Amruthadhaare ; ರಾಜೇಶ್ ನಟರಂಗ ಆಕ್ಟಿಂಗ್‌ಗೆ ಪ್ರೇಕ್ಷಕರು ಫಿದಾ, ಮಗನ ಜೊತೆ ಗೌತಮ್ ; ಗುಡುಗುತ್ತಾಳಾ ಭೂಮಿಕಾ ?

''ಅಮೃತಧಾರೆ'' ಧಾರಾವಾಹಿಯಲ್ಲಿ ತನ್ನ ಮಗ ಆಕಾಶ್ ಕಣ್ಣೇದುರು ಇದ್ದರೂ ಕೂಡ ಸತ್ಯ ಅರಿಯದ ಗೌತಮ್ ತನ್ನ ಮಗನನ್ನು ಹುಡುಕುತ್ತಾ ಆನಂದ್ ಜೊತೆ ಶಾಲೆಗೆ ಬಂದಿದ್ದಾನೆ. ಆಗ ಆಕಾಶ್ ಮತ್ತೆ ಎದುರಾಗಿದ್ದು ಮಗನನ್ನು ಹುಡುಕಲು ಸಹಾಯ ಮಾಡುವಂತೆ ತನ್ನ ಮಗನ ಬಳಿ ಮನವಿ ಮಾಡಿದ್ದಾನೆ. ಇನ್ನೊಂದು ಕಡೆ ಪ್ರಿನ್ಸಿಪಾಲ್ ಪೋಷಕರನ್ನು ಕರೆತರುವಂತೆ ಆಕಾಶ್‌ಗೆ ಹೇಳಿದ ಹಿನ್ನೆಲೆ ನಾನು ನಿಮಗೆ ಸಹಾಯ ಮಾಡುತ್ತೇನೆ ಆದರೆ ನೀವು ನನ್ನ ತಂದೆಯಂತೆ ಇವತ್ತು ಆಕ್ಟ್ ಮಾಡಬೇಕೆನ್ನುವ ಷರತ್ತು ಹಾಕಿದ್ದಾನೆ.

ಇದಕ್ಕೆ ಆರಂಭದಲ್ಲಿ ಹಿಂದೇಟು ಹಾಕುವ ಗೌತಮ್ ಆ ನಂತರ ಒಪ್ಪಿಕೊಂಡಿದ್ದು ಬಟ್ಟೆ ಬದಲಿಸಿಕೊಂಡು ಹಳೆಯ ಗೌತಮ್ ದಿವಾನ್‌ನಂತೆ ಸೂಟು ಬೂಟು ಹಾಕಿಕೊಂಡು ಬಂದಿದ್ದಾನೆ. ಪ್ರಿನ್ಸಿಪಾಲ್ ಅವರ ರೂಮ್‌ಗೆ ಕೂಡ ಹೋಗುತ್ತಾನೆ.

amruthadhaare-serial-september-21-episode-written-update

ಇದಕ್ಕೆ ಆರಂಭದಲ್ಲಿ ಹಿಂದೇಟು ಹಾಕುವ ಗೌತಮ್ ಆ ನಂತರ ಒಪ್ಪಿಕೊಂಡಿದ್ದು ಬಟ್ಟೆ ಬದಲಿಸಿಕೊಂಡು ಹಳೆಯ ಗೌತಮ್ ದಿವಾನ್‌ನಂತೆ ಸೂಟು ಬೂಟು ಹಾಕಿಕೊಂಡು ಬಂದಿದ್ದಾನೆ. ಪ್ರಿನ್ಸಿಪಾಲ್ ಅವರ ರೂಮ್‌ಗೆ ಕೂಡ ಹೋಗುತ್ತಾನೆ. ಇದೇ ಸಮಯದಲ್ಲಿ ಗೌತಮ್ ದಿವಾನ್ ಜೊತೆ ಪ್ರಿನ್ಸಿಪಾಲ್ ಇಂಗ್ಲೀಷ್‌ನಲ್ಲಿ ಮಾತನಾಡಿದ್ದು ಅಪ್ಪು ಕಕ್ಕಾಬಿಕ್ಕಿಯಾಗಿದ್ದಾನೆ. ಕ್ಯಾಬ್ ಡ್ರೈವರ್‌ ಇವನು ಇವನಿಗೆ ಇಂಗ್ಲಿಷ್ ಬರಲ್ಲವಲ್ಲ, ಸಿಕ್ಕಿ ಹಾಕಿಕೊಂಡರೆ ಕಥೆ ಏನು ಎಂದು ಮನದಲ್ಲಿಯೇ ಲೆಕ್ಕ ಹಾಕುತ್ತಾನೆ. ಆಗ ಗೌತಮ್ ಇಂಗ್ಲಿಷ್ ಮಾತನಾಡಿದ್ದು ತನ್ನ ತಂದೆಯ ಗುರುತು ಇಲ್ಲದ ಅಪ್ಪು ಅಲಿಯಾಸ್ ಆಕಾಶ್ ಕಕ್ಕಾಬಿಕ್ಕಿಯಾಗುತ್ತಾನೆ.

ರಾಜೇಶ್ ನಟರಂಗ ಅಭಿನಯಕ್ಕೆ ಪ್ರೇಕ್ಷಕರು ಫಿದಾ

ಸದ್ಯ ಗೌತಮ್‌ಗೆ ತನ್ನ ಮಗ ಯಾರೆಂದು ಗೊತ್ತಾಗಿದ್ದು, ಗೌತಮ್ ದಿವಾನ್ ಪಾತ್ರಕ್ಕೆ ಜೀವ ತುಂಬಿರುವ ರಾಜೇಶ್ ನಟರಂಗ ಭಾವುಕರಾಗಿದ್ದಾರೆ. ರೀಲ್ ಮಗ ಆಕಾಶ್‌ನ ಅಪ್ಪಿಕೊಂಡಿದ್ದಾರೆ. ಇದೇ ಸಮಯದಲ್ಲಿ ರಾಜೇಶ್ ನಟರಂಗ ಕಣ್ಣಾಲಿಗಳು ತುಂಬಿದ್ದು ರಾಜೇಶ್ ನಟರಂಗ ಅಭಿನಯಕ್ಕೆ ಹಲವರು ಮನಸೋತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಸೋಶಿಯಲ್ ಮೀಡಿಯಾ ಮೂಲಕ ಹಲವರು ರಾಜೇಶ್ ನಟರಂಗ ಅವರ ಅಭಿನಯಕ್ಕೆ ಸೆಲ್ಯೂಟ್ ಹೊಡೆದಿದ್ದಾರೆ. ರಾಜೇಶ್ ಅವರದ್ದು ಸರಳ ಸಹಜ ಅಭಿನಯ, ಗೌತಮ್ ಅವರ ಅಭಿನಯ ಸೂಪರ್.. ಚಿಂದಿ.. ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ಭೂಮಿಕಾ ಕಾಲೆಳೆಯುವ ಸಹೋದ್ಯೋಗಿಗಳು

ಮತ್ತೊಂದು ಕಡೆ ಪ್ರಿನ್ಸಿಪಲ್ ಜೊತೆ ಮಾತನಾಡುತ್ತಿರುವ ವ್ಯಕ್ತಿ ಗೌತಮ್ ದಿವಾನ್ ಎನ್ನುವ ವಿಚಾರ ಯಾರಿಗೂ ಗೊತ್ತಿಲ್ಲವಾದರು ಆಕಾಶ್ ಜೊತೆ ಗೌತಮ್‌ನ ನೋಡಿ ಭೂಮಿಕಾ ಅವರ ಗಂಡ ಎಂದು ಶಾಲೆಯ ಇತರೆ ಶಿಕ್ಷಕಿಯರು ಅಂದುಕೊಂಡಿದ್ದಾರೆ. ಶಿಕ್ಷಕಿಯರ ಈ ಹಾವ ಭಾವ ಗಮನಿಸುವ ಗೌತಮ್ ಕೊಠಡಿಯಿಂದ ಹೊರ ಬಂದಿದ್ದು ಆ ನಂತರ ಎಲ್ಲರೂ ಸೆಲ್ಫಿ ಕೇಳುತ್ತಾರೆ. ಆಗ ಗೌತಮ್ ನನಗೆ ಅರ್ಜೆಂಟ್ ಕೆಲಸ ಇದ್ದು ಇನ್ನೊಮ್ಮೆ ಫೋಟೊ ಕ್ಲಿಕಿಸಿಕೊಳ್ಳುವುದಾಗಿ ಹೇಳಿ ಹೋಗುತ್ತಾನೆ.

ಗುಡುಗುತ್ತಾಳಾ ಭೂಮಿಕಾ ..?

ಗೌತಮ್ ತನ್ನ ಮತ್ತು ತನ್ನ ಮಗನ ಶಾಲೆಗೆ ಬಂದಿರುವ ವಿಚಾರ ತನ್ನ ಸಹೋದ್ಯೋಗಿಗಳಿಂದ ಭೂಮಿಕಾಗೆ ಗೊತ್ತಾಗಿದ್ದು, ಭೂಮಿಕಾ ತಲೆ ಕೆಡಿಸಿಕೊಂಡಿದ್ದಾಳೆ. ಗೌತಮ್ ಬಂದ ವಿಚಾರವನ್ನು ಕೇಳಿ ಕೆರಳಿ ಕೆಂಡವಾಗಿದ್ದಾಳೆ. ಹೀಗಾಗಿಯೇ ತನ್ನ ಮಗನ ಶಾಲೆಯ ಕೊಠಡಿಗೆ ತೆರಳಿದ ಭೂಮಿಕಾ ತನ್ನ ಮಗ ಆಕಾಶ್‌ನ ಬಲವಂತದಿಂದ ಮನೆಗೆ ಕರೆದೊಯ್ಯುತ್ತಾಳೆ. ಶಾಲೆಗೆ ಯಾರನ್ನು ಕರೆದುಕೊಂಡು ಹೋಗಿದ್ದೇ ಎಂದು ಕೇಳುತ್ತಾಳೆ. ಆಗ ಆಕಾಶ್ ತನ್ನ ಸ್ನೇಹಿತನ ಜೊತೆ ನಡೆದ ಗಲಾಟೆ ವಿಚಾರ ಹೇಳಿದ್ದು, ಪ್ರಿನ್ಸಿಪಾಲ್ ಪೋಷಕರನ್ನು ಕರೆತರುವಂತೆ ಹೇಳಿದ್ದರು ಹೀಗಾಗಿ ನಾನು ಅವರನ್ನು ಕರೆದುಕೊಂಡು ಹೋದೆ ಎಂದು ಹೇಳುತ್ತಾನೆ. ಇದರಿಂದ ಭೂಮಿಕಾ ಇನ್ನೂ ಕೋಪ ಮಾಡಿಕೊಳ್ಳುತ್ತಾಳೆ.

amruthadhaare-serial-september-21-episode-written-update

ಗೌತಮ್‌ಗೆ ಮತ್ತೆ ಎಚ್ಚರಿಕೆ ನೀಡ್ತಾಳಾ ಭೂಮಿಕಾ ?

ಸದ್ಯ ಭೂಮಿಕಾಗೆ ಗೌತಮ್ ತನ್ನ ಮಗನ ಶಾಲೆಗೆ ಹೋದ ವಿಚಾರ ಗೊತ್ತಾಗಿದ್ದು, ಗೌತಮ್‌ಗೆ ಭೂಮಿಕಾ ಮತ್ತೆ ಎಚ್ಚರಿಕೆಯನ್ನು ನೀಡುತ್ತಾಳಾ..? ತನ್ನ ತಂದೆಯೇ ಗೌತಮ್ ಎನ್ನುವ ವಿಚಾರ ಮಗನಿಗೆ ಗೊತ್ತಾಗುತ್ತಾ..? ಮಗನ ಸಿಹಿ ಅಪ್ಪುಗೆ ಪಡೆದಿರುವ ಗೌತಮ್‌ಗೆ ಪತ್ನಿ ಭೂಮಿಕಾಳ ಒಪ್ಪಿಗೆ ಸಿಗುತ್ತಾ ಎನ್ನುವುದನ್ನು ಸದ್ಯ ಕಾದು ನೋಡಬೇಕಿದೆ. ಮುಂದಿನ ಸಂಚಿಕೆ ಕುತೂಹಲ ಕೆರಳಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X