Amruthadhaare: ಆಕ್ಸಿಡೆಂಟ್ ಜಸ್ಟ್ ಮಿಸ್.. ಭೂಮಿಕಾಳನ್ನು ಕಂಟ್ರೋಲ್ ಮಾಡಲು ಹೊಸ ಪ್ಲಾನ್
'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಗೌತಮ್ ಇಬ್ಬರೂ ಆದಷ್ಟು ಬೇಗನೇ ಒಂದಾಗಲಿ ಎಂದು ಆನಂದ್ ಪದೇ ಪದೆ ಪ್ರಯತ್ನ ಪಡುತ್ತಲೇ ಇದ್ದಾನೆ.
ಗೆಳೆಯನ ವೈಯಕ್ತಿಕ ಬದುಕು ಸುಂದರವಾಗಿಯೂ ನೆಮ್ಮದಿಯಾಗಿಯೂ ಇರಬೇಕು ಎಂದು ಆನಂದ್ ಆಸೆ ಪಡುತ್ತಿದ್ದಾನೆ. ಗೌತಮ್ ಮನೆಯಲ್ಲಿರುವವರೆಲ್ಲರೂ ಸ್ವಾರ್ಥಿಗಳು ಎಂಬುದು ಆನಂದ್‌ಗೆ ತಿಳಿದಿದೆ.

ಹಾಗಾಗಿ ಗೌತಮ್‌ಗಾಗಿ ಮಿಡಿಯುವ ಜೀವ ಹೆಂಡತಿ. ಅದು ಭೂಮಿಕಾ. ಹೀಗಾಗಿ ಭೂಮಿಕಾ ಮತ್ತು ಗೌತಮ್ ಒಟ್ಟಿಗೆ ಸದಾ ಕಾಲ ಖುಷಿ ಖುಷಿಯಾಗಿರಲಿ ಎಂದು ಆನಂದ್ ಬಯಸಿದ್ದಾನೆ.
ಭೂಮಿಕಾ-ಗೌತಮ್‌ಗಾಗಿ ಆನಂದ್
ಹೀಗಾಗಿ ಆನಂದ್ ಗೌತಮ್ ಮತ್ತು ಭೂಮಿಕಾ ಇಬ್ಬರ ನಡುವಿನ ದಾಂಪತ್ಯ ಜೀವನ ಹೇಗಿದೆ ಎಂದು ಆಗಾಗ ತಿಳಿದುಕೊಳ್ಳುತ್ತಿರುತ್ತಾನೆ. ಇದೀಗ ಭೂಮಿಕಾಗೆ ಗೌತಮ್ ಮೇಲೆ ಒಲವಾಗಿದ್ದು, ಅವರು ಕುಡಿದ ಮತ್ತಿನಲ್ಲಿ ಗೌತಮ್‌ಗೆ ಮುತ್ತು ನೀಡಿದ ಫೋಟೋವನ್ನು ನೋಡಿ ಬಿಟ್ಟಿದ್ದಾನೆ. ಗೌತಮ್ ಕೂಡ ಮುಂದುವರೆದು ಭೂಮಿಕಾಳಿಗೆ ಮುತ್ತುಕೊಟ್ಟರೆ, ಇಬ್ಬರ ನಡುವೆಯೂ ಸಾಮರಸ್ಯ ಬೆಳೆದು ಅವರ ದಾಂಪತ್ಯ ಜೀವನ ಇನ್ನಷ್ಟು ಚೆನ್ನಾಗಿರುತ್ತದೆ ಎಂಬುದು ಆನಂದ್ ಆಲೋಚನೆ. ಹಾಗಾಗಿ ಆನಂದ್ ಗೌತಮ್‌ಗೆ ಟಾಸ್ಕ್ ಕೊಟ್ಟಿದ್ದಾನೆ. ಭೂಮಿಕಾ ಅತ್ತಿಗೆಗೆ ಮುತ್ತು ಕೊಡಬೇಕು ಇಲ್ಲದೇ ಹೋದಲ್ಲಿ ನಿಮ್ಮಿಬ್ಬರ ನಡುವೆ ಯಾವುದೇ ರೀತಿಯ ವೈವಾಹಿಕ ಸಂಬಂಧವಿಲ್ಲ ಎಂದು ಮನೆಯವರ ಬಳಿ ಹೇಳಿ ನಿನ್ನ ಮಾನ ಮರಿಯಾದೆ ತೆಗೆಯುತ್ತೇನೆ ಎಂದು ವಾರ್ನಿಂಗ್ ಕೊಟ್ಟಿದ್ದಾನೆ. ಸದ್ಯ ಗೌತಮ್‌ಗೆ ಆನಂದ್ ಕೊಟ್ಟಿರುವ ಟಾಸ್ಕ್ ಕಷ್ಟಕರವಾಗಿದ್ದರೂ ಮಾಡಲೇಬೇಕಾದ ಪರಿಸ್ಥಿತಿ ಎದುರಾಗಿದೆ.
ಆಕ್ಸಿಡೆಂಟ್ ಜಸ್ಟ್ ಮಿಸ್
ಇತ್ತ ಭೂಮಿಕಾ ಮಲ್ಲಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋಗಬೇಕು ಎಂದು ಶಕುಂತಲಾಳನ್ನು ಜೊತೆ ಮಾಡಿ ಕಳಿಸಿದ್ದಾಳೆ. ಆದರೆ, ಜೈದೇವ ಮಲ್ಲಿಯನ್ನು ಸಾಯಿಸುವುದಕ್ಕಾಗಿ ಆಕ್ಸಿಡೆಂಟ್ ಮಾಡಿಸಲು ಮುಂದಾಗಿದ್ದಾನೆ. ಅದೇ ಕಾರಿನಲ್ಲಿ ತನ್ನ ತಾಯಿ ಶಕುಂತಲಾ ಕೂಡ ಇರುವುದು ತಿಳಿದ ಮೇಲೆ ಆಕ್ಸಿಡೆಂಟ್ ತಪ್ಪಿಸಲು ಒದ್ದಾಡುತ್ತಾನೆ. ಒಂದು ಕ್ಷಣ ತಡವಾಗಿದ್ದರೂ ಅಪಘಾತದಲ್ಲಿ ಶಕುಂತಲಾ ಕೂಡ ಸಾಯುವ ಸಾಧ್ಯತೆ ಹೆಚ್ಚಿತ್ತು. ಆದರೆ, ಆಕ್ಸಿಡೆಂಟ್ ಜಸ್ಟ್ ಮಿಸ್ ಆಗಿದೆ. ಜೈ ದೇವನೇ ಈ ಕೆಲಸವನ್ನು ಮಾಡಿಸಿದ್ದು ಎಂದು ತಿಳಿದ ಶಕುಂತಲಾಳಿಗೆ ಕೋಪವೂ ಕೂಡ ಬಂದಿದೆ.

ಭೂಮಿಕಾಳ ವಿರುದ್ಧ ಶಕುಂತಲಾ ಪ್ಲಾನ್
ಮಲ್ಲಿ ಬಳಿ ಮಾತನಾಡಿದ ಶಕುಂತಲಾ, ಈಗ ನಡೆದ ಘಟನೆಯನ್ನು ಮನೆಯಲ್ಲಿ ಯಾರಿಗೂ ಹೇಳಬೇಡ. ಭೂಮಿಕಾಳಿಗೆ ಗೊತ್ತಾದರೆ, ಬೇಕಂತಲೇ ಮಾಡಿಸಿದ್ದು ಎಂದು ಆರೋಪಿಸುತ್ತಾಳೆ. ಆದರೆ, ಇದರಲ್ಲಿ ನಮ್ಮ ಕೈವಾಡವಿಲ್ಲ ಎಂದು ತಿಳಿ ಹೇಳುತ್ತಾಳೆ. ಮನೆಗೆ ಬಂದ ಕೂಡಲೇ ಮಲ್ಲಿ ಮುಖದಲ್ಲಿದ್ದ ಭಾವನೆಯನ್ನು ಕಂಡು ಭೂಮಿಕಾ ಅನುಮಾನಿಸುತ್ತಾಳೆ. ಆದರೆ, ಮಲ್ಲಿ ಶಕುಂತಲಾಳ ಮಾತಿಗೆ ಬೆಲೆ ಕೊಟ್ಟು ಏನನ್ನೂ ಹೇಳುವುದಿಲ್ಲ. ಶಕುಂತಲಾ ಜೈದೇವನ ಮೇಲೆ ಕೋಪ ಮಾಡಿಕೊಳ್ಳುವುದು ಬಿಟ್ಟು. ನಮ್ಮ ಪ್ಲಾನ್ ಎಲ್ಲಾ ಉಲ್ಟಾ ಆಗುತ್ತಿರುವುದಕ್ಕೆ ಕಾರಣ ಭೂಮಿಕಾ. ಮೊದಲು ಭೂಮಿಕಾಳಿಗೆ ಒಂದು ಗತಿ ಕಾಣಿಸಬೇಕು ಎಂದು ಪ್ಲಾನ್ ಮಾಡಿದ್ದಾಳೆ.
ಮತ್ತೆ ಎಂಟ್ರಿ ಕೊಟ್ಟ ಮಾನ್ಯಾ
ಡೇಂಜರ್ ಆಗಿರುವ ಮಾನ್ಯಾಳನ್ನೇ ಕಂಟ್ರೋಲ್ ಮಾಡುತ್ತಿರುವ ತನಗೆ ಭೂಮಿಕಾ ಯಾವ ಕಷ್ಟವೂ ಅಲ್ಲ ಎಂದು ಹೇಳುತ್ತಾಳೆ. ಇತ್ತ ಹಲವು ದಿನಗಳ ಬಳಿಕ ಸೀರಿಯಲ್‌ನಲ್ಲಿ ಮತ್ತೆ ಮಾನ್ಯಾಳ ಎಂಟ್ರಿಯಾಗಿದ್ದು, ಶಕುಂತಲಾ ಕೂಡಿ ಹಾಕಿರುತ್ತಾಳೆ. ಮಾನ್ಯಾ ಈಗ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ಮತ್ತೆ ಮಾನ್ಯಾಳಿಂದ ಗೌತಮ್‌ಗೆ ತೊಂದರೆ ಆಗುತ್ತದೆಯಾ ಎಂಬುದನ್ನು ಮುಂದಿನ ಸಂಚಿಕೆಯಲ್ಲಿ ಗೊತ್ತಾಗುತ್ತೆ.


Click it and Unblock the Notifications











