Amruthadhaare ; 5 ವರ್ಷದ ನಂತರ ಗೌತಮ್ ಮಾಡಿದ ಕಾಫಿ ಕುಡಿದ ಭೂಮಿಕಾ, ಶಾಕ್ ನೀಡಿದ ಅದೃಷ್ಟ ದೇವತೆ
'ಅಮೃತಧಾರ' ಧಾರಾವಾಹಿಯಲ್ಲಿ ಪತ್ನಿಯ ಪ್ರೀತಿಯಿಂದ ವಂಚಿತಗೊಂಡ ಗೌತಮ್ ವಠಾರದಲ್ಲಿ ಒದ್ದಾಡುತ್ತಿದ್ದ. ತನಗೆ ಸಿಕ್ಕ ಬಾಲಕಿಯಲ್ಲಿಯೇ ತನ್ನ ಮಗ ಮತ್ತು ಕಳೆದು ಹೋದ ಮಗಳನ್ನು ಕಾಣುತ್ತಿದ್ದ. ಆದರೆ ಈಗ ಗೌತಮ್ ಮತ್ತು ಭೂಮಿಕಾ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಮಲ್ಲಿ ಮತ್ತು ಕಾವೇರಿ ಮಾಡಿದ ಕೆಲಸ ಇಬ್ಬರನ್ನು ಮತ್ತೆ ಒಂದೇ ಕಡೆ ಸೇರುವಂತೆ ಮಾಡಿದೆ. ಮಲ್ಲಿ ಮನೆಯ ಮಾಲೀಕನ ಜೊತೆ...
ಮಾಡಿಕೊಂಡ ಕಿರಿಕ್‌ದಿಂದ ಗೌತಮ್ ಇರುವ ವಠಾರಕ್ಕೆ ಈಗ ಭೂಮಿಕಾ ಬಂದಿದ್ದು ತಮ್ಮ ವಠಾರಕ್ಕೆ ಹೊಸಬರು ಬಂದಿರುವ ವಿಚಾರವನ್ನು ತಿಳಿಯುವ ಗೌತಮ್ ಅವರಿಗಾಗಿ ಟೀ ಮಾಡಿಕೊಂಡು ಕೊಡಲು ಹೋಗಿದ್ದಾನೆ. ಮನೆಯ ಬಾಗಿಲು ಬಡೆದಿದ್ದಾನೆ. ಆಗ ಭೂಮಿಕಾ ಬಾಗಿಲು ತೆರೆದಿದ್ದಾಳೆ. ಈ ಮೂಲಕ ಮತ್ತೆ ಎದುರು ಬದುರಾಗಿದ್ದಾರೆ. ಇಬ್ಬರ ಮುಖದಲ್ಲಿ ಆಶ್ಚರ್ಯ ಪ್ರೀತಿ ಮತ್ತು ಆತಂಕ ಇದೆ.

ಇನ್ನೂ ಗೌತಮ್ ಮತ್ತೆ ಭೂಮಿಕಾ ಕಣ್ಣೆದುರು ಬಂದರೆ ರಂಪ ಆಗುತ್ತೆ, ಗೌತಮ್ ಮನಸನ್ನು ಭೂಮಿಕಾ ಮತ್ತೆ ನೋಯಿಸುತ್ತಾಳೆ, ಸುಖಾಸುಮ್ಮನೆ ಭೂಮಿಕಾ ಜಗಳ ಮಾಡುತ್ತಾಳೆ ಎಂದು ಎಲ್ಲರು ಅಂದುಕೊಂಡಿದ್ದರು.
ಆದರೆ ಹಾಗೇನು ಆಗಲಿಲ್ಲ. ಬದಲಿಗೆ ಮಾತಿಲ್ಲ.. ಕಥೆ ಇಲ್ಲ.. ಬರೀ ರೋಮಾಂಚನ. ಗೌತಮ್ ಮಾಡಿದ ಕಾಫಿಯನ್ನು ಭೂಮಿಕಾ ಐದು ವರ್ಷದ ನಂತರ ಕುಡಿದಿದ್ದಾಳೆ. ಇದನ್ನು ಕಂಡು ಮಲ್ಲಿ ಕೂಡ ಆಶ್ಚರ್ಯ ಪಟ್ಟಿದ್ದಾಳೆ. ಅಯ್ಯೋ ಅಕ್ಕಾರೇ ಭಾವ ಅವರು ಇರುವ ವಠಾರಕ್ಕೆ ನಾವು ಬಂದಿದೀವಿಯಲ್ಲ ಎನ್ನುತ್ತಾಳೆ.

ಭೂಮಿಕಾಗೆ ಕಾಫಿ ಕೊಟ್ಟು ಬಂದಿರುವ ಗೌತಮ್ ಖುಷಿಗೆ ಸದ್ಯ ಪಾರವೇ ಇಲ್ಲ. ಮನೆಗೆ ಬಂದ ತಕ್ಷಣವೇ ತನ್ನ ಅದೃಷ್ಟ ದೇವತೆಯನ್ನು ಅಪ್ಪಿ ಮುದ್ದಾಡಿದ್ದಾನೆ. ನಿನ್ನಿಂದ ನನ್ನ ಜೀವನದಲ್ಲಿ ದೊಡ್ಡ ಪವಾಡ ಆಗಿದೆ ಥ್ಯಾಂಕ್ಯೂ ಎನ್ನುತ್ತಾನೆ. ಇದೇ ಸಮಯದಲ್ಲಿ ಬಾಲಕಿ ಗೌತಮ್‌ಗೆ ಥ್ಯಾಂಕ್ಯೂ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾಳೆ. ಯಾಕೆಂದರೆ ಇಲ್ಲಿಯವರೆಗೆ ತನಗೆ ಸಿಕ್ಕ ಬಾಲಕಿಗೆ ಮಾತು ಬರಲ್ಲ ಎಂದು ಗೌತಮ್ ಅಂದುಕೊಂಡಿದ್ದ. ಆದರೆ ಈಗ ವಾರ ಕಳೆದ ನಂತರ ಮೊದಲ ಬಾರಿ ಆ ಬಾಲಕಿಯ ಬಾಯಿಂದ ಮಾತು ಹೊರ ಬಿದ್ದಿದೆ.
ಸದ್ಯ ಇಂದು (ಅಕ್ಟೋಬರ್ 16 ) ಬಿಡುಗಡೆಯಾದ ಈ ಪ್ರೋಮೊಗೆ ನಾನಾ ರೀತಿಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಸೂಪರ್ ಇವಾಗ ಧಾರವಾಹಿ ನೋಡೋಕ ಚನ್ನಾಗಿದೆ ಎಂದು ಒಬ್ಬರು ಹೇಳಿದರೆ ನಿಜ ಜೀವನದ ಮೆಲಕುಗಳು ಹಾಗು ಈ ಕಷ್ಟದ ಸಂದರ್ಭಗಳು ಸಾಮಾನ್ಯವಾಗಿ ಎಲ್ಲರ ಜೀವನ ದಲ್ಲಿ ಬಂದೆ ಬರುತ್ತೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದೆ ತರಾ ಸೀರಿಯಲ್ ಮುಂದುವರಿಯಲಿ ಎಂದು ಇನ್ನೊಬ್ಬರು ಆಶಯ ವ್ಯಕ್ತಪಡಿಸಿದ್ದರೆ ಮಗೂ ಮಾತು ಭೂಮಿ ಆಗಮನ ನೋಡೋಕೆ ಚೆಂದ ಮತ್ತೆ ಪ್ರೀತಿಲ್ಲಿ ಬಿದ್ರ ಇಬ್ರೂ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊನೆಗೂ ಆ ಹುಡುಗಿಗೆ ಒಂದ್ ಡೈಲಾಗ್ ಕೊಟ್ರು ಎಂದು ಮತ್ತೊಬ್ಬರು ಹೇಳಿದ್ದರೆ ವಠಾರದ ಅಡ್ರೆಸ್ ಕೊಡಿ ನಾವು ಬರುತ್ತೇವೆ ಎಂದು ಇನ್ನೊಬ್ಬರು ಹೇಳಿದ್ದಾರೆ.
ಇಂದಿನ ಈ ಪ್ರೋಮೋ ಕುತೂಹಲ ಕೆರಳಿಸಿದ್ದು ವಠಾರದಲ್ಲಿರುವ ಗೌತಮ್ ಮತ್ತು ಭೂಮಿಕಾ ಮುಂಬರುವ ದಿನಗಳಲ್ಲಿ ಮಾತನಾಡುತ್ತಾರಾ ..? ಅಥವಾ ಗೌತಮ್ ಕಣ್ತಪ್ಪಿಸಿ ಭೂಮಿಕಾ ಓಡಾಡುವ ಪ್ರಯತ್ನ ಮಾಡುತ್ತಾಳಾ..? ಕಾವೇರಿ ಮತ್ತು ಮಲ್ಲಿ ಇಬ್ಬರನ್ನು ಒಂದು ಮಾಡಲು ಮುಂದೆ ಮತ್ತೇನು ಮಾಡುತ್ತಾರೆ..? ಮಾತನಾಡಿರುವ ಅದೃಷ್ಟ ದೇವತೆ ನಿಜಕ್ಕೂ ಗೌತಮ್ ಮಗಳಾ..? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.


Click it and Unblock the Notifications











