Amruthadhaare:ಜೈ ದೇವ್‌ ನಡೆಗೆ ಕೋಪಗೊಂಡ ಗೌತಮ್; ಅಣ್ಣನ ನೋಡಿ ತಮ್ಮ ಶಾಕ್?

By ಪೂರ್ವ

ಗೌತಮ್‌ಗೆ ಜೈ ದೇವ್ ಮೇಲೆ ಬಹಳ ಸಂದೇಹ ಮೂಡಿದೆ. ಆತನಿಗಾದರೂ ಜೈ ದೇವ್ ಹಳೆಯ ಚಾಳಿಗಳನ್ನು ಬಿಟ್ಟು ಆತ ಒಳ್ಳೆಯ ಮನುಷ್ಯ ಆಗಬೇಕು. ಹಾಗೆಯೇ ಆತ ಮಲ್ಲಿಯನ್ನು ಬಿಟ್ಟು ಎಲ್ಲಿಯೂ ಹೋಗಬಾರದು ಎನ್ನುವುದು ಗೌತಮ್ ಮನದಲ್ಲಿರುತ್ತದೆ. ಈ ಕಾರಣಕ್ಕಾಗಿಯೇ ಗೌತಮ್, ಜೈ ದೇವ್ ಹಿಂದೆ ಬಿದ್ದಿದ್ದಾನೆ. ಜೈ ದೇವ್ ಹಾಗೂ ಮಲ್ಲಿಯ ಬಳಿ ಮೆತ್ತಗೆ ಮಾತನಾಡಿ ಅಣ್ಣನ ಬಳಿ ನಾನು ಮನೆಯ ಆಚೆ ಹೋಗಬೇಕು. ಇದನ್ನು ಅಣ್ಣನ ಬಳಿ ಹೇಳು ಮಲ್ಲಿ ಎಂದು ಹೇಳುತ್ತಾನೆ. ಆಗ ಮಲ್ಲಿ "ನಾನು ಬಾವನ ಬಳಿ ಮಾತನಾಡುತ್ತೇನೆ" ಎಂದು ಹೇಳಿ ಗೌತಮ್ ಬಳಿ ಈ ವಿಚಾರ ಪ್ರಸ್ತಾಪ ಮಾಡುತ್ತಾಳೆ ಒಪ್ಪಿಗೆಯನ್ನು ಕೂಡ ಪಡೆದುಕೊಂಡು ಗಂಡನ ಬಳಿಗೆ ಬರುತ್ತಾಳೆ.

ಆಗ ಜೈದೇವ್‌ಗೆ ಬಹಳ ಖುಷಿಯಾಗುತ್ತೆ. ಈ ಮುಂಚೆಯೇ ಜೈದೇವ್ ಆತನ ಪ್ರೇಯಸಿಗೆ ಕರೆ ಮಾಡಿ ಮಾತಾಡುತ್ತಾನೆ. ಇವತ್ತು ಭೇಟಿ ಮಾಡುವುದಾಗಿ ಹೇಳಿರುತ್ತಾನೆ. ಇನ್ನು ಜೈದೇವ್ ನೇರವಾಗಿ ಪ್ರೇಯಸಿಯ ಮನೆಗೆ ಹೋಗುತ್ತಾನೆ. ಅದೇ ವೇಳೆ ಜೈ ದೇವ್ ಜಾಡು ಹಿಡಿದು ಗೌತಮ್ ಕೂಡ ಅವನ ಪ್ರೇಯಸಿಯ ಮನೆಗೆ ಹೋಗುತ್ತಾನೆ. ಅಲ್ಲಿ ಏನು ನಡೆಯುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ನೋಡುತ್ತಾನೆ. ಜೈದೇವ್‌ನನ್ನ ನೋಡುತ್ತಿದ್ದ ಹಾಗೆ ಆತನ ಪ್ರೇಯಸಿ ಬೈಯುತ್ತಾಳೆ.

Amruthadhaare serial September 6th episode update

"ಇತ್ತೀಚಿನ ದಿನಗಳಲ್ಲಿ ನನ್ನನ್ನ ಬಹಳ ಸೈಡ್ ಲೈನ್ ಆಗಿ ಮಾಡುತ್ತಿದ್ದೀರ. ನಿಮಗೆ ನನ್ನ ಮೇಲೆ ಪ್ರೀತಿಯೇ ಇಲ್ಲ ಎಂದೆಲ್ಲ ಹೇಳುತ್ತಿರುವಾಗ ಜೈದೇವ್ ಏನೇನೋ ಸಬೂಬು ಹೇಳುತ್ತಿರುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಗೌತಮ್ ಬಂದು ಇಲ್ಲಿ ಏನು ನಡೆಯುತ್ತಿದೆ ಎಂದು ಜೋರಾಗಿ ಕೇಳುತ್ತಾನೆ. ಅಣ್ಣನನ್ನು ನೋಡಿ ಜೈ ದೇವ್‌ಗೆ ಶಾಕ್ ಆಗುತ್ತೆ. ಇದಕ್ಕಿಂತ ಮುಂಚಿತವಾಗಿ ಭೂಮಿಕಾ ತನ್ನ ಗಂಡನ ಬಳಿ ಅಪೇಕ್ಷಾ ಹಾಗೂ ಪಾರ್ಥ ಜೀವನದ ಬಗ್ಗೆ ಮಾತನಾಡುತ್ತಿರುತ್ತಾಳೆ. ಅವರಿಬ್ಬರ ನಡುವೆ ಅಷ್ಟೊಂದು ಸಮರಸ್ಯ ಇಲ್ಲದೆ ಇರುವುದು ಭೂಮಿಕಾ ಕಣ್ಣಿಗೆ ಕಾಣಿಸುತ್ತೆ.

ಅತ್ತೆಯ ಜೊತೆ ಕಾಲ ಕಳೆಯುತ್ತಿರುವ ಅಪ್ಪಿ

ಅಪೇಕ್ಷಾ ಎಷ್ಟು ಹೊತ್ತಿಗೂ ತನ್ನ ಅತ್ತೆ ಜೊತೆಗೆ ಅಥವಾ ಒಬ್ಬಳೇ ಕಾಲ ಕಳೆಯುತ್ತಿರುತ್ತಾಳೆ. ಇದನ್ನು ನೋಡಿ ಭೂಮಿಕಾ ತನ್ನ ಗಂಡನ ಬಳಿ ಎಲ್ಲ ವಿಷಯವನ್ನು ಹೇಳುತ್ತಾಳೆ. ಇನ್ನು ಇದನ್ನೆಲ್ಲ ಕೇಳಿ ಗೌತಮ್ ಸುಮ್ಮನೆ ಇರುತ್ತಾನೆ. ಅದಕ್ಕೆ ನಾವೇನು ಮಾಡಲು ಆಗುವುದಿಲ್ಲ ಎಂದೂ ಹೇಳುತ್ತಾನೆ. ಹಾಗೆ ಭೂಮಿಕಾಗೆ ಒಂದು ಉಪಾಯ ಹೊಳೆಯುತ್ತೆ. ಅಪೇಕ್ಷಾ ಮುಂದೆ ನಾವಿಬ್ಬರೂ ಕೂಡ ಪ್ರೀತಿಯಿಂದ ಇರುವ ಹಾಗೆ ನಾಟಕವನ್ನು ಮಾಡಬೇಕು. ಆಗ ಆಕೆಯ ಮನಸ್ಸಲ್ಲೂ ತನ್ನ ಗಂಡನ ಜೊತೆಗೆ ಹೀಗೆ ಕಾಲ ಕಳೆಯಬೇಕು ಎನ್ನುವುದು ಬರುತ್ತೆ. ನಾವು ಯಾಕೆ ಆಕೆ ಎದುರು ನಾಟಕವನ್ನು ಮಾಡಬಾರದು ಎಂದು ಭೂಮಿಕಾ ಗೌತಮ್‌ಗೆ ಐಡಿಯಾ ಕೊಡುತ್ತಾಳೆ.

ತಂಗಿ ಎದುರು ಅಕ್ಕನ ನಾಟಕ

ಮೊದಲೇ ಉಪಾಯ ಮಾಡಿದಂತೆ ಗೌತಮ್ ಕೂಡ ನಡೆದುಕೊಳ್ಳುತ್ತಾನೆ. ಅಪೇಕ್ಷಾ ಬರುವುದನ್ನು ನೋಡಿ ಭೂಮಿಕಾ ಹಾಗೂ ಗೌತಮ್ ಮುತ್ತು ಕೊಡುವ ಹಾಗೆ ಅಥವಾ ತಬ್ಬಿಕೊಳ್ಳುವ ಹಾಗೆ ನಾಟಕವನ್ನು ಮಾಡುತ್ತಿರುತ್ತಾರೆ. ಇನ್ನು ಅಪೇಕ್ಷಾಗೆ ಬಹಳ ಬೇಸರವಾಗುತ್ತದೆ. ಅಕ್ಕ ಬಾವನ ಜೊತೆ ಅದೆಷ್ಟು ಕ್ಲೋಸ್ ಆಗಿ ಇರುತ್ತಾಳೆ. ಆದರೆ ನಾನು ಕೂಡ ನನ್ನ ಗಂಡ ಜೊತೆ ಹಾಗೇ ಇರಬೇಕು ಎಂದು ಅಂದುಕೊಳ್ಳುತ್ತಾಳೆ.

Amruthadhaare serial September 6th episode update

ಗಂಡನ ಜೊತೆ ಅಪ್ಪಿ ಜಗಳ

ಇನ್ನೂ ಅಪ್ಪಿ ತನ್ನ ಗಂಡ ಪಾರ್ಥನ ಜೊತೆಗೆ ಇರಲು ಬಹಳ ಹಾತೊರೆಯುತ್ತಿದ್ದಾಳೆ . ಹಾಗೆಯೇ ಪಾರ್ಥ ತನ್ನ ಕೈಗೆ ಎಷ್ಟು ಬೇಗ ಸಿಗುತ್ತಾನೆ ಎಂದು ಕಾಯುತ್ತಿರುತ್ತಾಳೆ. ತನ್ನ ಗಂಡ ತನ್ನ ಜೊತೆ ಮೊದಲಿನ ಹಾಗೆ ಇಲ್ಲವೇ ಇಲ್ಲ ಎನ್ನುವುದೇ ಆಕೆಯ ವಾದ. ಇದಕ್ಕಾಗಿ ಪಾರ್ಥ ಹಾಗೂ ಅಪ್ಪಿಯ ನಡುವೆ ಬಹಳ ದೊಡ್ಡ ಸಂಘರ್ಷವೇ ಏರ್ಪಟ್ಟಿದೆ.

More from Filmibeat

English summary
Amruthadhaare serial September 6th episode update
Read more about: serial poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X