ಶಕುಂತಲಾ ದೇವಿ ಪ್ಲ್ಯಾನ್ ಭೂಮಿಕಾಗೆ ತಿಳೀತಾ? ಭೂಮಿಕಾ ಪಾಠ ಕಲಿಸುತ್ತಾಳಾ?

By ಪೂರ್ವ

ಭೂಮಿಕಾಗೆ ತನ್ನ ಗಂಡ ಇಷ್ಟೆಲ್ಲ ಕಷ್ಟಪಟ್ಟು ಯಾಕೆ ಹರಕೆಯನ್ನು ಹೊತ್ತಿದ್ದಾರೆಂದು ಯೋಚನೆ ಮಾಡುತ್ತಿರುತ್ತಾಳೆ. ಗೌತಮ್ ಬಗ್ಗೆ ಬಹಳ ಗೌರವ ಹಾಗೆಯೇ ಪ್ರೀತಿ ಹುಟ್ಟಿರುತ್ತೆ. ಆಕೆಗೆ ತನ್ನ ಗಂಡ ಕಷ್ಟ ಪಡುವುದನ್ನು ನೋಡಲು ಸಾಧ್ಯವಿಲ್ಲ. ಆದ ಕಾರಣ ಭೂಮಿಕಾಗೆ ಸಿಕ್ಕಾಪಟ್ಟೆ ಬೇಸರ ಆಗಿರುತ್ತೆ. ಶಕುಂತಲಾ ದೇವಿ ಹಾಗೂ ಆಕೆಯ ಮಗಳು ಮಾತನಾಡುತ್ತಿರುವುದನ್ನು ನೋಡಿದ ಮಲ್ಲಿ, ಇವರಿಬ್ಬರೂ ಏನೋ ಗುಟ್ಟಾಗಿ ಮಾತನಾಡುತ್ತಿದ್ದಾರೆ ಎಂಬುವುದನ್ನು ಕಿವಿಗೊಟ್ಟು ಕೇಳಿದಾಗ ಅಸಲಿ ವಿಚಾರ ತಿಳಿದು ಶಾಕ್ ಆಗುತ್ತೆ.

ಭೂಮಿಕಾಗೆ ತನ್ನ ಗಂಡ ಹಾಗೂ ತನ್ನನ್ನು ದೂರ ಮಾಡಲು ಇದೆಲ್ಲ ಪ್ಲಾನ್ ಮಾಡುತ್ತಿದ್ದಾರೆ ಎನ್ನುವ ಚಿಕ್ಕ ಮಾಹಿತಿ ಕೂಡ ಇರುವುದಿಲ್ಲ. ಆದರೆ, ಮಲ್ಲಿಗೆ ತನ್ನ ಅತ್ತೆ ಮಾಡುತ್ತಿರುವ ಕುತಂತ್ರದ ವಿಚಾರ ಆಕೆಗೆ ತಿಳಿಯುತ್ತದೆ. ಭೂಮಿಕಗಾಗಿ ಗೌತಮ್ ದೇವಸ್ಥಾನದಲ್ಲಿ ಹರಕೆಯನ್ನು ತೀರಿಸುತ್ತಿರುತ್ತಾರೆ. ಆದಾದ ಬಳಿಕ ಗೌತಮ್‌ಗೆ ಮೈ ಹುಷಾರು ತಪ್ಪುತ್ತೆ.

Amruthadhaare Serial Today Episode Does Bhumika know Shakuntala Devi s plan 10th April

ಆದರೂ, ಕೂಡ ಆತ ಏನು ಆಗಿಲ್ಲ ಎಂಬಂತೆಯೇ ಇರುತ್ತಾನೆ. ಆದರೆ, ಇದೆಲ್ಲ ಭೂಮಿಕಾಗೆ ಸಹಿಸಲು ಆಗುತ್ತಿಲ್ಲ. ಏನು ಮಾಡಬೇಕು ಎಂದು ತಿಳಿಯದೇ ಸುಮ್ಮನಾಗುತ್ತಾರೆ. ಇನ್ನೂ ಮಲ್ಲಿಗೆ ನಿಜ ವಿಚಾರ ತಿಳಿಯುತ್ತದೆ. ಹಾಗೆ ಇದೆಲ್ಲವನ್ನು ಭೂಮಿಕಾ ಬಳಿ ಹೇಳಬೇಕು ಎಂದು ಆಲೋಚಿಸುತ್ತಿರುವಾಗಲೇ ಭೂಮಿಕಾ ಮನೆಯಿಂದ ಹೊರಗೆ ಬರುತ್ತಾರೆ. ಗೌತಮ್ ಆರೋಗ್ಯ ವಿಚಾರಿಸಿಕೊಂಡ ಮಲ್ಲಿ, ಆ ಬಳಿಕ ಅತ್ತೆ ಶಕುಂತಲಾ ದೇವಿ ಮಾಡುತ್ತಿರುವ ಕೆಟ್ಟ ಕೆಲಸವನ್ನು ಹೇಳುತ್ತಾಳೆ.

ಗೌತಮ್ ಮೇಲೆ ಭೂಮಿಕಾಗೆ ಪ್ರೀತಿ

"ಗೌತಮ್ ನಿಮಗಾಗಿ ಈ ವೃತ ಆಚರಣೆಯನ್ನು ಮಾಡುತ್ತಿದ್ದಾರೆ. ನೀವು ಚೆನ್ನಾಗಿರಬೇಕು ಎನ್ನುವ ದೃಷ್ಟಿಯಿಂದ ಅವರು ಹರಕೆ ಕಟ್ಟಿಕೊಂಡು ನಿಮಗಾಗಿ ದೇವರ ಬಳಿ ಪ್ರಾರ್ಥನೆ ಮಾಡುತ್ತಿದ್ದಾರೆ." ಎಂದು ಮಲ್ಲಿ ಹೇಳುತ್ತಾಳೆ. ಹಾಗೇ "ಇದಕ್ಕೆಲ್ಲ ಕಾರಣ ಅತ್ತೆ ಶಕುಂತಲಾ ದೇವಿ. ಜ್ಯೋತಿಷಿಯನ್ನು ಕರೆಸಿ ಸುಳ್ಳು ಹೇಳಿಸಿದ್ದಾರೆ. ನೀವು ಇಬ್ಬರು ಒಂದಾದರೆ ಭೂಮಿಕಾಗೆ ಬಹಳ ಗಂಡಾಂತರ ಕಾದಿದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಭಾವ ಇಷ್ಟೆಲ್ಲ ಕಷ್ಟ ಪಡುತ್ತಿದ್ದಾರೆ. ನಿಮ್ಮ ಬಗ್ಗೆ ಬೆಟ್ಟದಷ್ಟು ಪ್ರೀತಿ ಇದ್ದರೂ ಅದ್ಯಾವುದನ್ನೂ ಹೇಳಿಕೊಳ್ಳಲು ಆಗದೆ ಮನಸ್ಸಲ್ಲೇ ಇಟ್ಟುಕೊಂಡಿದ್ದಾರೆ." ಎಂದು ಭೂಮಿಕಾಗೆ ಮಲ್ಲಿ ಹೇಳುತ್ತಾಳೆ.

ಶಕುಂತಲಾ ದೇವಿ ಬಂಡವಾಳ ಬಿಚ್ಚಿಟ್ಟ ಮಲ್ಲಿ

"ಅತ್ತೆ ಹೇಳಿದ ಒಂದು ಸುಳ್ಳಿನಿಂದ ಇದೀಗ ಗೌತಮ್ ಜೀವನ ಅಲ್ಲೋಲ ಕಲ್ಲೋಲ ಆಗಿದೆ" ಎಂದು ಹೇಳಿದಾಗ ಭೂಮಿಕಾಗೆ ಅಸಲಿ ವಿಷಯ ತಿಳಿಯುತ್ತೆ. ಆ ಬಳಿಕ ಭೂಮಿಕಾ, ಶಕುಂತಲಾದೇವಿಗೆ ಹೇಗಾದರೂ ಮಾಡಿ ಒಳ್ಳೆ ಪಾಠ ಕಲಿಸಲೇಬೇಕು ಎಂದು ಯೋಚನೆ ಮಾಡುತ್ತಾರೆ.

Amruthadhaare Serial Today Episode Does Bhumika know Shakuntala Devi s plan 10th April

ಮಲ್ಲಿ ನೋಡಿ ಭೂಮಿಕಾ ಶಾಕ್

ಶಕುಂತಲಾ ದೇವಿ, ಗೌತಮ್ ಹಾಗೂ ಭೂಮಿಕಾ ಇಬ್ಬರನ್ನು ಹೇಗಾದರೂ ಮಾಡಿ ದೂರ ಮಾಡಲೇಬೇಕೆಂದು ಪಣತೊಟ್ಟಿದ್ದಾಳೆ. ಇದು ಯಾವುದು ಕೂಡ ಸಾಧ್ಯವಿಲ್ಲ ಎನ್ನುವುದು ಆಕೆಗೆ ತಿಳಿದಿಲ್ಲ. ಇದೀಗ ಶಕುಂತಲಾ ದೇವಿ ಪ್ಲ್ಯಾನ್ ಭೂಮಿಕಾಗೆ ಮಲ್ಲಿಯಿಂದಾಗಿ ತಿಳಿದು ಹೋಗಿದೆ.

More from Filmibeat

English summary
Amruthadhaare serial April 10th episode update:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X