Amruthadhaare ; ಭೂಮಿಕಾ ಬದುಕು ನುಚ್ಚುನೂರು, ದೂರವಾಗುತ್ತಾ ಜನುಮದ ಜೋಡಿ?

ಅಮೃತಧಾರೆ ಧಾರಾವಾಹಿಯಲ್ಲಿ ನಿಗಿ ನಿಗಿ ಕೆಂಡವಾಗಿರುವ ಭೂಮಿಕಾ ಕಾಡಿಂದ ಸೀದಾ ಮನೆಗೆ ಬಂದಿದ್ದಾಳೆ. ಭೂಮಿಕಾ ಬರುವಷ್ಟರಲ್ಲಿ ಮನೆಯಿಂದ ಪೇರಿ ಕೀಳಲು ಮುಂದಾಗಿದ್ದ ಶಕುಂತಲಾ ಎದುರು ಭೂಮಿಕಾ ಬಂದಿದ್ದು ಬೆಂಕಿಯಂತೆ ಆಗಿರುವ ಭೂಮಿಕಾಳನ್ನು ಕಂಡು ಶಕುಂತಲಾ ಬೆಚ್ಚಿ ಬಿದ್ದಿದ್ದಾಳೆ. ಶಕುಂತಲಾ ವಿರುದ್ಧ ಭೂಮಿಕಾ ಹರಿಹಾಯ್ದಿದ್ದು ಮಲ್ಲಿ ಎದುರೇ ನಾಚಿಕೆಯಾಗಬೇಕು ಈ ರೀತಿ ಬದುಕೋದಕ್ಕೆ, ನಿಮ್ಮದು ಒಂದು ಜನ್ಮಾನಾ ?

ಅಸಹ್ಯ ಆಗುತ್ತೆ ನಿಮ್ಮನ್ನು ನೋಡೋಕೆ ಎಂದು ಕಿಡಿ ಕಾರಿದ್ದಾಳೆ. ಬರ್ತಿರುವ ಕೋಪಕ್ಕೆ ಗನ್ ಅಲ್ಲಿರುವ ಎಲ್ಲಾ ಬುಲೆಟ್‌ಗಳು ನಿಮ್ಮೊಳಗೆ ಇಳಿಸಬೇಕು ಎನಿಸುತ್ತಿದೆ, ಆದರೆ ನನ್ನ ಮನುಷ್ಯತ್ವ ನನ್ನನ್ನೂ ತಡೆಯುತ್ತಿದೆ ಎಂದು ಹೇಳುತ್ತಾಳೆ. ನೀವು ಇಲ್ಲದೇ ನಾವೆಲ್ಲ ನೆಮ್ಮದಿಯಿಂದ ಬದಕ್ತೀವಿ ಇಲ್ಲಿಂದ ಹೊರಡಿ ಎನ್ನುತ್ತಾಳೆ.

amruthadhaare-serial-september-3-episode-written-update

ಭೂಮಿಕಾಗೆ ಶಕುಂತಲಾ ಕೌಂಟರ್ ಅಟ್ಯಾಕ್

ಆದರೆ ಅಲ್ಲಿಂದ ಹೊರಡದ ಶಕುಂತಲಾ ನನ್ನನ್ನೂ ಜೈಲಿಗೆ ಕಳ್ಸೋದು ಅಷ್ಟು ಸುಲಭನಾ..? ನಿನಗೆ ಅರ್ಧ ಕಥೆ ಮಾತ್ರ ಗೊತ್ತು, ಪೂರ್ತಿ ಕಥೆ ಕೇಳಿಸ್ಕೋ ಎನ್ನುವ ಶಕುಂತಲಾ ದೊಡ್ಡದಾಗಿ ಗನ್ ಹಿಡ್ಕೊಂಡು ಭದ್ರಕಾಳಿಯಂತೆ ಬಂದು ಮಗುನಾ ಕಾಪಾಡಿದೆ ಎಂದು ಬಿಲ್ಡಪ್ ಕೊಡ್ತಿದೀಯಾ, ನಿನಗೆ ಗೊತ್ತಿಲ್ಲದಿರೋದು ಇನ್ನೊಂದು ವಿಷಯ ಇದೆ ಎಂದು ಹೇಳುತ್ತಾಳೆ. ನಿನ್ನ ಇನ್ನೊಂದು ಮಗು ಕಥೆಯನ್ನ ನಾನು ಆಲ್ ರೆಡಿ ಮುಗಿಸಿದೀನಿ, ಅಷ್ಟೊಂದು ತಲೆ ಮೇಲೆ ಹೊತ್ತು ಮೆರೆಸ್ತೀಯಾ ಅಲ್ಲ ನಿನ್ನ ಗಂಡನ್ನ ಅದೇ ನನ್ನ ಗೌತಮ್‌ನ ಅವನು ನಿನಗೆ ಎಂಥಾ ಮೋಸ ಮಾಡಿದಾನೆ ಅಂತಾ ಗೊತ್ತಾ ಎಂದು ಕೇಳುತ್ತಾಳೆ.


ಶಕುಂತಲಾ ಮಾತು ನಂಬದ ಭೂಮಿಕಾ

ಶಕುಂತಲಾಳ ಈ ಮಾತಿಗೆ ನಗುವ ಭೂಮಿಕಾ ಹೊಸ ಕಥೆ ಹೆಣಿತಿದೀರಾ ಎಂದು ಕೇಳುತ್ತಾಳೆ. ಇದಕ್ಕೆ ಕಥೆ ಅಲ್ಲ ನಿನ್ನ ವ್ಯಥೆ ಎಂದು ಶಕುಂತಲಾ ಹೇಳಿದ್ದು ನೀನು ತಿಳ್ಕೊಂಡಂತೆ, ಮನೆನಯವರೆಲ್ಲರು ಅಂದುಕೊಂಡಂತೆ ನಿನ್ನ ಹೊಟ್ಟೆಯಲ್ಲಿ ಇದ್ದಿದ್ದು ಒಂದು ಮಗು ಅಲ್ಲ ಎರಡು ಮಕ್ಕಳು ಎನ್ನುತ್ತಾಳೆ. ಶಕುಂತಲಾ ಮಾತು ಕೇಳಿ ಭೂಮಿಕಾ ಮತ್ತು ಮಲ್ಲಿಗೆ ಬರಸಿಡಿಲು ಬಡಿದಂತಾಗಿದ್ದು ಹುಟ್ಟಿದ್ದ ಹಾಗೇ ಆ ಮಗು ನಿನ್ನ ಕೈತಪ್ಪಿ ಹೋಗಿದೆ ಎನ್ನುತ್ತಾಳೆ.

ಪಿನ್ ಟು ಪಿನ್ ಕಥೆ ಹೇಳುವ ಶಕುಂತಲಾ

ಆದರೂ ಕೂಡ ಶಕುಂತಲಾ ಮಾತುಗಳನ್ನು ಭೂಮಿಕಾ ಒಪ್ಪದಿದ್ದಾಗ ಶಕುಂತಲಾ ಹಾಲಿನಲ್ಲಿ ವಿಷ ಬೆರಸಿದ್ದರಿಂದ ಹಿಡಿದು ಕಾಡಿನಲ್ಲಿ ಗೌತಮ್ ಮತ್ತು ಭೂಮಿಕಾ ಅನುಭವಿಸಿದ್ದ ನರಕಯಾತನೆಯ ಹಿಂದೆ ಇರುವ ತನ್ನ ಕೈವಾಡದ ಕುರಿತು ಕಥೆ ಹೇಳುತ್ತಾಳೆ.

ನಿನಗೆ ಡಿಲಿವರಿ ಆಗಬಾರದು ಎಂದು ಕೊನೆಯವರೆಗೆ ಪ್ರಯತ್ನ ಮಾಡಿದೆ, ರೌಡಿಗಳನ್ನು ಕಳುಹಿಸಿ ಅಟ್ಯಾಕ್ ಮಾಡಿಸಿದೆ, ಅಲ್ಲೂ ನಿನ್ನ ಅದೃಷ್ಟ ಕೈ ಹಿಡಿತು ಎನ್ನುವ ಶಕುಂತಲಾ ನಿನಗೆ ಮೊದಲು ಹುಟ್ಟಿದ್ದು ಹೆಣ್ಣು ಮಗು ಆದರೆ ನಿನಗೆ ಗೊತ್ತಾಗಿಲ್ಲ ಯಾಕೆಂದರೆ ನಿನಗೆ ಪ್ರಜ್ಞೆ ಇರಲಿಲ್ಲ ಆಮೇಲೆ ಆ ಮಗುನ ಆಸ್ಪತ್ರೆಯಿಂದ ನಾನು ಕಿಡ್ನಾಪ್ ಮಾಡಿಸಿದೆ ಎಂದು ಹೇಳುತ್ತಾಳೆ. ಆಗಲೇ ಇವನ ಕಥೆ ಮುಗಿಸಬೇಕಿತ್ತು ಆದರೆ ಮಿಸ್ ಆದಾ ಈ ಮಗು ನಿನ್ನ ರಕ್ತ ಹಂಚಿಕೊಂಡು ಹುಟ್ಟಿಲ್ಲ ನನ್ನ ದ್ವೇಷ ಹಂಚಿಕೊಂಡು ಕೂಡ ಹುಟ್ಟಿದೆ ಎಂದು ಹೇಳುತ್ತಾಳೆ. ಸಾಕ್ಷಿಯನ್ನು ಕೂಡ ತೋರಿಸುತ್ತಾಳೆ.

amruthadhaare-serial-september-3-episode-written-update

ದೂರವಾಗುತ್ತಾ ಜನುಮದ ಜೋಡಿ..?

ಭೂಮಿಕಾಗೆ ಸದ್ಯ ಕಹಿಸತ್ಯ ಗೊತ್ತಾಗಿದೆ. ನಿಂತ ನೆಲ ಕುಸಿದಂತಾಗಿದೆ. ಸತ್ಯ ತಿಳಿದಿರುವ ಭೂಮಿಕಾ ಈಗ ವಿಷಯ ಮುಚ್ಚಿಟ್ಟ ಗೌತಮ್‌ನಿಂದ ದೂರವಾಗುತ್ತಾಳಾ..? ಇಬ್ಬರ ಸಂಸಾರದಲ್ಲಿ ಇದೇ ವಿಚಾರಕ್ಕೆ ಬಿರುಕು ಮೂಡುತ್ತಾ..? ಭೂಮಿಕಾಗೆ ವಿಷಯ ಗೊತ್ತಾಗಿದೆ ಎಂದು ಗೊತ್ತಾದ ನಂತರ ಗೌತಮ್ ಹೇಗೆ ಪ್ರತಿಕ್ರಿಯಿಸುತ್ತಾನೆ..? ಕಳೆದ ಹೋದ ಹೆಣ್ಣು ಮಗುವನ್ನು ಭೂಮಿಕಾ ಹುಡುಕಲು ಮುಂದಾಗುತ್ತಾಳಾ..? ಅಥವಾ ಶಸ್ತ್ರ ತ್ಯಾಗ ಮಾಡಿ ತವರು ಮನೆ ಸೇರುತ್ತಾಳಾ..? ಎನ್ನುವುದು ಮುಂಬರುವ ದಿನಗಳಲ್ಲಿ ನೋಡಬೇಕಿದೆ. ರೋಚಕ ಘಟ್ಟವನ್ನು ಅಮೃತಧಾರೆ ಧಾರಾವಾಹಿ ಈಗ ತಲುಪಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X