Amruthadhaare:ಗೌತಮ್‌ಗೆ ಅಸಲಿ ವಿಚಾರ ಹೇಳಿದ್ನಾ ಆನಂದ್? ಜೈ ದೇವ್ ಮುಂದಿನ ಕಥೆಯೇನು?
ಆನಂದ್ ಜೈದೇವ್ ಬಗ್ಗೆ ನಿಜ ಹೇಳುವ ತೀರ್ಮಾನ ಮಾಡಿಬಿಟ್ಟಿದ್ದಾನೆ. ತನ್ನ ಗೆಳೆಯನ ಬಳಿ ಈ ವಿಚಾರ ಹೇಳಿದರೆ ಆತ ಯಾವ ರೀತಿ ಮಾತಾಡಬಹುದೆಂಬ ಆತಂಕದಲ್ಲಿದ್ದ. ಇನ್ನು ಗೌತಮ್ ಆನಂದನನ್ನು ಬಹಳ ಚೆನ್ನಾಗಿ ನೋಡಿಕೊಂಡಿದ್ದಾನೆ. ಆತನಿಗೆ ಏನು ಬೇಕು? ಏನು ಬೇಡ ಎನ್ನುವುದು ಗೌತಮ್‌ಗೆ ಗೊತ್ತಿದೆ. ಅದೇ ಪ್ರಕಾರವಾಗಿ ಆನಂದ್‌ನನ್ನು ಗೌತಮ್ ಕೂಡ ಹಾಗೇ ನೋಡಿಕೊಳ್ಳುತ್ತಿದ್ದಾನೆ. ಹಾಗೆಯೇ ಗೌತಮ್ ಆನಂದ್‌ನನ್ನು ವಾಕಿಂಗ್ ಕರೆದುಕೊಂಡು ಹೋಗಬೇಕಾದರೆ, ಆತನ ಬಳಿ ಕುಶಲೋಪರಿಗಳನ್ನು ಮಾತಾಡುತ್ತಾನೆ. ಹಾಗೆಯೇ ಆಫೀಸ್ ಕೆಲಸದ ಬಗ್ಗೆ ಆನಂದ್ ಬಳಿ ಹೇಳಿಕೊಂಡು ಗೌತಮ್ ಜೊತೆ ಕಾಲ ಕಳೆಯುತ್ತಿರುತ್ತಾನೆ.
ಇನ್ನು ಆನಂದ್ ತನ್ನ ಗೆಳೆಯ ಯಾವ ವಿಚಾರದಲ್ಲೂ ಕೂಡ ಮೋಸ ಹೋಗಬಾರದು. ಗೌತನ್ ತಮ್ಮ ಮಾಡುತ್ತಿರುವ ಘನಂದಾರಿ ಕೆಲಸಗಳನ್ನು ಆತನ ಬಳಿ ಹೇಳಲೇಬೇಕು ಅಂದುಕೊಳ್ಳುತ್ತಾನೆ. ಹಾಗೆಯೇ ಆ ವಿಷಯ ಹೇಳುವ ಸಂದರ್ಭ ಕೂಡ ಬರುತ್ತದೆ. ಇನ್ನು ಗೌತಮ್ ಹಾಗೂ ಆನಂದ್ ವಾಕಿಂಗ್ ಮಾಡುತ್ತಿರಬೇಕಾದರೆ, ಆನಂದ್ ಬಳಿ ಗೌತಮ್ ಮಾತನಾಡುತ್ತಿರುತ್ತಾನೆ. ಅದೇ ವೇಳೆ ಆನಂದ್, ಗೌತಮ್ ಬಳಿ "ಗೆಳೆಯ ನಾನೊಂದು ವಿಚಾರ ನಿನ್ನ ಬಳಿ ಹೇಳಬೇಕಿತ್ತು" ಎಂದಾಗ ಗೌತಮ್ "ಸರಿ ಹೇಳು, ಅದಕ್ಕೆ ಯಾಕೆ ಇ ತಲೆಕೆಡಿಸಿಕೊಳ್ಳುತ್ತಿದ್ದೀಯಾ? ಏನು ಬೇಕಾದರೂ ಹೇಳಬಹುದು" ಎನ್ನುತ್ತಾನೆ.

"ಆ ವಿಚಾರವನ್ನು ಕೇಳಿದರೆ ನಿನಗೂ ಕೂಡ ಬಹಳ ಅಸಮಾಧಾನ ಆಗಬಹುದು ಕೋಪ ಬರಬಹುದು. ಆದರೆ ನೀನು ಯಾರ ಮೇಲೂ ಕೂಡ ಕೋಪವನ್ನು ಮಾಡಿಕೊಳ್ಳಬಾರದು. ಹಾಗಿದ್ದರೆ ಮಾತ್ರ ನಾನು ನಿನಗೆ ಈ ವಿಚಾರವನ್ನು ಹೇಳುತ್ತೇನೆ" ಎಂದು ಹೇಳುತ್ತಾನೆ. ಬಳಿಕ ಪಾರ್ಥ ಹಾಗೂ ಅಪೇಕ್ಷ ಮೇಲೆ ನಡೆದ ಅಟ್ಯಾಕ್ ಬಗ್ಗೆ ಗೌತಮ್ ಬಳಿ ಆನಂದ್ ಹೇಳುತ್ತಾನೆ. "ಇದಕ್ಕೆ ಮೂಲ ಕಾರಣ ಯಾರೆನ್ನುವುದು ನನಗೆ ತುಂಬಾ ಚೆನ್ನಾಗಿ ಗೊತ್ತಿದೆ. ಇದಕ್ಕೆಲ್ಲ ಕಾರಣ ನಿನ್ನ ತಮ್ಮ ಜೈದೇವ್. ಹಾಗಂತ ನಾನು ಹೇಳುತ್ತಿಲ್ಲಪ್ಪ. ಇದೆಲ್ಲ ಹೇಳಿದ್ದು ಆ ರೌಡಿಗಳು. ಹೇಳಿದ್ದನ್ನು ನಾನು ನಿನ್ನ ಬಳಿ ಹೇಳುತ್ತಿದ್ದೇನೆ" ಎಂದು ಹೇಳಿದಾಗ ಗೌತಮ್‌ಗೆ ಆಕಾಶವೇ ಕಳಚಿ ಮೈ ಮೇಲೆ ಬಿದ್ದ ಅನುಭವವಾಗುತ್ತದೆ.
ತಮ್ಮನ ಅಟ್ಟಹಾಸ ಕೇಳಿ ನೊಂದ ಗೌತಮ್
ಆಗ ಬಹಳ ಬೇಸರದಿಂದ ಇದೇನು ಹೇಳುತ್ತಿದ್ದೀಯಾ ನೀನು ಎಂದು ಆನಂದ್ ಬಳಿ ಪ್ರಶ್ನೆ ಮಾಡುತ್ತಾನೆ ಗೌತಮ್. ಆಗ "ಹೌದು, ಗೆಳೆಯ ನಾನು ಈ ವಿಚಾರವನ್ನು ಹೇಳಬಾರದು ಅಂದುಕೊಂಡಿದ್ದೆ. ಆದರೆ, ಈ ವಿಚಾರವನ್ನು ಹೇಳಲೇಬೇಕು ಎಂದು ನನಗೆ ಈಗ ಅನಿಸಿತು. ಅದಕ್ಕಾಗಿ ದೇವರು ನನ್ನನ್ನು ಬದುಕಿಸಿದ್ದಾನೆ ಎಂದು ಅನಿಸಿದ್ದು, ನಿನಗೆ ಯಾವುದೇ ರೀತಿ ಮೋಸ ಆಗಬಾರದು ಎಂದು ಈ ಮಾತನ್ನು ಹೇಳುತ್ತಿದ್ದೇನೆ" ಎಂದು ಆನಂದ್ ಹೇಳುತ್ತಾನೆ.

ಆನಂದ್ ಮಾತಿಗೆ ಗೌತಮ್ ಬೇಸರ
ಆನಂದ್ ಮಾತು ಮುಂದುವರೆಸಿ "ಅಪೇಕ್ಷಳನ್ನು ಜೈದೇವ್ ಮದುವೆಯಾಗಬೇಕೆಂದು ಇದ್ದ. ಆದರೆ ಆತನ ತಮ್ಮ ಆತನ ಪ್ರೇಯಸಿಯನ್ನು ಮದುವೆಯಾದಾಗ ಆತನಿಗೆ ಬಹಳ ಕೋಪ ಬಂದಿತ್ತು. ಆದ ಕಾರಣ ಪಾರ್ಥನನ್ನು ತಮ್ಮ ಎಂದು ನೋಡದೆ, ಆತನನ್ನು ಕೊಲ್ಲಿಸಲು ಹೇಳಿದ್ದೇ ಜೈದೇವ್ ಎಂದು ಆ ರೌಡಿ ಹೇಳಿದಾಗ ನನಗೆ ಆತಂಕ ಹೆಚ್ಚಾಗಿತ್ತು. ಈ ವಿಚಾರ ಹೇಳಬೇಕೆಂದು ನಿನ್ನ ಬಳಿ ಬರುತ್ತಿರಬೇಕಾದರೆ ನನಗೆ ಆಕ್ಸಿಡೆಂಟ್ ಕೂಡ ಆಯ್ತು" ಎಂದು ಆನಂದ್ ಹೇಳುತ್ತಾನೆ.
ಗೌತಮ್ ಮುಂದಿನ ಹಾದಿ ಏನು?
ಹಾಗೆ ಹೇಗಾದರೂ ಮಾಡಿ ಜಯದೇವ್‌ಗೆ ಬುದ್ಧಿ ಕಲಿಸಬೇಕು ಎಂದು ಗೌತಮ್ ಯೋಚನೆ ಮಾಡುತ್ತಿರುತ್ತಾನೆ. ಆತ ಮಾಡುತ್ತಿರುವ ಹಲವು ಕೆಟ್ಟ ಕೆಲಸಗಳು ಗೌತಮ್ ಮುಂದೆ ಒಂದೊಂದಾಗಿ ಅನಾವರಣ ಆಗುತ್ತಿದೆ.


Click it and Unblock the Notifications











