Amruthadhaare ; ಭೂಮಿಕಾ ಬೆನ್ನಲ್ಲೇ ಕಾಣೆಯಾದ ಮಲ್ಲಿ, ಗೌತಮ್ ಕೈಗೆ ಸಿಕ್ತು ಪತ್ನಿ ಬರೆದ ಪತ್ರ !
''ಅಮೃತಧಾರೆ'' ಧಾರಾವಾಹಿಯಲ್ಲಿ ಭೂಮಿಕಾ ಬೇಡ ಅಂದರೂ ಕೂಡ ಹಿಂದೆ ಹಿಂದೆ ಹೋಗಿರುವ ಮಲ್ಲಿಗೆ ಭೂಮಿಕಾ ಬುದ್ದಿವಾದ ಹೇಳುತ್ತಾಳೆ. ನೀನು ಬಂದರೆ ನಿನ್ನ ಜವಾಬ್ಧಾರಿಯನ್ನು ನೋಡಿಕೊಳ್ಳೋರು ಯಾರು..? ನಿನಗೆ ಉಜ್ವಲ ಭವಿಷ್ಯ ಇದೆ ಎಂದೆಲ್ಲಾ ಹೇಳುತ್ತಾಳೆ. ಮಲ್ಲಿ ಎಷ್ಟೇ ಮನವೊಲಿಸಲು ಪ್ರಯತ್ನ ಮಾಡಿದರು ಕೂಡ ಒಪ್ಪದ ಭೂಮಿಕಾ ಇಡೀ ಸಾಮ್ರಾಜ್ಯ ಕುಸಿದು ಬೀಳುತ್ತೆ. ನಿನ್ನ ನಂಬಿಕೊಂಡು ಸಾವಿರಾರು...
ಜನ ಇದ್ದಾರೆ ಮಲ್ಲಿ ಅವರನ್ನೆಲ್ಲ ಕೈ ಬಿಡಬೇಡ ಎಂದು ಹೇಳುತ್ತಾಳೆ. ಸಿಮ್ ಮುರಿದು ಹಾಕಿ ಮೊಬೈಲ್ ಬೀಸಾಕಿದ್ದಾಳೆ. ನಾನು ಬರೀ ಹೋಗ್ತಿಲ್ಲ ಮಲ್ಲಿ ಕಳೆದು ಹೋಗ್ತಿದ್ದೀನಿ ಇನ್ಮುಂದೆ ನಿಮ್ಮ ಯಾರ ಕಣ್ಣಿಗೂ ನಾನು ಕಾಣಿಸಲ್ಲ ಎಂದು ಬಸ್ ಹತ್ತಿ ಹೊರಡುತ್ತಾಳೆ.

ಮುಂದುವರೆದ ಶಕುಂತಲಾ ನಾಟಕ
ಮನೆಯಲ್ಲಿ ಅಪೇಕ್ಷಾ.. ಪಾರ್ಥ.. ಸೃಜನ್.. ಸುಧಾ ಆತಂಕದಲ್ಲಿದ್ದಾರೆ. ಈ ಸಮಯದಲ್ಲಿ ತನಗೇನೂ ಗೊತ್ತಿಲ್ಲ ಎನ್ನುವಂತೆ ಬರುವ ಶಕುಂತಲಾ ಯಾಕೆ ಇಷ್ಟು ಟೆನ್ಷನ್‌ನಲ್ಲಿದ್ದೀರಾ ಎಲ್ಲರೂ ಎಂದು ಕೇಳುತ್ತಾಳೆ.
ಆಗ ಭೂಮಿಕಾ ಬಗ್ಗೆ ಪಾರ್ಥ ವಿಚಾರಿಸಿದ್ದು ಗೌತಮ್‌ನ ಡ್ರಾಪ್ ಮಾಡಿ ಮಗು ಜೊತೆ ಬಂದಿದ್ದಳು, ನನಗೆ ಕೆಲಸ ಇತ್ತು ನಾನು ಹೊರಗಡೆ ಹೋಗಿದ್ದೇ ಈಗ ಬರ್ತಿದೀನಿ ಎಂದು ಹೇಳುತ್ತಾಳೆ. ಆಗ ಅತ್ತಿಗೆ.. ಮಗು.. ಮಲ್ಲಿ ಯಾರು ಕಾಣ್ತಿಲ್ಲವಲ್ಲ ಎಂದು ಪಾರ್ಥ ಹೇಳಿದಾಗ ಆತಂಕಗೊಂಡಂತೆ ಶಕುಂತಲಾ ಡ್ರಾಮಾ ಮಾಡುತ್ತಾಳೆ.
ಸತ್ಯ ಹೊರ ಬಂದರೆ ಸತ್ತಂತೆ
ಭೂಮಿಕಾ ಮತ್ತು ಮಲ್ಲಿ ಎಲ್ಲಿಯೂ ಕಾಣದ ಕಾರಣ ಗೌತಮ್‌ಗೆ ಪಾರ್ಥ ಕರೆ ಮಾಡಲು ಮುಂದಾಗುತ್ತಾನೆ. ಇದೇ ಸಮಯದಲ್ಲಿ ಗೌತಮ್ ಮನೆಗೆ ಬಂದ ನಂತರ ಭೂಮಿಕಾ ಮರಳಿ ಮನೆಗೆ ಬಂದರೆ ನಾನು ಬ್ಲಾಕ್ ಮೇಲ್ ಮಾಡಿದ್ದೆಲ್ಲಾ ವೇಸ್ಟ್ ಆಗುತ್ತೆ. ಸತ್ಯ ಹೊರ ಬಂದರೆ ನಾನು ಸತ್ತೆ ಎಂದೇ ಲೆಕ್ಕ ಎಂದು ಮನಸಿನಲ್ಲಿಯೇ ಶಕುಂತಲಾ ಅಂದುಕೊಳ್ಳುತ್ತಾಳೆ.
ಗೌತಮ್‌ಗೆ ಫೋನ್ ಮಾಡುವ ಪಾರ್ಥ
ಇತ್ತ ಶಾಪಿಂಗ್ ಮಾಡಿಕೊಂಡು ಬರುತ್ತಿರುವ ಗೌತಮ್‌ಗೆ ಪಾರ್ಥನ ಕರೆ ಬಂದಿದ್ದು ನಡೆದ ವಿಚಾರವನ್ನೆಲ್ಲಾ ಹೇಳಿ ಬೇಗ ಮನೆಗೆ ಬರುವಂತೆ ಪಾರ್ಥ ಹೇಳುತ್ತಾನೆ.

ಜೈದೇವ್‌ಗೆ ಫೋನ್ ಮಾಡುವ ಶಕುಂತಲಾ
ಜೈದೇವ್‌ಗೆ ಶಕುಂತಲಾ ಫೋನ್ ಮಾಡಿದ್ದು ವಿಷಯ ಇಷ್ಟು ಬೇಗ ಗೌತಮ್‌ಗೆ ಗೊತ್ತಾಯ್ತಾ, ಅವನು ಬರ್ತಾ ಇದ್ದಾನೆ ಅಂತ ಬೇರೆ ಹೇಳ್ತಿದ್ದೀಯ ಎಂದು ಜೈದೇವ್ ಕೇಳಿದ್ದು ಶಕುಂತಲಾ ಬರಲಿ ಬಿಡು ಎಂದು ಉಡಾಫೆಯ ಉತ್ತರ ಕೊಡುತ್ತಾಳೆ. ಇದಕ್ಕೆ ಭೂಮಿಕಾ ಜೊತೆ ಕೊನೆಯಲ್ಲಿ ಮಾತನಾಡಿದ್ದು ನೀನೆ ಎನ್ನುವ ಅನುಮಾನ ಬಂದೇ ಬರುತ್ತೆ ಎಂದು ಜೈದೇವ್ ಹೇಳಿದ್ದು ಗೌತಮ್‌ಗೆ ವಿಚಾರ ಗೊತ್ತಾದರೆ ನಮ್ಮ ಕಥೆ ಮುಗಿದಂತೆಯೇ ಎಂದು ಹೇಳುತ್ತಾನೆ. ಅವನು ಮೊದಲು ಬರಲಿ ಆಮೇಲೆ ನೋಡೋಣ ಎಂದು ಶಕುಂತಲಾ ಸಮಾಧಾನ ಮಾಡುತ್ತಾಳೆ.
ಮನೆಗೆ ಓಡೋಡಿ ಬಂದ ಗೌತಮ್
ಪಾರ್ಥ ಮಾತು ಕೇಳಿ ಗಾಬರಿಯಾಗಿರುವ ಗೌತಮ್ ಓಡೋಡಿ ಬಂದಿದ್ದು, ಪಾರ್ಥಗೆ ಆದ ಗಾಯ ಕಂಡು ಇನ್ನೂ ಗಾಬರಿಯಾಗಿದ್ದಾನೆ. ಭೂಮಿಕಾಗೆ ಏನೂ ಆಗಿಲ್ಲವಲ್ಲಾ ಎಂದು ಕೇಳುತ್ತಾನೆ. ಆಗ ಪಾರ್ಥ ಅತ್ತಿಗೆ ಮನೆಗೆ ಬಂದಿದ್ದರು ಆದರೆ ಈಗ ಕಾಣ್ತಿಲ್ಲ ಎಂದು ಹೇಳಿದ್ದು ಶಕುಂತಲಾಗೆ ಗೌತಮ್, ನೀವು ಭೂಮಿಕಾನ ನೋಡಲಿಲ್ವಾ ಎಂದು ಕೇಳುತ್ತಾನೆ. ಆಗ ಶಕುಂತಲಾ ಮತ್ತೆ ನಾಟಕವಾಡಿದ್ದು ನನಗೇನು ಗೊತ್ತಿಲ್ಲ ಎಂದು ಹೇಳುತ್ತಾಳೆ. ನಿನ್ನ ಜೊತೆ ಮಾತನಾಡಬೇಕು ಬಾ ಎಂದು ಕರೆದುಕೊಂಡು ಹೋಗುತ್ತಾಳೆ.
ನಾನು ಮನೆಯಲ್ಲಿಯೇ ಇದ್ದೇ ಎಂದ ಶಕುಂತಲಾ
ಗೌತಮ್‌ನ ರೂಮ್‌ಗೆ ಕರೆದುಕೊಂಡು ಬಂದಿರುವ ಶಕುಂತಲಾ, ಅವಳು ಬಂದಾಗ ನಾನು ಮನೆಯಲ್ಲಿಯೇ ಇದ್ದೇ ಎನ್ನುತ್ತಾಳೆ. ಶಕುಂತಲಾ ಮಾತು ಕೇಳಿ ಗೌತಮ್ ಶಾಕ್ ಆಗಿದ್ದು ಮನೆಯಲ್ಲಿದ್ದಾಗಲೇ ಮನೆ ಬಿಟ್ಟು ಹೋದರಾ? ಯಾಕೆ ಹೀಗೆ ಮಾಡಿದರು ? ಎನ್ನುತ್ತಾನೆ. ಆಗ ಇನ್ನೊಂದು ಮಗು ವಿಚಾರ ಅವಳಿಗೆ ಗೊತ್ತಾಗಿದೆ ಎಂದು ಶಕುಂತಲಾ ಹೇಳಿದ್ದು ಇನ್ನೊಂದು ಮಗು ವಿಚಾರ ಅವರಿಗೆ ಹೇಗೆ ಗೊತ್ತಾಯ್ತು ? ಹೇಗೆ ಸಾಧ್ಯ ? ಎನ್ನುತ್ತಾನೆ. ಆಗ ಶಕುಂತಲಾ ತನ್ನ ನಾಟಕ ಮುಂದುವರೆಸುತ್ತಾಳೆ.
ಭೂಮಿಕಾ ಹೆಸರಿನಲ್ಲಿ ಪತ್ರ ಬರೆದ ಶಕುಂತಲಾ
ಸದ್ಯ ಇಂದು (ಸೆಪ್ಟೆಂಬರ್ 7) ಬಿಡುಗಡೆಯಾದ ಪ್ರೋಮೋದಲ್ಲಿ ಜೈದೇವ್ ನಾವ್ಯಾಕೇ ಭೂಮಿಕಾ ಹೆಸರಿನಲ್ಲಿ ಪತ್ರ ಬರೆಯಬಾರದು ಎನ್ನುವ ಐಡಿಯಾ ನೀಡಿದ್ದಾನೆ. ಅದ್ರಂತೆ ಶಕುಂತಲಾ ಕೆಲಸದವರು ಮನೆ ಕ್ಲೀನ್ ಮಾಡುವಾಗ ಒಂದು ಲೆಟರ್ ಸಿಕ್ತು ಎಂದು ತಂದು ಕೊಟ್ಟಿದ್ದಾರೆ ಎಂದು ಪತ್ರವನ್ನು ಗೌತಮ್‌ಗೆ ಕೈಗೆ ಕೊಡುತ್ತಾಳೆ. ಎಂದಿನಂತೆ ಗೌತಮ್ ಆ ಪತ್ರವನ್ನು ಬರೆದಿದ್ದು ಭೂಮಿಕಾನೇ ಎಂದು ನಂಬಿದ್ದು ಇಂದು ಏನಾಗಲಿದೆ ..? ಗೌತಮ್ ಎದುರು ಶಕುಂತಲಾ ಮುಖವಾಡ ಎಂದು ಕಳಚಿ ಬೀಳಲಿದೆ..? ಭೂಮಿಕಾನ ಹುಡುಕುತ್ತಾ ಗೌತಮ್ ಹೊರಡುವುದು ಯಾವಾಗ ? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











