Amruthadhaare:ಜೈದೇವ್ ಕಳ್ಳಾಟ ಮಲ್ಲಿಗೆ ಅರ್ಥ ಆಗುತ್ತಾ? ಭೂಮಿಕಾ ಅನುಮಾನ ನಿಜ ಆಯ್ತಾ?

By ಪೂರ್ವ

ಜೈದೇವ್ ಮಲ್ಲಿಯನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬರುತ್ತಾನೆ. ಆದರೆ ಇದು ಭೂಮಿಕಾಗೆ ಇಷ್ಟ ಇರುವುದಿಲ್ಲ. ಜೈದೇವ್ ಮನೆ ಬಿಟ್ಟು ಹೋಗಬಾರದು ಎಂದು ಗೌತಮ್ ಖಡಕ್ ಆಗಿ ಹೇಳಿರುತ್ತಾರೆ. ಆದರೆ, ಮಲ್ಲಿಗೆ ಏನೇನೋ ಹೇಳಿ ಪುಸಲಾಯಿಸಿ ಕರೆದುಕೊಂಡು ಹೋಗುತ್ತಾನೆ. ಮಲ್ಲಿ ಕೂಡ ನೀವು ನನ್ನ ಜೊತೆ ಇದ್ದರೆ ನನಗೆ ಇನ್ನಷ್ಟು ಖುಷಿ ಎಂದು ಹೇಳಿ ಜೈದೇವ್ ಜೊತೆ ಹೊರಡುತ್ತಾಳೆ.

"ಮೊದಲೇ ಮಲ್ಲಿ ಮುಗ್ದೆ. ಇನ್ನು ನನ್ನ ಮಾತು ಕೇಳಿ ಆಕೆ ಕೂಡ ಇಂಪ್ರೆಸ್ ಆಗಿದ್ದಾಳೆ. ನಾನು ಏನೇ ಮಾಡಿದರು ಏನೇ ಹೇಳಿದರೂ ಕೂಡ ಸುಮ್ಮನೆ ಇರುತ್ತಾಳೆ" ಎಂದು ಜಯದೇವ್ ಅಂದುಕೊಳ್ಳುತ್ತಾನೆ. ಇನ್ನೂ ಭೂಮಿಕಾ ಬಳಿಗೆ ಬಂದ "ಮಲ್ಲಿ ಅಕ್ಕ ನಾನು ಮತ್ತೆ ಇವರು ಹೊರಗಡೆ ಹೋಗಿ ಬರುತ್ತೇವೆ" ಎಂದು ಹೇಳಿದಾಗ ಭೂಮಿಕಾ ಮೊದಲು ಒಪ್ಪುವುದಿಲ್ಲ. ಆ ಬಳಿಕ ಮಲ್ಲಿಯ ಮುಖ ನೋಡಿ ಸರಿ ಬೇಗ ಬನ್ನಿ ಎಂದು ಹೇಳುತ್ತಾಳೆ. ಇದನ್ನೇ ಕಾಯುತ್ತಿದ್ದ ಜೈದೇವ್‌ಗೆ ಬಹಳ ಖುಷಿ ಆಗುತ್ತೆ. ಹೇಗಾದರೂ ಮಾಡಿ ಇವತ್ತು ತನ್ನ ಪ್ರೇಯಸಿಯನ್ನು ಮಾತನಾಡಿಸಿಕೊಂಡು ಬರಲೇಬೇಕು ಎಂದು ಅಂದುಕೊಳ್ಳುತ್ತಾನೆ.

Amruthadhaare serial September 12th episode update

ಹಾಗೆಯೇ ಜೈದೇವ್, ಮಲ್ಲಿಯನ್ನು ಕರೆದುಕೊಂಡು ಸ್ವಲ್ಪ ದೂರದ ತನಕ ಬರುತ್ತಾನೆ. ಇದನ್ನು ನೋಡಿ ಮಲ್ಲಿಗೆ ಬಹಳ ಖುಷಿಯಾಗುತ್ತೆ. ಆ ಕೂಡಲೇ ಜೈ ದೇವ್ ಕಾರನ್ನು ಸೈಡಿಗೆ ಹಾಕುತ್ತಾನೆ. ಜೈದೇವ್ ವರ್ತನೆ ಕಂಡು ಮಲ್ಲಿ ಗಾಬರಿಯಾಗುತ್ತಾಳೆ. ಇದೇನು ರೀ ಲಾಂಗ್ ಡ್ರೈವ್ ಹೋಗೋಣ ಎಂದು ಹೇಳಿ ಹೀಗೆಲ್ಲಾ ಹೇಳುತ್ತಿದ್ದೀರಿ ಅಲ್ವಾ ಎಂದು ಹೇಳುತ್ತಾಳೆ. ಆಗ ಜೈ ದೇವ್ ಏನೂ ಮಾತನಾಡದೆ ಸುಮ್ಮನೆ ಇರುತ್ತಾನೆ. "ನನ್ನ ಗೆಳೆಯನನ್ನೊಮ್ಮೆ ಭೇಟಿಯಾಗಬೇಕಾಗಿತ್ತು. ಅದಕ್ಕಾಗಿ ನೀನು ಒಂದು ಐದು ನಿಮಿಷ ಇಲ್ಲಿ ನನಗೋಸ್ಕರ ವೈಟ್ ಮಾಡುತ್ತೀಯಾ? ನಾನು ಆದಷ್ಟು ಬೇಗ ಗೆಳೆಯನನ್ನು ಭೇಟಿಯಾಗಿ ಬರುತ್ತೇನೆ" ಎಂದು ಹೇಳುತ್ತಾನೆ.

ಮಲ್ಲಿಗೆ ಶುರುವಾಯಿತು ಆತಂಕ

ಇದನ್ನು ಕೇಳಿದ ಮಲ್ಲಿಗೆ ಆತಂಕ. "ನನಗೆ ಬಹಳ ಭಯವಾಗುತ್ತಿದೆ ನೀವು ಈ ರೀತಿ ನನ್ನನ್ನು ಒಬ್ಬಳನ್ನೇ ಬಿಟ್ಟು ಹೋದರೆ ಹೇಗೆ? ನನಗೆ ಒಬ್ಬಳೆ ಇದ್ದು ಅನುಭವವಿಲ್ಲ" ಎಂದು ಹೇಳುತ್ತಾಳೆ. ಆಗ ಜೈದೇವ್ ಮಲ್ಲಿಯ ಮನ ಒಲಿಸುತ್ತಾನೆ. "ಮಲ್ಲಿಯವರೇ ನೀವು ಏನು ಹೆದರಿಕೊಳ್ಳಬೇಡಿ. ದಯವಿಟ್ಟು ನೀವು ಕಾರಿನಲ್ಲಿ ಕುಳಿತು ಸಾಂಗ್ ಅನ್ನ ಕೇಳುತ್ತೀರಿ. ಕೂಡಲೇ ನಾನು ಬರುತ್ತೇನೆ" ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ಜೈದೇವ್ ನೇರವಾಗಿ ತನ್ನ ಪ್ರೇಯಸಿರುವ ಕಾರಿನಲ್ಲಿ ಬಂದು ಕುಳಿತುಕೊಂಡು ಆಕೆಯ ಜೊತೆ ಮಾತನಾಡುತ್ತಿರುತ್ತಾನೆ. ಇತ್ತ ಮಲ್ಲಿಗೆ ಗಂಡನನ್ನು ಕಾದು ಕಾದು ಸುಸ್ತಾಗುತ್ತಾಳೆ.

ಜೈದೇವ್ ಕಾಣದೆ ಕಂಗಾಲಾದ ಮಲ್ಲಿ

ಜೈದೇವ್ ಬಾರದೆ ಇದ್ದಿದ್ದನ್ನು ನೋಡಿ ಏನು ಮಾಡಬೇಕು ಎಂದು ದಿಕ್ಕು ತೋಚದ ಹಾಗೆ ಆಗುತ್ತದೆ. ಇನ್ನು ಆಕೆ ಮೆತ್ತಗೆ ಕಾರಿನಿಂದ ಇಳಿಯುತ್ತಾಳೆ. ತನ್ನ ಗಂಡ ಎಲ್ಲಿದ್ದಾರೆ ಎಂದು ಹುಡುಕುತ್ತಿರುತ್ತಾಳೆ. ಇನ್ನು ಜೈದೇವ್ ತನ್ನ ಪ್ರಿಯಸಿ ಜೊತೆಗೆ ಕಾಲ ಕಳೆಯುತ್ತಿರುತ್ತಾನೆ. ಆ ಕೂಡಲೇ ಜೈ ದೇವ್ ಹಾಗೂ ಆತನ ಪ್ರೇಯಸಿ ಇರುವ ಜಾಗದ ಬಳಿ ಬರುತ್ತಾಳೆ. ಇದನ್ನು ನೋಡಿದ ಜೈ ದೇವ್ ಪ್ರೇಯಸಿ "ಅಲ್ಲಿ ನೋಡಿ ಜೈ ದೇವ್ ನಿಮ್ಮ ಹೆಂಡತಿ" ಎಂದು ಹೇಳಿದಾಗ, ಜೈ ದೇವ್‌ಗೆ ಶಾಕ್‌ ಆಗುತ್ತೆ. ಹಾಗೆಯೇ ಮಲ್ಲಿ ಅಲ್ಲಿಂದ ಹೋದ ಬಳಿಕ ಕಾರಿನಿಂದ ಇಳಿದು ಮಲ್ಲಿ ಬಳಿಗೆ ಬಂದು ಮನೆಗೆ ಕರೆದುಕೊಂಡು ಬರುತ್ತಾನೆ.

ಅಪ್ಪಿಯ ಅಪ್ಪುಗೆಯಲ್ಲಿ ಪಾರ್ಥ

ಭೂಮಿಕಾ, ಮಲ್ಲಿ ಹಾಗೂ ಜೈ ದೇವ್‌ಗಾಗಿ ಮನೆಯ ದಾರಿ ಕಾಯುತ್ತಿರುತ್ತಾರೆ. ಇನ್ನು ಜೈ ದೇವ್ ಮೆತ್ತಗೆ ಭೂಮಿಕಾ ಕೈ ಯಿಂದ ಎಸ್ಕೇಪ್ ಆಗುತ್ತಾನೆ. ಇತ್ತ ಪಾರ್ಥನನ್ನು ಹೇಗಾದರೂ ಮಾಡಿ ನನ್ನ ಕೈ ವಶ ಮಾಡಿಕೊಳ್ಳಬೇಕು. ಅಕ್ಕನ ವಿರುದ್ದ ನಾನು ಆತನನ್ನು ಎತ್ತಿ ಕಟ್ಟಬೇಕು. ಅದಕ್ಕೆ ನಾನು ಪಾರ್ಥಗೆ ಮತ್ತಷ್ಟು ಹತ್ತಿರ ಆಗಬೇಕು ಅಂದುಕೊಂಡು ಪಾರ್ಥ ಬಳಿಗೆ ಬರುತ್ತಾಳೆ. ಪಾರ್ಥಗೆ ನೀರು ಕೊಡುವ ನೆಪದಲ್ಲಿ ಆತನ ಮೈಮೇಲೆ ನೀರು ಚೆಲ್ಲುತ್ತಾಳೆ. ಇಲ್ಲೊಂದು ರೊಮ್ಯಾಂಟಿಕ್ ಸೀನ್ ಆರಂಭ ಆಗುತ್ತೆ. ಅಪ್ಪಿ ಅಕ್ಕನ ವಿರುದ್ಧ ಎತ್ತಿ ಕಟ್ಟುವುದರಲ್ಲಿ ಯಶಸ್ವಿ ಆಗುತ್ತಾಳಾ? ನೋಡಬೇಕು.

More from Filmibeat

English summary
Amruthadhaare serial September 12th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X