Amruthadhaare ; ಗೌತಮ್ ಎದುರು ಕಳಚಿ ಬಿತ್ತು ಶಕುಂತಲಾ ಮುಖವಾಡ, ಇನ್ಮುಂದೆ ಶುರು ಕೋಟ್ಯಾಧಿಪತಿಯ ವನವಾಸ

''ಅಮೃತ ಧಾರೆ'' ಧಾರಾವಾಹಿಯಲ್ಲಿ ಮನೆಯಾಚೆ ಹೋದ ಭೂಮಿಕಾ ನೆನಪಿನಲ್ಲಿ ಗೌತಮ್ ಇದ್ದಾನೆ. ಎರಡು ಮಕ್ಕಳ ಸತ್ಯ ಗೊತ್ತಾಗಿದ್ದಕ್ಕೆ ಭೂಮಿಕಾ ಮನೆಯಿಂದ ಹೊರ ಹೋಗಿದ್ದು ಎಂದುಕೊಂಡು ನೊಂದುಕೊಂಡಿದ್ದಾನೆ. ಗೌತಮ್‌ ಮನೆಗೆ ಪೊಲೀಸರು ಬಂದಿದ್ದು ಭೂಮಿಕಾ ಅವರನ್ನು ಹುಡುಕುವ ಪ್ರಯತ್ನ ಮಾಡುತ್ತಿರುವುದಾಗಿ ಹೇಳುತ್ತಾರೆ. ಕೆಲ ಸಿಸಿಟಿವಿ ದೃಶ್ಯಗಳು ನಮಗೆ ಸಿಕ್ಕಿವೆ ಅವುಗಳನ್ನು ನಿಮಗೆ ತೋರಿಸಲು ಬಂದೆ ಎಂದು ಹೇಳಿ ಮಗು ಜೊತೆ ಭೂಮಿಕಾ ಅಲೆಯುತ್ತಿರುವ ದೃಶ್ಯಗಳನ್ನು ತೋರಿಸುತ್ತಾರೆ.

ಈ ದೃಶ್ಯಗಳನ್ನು ನೋಡಿ ಗೌತಮ್ ಮತ್ತಷ್ಟು ಭಾವುಕನಾಗುತ್ತಾನೆ. ಜೈದೇವ್ ಮತ್ತೊಂದು ಮನೆಹಾಳು ಐಡಿಯಾವನ್ನು ಶಕುಂತಲಾಗೆ ನೀಡಿದ್ದು, ಶಕುಂತಲಾ ಭೂಮಿಕಾ ಹೆಸರಿನಲ್ಲಿ ಪತ್ರ ಬರೆದಿದ್ದಾಳೆ.

amruthadhaare-serial-september-8-episode-written-update


ಪತ್ರ ಓದುವ ಪಾರ್ಥ


ಮನೆ ಕೆಲಸದವರು ಮನೆ ಕ್ಲೀನ್ ಮಾಡುವಾಗ ಒಂದು ಲೆಟರ್ ಸಿಕ್ತು ಎಂದು ತಂದು ಕೊಟ್ಟಿದ್ದಾರೆ ಎಂದು ಪತ್ರವನ್ನು ಗೌತಮ್‌ಗೆ ಕೈಗೆ ನೀಡುತ್ತಾಳೆ. ಎಂದಿನಂತೆ ಗೌತಮ್ ಆ ಪತ್ರವನ್ನು ಬರೆದಿದ್ದು ಭೂಮಿಕಾನೇ ಎಂದು ನಂಬಿದ್ದು ನೀವು ನನ್ನ ಹುಡುಕಿಸುವ ಪ್ರಯತ್ನ ಮಾಡಬೇಡಿ ಯಾಕೆಂದರೆ ಅದು ವ್ಯರ್ಥ, ನಾನು ನಿಮಗೆ ಇನ್ನೆಂದೂ ಸಿಗುವುದಿಲ್ಲ, ನೀವೆಲ್ಲಾ ಮೋಸಗಾರರು.. ನನಗೆ ಹುಟ್ಟಿದ್ದು ಎರಡು ಮಕ್ಕಳು,ಮಗು ಕಾಣೆಯಾದ ವಿಚಾರ ನನ್ನಿಂದ ಮುಚ್ಚಿಟ್ಟಿದ್ದೀರಾ ಪಾರ್ಥ ಆ ಪತ್ರವನ್ನು ಓದುತ್ತಾನೆ. ಎರಡು ಮಕ್ಕಳ ವಿಚಾರ ತಿಳಿದು ಮನೆಯವರೆಲ್ಲಾ ಶಾಕ್ ಆಗಿದ್ದು ಶಕುಂತಲಾ ಒಳಗೊಳಗೆ ಖುಷಿ ಪಡುತ್ತಾಳೆ.

ಗೌತಮ್ ಎದುರು ಕಳಚಿ ಬಿತ್ತು ಶಕುಂತಲಾ ಮುಖವಾಡ

ಕಳೆದ ಕೆಲ ದಿನಗಳ ಹಿಂದೆ ಅಮೃತಧಾರೆ ಧಾರಾವಾಹಿ ರಣ ರೋಚಕ ತಿರುವು ಪಡೆಯುತ್ತಿರುವ ವಿಚಾರ ಜಗಜ್ಜಾಹೀರಾಗಿತ್ತು. ಭೂಮಿಕಾ ಮನೆಯಿಂದ ಹೊರಗಡೆ ಹೋದ ಬೆನ್ನಲ್ಲಿಯೇ, ಶಕುಂತಲಾ ತನ್ನ ಮುದ್ದಿನ ಮಗ ಜೈದೇವ್ ಜೊತೆ ಸಂಭ್ರಮ ಪಡುತ್ತಿದ್ದಾಗ ಗೌತಮ್ ಎದುರು ಶಕುಂತಲಾ ಮುಖವಾಡ ಕಳಚಿ ಬಿದ್ದಂತೆ ಪ್ರೋಮೋವನ್ನು ಬಿಡುಗಡೆ ಮಾಡಲಾಗಿತ್ತು. ಅಂದಿನಿಂದ ಹಲವರು ಈ ದಿನಕ್ಕೆ ಕಾಯುತ್ತಿದ್ದರು. ಅದ್ರಂತೆ ಆ ದಿನ ಈಗ ಬಂದಿದ್ದು ಇಂದು (ಸೆಪ್ಟೆಂಬರ್9) ಬಿಡುಗಡೆಯಾದ ಪ್ರೋಮೋದಲ್ಲಿ ಭಾಗ್ಯಮ್ಮನ ಸಹಾಯದಿಂದ ಗೌತಮ್ ಸತ್ಯ ಗೊತ್ತಾಗಿದೆ.

amruthadhaare-serial-september-8-episode-written-update

ಭಾಗ್ಯಮ್ಮ ಜೊತೆ ಸೃಜನ್‌ನ ಕರೆದುಕೊಂಡು ಗೌತಮ್ ಮನೆಗೆ ಹೋಗಿದ್ದು, ಅಲ್ಲಿ ಜೈದೇವ್, ದಿಯಾ ಮತ್ತು ಶಕುಂತಲಾ ಮಾತನಾಡುತ್ತಾ ಕುಳಿತುಕೊಂಡಿರುತ್ತಾರೆ. ನನಗೆ ಖುಷಿಯಾಗಿದೆ ಎಂದು ಜೈದೇವ್ ಹೇಳುತ್ತಾನೆ. ಇದೇ ಸಮಯದಲ್ಲಿ ಅಲ್ಲಿಗೆ ಬರುವ ಗೌತಮ್ ಯಾಕಮ್ಮ ಹೀಗೆ ಮಾಡಿದ್ರೀ, ನಾನು ನಿಮಗೇನು ಅನ್ಯಾಯ ಮಾಡಿದ್ದೇ ಎಂದು ಪ್ರಶ್ನೆ ಕೇಳುತ್ತಾನೆ. ಒಂದು ವೇಳೆ ನನ್ನ ಮನಸಿನಲ್ಲಿ ಹಾಗೇನಾದರೂ ಇದ್ದಿದ್ದರೆ ನನ್ನ ಅಪ್ಪ ಯಾವತ್ತು ಈ ಐವರ ಜವಾಬ್ಧಾರಿ ನಿಂದು ಎಂದು ಕೈಗೆ ಒಪ್ಪಿಸಿ ಹೋದ್ರಲ್ಲ ಅವತ್ತೇ ನಾನು ನಿಮ್ಮನ್ನು ಬೀದಿ ಪಾಲು ಮಾಡಬಹುದಿತ್ತು ಎಂದು ಹೇಳುತ್ತಾನೆ.

ಮನೆಯ ಸದಸ್ಯರಾದ ಪಾರ್ಥ, ಅಪೇಕ್ಷಾ, ಸುಧಾ, ಸೃಜನ್, ಮತ್ತು ಗೆಳೆಯನ ಆನಂದನ ಮುಂದೆ ಗೌತಮ್ ಈ ಮಾತುಗಳನ್ನು ಹೇಳಿದ್ದು, ನಿಮಗೇನು ಬೇಕು ಅದು ಸಿಗುತ್ತೆ ಎಂದು ಹೇಳಿ ಆಸ್ತಿ ಪತ್ರಗಳನ್ನು ನೀಡಿದ್ದಾನೆ. ಇವತ್ತಿಗೆ ನನ್ನ ಮತ್ತು ಈ ಮನೆಯ ಋಣ ಮುಗೀತು ನಾನು ನೆಮ್ಮದಿಯನ್ನು ಹುಡುಕಿಕೊಂಡು ಹೊರಡ್ತೀನಿ ಮನೆಯಾಚೆ ಹೊರಡುತ್ತಾನೆ.

ಐದು ವರ್ಷಗಳ ನಂತರದ ಕಥೆ

ಈ ಹಿಂದೆಯೇ ತೋರಿಸಲಾದಂತೆ ಸದ್ಯ ಕಥೆ ಐದು ವರ್ಷದ ನಂತರ ತೆರೆದುಕೊಳ್ಳಲಿದ್ದು, ಮನೆಯಿಂದ ಹೊರ ಬಂದ ಗೌತಮ್ ಆರಂಭದ ಕೆಲ ದಿನಗಳು ಭೂಮಿಕಾಗಾಗಿ ಹುಡುಕಾಟ ನಡೆಸುವ ಸಾಧ್ಯತೆ ಇದೆ. ಆ ನಂತರ 5 ವರ್ಷದ ಹುಡುಕಾಟದ ನಂತರ ಕಥೆಯಲ್ಲಿ ಭೂಮಿಕಾ ಮತ್ತು ಗೌತಮ್ ಮುಖಾಮುಖಿಯಾಗಲಿದ್ದು ಈ ಸಂಚಿಕೆ ಎಂದಿನಿಂದ ಆರಂಭವಾಗಲು ಇನ್ನೆಷ್ಟು ದಿನ ಬೇಕಾಗುತ್ತೆ ಎನ್ನುವುದನ್ನು ನೋಡಬೇಕಿದೆ. 5 ವರ್ಷದ ನಂತರದ ಕಥೆಯಲ್ಲಿ ಗೌತಮ್ ಕ್ಯಾಬ್ ಡ್ರೈವರ್ ಆಗಿದ್ದು ಭೂಮಿಕಾ ಮತ್ತು ಗೌತಮ್ ಒಂದಾಗುತ್ತಾರಾ ? ಅಥವಾ ಪರಿಚಯ ಇರದಂತೆ ಮೊನ್ನೆ ಬಿಡುಗಡೆಯಾಗಿದ್ದ ಪ್ರೋಮೋದಲ್ಲಿ ವರ್ತಿಸಿದ್ದ ಭೂಮಿಕಾ, ಗೌತಮ್‌ನಿಂದ ದೂರವಾಗುತ್ತಾಳಾ ? ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X