Amruthadhaare ; ತಂದೆ-ಮಗನ ಭಾಂದವ್ಯದ ಮೇಲೆ ಬಿತ್ತು ಭೂಮಿಕಾ ಕಣ್ಣು, ಈ ಬಾರಿ ಗೌತಮ್ ಕಥೆ ಅಷ್ಟೇ..!
''ಅಮೃತಧಾರೆ'' ಧಾರಾವಾಹಿಯಲ್ಲಿ ಆಕಾಶ್ ಕಡೆಯಿಂದ ಬಂದ ಭೂಮಿಕಾ ಮಾಡಿರುವ ಗುಲಾಬ್ ಜಾಮೂನ್ ತಿಂದು ಗೌತಮ್ ಖುಷಿಯಾಗಿದ್ದಾನೆ. ಮತ್ತೊಂದು ಕಡೆ ಗೌತಮ್ ಕಳುಹಿಸಿದ ಮಲ್ಲಿಗೆ ಹೂವು ಕಂಡು ಭೂಮಿಕಾಗೆ ತನ್ನ ಆ ಹಳೆಯ ದಿನಗಳು ನೆನಪಾಗಿವೆ. ಅಪ್ಪ ಅಮ್ಮನ ಪ್ರೀತಿಗೆ ಮಗನೇ ಸೇತುವೆಯಾಗಿದ್ಧಾನೆ ಎಂದುಕೊಂಡು ಮಲ್ಲಿ ಕೂಡ ಖುಷಿಯಾಗಿದ್ದಾಳೆ. ಆದರೆ ಈಗ ಧಾರಾವಾಹಿಯಲ್ಲಿ ಮತ್ತೊಂದು ತಿರುವು ಎದುರಾಗುವ ಸಾಧ್ಯತೆ ಇದೆ.
ಯಾಕೆಂದರೆ.. ಮಲ್ಲಿಗೆ ಹೂವು ಕಂಡು ಕರಗಬೇಕಿದ್ದ ಭೂಮಿಕಾ ಮನಸು ಈಗ ಇನ್ನೂ ವಿಚಲಿತವಾಗಿದೆ. ಹೌದು, ಈ ಧಾರಾವಾಹಿಯನ್ನು ತಪ್ಪದೇ ನೋಡುವ ಎಲ್ಲರಿಗೆ ಗೊತ್ತಿರುವಂತೆ ಈ ಹಿಂದೆ ಗೌತಮ್ ಮತ್ತು ಭೂಮಿಕಾ ಮುಖಾಮುಖಿಯಾದಾಗ ಗೌತಮ್‌ಗೆ ಭೂಮಿಕಾ ಎಚ್ಚರಿಕೆಯನ್ನು ನೀಡಿದ್ದಳು. ನನ್ನಿಂದ, ನನ್ನ ಮಗನಿಂದ ನೀವು ದೂರ ಇರಿ, ಇಲ್ಲ ಅಂದರೆ ನನ್ನ ನಿರ್ಧಾರ ಬೇರೆಯೇ ಆಗಿರುತ್ತದೆ ಎಂದು ಹೇಳಿದ್ದಳು.

ಆರಂಭದಲ್ಲಿ ಭೂಮಿಕಾ ನೀಡಿದ್ದ ಈ ಎಚ್ಚರಿಕೆಯನ್ನು ಗೌತಮ್ ಗಂಭೀರವಾಗಿ ಪರಿಗಣಿಸಿದ್ದ. ಆನಂದ್ ಎದುರು ತನ್ನ ಆತಂಕವನ್ನು ಹೇಳಿಕೊಂಡಿದ್ದ ಕೂಡ. ಆದರೆ.. ಮಗನ ಮೇಲಿನ ಪ್ರೀತಿ.. ಹೆಂಡತಿ ಮೇಲಿನ ಮಮಕಾರ.. ಗೌತಮ್‌ನನ್ನ ಮಗನ ಶಾಲೆಯವರೆಗೆ ಕರೆತಂದಿದೆ. ತನ್ನೆಲ್ಲ ನೋವು ಮರೆತು ತನ್ನ ಮಗ ಆಕಾಶ್‌ನ ಗೌತಮ್ ಪದೇ ಪದೇ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದಾನೆ. ಮಗನ ಜನ್ಮದಿನಕ್ಕೆ ಉಡುಗೊರೆಗಳನ್ನು ನೀಡಿದ್ದಾನೆ.
ಇನ್ನೂ ಗೌತಮ್‌ನಲ್ಲಿ ಆದ ಈ ಸಡನ್ ಬದಲಾವಣೆಗಳನ್ನು ಕಂಡು ಆಕಾಶ್ ಕೂಡ ಆಶ್ಚರ್ಯಗೊಂಡಿದ್ದಾನೆ. ಶಾಲೆಯ ಹತ್ತಿರ ಬಂದಿರುವ ಗೌತಮ್‌ಗೆ ಏನಾಗಿದೆ ಸರ್ ನಿಮಗೆ..? ನಮ್ಮ ಅಮ್ಮ ಹೇಗೆ ಪ್ರೀತಿ ಮಾಡ್ತಾರೋ ಹಾಗೇ ನೀವು ಮಾಡ್ತಿದ್ದೀರಲ್ಲಾ ಎನ್ನುತ್ತಾನೆ. ನನ್ನನ್ನೇ ನೀವು ಇಷ್ಟು ಪ್ರೀತಿ ಮಾಡ್ತೀರಾ. ಇನ್ನೂ ನಿಮ್ಮ ನಿಜವಾದ ಮಗನನ್ನು ನೀವು ಎಷ್ಟು ಪ್ರೀತಿ ಮಾಡ್ತೀರಾ..? ಎಂದೆಲ್ಲಾ ಕೇಳಿದ್ದಾನೆ. ಗೌತಮ್ ಹಾಗೇನು ಇಲ್ವಲ್ಲಾ. ನಾನು ಬದಲಾಗಿಲ್ಲ ಎಂದು ಹೇಳಿದ್ದಾನೆ.
ಆದರೆ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಗೊತ್ತಾಗಲ್ವಾ..? ಸದ್ಯ ಆಕಾಶ್‌ನ ಗೌತಮ್ ಭೇಟಿಯಾಗಿರುವುದು.. ಆಕಾಶ್‌ನ ಗೌತಮ್ ಅಪ್ಪಿಕೊಂಡಿರುವುದನ್ನು.. ಭೂಮಿಕಾ ನೋಡಿದ್ದಾಳೆ. ಕಣ್ಣೀರು ಕೂಡ ಹಾಕಿದ್ದಾಳೆ. ಗೌತಮ್ ಮತ್ತು ಆನಂದ್ ಕೂಡ ಭೂಮಿಕಾ ತಮ್ಮನ್ನು ನೋಡಿರುವುದು ಕಂಡು ಆತಂಕಕ್ಕೀಡಾಗಿದ್ದಾರೆ.

ಮುಂದೇನು ಮಾಡುತ್ತಾಳೆ ಭೂಮಿಕಾ ?
ಸದ್ಯ ಗೌತಮ್‌ಗೆ ತನ್ನ ಮಗ ಸಿಕ್ಕಿರುವ ವಿಚಾರ ಭೂಮಿಕಾಗೆ ಗೊತ್ತಾಗಿದೆ. ಇಬ್ಬರು ಭೇಟಿಯಾಗುತ್ತಿರುವ ಸತ್ಯ ಕೂಡ ಗೊತ್ತಾಗಿದೆ. ಈ ಮೊದಲೇ ಭೂಮಿಕಾ ಎಚ್ಚರಿಕೆ ನೀಡಿದ ಹಿನ್ನೆಲೆ ಈಗ ಪ್ರೇಕ್ಷಕರಲ್ಲಿ ಹಲವು ಪ್ರಶ್ನೆಗಳು ಕಾಡುತ್ತಿವೆ. ಗೌತಮ್‌ನಿಂದ ಭೂಮಿಕಾ ಇನ್ನೂ ದೂರ ಹೋಗುತ್ತಾಳಾ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಮಗನ ವಿಚಾರದಲ್ಲಿ ಗೌತಮ್ ಮತ್ತು ಭೂಮಿಕಾ ಮತ್ತೆ ಮುಖಾಮುಖಿಯಾಗಬಹುದು ಆಗ ಮತ್ತೆ ಇಬ್ಬರ ನಡುವೆ ಜಗಳವಾಗಬಹುದು. ಮಗನನ್ನು ನೋಡುವ ಹಕ್ಕು ಅಧಿಕಾರ ನನಗಿಲ್ವಾ ಎಂಬ ಪ್ರಶ್ನೆಯನ್ನು ಕೂಡ ಗೌತಮ್ ಮಾಡಬಹುದು. ಕಣ್ಣೀರು ಹಾಕುತ್ತಲೇ ಭೂಮಿಕಾ ನಿಷ್ಠುರ ಮಾತುಗಳನ್ನಾಡಬಹುದು ಎಂದೆಲ್ಲಾ ಸದ್ಯ ಪ್ರೇಕ್ಷಕರು ಊಹೆಯನ್ನು ಮಾಡುತ್ತಿದ್ಧಾರೆ.
ಮತ್ತೂ ಕೆಲವರು ಗೌತಮ ಏನೋ ಮಹಾ ಅಪರಾಧ ಮಾಡಿದ್ದಾನೆ ಎಂಬಂತೆ ಭೂಮಿಕಾ ನೋಡುವುದು, ಈತ ಅಪರಾಧಿ ಪ್ರಜ್ಞೆ ಅನುಭವಿಸುವುದು... ಎಲ್ಲಾ ಸಾಕು. ಭೂಮಿಕಾ ಗೌತಮನಿಂದ ದೂರ ಉಳಿಯಲು ಯಾವುದೇ ಸಕಾರಣಗಳಿಲ್ಲ. ಕತೆಯನ್ನು ಲಂಬಿಸುವ ಸಲುವಾಗಿ, ಭೂಮಿಕಾ ಪಾತ್ರದ ವ್ಯಕ್ತಿತ್ವವನ್ನು ಹಾಳು ಮಾಡುವುದು ಸರಿಯಲ್ಲ ಎನ್ನುತ್ತಿದ್ದಾರೆ. MLA ಅಪ್ಪುನ ಕಿಡ್ನಾಪ್ ಮಾಡುತ್ತಾನೆ. ಆಗ ಗೌತಮ್ ಸಹಾಯ ಬೇಕಾಗಿ, ಇಬ್ಬರೂ ಒಂದಾಗುತ್ತಾರೆ ಅನ್ಸುತ್ತೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕಥೆ ಬೇಗ ಬೇಗ ಸಾಗುತ್ತಿರುವುದಕ್ಕೆ ಇನ್ನೂ ಕೆಲವರು ಖುಷಿಯನ್ನು ಕೂಡ ವ್ಯಕ್ತಪಡಿಸಿದ್ದಾರೆ.


Click it and Unblock the Notifications











