Amruthadhaare:ಕೊನೆಗೂ ಗೌತಮ್‌ಗೆ ಗೊತ್ತಾಯ್ತು; ಶಕುಂತಲಾ ದೇವಿ ಗೆಳತಿಯರಿಗೆ ಹೇಗಿತ್ತು ಮಾತಿನೇಟು?

By ಪೂರ್ವ

ಜೈದೇವ್‌ನ ಹೆಂಡತಿ ಮಲ್ಲಿಯ ಅದ್ಧೂರಿ ಸೀಮಂತ ಶಾಸ್ತ್ರ ನಡೆಯುತ್ತಿದ್ದು ಸೀಮಂತ ಕಾರ್ಯಕ್ರಮಕ್ಕೆ ಅತಿಥಿಗಳು ಆಗಮಿಸಿರುತ್ತಾರೆ. ಮಲ್ಲಿಯ ಇಚ್ಛೆಯ ಪ್ರಕಾರವಾಗಿ ಸೀಮಂತ ಶಾಸ್ತ್ರವನ್ನು ಮನೆ ಮಂದಿ ನಡೆಸಿಕೊಡುತ್ತಾರೆ. ಇನ್ನು ಮಲ್ಲಿಯ ಬಳಿ ಭೂಮಿಕಾ, ಜೈ ದೇವ್ ಬಗ್ಗೆ ಎಚ್ಚರಿಕೆಯಿಂದ ಇರು ಎಂದು ಹೇಳುವಾಗಲೇ ಮಲ್ಲಿ ಸಿಡಿದು ನಿಲ್ಲುತ್ತಾಳೆ.

"ಅಕ್ಕವ್ರೆ, ನೀವು ಹೇಳಿದ್ದೀರಿ ಎನ್ನುವ ಮಾತ್ರಕ್ಕೆ ನಾನು ಸುಮ್ಮನಿದ್ದೇನೆ. ಬೇರೆಯವರು ಒಂದು ವೇಳೆ ಈ ಮಾತನ್ನು ಹೇಳಿದರೆ, ಅವರನ್ನು ನಾನು ಖಂಡಿತವಾಗಿಯೂ ಸುಮ್ಮನೆ ಬಿಡುತ್ತಿರಲಿಲ್ಲ. ನನ್ನ ಗಂಡ ಹೇಗೆ ಎನ್ನುವುದು ನನಗೆ ತುಂಬಾ ಚೆನ್ನಾಗಿ ತಿಳಿದಿದೆ. ಯಾರು ನನ್ನ ಗಂಡನ ಬಗ್ಗೆ ಕಮೆಂಟ್ ಮಾಡುವ ಅಗತ್ಯವಿಲ್ಲ" ಎಂದು ಬಹಳ ಖಡಕ್ಕಾಗಿ ಹೇಳಿದ್ದಾಳೆ.

Amruthadhaare serial September 19th episode update

ಈ ಸಂದರ್ಭದಲ್ಲಿ ಭೂಮಿಕಾಗೆ ಏನು ಹೇಳಬೇಕು ಎಂದು ತಿಳಿಯದೆ ಶಾಕ್ ಆಗುತ್ತಾಳೆ. ಇನ್ನು ಭೂಮಿಕಾಳನ್ನು ಎಲ್ಲರೂ ಹಂಗಿಸಿಯೇ ಮಾತನಾಡುತ್ತಾರೆ. ಇಷ್ಟು ಸಮಯವಾದರೂ ಇನ್ನು ಕೂಡ ಮಕ್ಕಳಾಗಲಿಲ್ಲವಲ್ಲ ಎಂದು ಬಹಳ ಕುಕ್ಕಿ ಕುಕ್ಕಿ ಮಾತನಾಡುತ್ತಾರೆ. ಇದೆಲ್ಲವನ್ನು ಕೇಳಿ ಭೂಮಿಕಾಗೆ ಬಹಳಷ್ಟು ನೋವಾಗುತ್ತದೆ. ಆದರೆ, ಅದು ಯಾವುದನ್ನೂ ಹೇಳುವ ಸ್ಥಿತಿಯಲ್ಲಿ ಭೂಮಿಕಾ ಇಲ್ಲ.

ಗೌತಮ್, ಭೂಮಿಕಾ ಮುಖವನ್ನು ನೋಡಿ ಯಾಕೆ ಭೂಮಿಕಾ ಏನಾಯ್ತು? ಯಾಕೆ ಇಷ್ಟೊಂದು ಬೇಸರದಲ್ಲಿದ್ದಿಯಾ? ಎಂದು ಕೇಳಿದಾಗ ಭೂಮಿಕಾ ಸುಳ್ಳು ಹೇಳುತ್ತಾಳೆ. "ನಾನು ಮಲ್ಲಿಯ ಜೊತೆ ಬಹಳ ಕ್ಲೋಸ್ ಆಗಿ ಇದ್ದೆ. ಆದರೆ, ಇದೀಗ ಮಲ್ಲಿ ಆಕೆಯ ತವರು ಮನೆಗೆ ಹೋಗುತ್ತಿದ್ದಾಳೆ. ಇದರಿಂದಾಗಿ ನನಗೆ ಬಹಳ ಬೇಸರಾಗುತ್ತಿದೆ. ಮಲ್ಲಿಯ ಜೊತೆ ನಾನು ಹೆಚ್ಚು ಮಾತನಾಡಬೇಕು ಎಂದು ಅಂದುಕೊಳ್ಳುತ್ತೇನೆ. ಆದರೆ ಆಕೆ ಇನ್ನು ಮೇಲೆ ಆಕೆಯ ತವರು ಮನೆಯಲ್ಲಿ ಇರುತ್ತಾಳೆ ಎನ್ನುವ ಬೇಸರಕ್ಕೆ ನಾನು ಹೀಗೆ ಅಳುತ್ತಿದ್ದೇನೆ" ಎಂದು ಹೇಳುತ್ತಾಳೆ. ತನಗಾದ ನೋವಿನ ಬಗ್ಗೆ ಎಲ್ಲೂ ಕೂಡ ಹೇಳದೆ ನಿಜವಾದ ಕಾರಣವನ್ನ ಗೌತಮ್ ಬಳಿಯಿಂದ ಭೂಮಿಕಾ ಮುಚ್ಚಿಡುತ್ತಾಳೆ.

Amruthadhaare serial September 19th episode update

ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ

ಇನ್ನು ಮಲ್ಲಿಗೆ ಸೀಮಂತ ನಡೆಯುತ್ತಿರುತ್ತದೆ. ಜೈ ದೇವ್ ಕೂಡ ಮಲ್ಲಿಗೆ ಹಾರ ಹಾಕಿ ಮುತ್ತೈದೆಯರು ಬಂದು ಆಶೀರ್ವಾದ ಮಾಡುವ ಪದ್ಧತಿ ಇರುತ್ತದೆ. ಈ ವೇಳೆ ಶಕುಂತಲಾ ದೇವಿ ಗೆಳತಿಯರು ಮಲ್ಲಿಗೆ ಆಶೀರ್ವಾದ ಮಾಡಲು ಬರುತ್ತಾರೆ. ಇದೇ ವೇಳೆ ಗೌತಮ್ ತನ್ನ ಮನೆಯ ಕೆಲಸದವರನ್ನು ಕರೆದು ಮಲ್ಲಿಗೆ ಅರಿಶಿನ ಕುಂಕುಮ ಹಚ್ಚಿ ಆಶೀರ್ವಾದ ಮಾಡಲು ಹೇಳುತ್ತಾನೆ.

ಗೌತಮ್ ಮಾತಿಗೆ ಬೆದರಿದ ಶಕುಂತಲಾ

ಇದನ್ನು ಶಕುಂತಲಾ ದೇವಿ ಹಾಗೂ ಮನೆ ಮಂದಿ ಪ್ರಶ್ನೆ ಮಾಡಿದಾಗ ಗೌತಮ್ ಕೊಂಚ ಏರು ಧ್ವನಿಯಲ್ಲಿ ಹೇಳುತ್ತಾನೆ. ಮನೆಗೆ ಬಂದವರು ಮನೆಯಲ್ಲಿ ಬಂದ್ವಾ, ಮಾತನಾಡಿದ್ವಾ, ಹೋದ್ವಾ ಎನ್ನುವ ಹಾಗೆ ಇರಬೇಕು. ಬೇರೆಯವರ ಪರ್ಸನಲ್ ವಿಷಯದ ಬಗ್ಗೆ ಮೂಗು ತೂರಿಸಿ ಅವರಿಗೆ ಚುಚ್ಚು ಮಾತುಗಳಿಂದ ನಿಂದನೆ ಮಾಡಿ ಅವರ ಮನಸ್ಸನ್ನು ಘಾಸಿ ಮಾಡಿ ಬಳಿಕ ಆಶೀರ್ವಾದ ಮಾಡುವುದು ನಮಗೆ ಬೇಕಾಗಿಲ್ಲ. ಭೂಮಿಕಾ ಹಾಗೆಯೇ ನನಗೂ ಮಗು ಬೇಕು, ಬೇಡ ಎನ್ನುವುದು ನಮಗೆ ಬಿಟ್ಟಿದ್ದು ಅದು ಬಿಟ್ಟು ಇದನ್ನ ಯಾರು ಕೂಡ ಪ್ರಶ್ನೆ ಮಾಡುವ ಅಗತ್ಯವಿಲ್ಲ. ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಂಡರೆ ಸಾಕು" ಎಂದು ಗೌತಮ್ ಬಹಳ ನಿಷ್ಠುರವಾಗಿ ಹೇಳುತ್ತಾನೆ.

ಗೌತಮ್ ಮಾತಿಗೆ ಭೂಮಿಕಾ ಶಾಕ್

ಇದನ್ನು ಕೇಳಿದ ಶಕುಂತಲಾ ದೇವಿಗೆ ಶಾಕ್ ಆಗುತ್ತದೆ. ಭೂಮಿಕಾ ಹಾಗೂ ಗೌತಮ್‌ಗೆ ಈ ವಿಚಾರ ಹೇಗೆ ಗೊತ್ತಾಯಿತು? ಎನ್ನುವ ಕುತೂಹಲ ಮೂಡುತ್ತದೆ. ನಾನು ಯಾವತ್ತೂ ಯಾವುದರ ಬಗ್ಗೆಯೂ ಹೇಳಿಲ್ಲ. ಅಂತಹದರಲ್ಲಿ ಇದೀಗ ಗೌತಮ್‌ಗೆ ಈ ವಿಚಾರ ಯಾರು ಹೇಳಿದರು? ಅಪರ್ಣಾ ಏನಾದರು ಈ ಬಗ್ಗೆ ಗೌತಮ್ ಬಳಿ ಹೇಳಿರಬಹುದಾ? ಎಂದು ಅಂದುಕೊಳ್ಳುತ್ತಾಳೆ.

More from Filmibeat

English summary
Amruthadhaare serial September 19th episode update:
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X