Amruthadhaare ;ನಿಗಿ ನಿಗಿ ಕೆಂಡವಾದ ಭೂಮಿಕಾಗೆ ಬಡಿಯುತ್ತಾ ಬರಸಿಡಿಲು?ಹೆಣ್ಣು ಮಗು ವಿಚಾರ ಬಾಯ್ಬಿಡ್ತಾಳಾ ಶಕುಂತಲಾ?
''ಅಮೃತಧಾರೆ'' ಧಾರಾವಾಹಿಯಲ್ಲಿ ಭೂಮಿಕಾ ಕಥೆ ಮುಕ್ತಾಯವಾಯ್ತು ಎಂದುಕೊಂಡು ಶಕುಂತಲಾ ಒಳಗೊಳಗೆ ಖುಷಿ ಪಡುತ್ತಿದ್ದಾಳೆ. ಎಲ್ಲರಿಗೆ ಟೈಮ್ ಬರುತ್ತೆ, ಇಷ್ಟು ದಿನ ನನ್ನ ಟೈಮ್ ಖರಾಬ್ ಆಗಿತ್ತು ಆದರೆ ಈಗ ನನ್ನ ಸಮಯ ಬಂದಿದೆ, ಇವತ್ತಿಗೆ ಅವಳ ಕಥೆ ಮುಗೀತು.. ಇನ್ಮೇಲೆ ನಂದೇ ಆಟ ಎಂದುಕೊಂಡು ಸಂಭ್ರಮ ಪಡುತ್ತಿದ್ದಾಳೆ.
ಶತ್ರುಗಳನ್ನು ನಾಶ ಮಾಡುವ ಖುಷಿ ಯಾವುದರಲ್ಲಿಯೂ ಸಿಗಲ್ಲ ಎಂದುಕೊಂಡು ಈ ಖುಷಿಯ ವಿಚಾರವನ್ನು ಅಣ್ಣನ ಹತ್ರ ಹಂಚಿಕೊಳ್ಳೋಣ ಎಂದು ಲಕ್ಷ್ಮೀಕಾಂತ್‌ಗೆ ಫೋನ್ ಮಾಡ್ತಾಳೆ. ಎಲ್ಲಾ ನಾವು ಅಂದುಕೊಂಡಿದ್ದಕ್ಕಿಂತ ವೇಗವಾಗಿಯೇ ನಡೆಯುತ್ತಿದೆ ಎನ್ನುವ ಶಕುಂತಲಾ ಆಟ ಇನ್ನೂ ಶುರುವಾಗಿದೆ ಎಂದು ಹೇಳುತ್ತಾಳೆ. ಆದಷ್ಟು ಬೇಗ ಎಲ್ಲ ಮುಗಿಯುತ್ತೆ ಈಗಾಗಲೇ ಜೈದೇವ್ ಮಗುನ ಕೊಲ್ಲೋಕೆ ಹೋಗಿದ್ದಾನೆ ಆ ನಂತರ ಭೂಮಿಕಾಗೆ ಒಂದು ಗತಿ ಕಾಣಿಸಿ ನಿನ್ನನ್ನು ಜೈಲಿಂದ ಹೊರ ಕರೆದುಕೊಂಡು ಬರ್ತಿನಿ ಎಂದು ಹೇಳುತ್ತಾಳೆ.

ಮಗು ಇರುವ ಜಾಗ ತಲುಪಿದ ಜೈದೇವ್
ಮಗು ಇರುವ ಜಾಗಕ್ಕೆ ಜೈದೇವ್ ತಲುಪಿದ್ದು ಮಗುನ ಕೈಯಲ್ಲಿ ಹಿಡ್ಕೊಂಡು ಡೈಲಾಗ್ ಹೊಡೆಯುತ್ತಿರುತ್ತಾನೆ. ನಿನ್ನನ್ನ ಮುಗಿಸಿದರೆ ಅವಳು ಬದುಕಿದ್ದರೂ ಸತ್ತಂತೆ ಎಂದು ಹೇಳುತ್ತಾನೆ. ಇದೇ ಸಮಯದಲ್ಲಿ ಅಲ್ಲಿ ಪೊಲೀಸ್ ಮತ್ತು ಭದ್ರತಾ ಸಿಬ್ಬಂಧಿಯ ಜೊತೆ ಭೂಮಿಕಾ ಬಂದಿದ್ದು ಗನ್ ತೋರಿಸಿ ಜೈದೇವ್‌ಗೆ ಅವಾಜ್ ಹಾಕುತ್ತಾಳೆ. ಮಗುನ ಮರಳಿ ಕೊಡುವಂತೆ ಹೇಳುತ್ತಾಳೆ.
ದಿಯಾ ಕಂಡು ಜೈದೇವ್ ಶಾಕ್
ಭೂಮಿಕಾ ಮಾತುಗಳಿಗೆ ಜೈದೇವ್ ಕೂಡ ತಿರುಗೇಟು ನೀಡಿದ್ದು ಮಗುನ ಕೊಲ್ಲಲು ಗನ್ ತೆಗೆಯುತ್ತಾನೆ. ಯಾಕೆ ಮಾತೇ ಬರ್ತಿಲ್ಲ ಭಯ ಆಗ್ತಿದೆಯಾ ಭೂಮಿಕಾ ಎಂದು ಕೆಣಕುತ್ತಾನೆ. ಆಗ ಮಲ್ಲಿಯನ್ನು ಭೂಮಿಕಾ ಕರೆದಿದ್ದು ದಿಯಾಳನ್ನು ಕರೆದುಕೊಂಡು ಮಲ್ಲಿ ಬರುತ್ತಾಳೆ. ಮಲ್ಲಿ ಜೊತೆ ದಿಯಾಳನ್ನು ಕಂಡು ಜೈದೇವ್ ಶಾಕ್ ಆಗಿದ್ದು ದಿಯಾ ಹಣೆಗೆ ಭೂಮಿಕಾ ಗನ್ ಹಿಡಿಯುತ್ತಾಳೆ.
ಏಕವಚನದಿಂದ ಬಹುವಚನ
ಭೂಮಿಕಾಳ ಈ ನಡೆಯಿಂದ ಗಾಬರಿ ಬೀಳುವ ಜೈದೇವ್ ಅತ್ತಿಗೆ ಅವಳಿಗೇನು ಮಾಡಬೇಡಿ ಮಗು ಬೇಕು ತಾನೇ ಎಂದು ಮಗು ಕೊಡ್ತಾನೆ. ದಿಯಾಳನ್ನು ಬಿಡುವಂತೆ ಕೇಳಿಕೊಳ್ಳುತ್ತಾನೆ. ಆದರೆ ಇಷ್ಟು ಸುಲಭವಾಗಿ ಬಿಡೋಕೆ ನಾನು ಇಷ್ಟೆಲ್ಲಾ ಕಸರತ್ತು ಮಾಡಿದ್ದಾ ಎಂದು ಭೂಮಿಕಾ ಹೇಳಿದ್ದು ಜೈದೇವ್ ಪಟಾಲಮ್ಮು ಓಡಿ ಹೋಗಿದ್ದು ಮಂಡಿಯೂರಿ ಜೈದೇವ್ ಪ್ರಾಣಭಿಕ್ಷೆಯನ್ನು ದಿಯಾ ಬೇಡುತ್ತಾಳೆ. ಇದರಲ್ಲಿ ಜೈ ತಪ್ಪೇನು ಇಲ್ಲ ಇದೆಲ್ಲಾ ಮಾಡು ಅಂತ ಅತ್ತೆ ಹೇಳಿದ್ದು ಎನ್ನುತ್ತಾಳೆ. ದಿಯಾ ಮಾತು ಕೇಳಿ ಇವರನ್ನು ಪೊಲೀಸರಿಗೆ ಒಪ್ಪಿಸಿ ಎಂದು ಭದ್ರತಾ ಸಿಬ್ಬಂದಿಗೆ ಹೇಳಿ ಭೂಮಿಕಾ ಮಗುನ ಕರ್ಕೊಂಡು ಮಲ್ಲಿ ಜೊತೆ ಅಲ್ಲಿಂದ ಹೊರಡುತ್ತಾಳೆ.
ತಪ್ಪಿಸಿಕೊಂಡ ಜೈದೇವ್, ಶಕುಂತಲಾ ಗಾಬರಿ
ಭದ್ರತಾ ಸಿಬ್ಬಂದಿ ಕೈಯಿಂದ ಜೈದೇವ್ ಮತ್ತು ದಿಯಾ ತಪ್ಪಿಸಿಕೊಂಡು ಓಡಿ ಹೋಗಿದ್ದು, ಖುಷಿಯ ವಿಚಾರ ಕೇಳಲು ತುದಿಗಾಲಿನಲ್ಲಿ ನಿಂತಿದ್ದ ಶಕುಂತಲಾಗೆ ಜೈದೇವ್ ಫೋನ್ ಮಾಡುತ್ತಾನೆ. ನಡೆದ ವಿಚಾರವನ್ನು ಹೇಳಿ ಅವಳು ಗನ್ ಸನೇತ ಮನೆಗೆ ಬರ್ತಿದ್ದಾಳೆ. ನೀನೇನಾದರೂ ಅವಳ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ನಿನ್ನ ಶೂಟ್ ಮಾಡಿ ಸಾಯಿಸುವುದು ಪಕ್ಕಾ ಮೊದಲು ಆ ಮನೆಯಿಂದ ಓಡಿ ಹೋಗು ಅವಳ ಕೈಗೆ ಮಾತ್ರ ಯಾವುದೇ ಕಾರಣಕ್ಕೂ ಸಿಗಬೇಡ ಎಂದು ಹೇಳುತ್ತಾನೆ.

ಜೈದೇವ್ ಮಾತು ಕೇಳಿ ಪತರುಗಟ್ಟಿದ ಶಕುಂತಲಾ ಬ್ಯಾಗ್ ಪ್ಯಾಕ್ ಮಾಡಿಕೊಂಡು ಆತುರ ಆತುರದಲ್ಲಿ ಮನೆಯಿಂದ ಹೊರಡಲು ನೋಡುತ್ತಾಳೆ. ಅಷ್ಟರಲ್ಲಿ ಭೂಮಿಕಾ ಎದುರು ಬಂದಿದ್ದು ಭೂಮಿಕಾ ರೌದ್ರಾವತಾರ ಕಂಡು ಶಕುಂತಲಾ ಬೆಚ್ಚಿ ಬಿದ್ದಿದ್ದಾಳೆ.
ಭೂಮಿಕಾ ನಿಗಿ ನಿಗಿ ಕೆಂಡ, ಶಕುಂತಲಾ ಥಂಡಾ
ಇಂದು (ಸೆಪ್ಟೆಂಬರ್ 3) ಬಿಡುಗಡೆಯಾದ ಪ್ರೋಮೊದಲ್ಲಿ ನಿಗಿ ನಿಗಿ ಕೆಂಡವಾದ ಭೂಮಿಕಾ, ಶಕುಂತಲಾ ವಿರುದ್ಧ ಹರಿಹಾಯ್ದಿದ್ದಾಳೆ. ಮಲ್ಲಿ ಎದುರೇ ನಾಚಿಕೆಯಾಗಬೇಕು ಈ ರೀತಿ ಬದುಕೋದಕ್ಕೆ, ನಿಮ್ಮದು ಒಂದು ಜನ್ಮಾನಾ ? ಅಸಹ್ಯ ಆಗುತ್ತೆ ನಿಮ್ಮನ್ನು ನೋಡೋಕೆ ಎಂದು ಕಿಡಿ ಕಾರಿದ್ದಾಳೆ. ಬರ್ತಿರುವ ಕೋಪಕ್ಕೆ ಗನ್ ಅಲ್ಲಿರುವ ಎಲ್ಲಾ ಬುಲೆಟ್‌ಗಳು ನಿಮ್ಮೊಳಗೆ ಇಳಿಸಬೇಕು ಎನಿಸುತ್ತಿದೆ ಎಂದು ಹೇಳುತ್ತಾಳೆ.
ಬಾಯ್ಬಿಡ್ತಾಳಾ ಶಕುಂತಲಾ
ಭೂಮಿಕಾಳ ಈ ಮಾತುಗಳಿಗೆ ಶಕುಂತಲಾ ಪ್ರತ್ಯುತ್ತರ ನೀಡಿದ್ದು ನಿನ್ನ ಮಗುವನ್ನು ಕಾಪಾಡಿಕೊಂಡೆ ಅಂತ ಬೀಗಬೇಡ. ನಿನಗೆ ಗೊತ್ತಿಲ್ಲದಿರೋ ಇನ್ನೊಂದು ವಿಷಯ ಇದೆ ಎಂದು ಹೇಳಿದ್ದಾಳೆ. ಈ ಹಿನ್ನೆಲೆ.. ಕಾಣೆಯಾಗಿರುವ ಹೆಣ್ಣು ಮಗು ವಿಚಾರವನ್ನು ಶಕುಂತಲಾ ಇಂದು ಭೂಮಿಕಾ ಎದುರು ಬಾಯಿ ಬಿಡುತ್ತಾಳಾ..? ಒಂದು ವೇಳೆ ಹೇಳಿದ್ದೇ ಆದಲ್ಲಿ ಗೌತಮ್ ಮತ್ತು ಭೂಮಿಕಾ ನಡುವೆ ಬಿರುಕು ಮೂಡುತ್ತಾ ? ಕಾಣೆಯಾದ ಮಗು ವಿಚಾರ ಗೊತ್ತಾದರೆ ಭೂಮಿಕಾ ಹೇಗೆ ಪ್ರತಿಕ್ರಿಯಿಸಬಹುದು..? ಎನ್ನುವ ಪ್ರಶ್ನೆಗಳೆಲ್ಲಾ ಈಗ ಧಾರಾವಾಹಿಯ ಪ್ರೇಮಿಗಳನ್ನು ಕಾಡುತ್ತಿದೆ. ಈ ಮೂಲಕ ಅಮೃತಧಾರೆ ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗುತ್ತಿದೆ.


Click it and Unblock the Notifications











