Amruthadhaare:ಮಲ್ಲಿಗೆ ಜೈ ದೇವ್ ಅಸಲಿ ಮುಖ ಗೊತ್ತಾಯ್ತು; ಸೀರಿಯಲ್ ಪ್ರೇಮಿಗಳಿಂದ ಮಲ್ಲಿಗೆ ಕ್ಲಾಸ್
ಮಲ್ಲಿಗೆ ಭೂಮಿಕಾ ಅದೆಷ್ಟು ಸಾರಿ ನೀನು ಯಾರನ್ನು ನಂಬಬೇಡ, ನಮ್ಮವರು ಎಂದು ನಂಬಿದವರು ನಮ್ಮ ಕುತ್ತಿಗೆಯನ್ನು ಕುಯ್ಯುತ್ತಾರೆ. ನಿನಗೆ ಅವರೆಲ್ಲರೂ ಮೋಸ ಮಾಡುತ್ತಾರೆ. ಮಲ್ಲಿ ನೀನು ಜೈ ದೇವ್‌ನನ್ನು ಯಾವ ಕಾರಣಕ್ಕೆ ಕೂಡ ನಂಬಲು ಹೋಗಬೇಡ ಎಂದು ಭೂಮಿಕಾ ಮಲ್ಲಿಗೆ ಸಾರಿ ಸಾರಿ ಹೇಳುತ್ತಾಳೆ.
ಆದರೆ, ಮಲ್ಲಿ ಭೂಮಿಕಾಗೆ ಎದುರು ನಿಂತು ಮಾತನಾಡುತ್ತಾಳೆ. ಮಲ್ಲಿ ಹಾಗೂ ಜೈ ದೇವ್ ಮದುವೆ ಆಗಬಾರದೆಂದು ಅದೆಷ್ಟೇ ಜನ ಹೇಳಿದರೂ, ಜೈ ದೇವ್ ಜೊತೆ ನಡೆಯುತ್ತದೆ. ಅಂದಿನಿಂದ ಇಂದಿನವರೆಗೆ ಮಲ್ಲಿ ಮೇಲೆ ಕತ್ತಿ ಮಸೆಯುತ್ತಿದ್ದಾನೆ.

ಜೈ ದೇವ್ ಹೇಗಾದರೂ ಮಾಡಿ ಮಲ್ಲಿ ಪ್ರಾಣ ತೆಗೆಯಬೇಕು ಎಂದು ಅಂದುಕೊಂಡಿರುತ್ತಾನೆ. ಆದರೆ, ಗೌತಮ್ ಹಾಗೂ ಭೂಮಿಕಾ ಇವರಿಬ್ಬರ ಭಯದಿಂದ ಮಲ್ಲಿಯನ್ನು ಏನು ಮಾಡದೇ ಜೈ ದೇವ್ ಸುಮ್ಮನಿದ್ದಾನೆ. ಇನ್ನು ಮಲ್ಲಿಯ ಸೀಮಂತ ಮಾಡಿ ತವರು ಮನೆಗೆ ಕಳುಹಿಸಿಕೊಡುವ ವಿಚಾರದಲ್ಲಿ ಗೌತಮ್‌ಗೆ ಮಾತ್ರ ಜೈ ದೇವ್ ಮೇಲೆ ಕೊಂಚ ಆತಂಕ ಇರುತ್ತದೆ.
ಗೌತಮ್ ಬಳಿ ಬಂದ ಜೈದೇವ್ ಅಣ್ಣನ ಕಾಲಿಗೆ ಬೀಳುತ್ತಾನೆ. "ಅಣ್ಣ ನಾನು ತಪ್ಪು ಮಾಡಿದ್ದೇನೆ ನಿಜ. ಆದರೆ, ನಾನು ಮಲ್ಲಿಯವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಆದ ಕಾರಣ ನಮಗೆ ಹಾರೈಸಿ" ಎಂದು ಹೇಳಿದಾಗ ಜೈದೇವ್ ಮಾತು ನಂಬಿದ ಹಾಗೆ ಗೌತಮ್ ನಟನೆ ಮಾಡುತ್ತಾನೆ.

ಆದರೆ, ಜೈ ದೇವ್‌ನನ್ನು ಸಂಪೂರ್ಣವಾಗಿ ನಂಬಲು ಗೌತಮ್ ಕೈಯಿಂದ ಆಗುತ್ತಿಲ್ಲ. ಆ ರೀತಿ ಎಲ್ಲರ ಮುಂದೆ ನಂಬಿಕೆಯನ್ನು ಜೈ ದೇವ್ ಕಳೆದುಕೊಂಡಿದ್ದಾನೆ. ಇನ್ನು ಮಲ್ಲಿಯನ್ನು ಕರೆದುಕೊಂಡು ಜೈ ದೇವ್ ಆಕೆಯ ತವರು ಮನೆಗೆ ಹೋಗಲು ರೆಡಿ ಆಗುತ್ತಾನೆ. ಮಲ್ಲಿ ಎಲ್ಲರ ಆಶೀರ್ವಾದ ತೆಗೆದುಕೊಂಡು ತವರು ಮನೆಗೆ ಹೋಗಲು ರೆಡಿ ಆಗುತ್ತಾಳೆ. ಭೂಮಿಕಾ ಆಕೆಗೆ ಈ ವೇಳೆ ಒಂದು ಮಾತು ಹೇಳುವುದಿಲ್ಲ. ಈಗಾಗಲೇ ಭೂಮಿಕಾಗೆ ಮಲ್ಲಿಯ ಮಾತು ಬಹಳ ನೋವು ನೀಡಿರುತ್ತದೆ.
ಮಲ್ಲಿಗೆ ಬುದ್ದಿ ಹೇಳಿದ್ದೆ ತಪ್ಪಾಯಿತು
ಆದರೆ, ಭೂಮಿಕಾ, ಮಲ್ಲಿಗೆ ನಿಜ ವಿಚಾರಗಳು ತಿಳಿದರೆ ಹೇಗೆ ಆಗಬಹುದು ಎಂದು ಆಲೋಚನೆ ಮಾಡುತ್ತಿರುತ್ತಾಳೆ. ಇನ್ನು ಜೈ ದೇವ್ ಜೊತೆ ಮಲ್ಲಿ ಕಾರಲ್ಲಿ ಕುಳಿತುಕೊಂಡು ತನ್ನೂರಿಗೆ ಹೋಗುತ್ತಿರುವಾಗ ಮಧ್ಯದಲ್ಲಿ ಕಾರು ನಿಲ್ಲಿಸಿದ ಜೈ ದೇವ್ "ಮಲ್ಲಿ ನಾನು ಒಂದು ಹತ್ತು ನಿಮಿಷ ಬಂದೆ" ಎಂದು ಹೇಳಿ ಅಲ್ಲಿಂದ ಹೋಗುತ್ತಾನೆ. ಇನ್ನು ಕಾರಲ್ಲಿ ಕುಳಿತ ಮಲ್ಲಿಗೆ ಜೈ ದೇವ್ ತುಂಬಾ ಹೊತ್ತು ಆದರೂ ಬಾರದೆ ಇರುವುದನ್ನು ನೋಡಿ ಆತಂಕ ಆಗುತ್ತದೆ. ಕಾರಿನಿಂದ ಇಳಿದು ಕೊಂಚ ದೂರ ಬಂದ ಮಲ್ಲಿಗೆ ಆಘಾತ ಕಾದಿತ್ತು.
ದಿಯಾ ಜೊತೆ ರೊಮ್ಯಾನ್ಸ್
ಜೈ ದೇವ್ ಹಾಗೂ ದಿಯಾ ಜೊತೆ ಕಾರಿನಲ್ಲಿ ಕುಳಿತು ರೊಮ್ಯಾನ್ಸ್ ಮಾಡುತ್ತಿರುತ್ತಾನೆ. ಮಲ್ಲಿಗೆ ಇದನ್ನು ನೋಡಿ ಆಘಾತ ಆಗುತ್ತದೆ. ಇದೆಲ್ಲವನ್ನೂ ನೋಡಿದ ಸೀರಿಯಲ್ ಅಭಿಮಾನಿಗಳು "ನಿನಗೆ ಹೀಗೆ ಆಗಿದ್ದು ಒಳ್ಳೆಯದೇ", "ಮಲ್ಲಿ ನಿನಗೆ ಭೂಮಿಕಾ ಅದೆಷ್ಟು ಬಾರಿ ನಿಜ ಹೇಳಿದರು ನೀನು ಆಕೆಯ ವಿರುದ್ಧ ನಿಂತಿದ್ಧಿಯಾ? ಭೂಮಿಕಾ ನಿನಗೆ ಮಾಡಿದ ಸಹಾಯ ಮರೆತು ಆಕೆಯ ವಿರುದ್ಧ ಮಾತನಾಡಿದ್ದಿಯಾ? ಇದೀಗ ನಿನ್ನ ಗಂಡನ ಇನ್ನೊಂದು ಮುಖ ನಿನ್ನ ಎದುರು ಕಾಣಿಸಿತ್ತೇ ನಿನಗೆ" ಎಂದು ಮಲ್ಲಿಗೆ ಜನ ಹಿಗ್ಗಾ ಮುಗ್ಗಾ ಬೈಯುತ್ತಿದ್ದಾರೆ.
ಸೀರಿಯಲ್ ಪ್ರೇಮಿಗಳಿಂದ ಮಲ್ಲಿಗೆ ಕ್ಲಾಸ್
"ಜೈ ದೇವ್‌ನಂತಹ ಗಂಡನ ಅಸಲಿ ಮುಖ ಈಗ ತಿಳಿಯಿತಾ? ಭೂಮಿಕಾ ನಿನಗೆ ಎಚ್ಚರಿಕೆ ನೀಡಿದ್ದೆ ತಪ್ಪಾಯಿತಾ? ಹಿಗ್ಗಾ ಮುಗ್ಗಾ ಆಕೆಯನ್ನು ನಿಂದನೆ ಮಾಡಿದ್ದೀಯಾ?" ಎಂದೆಲ್ಲ ಅಭಿಮಾನಿಗಳು ಮಲ್ಲಿಗೆ ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಮಲ್ಲಿಗೆ ಈಗ ನಿಜ ತಿಳಿಯಿತು. ಈ ವಿಚಾರ ಜೈ ದೇವ್ ತಿಳಿದರೆ ಖಂಡಿತ ಏನಾದರು ಕಿತಾಪತಿ ಮಾಡುತ್ತಾನೆ ಎಂದು ಫ್ಯಾನ್ಸ್ ಹೇಳಿಕೊಂಡಿದ್ದಾರೆ.


Click it and Unblock the Notifications











