Amruthadhaare:ಮತ್ತೆ ಜೈ ದೇವ್ ಕಳ್ಳಾಟ ಶುರು; ತಮ್ಮನ ಈ ನಡೆಗೆ ಎಲ್ಲಿಗೆ ಹೋಗಿ ಮುಟ್ಟುತ್ತೋ?

By ಪೂರ್ವ

ಗೌತಮ್‌ಗೆ ಜೈ ದೇವ್ ಮೇಲೆ ಬಹಳ ಅನುಮಾನ ಮೂಡಿದೆ. ಮನೆಯವರ ಬಳಿ ಅದಕ್ಕಾಗಿ ಜೈ ದೇವ್ ಎಲ್ಲಿಗೂ ಹೋಗುವುದು ಬೇಡ. ಆತ ಮನೆಯಲ್ಲಿ ಮಲ್ಲಿಯ ಸೇವೆ ಮಾಡಿಕೊಂಡು ಇರಬೇಕು. ಆತನ ಹೆಂಡತಿಯ ಕಾಳಜಿಯನ್ನು ಸ್ವತಃ ಆತನೇ ಮಾಡಬೇಕು ಎಂದು ಗೌತಮ್ ಈಗಾಗಲೇ ಮನೆ ಮಂದಿಗೆ ಖಡಕ್ ಆಗಿ ಹೇಳಿರುತ್ತಾನೆ. ಆಫೀಸ್‌ನಲ್ಲಿ ಜೈ ದೇವ್ ಸ್ಥಾನವನ್ನು ಪಾರ್ಥನಿಗೆ ಗೌತಮ್ ವಹಿಸಿದ್ದಾನೆ . ಇನ್ನು ಮಲ್ಲಿಗೆ ತನ್ನ ಗಂಡನ ಅಸಲಿಯತ್ತು ಆಕೆಗೆ ತಿಳಿದಿಲ್ಲ.

ಭೂಮಿಕಾಗೆ ಇತ್ತೀಚೆಗೆ ತನ್ನ ಮೈದುನನ ಮೇಲೆ ಬಹಳ ಅನುಮಾನಗೊಳ್ಳುತ್ತಾಳೆ. ಜೈ ದೇವ್‌ಗೆ ಮಲ್ಲಿ ಜೊತೆ ಬದುಕಲು ಇಷ್ಟ ಇಲ್ಲ. ಆದರೆ, ಆಕೆಯನ್ನು ಗರ್ಭಿಣಿ ಮಾಡಿ ಮತ್ತೊಬ್ಬ ಹುಡುಗಿಯ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾನೆ. ಆದರೆ, ಈ ವಿಚಾರ ಗೌತಮ್ ಹಾಗೂ ಆನಂದ್‌ಗೆ ತಿಳಿದಿದೆ. ಬೇರೆಯವರಿಗೂ ಕೂಡ ಜೈ ದೇವ್ ಅಸಲಿ ಮುಖ ತಿಳಿಯಬೇಕಿದೆ. ಇನ್ನು ಜೈ ದೇವ್ ಕಳ್ಳಾಟ ಮಲ್ಲಿ ಮುಂದೆ ಅನಾವರಣ ಆಗುವುದು ಒಂದೇ ಬಾಕಿ.

Amruthadhaare serial September 13th episode update

ಹೆಂಡತಿಯ ಜೊತೆ ಚೆನ್ನಾಗಿ ಇರಬೇಕು. ಹೆಂಡತಿಗೆ ಒಳ್ಳೆಯ ಗಂಡನಾಗಿ, ಹಾಗೆಯೇ ಮಗುವಿಗೆ ಅಪ್ಪನಾಗಿ ಜೀವನ ನಡೆಸಬೇಕು. ನಮ್ಮೆಲ್ಲರ ಹಾಗೆ ಜೈ ದೇವ್ ಹಾದಿ ತಪ್ಪಬಾರದು ಎಂದು ಬಹಳ ಖಡಕ್ ಆಗಿಯೇ ಗೌತಮ್ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾನೆ. ಇನ್ನು ಈ ರೀತಿ ಎಲ್ಲಾ ಎಚ್ಚರಿಕೆ ಕೊಟ್ಟರು ಜೈ ದೇವ್ ಹಾಗೂ ಆತನ ಪ್ರೇಯಸಿ ಬುದ್ದಿ ಕಲಿತ ಹಾಗೆ ಕಾಣುತ್ತಿಲ್ಲ. ಗೌತಮ್‌ಗೆ ಏನು ಮಾಡಬೇಕು ಎಂದು ದಿಕ್ಕು ತೋಚದ ಹಾಗೆ ಆಗುತ್ತದೆ.

ಮಲ್ಲಿ ಮಾತಿಗೆ ಭೂಮಿಕಾ ಅನುಮಾನ

ಇನ್ನು ಮನೆಯಲ್ಲಿ ಮಲ್ಲಿ ಒಬ್ಬಳೆ ಓಡಾಡುತ್ತಿರುವುದನ್ನು ನೋಡಿ ಭೂಮಿಕಾಗೆ ಖುಷಿ ಆಗುತ್ತದೆ. ಜೈ ದೇವ್ ಕೊಟ್ಟ ಸರ್ಪ್ರೈಸ್ ಬಗ್ಗೆ ಮಲ್ಲಿ ಬಳಿ ಭೂಮಿಕಾ ಕೇಳುತ್ತಾಳೆ. ಇದನ್ನು ಕೇಳಿದ ಮಲ್ಲಿ ನಾಚುತ್ತಲೇ ಇರುತ್ತಾಳೆ. ನನಗೆ ಬಹಳ ದೊಡ್ಡ ಸರ್ಪ್ರೈಸ್ ಗಿಫ್ಟ್ ತಂದಿದ್ದರು. ಆದರೆ, ಗೆಳೆಯನ ಮನೆಯಲ್ಲಿ ಇಟ್ಟಿದ್ದಾರಂತೆ. ಇದೀಗ ಅದನ್ನು ತೆಗೆದುಕೊಂಡು ಬರಲು ಹೋಗಿದ್ದಾರೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿ ಭೂಮಿಕಾಗೆ ಸಣ್ಣ ಅನುಮಾನ ಶುರುವಾಗಿದೆ.

ಮಲ್ಲಿ ಜೊತೆ ಕುಶಲೋಪರಿ

ಇನ್ನು ಮಲ್ಲಿ ಜೊತೆ ಕುಶಲೋಪರಿ ಮಾತನಾಡಿ ಅಲ್ಲಿಂದ ಹೋಗುತ್ತಾಳೆ. ಗೌತಮ್‌ಗೆ ಕರೆ ಮಾಡಿದ ಭೂಮಿಕಾ ಇವತ್ತಿನ ದಿನದ ಬಗ್ಗೆ ಕೇಳುತ್ತಾಳೆ. ಆಫೀಸ್‌ನಲ್ಲಿ ಏನೆಲ್ಲ ನಡೆಯುತ್ತಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ಕೇಳುತ್ತಾಳೆ. ಇನ್ನು ಮಲ್ಲಿ ಹಾಗೂ ಜೈ ದೇವ್ ಬಗ್ಗೆ ಮಾತನಾಡಿದಾಗ ಭೂಮಿಕಾ "ಜೈ ದೇವ್ ಅವರು ಅವರ ಫ್ರೆಂಡ್ ಮನೆಗೆ ಹೋಗಿದ್ದಾರೆ. ಮಲ್ಲಿಗೆ ಕೊಡಬೇಕಿದ್ದ ಗಿಫ್ಟ್ ಅಲ್ಲಿಯೇ ಮರೆತು ಬಿಟ್ಟಿದ್ದಾರೆ. ಅದಕ್ಕೆ ತೆಗೆದುಕೊಂಡು ಬರಲು ಹೋಗಿದ್ದಾರೆ" ಎಂದಾಗ ಗೌತಮ್‌ಗೆ ಆತಂಕ ಶುರುವಾಗುತ್ತೆ.

Amruthadhaare serial September 13th episode update

ಗೌತಮ್‌ಗೆ ತಮ್ಮನ ನಡೆ ಬಗ್ಗೆ ಅನುಮಾನ

ಇದೇನಪ್ಪ ಜೈ ದೇವ್ ಮನೆ ಬಿಟ್ಟು ಎಲ್ಲೂ ಹೋಗಬಾರದು ಎಂದಿದ್ದೆ. ಆದರೆ ಇದೀಗ ಜೈ ದೇವ್ ನಡವಳಿಕೆ ಬಹಳ ಅನುಮಾನಗೊಳಿಸಿದೆ. ಹಾಗೆಯೇ ಜೈ ದೇವ್ ಬಗ್ಗೆ ಇನ್ವೆಸ್ಟಿಗೇಷನ್ ನಡೆಸಬೇಕು ಎಂದು ಅಂದುಕೊಳ್ಳುತ್ತಾನೆ.

More from Filmibeat

English summary
Amruthadhaare serial September 13th episode update:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X