Amruthadhaare ; ಗೌತಮ್-ಭೂಮಿಕಾ ಕಥೆ-ವ್ಯಥೆ, ಪ್ರೇಕ್ಷಕರಿಗೆ ನೆನಪಾಯ್ತು ಕನ್ನಡದ ಈ ಬ್ಲಾಕ್ ಬಸ್ಟರ್ ಸಿನಿಮಾ..!
'ಅಮೃತಧಾರೆ' ಧಾರಾವಾಹಿಯಲ್ಲಿ ಸದ್ಯ ಗೌತಮ್‌ಗೆ ಆಕಾಶ್ ತನ್ನ ಮಗ ಎಂದು ಗೊತ್ತಾಗಿದೆ. ಆದರೆ.. ಆಕಾಶ್‌ಗೆ ಈ ಸತ್ಯದ ಅರಿವು ಇಲ್ಲ. ಮೇಲಿಂದ ಮೇಲೆ ರಸಹ್ಯವಾಗಿ ಆಕಾಶ್‌ನ ಭೇಟಿಯಾಗುತ್ತಿರುವ ಗೌತಮ್, ಆಕಾಶ್ ಬರ್ತ್‌ಡೇಗೆ ಅವನು ಕೇಳಿದ ಎಲ್ಲಾ ವಸ್ತುಗಳನ್ನು ಕೊಡಿಸಿದ್ದಾನೆ. ಗೌತಮ್ ತನ್ನ ಮಗನನ್ನು ಆ ನಂತರ ಮನೆಗೆ ಬಿಟ್ಟಿದ್ಧಾನೆ. ಇದೇ ಸಮಯದಲ್ಲಿ ಗೌತಮ್ ಕಣ್ಣಿಗೆ ಮಲ್ಲಿ ಕಂಡಿದ್ದು ಮಲ್ಲಿಯನ್ನು ಗೌತಮ್ ಕೂಗಿದ್ದಾನೆ.
ಗೌತಮ್‌ನ ಕಂಡು ಮಲ್ಲಿ ಖುಷಿಯಿಂದ ಓಡಿ ಬಂದಿದ್ದು ಗೌತಮ್ ಮಲ್ಲಿ ಬಳಿ ಸತ್ಯ ಹೇಳುವಂತೆ ಹೇಳುತ್ತಾನೆ. ಆದರೆ. ಗೌತಮ್ ಎಷ್ಟೇ ಗೋಗರೆದರು ಕೂಡ ಮಲ್ಲಿ ಮಾತ್ರ ಬಾಯಿ ಬಿಡುವುದಿಲ್ಲ. ಬದಲಿಗೆ ಮಾತಿನಲ್ಲಿ ನನ್ನ ಕಟ್ಟಿ ಹಾಕಿದ್ದಾರೆ. ಕ್ಷಮಿಸಿ ಎಂದು ಹೇಳಿ ಗೌತಮ್‌ಗೆ ನಿರಾಸೆ ಮಾಡುತ್ತಾಳೆ. ಮತ್ತೊಂದೆಡೆ ಮನೆಗೆ ಹಲವಾರು ಉಡುಗೊರೆಗಳನ್ನು ತೆಗೆದುಕೊಂಡು ಬಂದ ಆಕಾಶ್‌ನ ಭೂಮಿಕಾ ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ನನ್ನ ಫ್ರೆಂಡ್ ಅರ್ಪಿತಾ ಅವರ ಅಮ್ಮ ಇದೆಲ್ಲ ಕೊಡಿಸಿದರು ಎಂದು ಆಕಾಶ್ ಸುಳ್ಳು ಹೇಳಿದ್ದಾನೆ.

ಇನ್ನೂ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಆಕಾಶ್, ತನ್ನ ತಾಯಿ ಭೂಂಇಕಾ ಬಳಿ ಹತ್ತು ಸಾವಿರ ಹಣ ಕೊಡುವಂತೆ ಹೇಳಿದ್ದಾನೆ. ದೊಡ್ಡವನಾದ ನಂತರ ನಿನ್ನ ಅಕೌಂಟ್‌ಗೆ ಹತ್ತು ಕೋಟಿ ಹಾಕ್ತೀನಿ ಎಂದಿದ್ದಾನೆ. ಭೂಮಿಕಾಗೆ ಈ ಮಾತು ಕೇಳಿ ಹಳೆಯ ದಿನಗಳು ನೆನಪಾಗಿವೆ.
ಗುಲಾಬ್ ಜಾಮೂನ್ ಕಳುಹಿಸುವ ಮಲ್ಲಿ
ಆ ನಂತರ ರಜಾ ದಿನವಾಗಿರುವ ಕಾರಣ ತಾಯಿಗೆ ತಿಳಿಯದೇ ಗೌತಮ್‌ನನ್ನು ಭೇಟಿಯಾಗಲು ಆಕಾಶ್ ಮುಂದಾಗಿದ್ದಾನೆ. ಮಲ್ಲಿ ಎಲ್ಲೋ ಹೊರಟಂತೆ ಇದೆ ಎಂದು ಕೇಳಿದಾಗ ಆಕಾಶ್ ನಾನು ನನ್ನ ಫ್ರೆಂಡ್‌ನ ಭೇಟಿಯಾಗಲು ಹೋಗ್ತಿದ್ದೇನೆ ಎಂದು ಹೇಳುತ್ತಾನೆ. ನನ್ನದು ಚಿಕ್ಕ ಹೊಟ್ಟೆ ನನ್ನ ಫ್ರೆಂಡ್ ಹೊಟ್ಟೆ ದೊಡ್ಡದು ಮುಂದೆ ದೊಡ್ಡವನಾದ ಮೇಲೆ ನನಗೆ ಮೀಸೆ ಬಂದರೆ ನಾನು ಅದೇ ರೀತಿ ಕಾಣಿಸುತ್ತೇನೆ ಎಂದಿದ್ದಾನೆ. ಅಪ್ಪು ಕೈಯಲ್ಲಿ ಭೂಮಿಕಾ ಮಾಡಿರುವ ಗುಲಾಬ್ ಜಾಮೂನ್‌ನ ಮಲ್ಲಿ ಕಳುಹಿಸಿದ್ದಾಳೆ.

ಗೌತಮ್‌ನ ಭೇಟಿಯಾಗಲು ಬಂದ ಆಕಾಶ್, ನಾನು ನಿಮಗೆ ರಿಟರ್ನ್ ಗಿಫ್ಟ್ ತಂದಿದ್ದೇನೆ ಎಂದು ಹೇಳಿ ಗುಲಾಬ್ ಜಾಮೂನು ಕೊಡುತ್ತಾನೆ. ಮೊದಲೇ ಗುಲಾಬ್ ಜಾಮೂನು ಅಂದರೆ ಗೌತಮ್‌ಗೆ ಇಷ್ಟ. ಹೀಗಾಗಿ ಗುಲಾಬ್ ಜಾಮೂನು ನೋಡಿ ಖುಷಿಯಾಗುವ ಗೌತಮ್ ತಿಂದು ಯಾರು ಮಾಡಿದ್ದು ಇದು ಎಂದು ಕೇಳುತ್ತಾನೆ. ಆಗ ಅಪ್ಪು ನನ್ನ ಅಮ್ಮ ಎಂದು ಹೇಳುತ್ತಾನೆ.
ಭೂಮಿಕಾ-ಗೌತಮ್ ಕಥೆ ವ್ಯಥೆ, ಪ್ರೇಕ್ಷಕರಿಗೆ ನೆನಪಾಯ್ತು ಸೂರ್ಯವಂಶ ಸಿನಿಮಾ
ಸದ್ಯ ಅಮೃತಧಾರೆಯ ಇಂದಿನ (ಸೆಪ್ಟೆಂಬರ್ 24) ಪ್ರೋಮೋ ನೋಡಿದ ಅನೇಕ ಪ್ರೇಕ್ಷಕರಿಗೆ ಕನ್ನಡದ ''ಸೂರ್ಯವಂಶ'' ಚಿತ್ರ ನೆನಪಾಗಿದೆ. ಯಾಕೆಂದರೆ ಸಾಹಸಸಿಂಹ ವಿಷ್ಣುವರ್ಧನ್ ದ್ವಿಪಾತ್ರದಲ್ಲಿ ನಟಿಸಿರುವ 'ಸೂರ್ಯವಂಶ'ದಲ್ಲಿ ಕೂಡ ಇಂತಹದ್ದೇ ಸನ್ನಿವೇಶ ಇದೆ. ಅಲ್ಲಿ ಅಜ್ಜ ಯಾರಿಗೂ ತಿಳಿಯದಂತೆ ಮೊಮ್ಮಗನನ್ನು ಭೇಟಿಯಾಗುತ್ತಾನೆ. ವ್ಯತ್ಯಾಸ ಏನೆಂದರೆ ಅಲ್ಲಿ ಗಸಗಸೆ ಪಾಯಸ ನೀಡಿದರೆ ಇಲ್ಲಿ ಗುಲಾಬ್ ಜಾಮೂನು ನೀಡಲಾಗಿದೆ.
ಈ ಹಿನ್ನೆಲೆ ಅನೇಕ ಪ್ರೇಕ್ಷಕರು 'ಸೂರ್ಯವಂಶ'ದಲ್ಲಿ ತಾತ ಮೊಮ್ಮಗ, ಅಮೃತಧಾರೆಯಲ್ಲಿ ಅಪ್ಪಾ ಮಗ ಎಂದು ಕಾಮೆಂಟ್ ಮಾಡಿದ್ಧಾರೆ. ಓ ಅಂತು ಇಂತೂ ಅಮೃತಧಾರೆ ಹೋಗಿ ಸೂರ್ಯವಂಶ ಫಿಲ್ಮ್ ಶುರು ಆಯ್ತು ಎನ್ನುತ್ತಿದ್ದಾರೆ. ವಿಷ್ಣು ಅಪ್ಪಾಜಿಯ ಸೂರ್ಯವಂಶ ಚಿತ್ರ ನೆನಪಿಸಿದ್ದಕ್ಕೆ ಧನ್ಯವಾದಗಳು ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.
ಕೇವಲ 'ಸೂರ್ಯವಂಶ' ಮಾತ್ರ ಅಲ್ಲ ಅನೇಕರಿಗೆ ರವಿಚಂದ್ರನ್ ಮತ್ತು ಸುಧಾರಾಣಿ ಅಭಿನಯದ 'ಮನೆದೇವ್ರು' ಚಿತ್ರ ಕೂಡ ನೆನಪಾಗಿದೆ. ಮತ್ತೋ ಕೆಲವರಿಗೆ ಶಶಿಕುಮಾರ್ ಮತ್ತು ಶೃತಿ ಅಭಿನಯದ 'ಎದುರು ಮನೆಯಲ್ಲಿ ಗಂಡ, ಪಕ್ಕದ ಮನೆಯಲ್ಲಿ ಹೆಂಡತಿ' ಚಿತ್ರವನ್ನು ಕೂಡ ಅಮೃತಧಾರೆಯ ಈ ಸನ್ನಿವೇಶ ನೆನಪಿಸಿದೆ.
ಭೂಮಿಕಾಗೆ ಗೊತ್ತಾಗುತ್ತಾ ಈ ಕಣ್ಣಾಮುಚ್ಚಾಲೆ ಆಟ..?
ಸದ್ಯ ಭೂಮಿಕಾ ಕಣ್ತಪ್ಪಿಸಿ ಗೌತಮ್ ಮತ್ತು ಆಕಾಶ್ ಭೇಟಿಯಾಗುತ್ತಿದ್ದಾರೆ. ಇವರು ಇಬ್ಬರು ನಿರಂತರವಾಗಿ ಭೇಟಿಯಾಗುತ್ತಿರುವ ವಿಚಾರ ಭೂಮಿಕಾಗೆ ಮುಂಬರುವ ದಿನಗಳಲ್ಲಿ ಗೊತ್ತಾಗುತ್ತಾ ? ಗೊತ್ತಾದರೆ ಭೂಮಿಕಾ ಹೇಗೆ ಪ್ರತಿಕ್ರಿಯಿಸುತ್ತಾಳೆ..? ಮತ್ತೊಂದು ಕಡೆ ಕಾಣೆಯಾದ ಹೆಣ್ಣು ಮಗು ಕಥೆ ಏನಾಯ್ತು..? ಎನ್ನುವುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ.


Click it and Unblock the Notifications











