Amruthadhaare ; ಗಂಡ ಜೈದೇವ್ ವಿರುದ್ಧ ದಿಯಾ ಮಸಲತ್ತು, ಗೌತಮ್ ಕಳುಹಿಸಿದ ಮಲ್ಲಿಗೆ ಹೂಗೆ ಭೂಮಿಕಾ ಮುನಿಸು ಕರಗಿತು ?
'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್‌ಗೆ ಮಗನ ಸಿಹಿ ಅಪ್ಪುಗೆ ಸಿಕ್ಕಿದೆ. ಆದರೆ.. ಭೂಮಿಕಾಳ ಒಪ್ಪಿಗೆ ಇನ್ನೂ ಸಿಕ್ಕಿಲ್ಲ. ಆದರೇನಂತೆ.. ಗೌತಮ್ ಸದ್ಯ ಮಗನ ಖುಷಿಯಲ್ಲಿ ತನ್ನ ಖುಷಿ ಕಾಣುತ್ತಿದ್ದಾನೆ. ಕದ್ದು ಮುಚ್ಚಿ ತನ್ನ ಮಗ ಆಕಾಶ್‌ನನ್ನೂ ಭೇಟಿಯಾಗುತ್ತಿದ್ದಾನೆ. ಇನ್ನೂ ಗೌತಮ್ ತನ್ನ ತಂದೆ ಎನ್ನುವ ಸತ್ಯ ಅರಿಯದ ಆಕಾಶ್ ಕೂಡ ಗೌತಮ್‌ನ ಅಪಾರವಾಗಿ ಹಚ್ಚಿಕೊಂಡಿದ್ದಾನೆ. ದಿನ ಖುಷಿಯಿಂದ ಗೌತಮ್ ಜೊತೆ ಕಾಲ ಕಳೆಯುತ್ತಿದ್ದಾನೆ.
ಮತ್ತೊಂದು ಕಡೆ ಮಲ್ಲಿ ಬಳಿ ಸತ್ಯ ಹೇಳುವಂತೆ ಗೌತಮ್ ಮನವಿಯನ್ನು ಮಾಡಿಕೊಂಡಿದ್ದಾನೆ. ಆದರೆ. ಗೌತಮ್ ಎಷ್ಟೇ ಗೋಗರೆದರು ಕೂಡ ಮಲ್ಲಿ ಮಾತ್ರ ಬಾಯಿ ಬಿಡುವುದಿಲ್ಲ. ಬದಲಿಗೆ ಮಾತಿನಲ್ಲಿ ನನ್ನ ಕಟ್ಟಿ ಹಾಕಿದ್ದಾರೆ. ಕ್ಷಮಿಸಿ ಎಂದು ಹೇಳಿ ಗೌತಮ್‌ಗೆ ನಿರಾಸೆ ಮಾಡುತ್ತಾಳೆ.

ಆದರೆ.. ಗೌತಮ್ ಮತ್ತು ಆಕಾಶ್ ಬಾಂಧವ್ಯದ ಕುರಿತು ಮಲ್ಲಿಗೆ ಅನುಮಾನ ಆಗಿದ್ದು ಆಕಾಶ್ ಹೇಳ್ತಿರುವುದನ್ನು ನೋಡಿದರೆ ಇದು ಭಾವನವರೇ ಆಗಿರಬಹುದಾ ಎಂದು ಮನದಲ್ಲಿ ಅಂದುಕೊಳ್ಳುತ್ತಾಳೆ. ಆಕಾಶ್ ಮೂಲಕ ಭೂಮಿಕಾ ಮಾಡಿದ ಗುಲಾಬ್ ಜಾಮೂನು ನೀಡಿ ಕಳುಹಿಸಿದ್ದಾಳೆ.
ಗುಲಾಬ್ ಜಾಮೂನು ಕಂಡು ಖುಷಿಯಾಗಿರುವ ಗೌತಮ್ ಯಾರು ಮಾಡಿದ್ದು ಎಂದು ಕೇಳುತ್ತಾನೆ. ಆಕಾಶ್ ನನ್ನ ಅಮ್ಮ ಮಾಡಿದ್ದು ಸರ್ ಎಂದು ಹೇಳಿದ್ದು ಗೌತಮ್ ಗುಲಾಬ್ ಜಾಮೂನು ತಿಂದಿದ್ದಾನೆ.
ಜೈದೇವ್ ಹೈರಾಣು, ಆಸ್ತಿ ಮೇಲೆ ದಿಯಾ ಕಣ್ಣು
ಈ ಕಡೆ ದೇವರು ವರ ಕೊಟ್ಟರೂ ಪೂಜಾರಿ ವರ ಕೊಟ್ಟಿಲ್ಲ ಎನ್ನುವಂತಹ ಪರಿಸ್ಥಿತಿಯಲ್ಲಿ ಜೈದೇವ್ ಮತ್ತು ಶಕುಂತಲಾ ಇದ್ಧಾರೆ. ಕೋಟ್ಯಂತರ ರೂಪಾಯಿ ಆಸ್ತಿ ಇದ್ದರೂ ಕೂಡ ಖರ್ಚು ವೆಚ್ಚಕ್ಕೆ ಪರದಾಡುತ್ತಿದ್ದಾರೆ. ಬ್ಯಾಂಕ್‌ನವರು ಸಾಲದ ಬಾಂಬ್ ಬೇರೆ ಎಸೆದಿದ್ದು ಎಲ್ಲದಕ್ಕೂ ಗೌತಮ್ ಹೆಸರನ್ನು ಜೈದೇವ್ ಎದುರು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಕೆರಳಿ ಕೆಂಡವಾಗಿರುವ ಜೈದೇವ್ ಸಾಲ ನೀವು ನೀಡದೇ ಇದ್ದರೆ ಇನ್ನೂ ಹಲವಾರು ಬ್ಯಾಂಕ್‌ಗಳಿವೆ ಮನೆಯಿಂದ ತೊಲಗಿ ಎಂದು ಬ್ಯಾಂಕ್‌ನವರನ್ನು ಮನೆಯಿಂದ ಹೊರಗಡೆ ಕಳುಹಿಸಿದ್ದಾನೆ.
ತಲೆ ಕೆಡಿಸಿಕೊಂಡು ಕುಂತಿರುವ ಜೈದೇವ್ ಬಳಿ ದಿಯಾ ಏನಾಯ್ತು ಎಂದು ವಿಚಾರಿಸಿದ್ದು, ನಿಮ್ಮ ಒತ್ತಡ ಕಡಿಮೆ ಆಗಬೇಕು ಅಂದರೆ ನೀವು ಒಂದು ಪೆಗ್ ಎಣ್ಣೆ ಕುಡಿಯಬೇಕು ನಾನು ಈಗಲೇ ಹೋಗಿ ತರ್ತಿನಿ ಎಂದು ಹೇಳುತ್ತಾಳೆ. ಹೆಂಡತಿಯ ಮಾತಿಗೆ ಜೈದೇವ್ ಕೂಡ ತಲೆಯಾಡಿಸುತ್ತಾನೆ.

ದಿಯಾಗೆ ಕ್ಲಾಸ್ ತೆಗೆದುಕೊಳ್ಳುವ ಅಪೇಕ್ಷಾ
ಎಣ್ಣೆಗೆ ದಿಯಾ ಪುಡಿ ಬೆರಸಿದ್ದಾಳೆ. ನನ್ನ ಹತ್ರ ಬೇರೆ ಆಯ್ಕೆ ಇಲ್ಲ. ನೀವು ನನ್ನ ಮಾತು ಕೇಳಲ್ಲ. ನಿಮ್ಮ ಅಮ್ಮ ಕೂಡ ಸರಿ ಹೋಗಲ್ಲ ಎಂದುಕೊಳ್ಳುವ ದಿಯಾ ನಿಮ್ಮನ್ನ ನಾನು ಕಂಟ್ರೋಲ್‌ಗೆ ತಗೆದುಕೊಳ್ಳಬೇಕು ಇಲ್ಲಾ ಅಂದರೆ ನಾನು ಅಂದುಕೊಂಡಿದ್ದು ಸಾಧಿಸಲು ಆಗುವುದಿಲ್ಲ, ನನಗಂತೂ ಉಳಿಗಾಲ ಇರಲ್ಲ ಎಂದು ಬೆರೆಸುತ್ತಿರುತ್ತಾಳೆ. ಇದೇ ಸಮಯದಲ್ಲಿ ಅಪೇಕ್ಷಾ ಬಂದಿದ್ದು ನಿಮ್ಮ ಗಂಡನಿಗೆ ಬುದ್ದಿ ಹೇಳುವುದು ಬಿಟ್ಟು ನೀವೇ ಎಣ್ಣೆ ಕೊಡ್ತಿದ್ದೀರಲ್ಲಾ ಎಂದು ಕ್ಲಾಸ್ ತೆಗೆದುಕೊಳ್ಳುತ್ತಾಳೆ. ಆಗ ಅಪೇಕ್ಷಾ ವಿರುದ್ಧ ತಿರುಗಿ ಬೀಳುವ ದಿಯಾ ನನಗೆ ಸಲಹೆ ಕೊಡಲು ಬರಬೇಡಿ ನಾನು ಅದನ್ನು ಕೇಳುವುದು ಇಲ್ಲ ಎಂದು ಹೇಳಿ ಹೊರಡುತ್ತಾಳೆ.
ಮಲ್ಲಿಗೆ ಹೂವು ಕಳಿಹಿಸಿದ ಗೌತಮ್
ಗುಲಾಬ್ ಜಾಮೂನು ತಿಂದು ಖುಷಿಯಾಗಿರುವ ಗೌತಮ್ ಸದ್ಯ ಮಲ್ಲಿಗೆ ಹೂವನ್ನು ಆಕಾಶ್ ಮೂಲಕ ಕಳುಹಿಸಿದ್ದಾನೆ. ಇಂದು (ಸೆಪ್ಟೆಂಬರ್ 26 ) ಬಿಡುಗಡೆಯಾದ ಪ್ರೋಮೊದಲ್ಲಿ ಮಲ್ಲಿಗೆ ಹೂವಿನ ಕುರಿತು ಭೂಂಇಕಾ ವಿಚಾರಿಸಿದ್ದು ಖಾಲಿ ಬಾಕ್ಸ್ ಕಳುಹಿಸಬಾರದು ಎಂದು ಅವರೇ ಕಳಿಸಿರಬಹುದು ಎಂದು ಮಲ್ಲಿ ಉತ್ತರ ನೀಡುತ್ತಾಳೆ. ಅಪ್ಪ ಅಮ್ಮನ ಪ್ರೀತಿಗೆ ಮಗನೇ ಸೇತುವೆಯಾಗಿದ್ಧಾನೆ ಎಂದು ಮಲ್ಲಿ ಮನದೊಳಗೆ ಖುಷಿಯಾಗಿದ್ದು ಭೂಮಿಕಾಗೆ ಹಳೆಯ ನೆನಪುಗಳು ಕಾಡುತ್ತಿವೆ. ಮಲ್ಲಿಗೆ ಹೂವು ಭೂಮಿಕಾ ಮುನಿಸನ್ನು ಕರಗಿಸುತ್ತಾ..? ಆಕಾಶ್ ಮತ್ತು ಗೌತಮ್ ಭೇಟಿಯಾಗುತ್ತಿರುವ ವಿಚಾರ ಭೂಮಿಕಾಗೆ ಗೊತ್ತಾಗುತ್ತಾ..? ಜೈದೇವ್ ಮತ್ತು ಶಕುಂತಲಾ ಬೀದಿಗೆ ಬರುತ್ತಾರಾ..? ಆನಂದ್.. ಆಕಾಶ್ ಮತ್ತು ಮಲ್ಲಿ ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











