Amruthadhaare ; ಅಯ್ಯೋ, ಅಂದುಕೊಂಡಿದ್ದೇ ನಿಜಾ ಆಯ್ತು- ಹೊಂಚು ಹಾಕಿ ಮರಿ ಡುಮ್ಮಣ್ಣನ ಕಿಡ್ನ್ಯಾಪ್ ಮಾಡಿಯೇ ಬಿಟ್ರು
''ಅಮೃತಧಾರೆ'' ಧಾರಾವಾಹಿಯಲ್ಲಿ ಮಗ ಸಿಕ್ಕಿರುವ ಖುಷಿಯಲ್ಲಿರುವ ಗೌತಮ್, ದಿನವೂ ಆಕಾಶ್‌ನ ಭೇಟಿಯಾಗುತ್ತಿದ್ದಾನೆ. ಆದರೆ.. ಆಕಾಶ್‌ನ ಗೌತಮ್ ಕದ್ದು ಮುಚ್ಚಿ ಸಿಗುತ್ತಿರುವ ವಿಚಾರ ಈಗ ಭೂಮಿಕಾಗೆ ಗೊತ್ತಾಗಿದೆ. ಇಬ್ಬರು ಭೇಟಿಯಾಗುತ್ತಿರುವುದನ್ನು ಕಂಡ ಭೂಮಿಕಾ ಕಣ್ಣೀರು ಹಾಕಿದ್ದು ಗೌತಮ್ ಮತ್ತು ಆನಂದ್ ಕಣ್ಣಿಗೆ ಕೂಡ ಭೂಮಿಕಾ ಬಿದ್ದಿದ್ದಾಳೆ. ಭೂಮಿಕಾಳನ್ನು ಕಂಡು ಗೌತಮ್ ಮತ್ತು ಆನಂದ್ ಮುಖದಲ್ಲಿ ಆತಂಕ ಮನೆ ಮಾಡಿದೆ.
ಸದ್ಯ .. ಗೌತಮ್ ಮತ್ತು ಆನಂದ್‌ನ ಭೂಮಿಕಾ ಶಾಲೆಯಲ್ಲಿಯೇ ಭೇಟಿಯಾಗಿದ್ದಾಳೆ. ಗೌತಮ ಏನೋ ಮಹಾ ಅಪರಾಧ ಮಾಡಿದ್ದಾನೆ ಎಂಬಂತೆ ಗೌತಮ್‌ನನ್ನು ಭೂಮಿಕಾ ನೋಡುತ್ತಿದ್ದು ಮತ್ತೊಮ್ಮೆ ತನ್ನನ್ನೂ ಹುಡುಕಿಕೊಂಡು ತಾನು ಇದ್ದಲ್ಲಿಗೆ ಬಂದ ಗೌತಮ್‌ನ ಮನಸನ್ನು ಭೂಮಿಕಾ ನೋಯಿಸಿದ್ದಾಳೆ.

ನಮ್ಮಿಂದ ದೂರ ಇರಿ, ನಮ್ಮ ನೆಮ್ಮದಿ ಹಾಳು ಮಾಡಬೇಡಿ ಎಂದು ನಾನು ನಿಮಗೆ ಅವತ್ತೇ ಹೇಳಿದ್ದೇ ಎಂದು ಭೂಮಿಕಾ ಹೇಳಿದ್ದು, ಆನಂದ್ ಅತ್ತಿಗೆ ನಿಮಗೋಸ್ಕರ ಐದು ವರ್ಷ ಕಣ್ತುಂಬ ನಿದ್ದೆ ಮಾಡಿಲ್ಲ. ಹೊಟ್ಟೆ ತುಂಬಾ ಊಟ ಮಾಡಿಲ್ಲ. ನಿಮಗೋಸ್ಕರ ಹುಡುಕದೇ ಇರುವ ಊರಿಲ್ಲ ಅತ್ತಿಗೆ ಎಂದು ಹೇಳುತ್ತಾನೆ. ಆದರೂ ಕೂಡ ಕರಗದ ಭೂಮಿಕಾ, ಯಾರು ಏನೆಲ್ಲಾ ಮಾಡಿದರು ಎನ್ನುವುದು ನನಗೆ ಬೇಕಿಲ್ಲ. ಅದನ್ನು ತಿಳಿದುಕೊಳ್ಳುವ ಆಸಕ್ತಿ ಕೂಡ ನನಗೆ ಇಲ್ಲ ಎಂದು ಹೇಳುತ್ತಾಳೆ. ದಯವಿಟ್ಟು ನಮ್ಮಿಂದ ದೂರ ಇರಿ ಎಂದು ಹೇಳಿ ಕಣ್ಣೀರು ಹಾಕುತ್ತಾ ಹೊರಡುತ್ತಾಳೆ.
ಭೂಮಿಕಾ ಆಡಿದ ಈ ಮಾತುಗಳನ್ನು ಕೇಳಿ ನೊಂದುಕೊಳ್ಳುವ ಗೌತಮ್, ಸದ್ಯ ಊರು ಬಿಡುವ ನಿರ್ಧಾರ ಮಾಡಿದ್ದಾನೆ. ನನ್ನಿಂದ ಅವರ ನೆಮ್ಮದಿ ಹಾಳಾಗುತ್ತಿದೆ ಎಂದರೆ ನಾನು ಇಲ್ಲಿ ಇರಬಾರದು ಎಂದು ಆನಂದ್‌ಗೆ ಹೇಳಿ ಬ್ಯಾಗ್ ತಗೊಂಡು ಹೊರಟಿದ್ದಾನೆ.
ಆಕಾಶ್ ಕಿಡ್ನ್ಯಾಪ್
ಮತ್ತೊಂದು ಕಡೆ ಎಂಎಲ್‌ಎ ಮಗ ಸಿಗರೇಟ್ ಸೇದಿದ್ದಕ್ಕೆ ಕೆರಳಿ ಕೆಂಡವಾಗಿದ್ದ ಭೂಮಿಕಾ, ಆ ವಿದ್ಯಾರ್ಥಿಯ ಕೆನ್ನೆಗೆ ಬಾರಿಸಿದ್ದಳು. ಇಷ್ಟೇ ಅಲ್ಲ ಮಗನ ವರ್ತನೆ ಸಮರ್ಥನೆ ಮಾಡಿಕೊಳ್ಳಲು ಬಂದಿದ್ದ ಎಂಎಲ್‌ಎಗೆ ಕೂಡ ಉಗಿದು ಉಪ್ಪು ಹಾಕಿದ್ದಳು. ಇದರಿಂದ ಭಾರೀ ಮುಖಭಂಗಕ್ಕೊಳಗಾದ ಎಂಎಲ್‌ಎಗೆ ಆ ನಂತರ ಕ್ಷಮೆ ಕೇಳುವಂತೆ ಭೂಮಿಕಾಗೆ ಹೇಳಿದರು ಕೂಡ ಭೂಮಿಕಾ ಒಪ್ಪಿರುವುದಿಲ್ಲ. ಬದಲಿಗೆ ತನ್ನದಲ್ಲದ ತಪ್ಪಿಗೆ ನಾನು ಕ್ಷಮೆ ಕೇಳುವುದಿಲ್ಲ ಎಂದು ಹೇಳಿರುತ್ತಾಳೆ.
ಅಂದಿನಿಂದಲೇ ತನಗೆ ಆದ ಈ ಅವಮಾನಕ್ಕೆ ಎಂಎಲ್‌ಎ ಪ್ರತೀಕಾರ ತೀರಿಸಿಕೊಳ್ಳಬಹುದು, ಭೂಮಿಕಾ ಪ್ರಾಣಕ್ಕೆ ಸಂಚಕಾರ ಬರಬಹುದು ಅಥವಾ ಗೌತಮ್ ಮತ್ತು ಭೂಮಿಕಾಳ ಮುದ್ದಿನ ಮಗ ಆಕಾಶ್‌ನ ಎಂಎಲ್‌ಎ ಕಿಡ್ನ್ಯಾಪ್ ಮಾಡಿಸಬಹುದು ಎಂದು ಧಾರಾವಾಹಿಯನ್ನು ನಿರಂತರವಾಗಿ ನೋಡುತ್ತ ಬಂದ ಪ್ರೇಕ್ಷಕರು ಅಂದುಕೊಂಡಿದ್ದರು.

ಕೊನೆಗೂ ಈಗ ಎಲ್ಲರೂ ಅಂದುಕೊಂಡತೆಯೇ ಆಗಿದೆ. ಆಕಾಶ್‌ನನ್ನು ಕಿಡ್ನ್ಯಾಪ್ ಮಾಡಲಾಗಿದೆ. ಆಕಾಶ್ ಕಾಣಿಸದ ಹಿನ್ನೆಲೆ ಮಲ್ಲಿ ಫೋನ್‌ನಿಂದ ಊರು ಬಿಡುತ್ತಿರುವ ಗೌತಮ್‌ಗೆ ಭೂಮಿಕಾ ಕರೆ ಮಾಡಿದ್ದು , ಆಕಾಶ್‌ನ ಯಾಕೆ ಕರೆದುಕೊಂಡು ಹೋದ್ರೀ ಎಂದು ಹೇಳುತ್ತಾಳೆ. ಇದಕ್ಕೆ ಗೌತಮ್ ನಾನು ಆಕಾಶ್‌ನ ಕರೆದುಕೊಂಡು ಬಂದಿಲ್ಲ ಎಂದು ಹೇಳಿದ್ದು ಆಕಾಶ್ ವಿಚಾರದಲ್ಲಿ ಗೌತಮ್ ಮತ್ತು ಭೂಮಿಕಾ ಸದ್ಯ ಇಬ್ಬರು ಆತಂಕಕ್ಕೀಡಾಗಿದ್ದಾರೆ.
ನಿಜವಾಯ್ತು ಪ್ರೇಕ್ಷಕರ ಊಹೆ
ಇಂದು (ಸೆಪ್ಟೆಂಬರ್ 28) ಬಿಡುಗಡೆಯಾದ ಈ ಪ್ರೋಮೋವನ್ನು ನೋಡಿ ಹಲವರು ನಾವು ಅಂದುಕೊಂಡತೆಯೇ ಆಯ್ತು ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ. ಆಶ್ಚರ್ಯ ಏನಿಲ್ಲ ಬಿಡಿ ನಮಗೆಲ್ಲ ಮುಂಚೆನೇ ಗೊತ್ತಿತ್ತು ಆ MLA ಕಡೆಯವರು ಅವನನ್ನ ಕಿಡ್ನ್ಯಾಪ್ ಮಾಡಿಕೊಂಡು ಹೋಗ್ತಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಕಿಡ್ನ್ಯಾಪ್ ಆದ ಮಗ, ಒಂದಾಗ್ತಾರಾ ಇಬ್ಬರು..?
ಕಿಡ್ನ್ಯಾಪ್ ಆದ ಮಗನನ್ನು ಈಗ ಗೌತಮ್ ಕಾಪಾಡಬೇಕಿದೆ. ಭೂಮಿಕಾ ಜೊತೆ ಈ ಕುರಿತು ಚರ್ಚೆ ಮಾಡಬೇಕಿದೆ. ಮಗ ಆಕಾಶ್‌ನ ಗೌತಮ್ ಎಲ್ಲಿ ಹುಡುಕುತ್ತಾನೆ..? ಹೇಗೆ ಹುಡುಕುತ್ತಾನೆ..?ಎನ್ನುವ ಪ್ರಶ್ನೆ ನಡುವೆ ಇದೇ ವಿಚಾರದಿಂದ ಗೌತಮ್ ಮತ್ತು ಭೂಮಿಕಾ ಮುಂದೆ ಒಂದಾಗುತ್ತಾರೆ ಎನ್ನುವ ಚರ್ಚೆ ಕೂಡ ಸದ್ಯ ಕಿರುತೆರೆಯ ಪ್ರೇಕ್ಷಕರ ವಲಯದಲ್ಲಿ ನಡೆಯುತ್ತಿದೆ. ಭೂಮಿಕಾ ಮತ್ತು ಗೌತಮ್ ಪ್ರೇಕ್ಷಕರ ಊಹೆಯಂತೆ ಈ ಬಾರಿ ಒಂದಾಗುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











