Amruthadhaare ; ಅಯ್ಯೋ ಶಿವನೇ, ಕುಶಾಲನಗರದಿಂದಲೂ ಕಾಲ್ಕಿತ್ತ ಭೂಮಿಕಾ ? ಮುಂದಿನ ನಿಲ್ಧಾಣ ಯಾವುದು..?
''ಅಮೃತಧಾರೆ'' ಧಾರಾವಾಹಿಯಲ್ಲಿ ಕಿಡ್ನ್ಯಾಪ್ ಆಗಿದ್ದ ತನ್ನ ಮಗ ಆಕಾಶ್‌ನ ಗೌತಮ್ ಹುಡುಕಿ ಕಾಪಾಡಿದ್ದಾನೆ. ಪುಡಿ ರೌಡಿಗಳ ಜೊತೆ ಹೊಡೆದಾಡಿದ ಗೌತಮ್ ಎಂಎಲ್‌ಎ ಮೈ ಚಳಿ ಬಿಡಿಸಿದ್ದಾನೆ. ಮಾತು ನಡತೆಯ ಮೇಲೆ ನಿನಗೆ ನಿಗಾ ಇರಲಿ ಎಂದು ಎಚ್ಚರಿಸಿದ್ದಾನೆ. ಜನಪ್ರಿಯತೆಗೆ ಮತ್ತು ಸಾಧನೆಗೆ ವ್ಯತ್ಯಾಸ ಇದೆ ಎಂದು ಹೇಳಿರುವ ಗೌತಮ್ ನಮ್ಮದು ಗಂಡ ಹೆಂಡತಿ ಸಂಬಂಧ..
ಅಪ್ಪ-ಮಗನ ಸಂಬಂಧ ಅವರನ್ನು ಕಾಪಾಡುವ ಕಾವಲುಗಾರ ನಾನು ಎಂದು ಹೇಳಿದ್ದಾನೆ. ಹೆಂಡತಿ ಮತ್ತು ಮಗನ ತಂಟೆಗೆ ಬಂದರೆ ಪರಿಣಾಮ ಸರಿ ಇರಲ್ಲ ಎಂದು ಹೇಳಿ ಹೋಗಿದ್ದಾನೆ. ಇನ್ನೊಂದು ಕಡೆ ಮಗ ಮನೆಗೆ ಬರದಿರುವುದಕ್ಕೆ ಕಣ್ಣೀರು ಹಾಕುತ್ತಾ ಕುಂತಿರುವ ಭೂಮಿಕಾನ ಮಲ್ಲಿ ಸಮಾಧಾನ ಮಾಡುತ್ತಾಳೆ.

ಗೌತಮ್ ತನ್ನ ಮಗನನ್ನು ಮನೆಯ ಹೊರಗಡೆ ಬಿಟ್ಟಿದ್ದು, ಆಕಾಶ್ ಓಡಿಕೊಂಡು ಮನೆಗೆ ಬಂದಿದ್ದಾನೆ. ಆಕಾಶ್‌ನ ಕಂಡು ಕಣ್ಣೀರು ಹಾಕುವ ಭೂಮಿಕಾ ನಿನಗೇನು ಆಗಿಲ್ಲ ತಾನೇ ಎಂದು ಕೇಳುತ್ತಾಳೆ. ಆಗ ನನ್ನ ಫ್ರೆಂಡ್ ಹೀರೋ ತರ ಬಂದು ನನ್ನ ಕಾಪಾಡಿದರು ಎಂದು ಆಕಾಶ್ ಹೇಳಿದ್ದು, ಮಲ್ಲಿ ಮನೆಗೆ ಯಾಕೆ ಕರೆದುಕೊಂಡು ಬಂದಿಲ್ಲ ಎನ್ನುತ್ತಾಳೆ. ಇದಕ್ಕೆ ಎಮರ್ಜೆನ್ಸಿ ಕೆಲಸ ಇದೆ ಎಂದು ಅವರು ಹೋದರು ಎಂದು ಆಕಾಶ್ ಹೇಳುತ್ತಾನೆ.
ಈ ಕಡೆ ಮಗನನ್ನು ಮನೆಗೆ ಕಳುಹಿಸಿ ಮನೆಗೆ ಹೋಗದೆ ಹಾಗೇ ಬಂದ ಗೌತಮ್‌ಗೆ ಆನಂದ್ ಬುದ್ದಿ ಮಾತು ಹೇಳುತ್ತಾನೆ. ಕಬ್ಬಿಣ ಕಾದಾಗಲೇ ಹೊಡೆಯಬೇಕು ಈ ಸಮಯದಲ್ಲಿ ಮಾತನಾಡಿಸಿದ್ದರೆ ಅತ್ತಿಗೆ ಮಾತನಾಡುತ್ತಿದ್ದರು ಎನ್ನುತ್ತಾನೆ. ಆದರೆ ಗೌತಮ್ ಇಲ್ಲಾ ಭೂಮಿಕಾ ಏನಂಥ ನನಗೆ ಚೆನ್ನಾಗಿ ಗೊತ್ತು ಅವರಿಗೆ ತೊಂದರೆ ಕೊಡುವುದು ಬೇಡ ಎಲ್ಲದಕ್ಕೂ ಒಂದು ಸಮಯ ಅಂತ ಬರುತ್ತೆ ಕಾಯೋಣ ಎನ್ನುತ್ತಾನೆ.
ಭೂಮಿಕಾ ಮನಸನ್ನು ಮಲ್ಲಿ ಬದಲಿಸುವ ಪ್ರಯತ್ನ ಮಾಡುತ್ತಾಳೆ. ಆದರೆ ಒಳ್ಳೆಯವರಿಗೆ ಇಲ್ಲಿ ಬೆಲೆ ಇಲ್ಲ ಎನ್ನುವುದು ನನಗೆ ಐದು ವರ್ಷದ ಹಿಂದೆಯೇ ಗೊತ್ತಾಯ್ತು ಎನ್ನುವ ಭೂಮಿಕಾ ನಾವು ಇಬ್ಬರು ಮತ್ತೆ ಒಂದಾದರೆ ಮುಚ್ಚಿ ಹೋಗಿದ್ದ ಅಸೂಯೆ, ದ್ವೇಷ, ಹಗೆತನದ ಕೆಂಡ ಮತ್ತೆ ಉರಿಯುತ್ತೆ ಎಂದು ಹೇಳುತ್ತಾಳೆ. ಆ ಬೆಂಕಿಯಲ್ಲಿ ಗೌತಮ್ ಅವರು ಮತ್ತು ನನ್ನ ಮಗ ಸುಡುವುದು ಬೇಡ ಎಂದು ಹೇಳುತ್ತಾಳೆ.
ಭಾಗ್ಯಮ್ಮ ಬಳಿ ಹೋದ ಗೌತಮ್
ಸದ್ಯ ಇಂದು (ಅಕ್ಟೋಬರ್ 1) ಬಿಡುಗಡೆಯಾದ ಪ್ರೋಮೋದಲ್ಲಿ ಭಾಗ್ಯಮ್ಮ ಬಳಿ ಗೌತಮ್ ಬಂದಿದ್ದಾನೆ. ಭಾಗ್ಯಮ್ಮ ಎದುರು ಭೂಮಿಕಾ ಮತ್ತು ಮಗು ಸಿಕ್ಕಿರುವ ವಿಷಯ ಹೇಳಿದ್ದಾನೆ. ಭೂಮಿಕಾ ಮತ್ತು ಮೊಮ್ಮಗನನ್ನು ನೋಡುವ ಮಾತನಾಡುವ ಎಲ್ಲವನ್ನೂ ಸರಿಮಾಡುವ ಆಸೆಯನ್ನು ಭಾಗ್ಯಮ್ಮ ವ್ಯಕ್ತಪಡಿಸಿದ್ದು ಭಾಗ್ಯಮ್ಮನ ಕರೆದುಕೊಂಡು ಗೌತಮ್ ಮತ್ತೆ ಕುಶಾಲನಗರಕ್ಕೆ ಬಂದಿದ್ದಾನೆ.

ಮಲ್ಲಿ ಮಾತು ಒಪ್ಪದ ಭೂಮಿಕಾ
ಮಲ್ಲಿ ಎಷ್ಟೇ ಹೇಳಿದರೂ ಕೂಡ ಭೂಮಿಕಾ ಮಲ್ಲಿ ಮಾತನ್ನು ಕೇಳುತ್ತಿಲ್ಲ. ಬದಲಿಗೆ ತನ್ನ ವಾದವನ್ನೇ ಮಾಡುತ್ತಿದ್ಧಾಳೆ. ಆಕಾಶನ ಇವತ್ತು ನೀವು ಕಳೆದುಕೊಳ್ಳುತ್ತಿದ್ದ್ರೀ ಯಾರು ಕರೆದುಕೊಂಡು ಬಂದಿದ್ದು ಎಂದು ಮಲ್ಲಿ ಹೇಳಿದರು ಕೂಡ ಭೂಮಿಕಾದು ಅದೇ ಕಥೆ- ಅದೇ ವ್ಯಥೆ
ಎಂಎಲ್‌ಎ ಮನೆಗೆ ಬಂದ ಗೌತಮ್
ತನ್ನ ಮಗ ಕಿಡ್ನ್ಯಾಪ್ ಆದಾಗಲೇ ಎಂಎಲ್‌ಗೆ ಗೌತಮ್ ಎಚ್ಚರಿಕೆ ನೀಡಿದ್ದ. ಆದರೂ ಎಂಎಲ್‌ಎ ತನ್ನ ವರಸೆ ಮುಂದುವರೆಸಿದ್ದಾನೆ. ಈ ಹಿನ್ನೆಲೆ ಎಂಎಲ್‌ಎ ಮನೆಗೆ ಬಂದಿರುವ ಗೌತಮ್ ಎಲ್ಲರೆದರು ಎಂಎಲ್‌ಎ ಪಂಚೆ ಎಳೆದಿದ್ದಾನೆ.
ಕುಶಾಲನಗರದಿಂದ ಕಾಲ್ಕಿತ್ತ ಭೂಮಿಕಾ ?
ಎಂಎಲ್‌ಎ ಕೊಡುತ್ತಿರುವ ಕಿರುಕುಳದಿಂದ ಬೇಸತ್ತಾ ಅಥವಾ ಗೌತಮ್‌ನಿಂದ ದೂರ ಇರಬೇಕೆನ್ನುವ ಉದ್ದೇಶದಿಂದಲೋ ಸದ್ಯ ಭೂಮಿಕಾ ಕುಶಾಲನಗರವನ್ನು ಕೂಡ ತೊರೆದಂತೆ ಇದೆ. ಬಿಡುಗಡೆಯಾದ ಪ್ರೋಮೋ ನೋಡಿದ ನಂತರ ಹಲವರು ಕುಶಾಲನಗರದಿಂದ ಭೂಮಿಕಾ ಕಾಣೆಯಾದಳು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮತ್ತೆ ಭೂಮಿಕಾನ ಹುಡುಕಲು ಗೌತಮ್‌ಗೆ ಐದು ವರ್ಷ ಬೇಕಾಗುತ್ತೆ ಎನ್ನುತ್ತಿದ್ದಾರೆ. ಸದ್ಯ ಭಾಗ್ಯಮ್ಮ ಜೊತೆ ಗೌತಮ್ ಮತ್ತು ಆನಂದ್ ಭೂಮಿಕಾ ಮನೆಗೆ ಹೋಗಿದ್ದು ಇಂದು ಏನಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











