ಕೊಟ್ಟಾಗಿರುತ್ತದೆ. ಇನ್ನು ಭೂಮಿಕಾ, ಗೌತಮ್‌ಗಾಗಿ ದಾರಿ ಕಾಯುತ್ತಿರುತ್ತಾಳೆ. ಆಗಲೇ ಅಲ್ಲಿಗೆ ಅಪ್ಪಿ ಬರುತ್ತಾಳೆ. ಅಪ್ಪಿಯನ್ನು ನೋಡಿದ ಭೂಮಿಕಾ ಇದೇನಪ್ಪ ಇಲ್ಲಿ ಏನು ಮಾಡುತ್ತಿದ್ದೀಯಾ ಎಂದು ಕೇಳುತ್ತಾರೆ. ಆಗ ಅಪ್ಪಿ "ಸುಮ್ಮನೆ ಇಲ್ಲಿಗೆ ನಾನು ಬಂದೆ" ಎಂದು ಹೇಳುತ್ತಾಳೆ. ತನ್ನ ಗಂಡನಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದರೆ ಎಲ್ಲಿ ನಗುತ್ತೇನೆ ಎಂದು ಅಪ್ಪಿ ನನಗೆ ಏನು ಹೇಳುತ್ತಿಲ್ಲ ಎಂಬುವುದು ಭೂಮಿಕಾಗೆ ತಿಳಿಯುತ್ತೆ.
ಅಪ್ಪಿ ಮುಖ ನೋಡಿ ನಕ್ಕ ಭೂಮಿಕಾ
ಆ ಕೂಡಲೇ ಪಾರ್ಥ ಹಾಗೂ ಗೌತಮ್ ಬರುತ್ತಾರೆ. ಅಪ್ಪಿ ತನ್ನ ಗಂಡನ ಬಳಿ ಓಡಿ ಹೋಗಿ ಬಹಳ ಖುಷಿ ಎಂದು ಮಾತನಾಡಿಸುತ್ತಾಳೆ. ಹಾಗೆಯೇ ತಾನು ಮಾಡಿಕೊಟ್ಟ ಊಟ ಹೇಗಿತ್ತು ಎಂದು ಗಂಡನ ಬಳಿ ಕೇಳುತ್ತಾಳೆ. ಇದನ್ನು ಕೇಳಿದ ಪಾರ್ಥ "ಊಟ ತುಂಬಾ ಚೆನ್ನಾಗಿತ್ತು" ಎಂದು ಹೇಳುತ್ತಾನೆ. ಇನ್ನು ಗೌತಮ್ ಹೆಂಡತಿಯ ಬಳಿ ಮಾತನಾಡಿ ಆಕೆಗೆ ಹೂವು ಕೊಡುತ್ತಾನೆ. ಇದನ್ನು ನೋಡಿದ ಅಪ್ಪಿಗೆ ಬಹಳ ಸಂಕಟವಾಗುತ್ತದೆ . ಭಾವ ಅಕ್ಕನಿಗೆ ಹೂವು ತಂದುಕೊಟ್ಟಿದ್ದಾರೆ. ನೀನೇನು ತಂದುಕೊಟ್ಟಿದ್ದಿ ಎಂದು ಕೇಳಿದಾಗ ಗೌತಮ್ ಪಾರ್ಥಗೆ ಮೆತ್ತಗೆ ಸನ್ನೆ ಮಾಡುತ್ತಾನೆ.

ಹೆಂಡತಿಗೆ ಮಲ್ಲಿಗೆ ಹೂವು ಕೊಟ್ಟ ಪಾರ್ಥ
ಮಲ್ಲಿಗೆ ಹೂ ಬ್ಯಾಗ್‌ನಲ್ಲಿ ಇದೆ ಎಂದು ಗೌತಮ್ ಸನ್ನೆ ಮಾಡುತ್ತಾರೆ. ಆಗ ಪಾರ್ಥ ಬ್ಯಾಗ್ ಓಪನ್ ಮಾಡಿ ನೋಡಿದಾಗ ಅದರಲ್ಲಿ ಮೆಲ್ಲಿಗೆ ಹೂವು ಇರುತ್ತದೆ. ಅದನ್ನು ನೋಡಿದ ಅಪ್ಪಿ ಬಹಳ ಖುಷಿ ಪಡುತ್ತಾಳೆ. ಭೂಮಿಕಾ ಹಾಗೂ ಗೌತಮ್ ಪಾರ್ಥ ಹಾಗೂ ಅಪ್ಪಿಯ ಜೀವನ ಸರಿಪಡಿಸಬೇಕು. ಅವರಿಬ್ಬರು ಮೊದಲಿನ ಹಾಗೆ ಇರಬೇಕು ಎಂದು ಬಹಳ ಕಷ್ಟ ಪಟ್ಟು ಮಾಡಿದ ಪ್ಲಾನ್ ವರ್ಕ್ ಆಗುತ್ತಿದೆ. ಇನ್ನು ಅಪ್ಪಿ ಮಾತ್ರ ತನ್ನ ಗಂಡನ ಬಳಿ ಇಲ್ಲ ಸಲ್ಲದ ಚಾಡಿಯನ್ನು ಹೇಳುವುದನ್ನು ನಿಲ್ಲಿಸಿಲ್ಲ.


Click it and Unblock the Notifications











