Amruthadhaare:ಭೂಮಿಕಾ ಪರ ವಹಿಸಿದ ಪಾರ್ಥ; ಅಕ್ಕನನ್ನು ಕಂಡು ಸಿಡಿಮಿಡಿಗೊಂಡ ಅಪ್ಪಿ
ಭೂಮಿಕಾ ಹಾಗೂ ಗೌತಮ್ ಇಬ್ಬರು ಕುಳಿತು ಕುಶಲೋಪರಿ ಮಾತನಾಡುತ್ತಿರುತ್ತಾರೆ. ಭೂಮಿಕಾ ತನ್ನ ಗಂಡನ ಗುಣದ ಬಗ್ಗೆ ಹಾಡಿ ಹೊಗಳುತ್ತಿರುತ್ತಾರೆ. "ನಿಮ್ಮಿಂದ ಆಗಿಯೇ ಇದೀಗ ನನ್ನ ತಂಗಿ ಹಾಗೂ ಮೈದುನ ಒಂದಾಗಲು ಸಾಧ್ಯವಾಗಿದ್ದು. ಇದೆಲ್ಲ ಹೇಗೆ ಸಾಧ್ಯ?. ಹೀಗೂ ಆಗುತ್ತಾ ಎಂದು ಯೋಚನೆ ಮಾಡುತ್ತಿರುತ್ತಾರೆ. ಹಾಗೆಯೇ ಅದನ್ನು ತನ್ನ ಗಂಡ ಗೌತಮ್ ಬಳಿ ಹೇಳುತ್ತಿರುತ್ತಾರೆ. ನೀವು ಅದು ಹೇಗೆ ಪ್ಲಾನ್ ಮಾಡಿದಿರಿ ಎಂದು ಕೇಳಿದಾಗ ಗೌತಮ್ "ಇದೆಲ್ಲ ಸೈಕಾಲಜಿ ಕಣ್ರೀ. ಅದಕ್ಕೆಲ್ಲ ನೀವು ಯೋಚನೆ ಮಾಡಬೇಡಿ" ಎಂದು ಹೇಳುತ್ತಾರೆ.
ಗೌತಮ್ ಮಾತು ಕೇಳಿ ಭೂಮಿಕಾಗೆ ಬಹಳ ಖುಷಿ ಆಗುತ್ತೆ. ಅಪ್ಪಿ ಹಾಗೂ ಪಾರ್ಥ ಖುಷಿ ಖುಷಿಯಾಗಿ ಜೀವನ ಮಾಡುವ ಹಾಗೆ ಆಗಲಿ ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾರೆ. ಇನ್ನು ಈ ವಿಚಾರವಾಗಿ ಗೌತಮ್ ಹಾಗೂ ಭೂಮಿಕಾ ನಡುವೆ ಇದ್ದ ಅಂತರ ಬಹಳಷ್ಟು ಕಡಿಮೆ ಆಗುತ್ತಾ ಬಂದಿದೆ. ಇವರಿಬ್ಬರ ನಡುವೆ ಬಹಳ ಆಗಾಧವಾದ ಪ್ರೀತಿ ಹುಟ್ಟಿಕೊಂಡಿದೆ. ಇಬ್ಬರಿಗೂ ಕೂಡ ಒಬ್ಬರನ್ನೊಬ್ಬರು ಬಿಟ್ಟು ಇರಲು ಆಗದೆ ಪ್ರೀತಿ ಮಾಡುತ್ತಿದ್ದಾರೆ. ಇನ್ನು ಜೈ ದೇವ್‌ಗೆ ಹೇಗಾದರೂ ಮಾಡಿ ಮನೆಯ ಹೊರಗಡೆ ಹೋಗಲೇ ಬೇಕು ಎನ್ನುವ ಬಯಕೆ ಆಗಿದೆ. ಮನೆಯ ಹೊರಗಡೆ ಹೋದರೆ ನಾನು ಅಂದುಕೊಂಡ ಕೆಲಸ ಮಾಡಿ ಮುಗಿಸಬಹುದು. ನನ್ನ ಪ್ರೇಯಸಿಯನ್ನು ಮೀಟ್ ಮಾಡಬಹುದು. ಮನೆಯ ಒಳಗಡೆ ಇದ್ದರೆ ನಾನು ಮಾತ್ರ ಖಂಡಿತವಾಗಿಯೂ ನಾನಾಗಿಯೇ ಇರುವುದಿಲ್ಲ ಎಂದು ಜೈ ದೇವ್ ಅಂದುಕೊಂಡು ಇರುತ್ತಾನೆ.

ಇತ್ತ ಮಲ್ಲಿ ಬಳಿ ಜೈ ದೇವ್ "ಮಲ್ಲಿ ನಿನಗೆ ಮನೆಯೊಳಗೆ ಇದ್ದು ಇದ್ದು ಬಹಳ ಬೋರ್ ಆಗಿರಬಹುದು. ಆದರೆ ನನಗೆ ಮನೆಯ ಹೊರಗಡೆ ಹೋಗಬಾರದು ಎಂದು ಅಣ್ಣ ಹೇಳಿದ್ದಾರೆ. ಅದಕ್ಕೆ ನಿನ್ನನ್ನು ಎಲ್ಲಿ ಕೂಡ ಸುತ್ತಾಡಿಸುವುದಕ್ಕೆ ನನ್ನಿಂದ ಸಾಧ್ಯ ಆಗುತ್ತಿಲ್ಲ ನನ್ನನ್ನು ದಯವಿಟ್ಟು ಕ್ಷಮಿಸಿ ಬಿಡು" ಎಂದು ಹೇಳುತ್ತಾನೆ. ಆಗ ಮಲ್ಲಿ "ಹೌದು ನನಗೆ ಕೂಡ ಹೊರಗಡೆ ಹೋಗಿ ಸುತ್ತಾಡಿಕೊಂಡು ಬರೋಣ ಎಂದು ಅನ್ನಿಸುತ್ತಿದೆ. ಆದರೆ ಹೊರಗಡೆ ಹೋಗಲು ಆಗುತ್ತಿಲ್ಲ. ನೀವು ಕರೆದುಕೊಂಡು ಹೋಗುವುದಾದರೆ ನಾನು ಬರುತ್ತೇನೆ" ಎಂದು ಹೇಳಿದಾಗ ಜೈ ದೇವ್‌ಗೆ ಬಹಳ ಖುಷಿ ಆಗುತ್ತದೆ.
ಜೈ ದೇವ್ ಮಾತಿನಂತೆ ನಡೆದುಕೊಂಡ ಮಲ್ಲಿ
ಇನ್ನು ಲಡ್ಡು ಬಂದು ಬಾಯಿಗೆ ಬಿತ್ತು ಎನ್ನುವ ಹಾಗೆ ಜೈ ದೇವ್ ಅಂದುಕೊಂಡಿದ್ದು ಆಗಿದೆ. ಮಲ್ಲಿ ಬಾಯಿಯಿಂದ ಬರುತ್ತಿರುವ ಅದೇ ಮಾತು ಕೇಳಿ ಜೈ ದೇವ್‌ಗೆ ಬಹಳ ಖುಷಿ ಆಗುತ್ತೆ. ಇನ್ನು ಮನೆಯ ಹೊರಗಡೆ ಹೋಗಬಾರದು ಎಂದು ಜೈ ದೇವ್‌ಗೆ ಬಹಳ ಸ್ಟ್ರಿಕ್ಟ್ ಆಗಿ ಗೌತಮ್ ವಾರ್ನಿಂಗ್ ಮಾಡಿದ್ದಾನೆ. ಇನ್ನು ಜೈ ದೇವ್ ಆಕ್ಟಿವಿಟಿಯನ್ನು ಗೌತಮ್ ಹಾಗೆಯೇ ಭೂಮಿಕಾ ನೋಡುತ್ತಲೆ ಇರುತ್ತಾರೆ.

ಭೂಮಿಕಾಗೆ ಜೈ ದೇವ್ ಮೇಲೆ ಅನುಮಾನ
ಮಲ್ಲಿ ಹಾಗೂ ಜೈ ದೇವ್ ಹೊರಗಡೆ ಹೋಗುವುದನ್ನು ನೋಡಿದ ಭೂಮಿಕಾ, ಮಲ್ಲಿಗೆ ಬೇಕು ಅಂತಲೇ ಕೇಳುತ್ತಾರೆ. "ಅರೆರೆ ನೀವು ಇಷ್ಟು ಖುಷಿಯಾಗಿ ಎಲ್ಲಿಗೆ ಹೊರಟಿದ್ದೀರಾ? ಏನಾದರು ವಿಶೇಷ ಇದೆಯಾ?" ಎಂದು ಕೇಳುತ್ತಾರೆ. ಆಗ ಮಲ್ಲಿ "ಹಾಗೇನಿಲ್ಲ ಅಕ್ಕ ಮನೆಯಲ್ಲಿ ಇದ್ದು ಇದ್ದು ನನಗೆ ಬಹಳ ಬೋರ್ ಆಗುತ್ತಿದೆ. ಇವರು ಹೇಗೋ ಮನೆಯಲ್ಲಿಯೇ ಇದ್ದಾರೆ. ನಾವಿಬ್ಬರು ಆಚೆ ಕಡೆ ಸುತ್ತಾಡಿಕೊಂಡು ಬರೋಣ ಎಂದುಕೊಂಡಿದ್ದೇವೆ" ಎಂದು ಹೇಳುತ್ತಾಳೆ. ಆಗ ಜೈ ದೇವ್ ಕೂಡ ಮಲ್ಲಿ ಮಾತಿಗೆ ಆಯಿತು ಎಂದು ಒಪ್ಪಿಗೆ ಸೂಚಿಸುತ್ತಾನೆ. ನನಗೆ ಹೊರಗಡೆ ಹೋಗಬೇಕು ಎನ್ನುವ ಆಸೆ ಇಲ್ಲ ಎಂದು ಹೇಳುತ್ತಾನೆ. ಆದರೆ ಭೂಮಿಕಾಗೆ ಗೌತಮ್ ಹೇಳಿದ ಮಾತು ನೆನಪಾಗುತ್ತದೆ.
ಗಂಡನ ಮಾತು ನೆನಪಿಸಿಕೊಂಡ ಭೂಮಿಕಾ
ಯಾವುದೇ ಕಾರಣಕ್ಕೂ ಜೈ ದೇವ್ ಮನೆ ಬಿಟ್ಟು ಎಲ್ಲಿಗೂ ಕೂಡ ಹೋಗಬಾರದು. ಅವನು ಮನೆಯಲ್ಲಿಯೇ ಇರಬೇಕು ಎಂದು ಹೇಳಿರುವುದು ನೆನಪಿಗೆ ಬರುತ್ತದೆ. ಇನ್ನು ಜೈ ದೇವ್ ಮಾತ್ರ ಮನಸ್ಸಿನಲ್ಲಿ ಈ ಎಲ್ಲಾ ವಿಚಾರವೂ ಹರಿದಾಡುತ್ತಿರುತ್ತದೆ. ಭೂಮಿಕಾಗೆ ನನ್ನ ಮೇಲೆ ಏನಾದರು ಡೌಟ್ ಬಂದಿರಬಹುದಾ ಎನ್ನುವ ಪ್ರಶ್ನೆಯೂ ಆತನಿಗೆ ಮೂಡುತ್ತದೆ. ಇನ್ನೂ ಅಪ್ಪಿ, ಭೂಮಿಕಾ ಬಗ್ಗೆ ಇಲ ಸಲ್ಲದ ಮಾತನ್ನು ಪಾರ್ಥಗೆ ಹೇಳಿದಾಗ "ಭೂಮಿಕಾ ಅತ್ತಿಗೆ ಟೀಚರ್, ಅವರು ಹಾಗೆಲ್ಲ ಮಾಡುವುದು ಇಲ್ಲ. ನೀನು ಇತ್ತೀಚೆಗೆ ಅತ್ತಿಗೆಯ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಆಡುತ್ತಿದ್ದಿಯಾ?. ಇದು ಸರಿಯಲ್ಲ. ಅಷ್ಟಕ್ಕೂ ನೀನು ಅವರ ತಂಗಿ ಎನ್ನುವುದನ್ನು ಮರೆಯಬೇಡ" ಎಂದು ಹೇಳುತ್ತಾನೆ.


Click it and Unblock the Notifications











