Amruthadhaare: ಗೌತಮ್ ನನ್ನು ಉಡ್ಬಿ ಎಂದು ಭೂಮಿಕಾ ಪರಿಚಯಿಸಿದ್ದು ಯಾರಿಗೆ..?

By ಪ್ರಿಯಾ ದೊರೆ

ಮಹಿಮಾ ಈಗ ಜೀವನ್ ಬೇಕೇ ಬೇಕು ಅವನನ್ನು ಬಿಟ್ಟಿರಲು ಆಗುವುದಿಲ್ಲ ಎಂದು ಹೇಳಿರುವುದರಿಂದ ಗೌತಮ್‌ಗೆ ಇಬ್ಬಂದಿ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ಗೌತಮ್ ಸೀದಾ ಗೆಳೆಯ ಆನಂದ್ ಬಳಿ ಹೋಗಿ ತನ್ನ ಗೊಂದಲದ ಬಗ್ಗೆ ಹೇಳಿಕೊಳ್ಳುತ್ತಾನೆ. ಆದರೆ, ಆನಂದ್ ಮಗ ಗೌತಮ್ ಬಳಿ ಬಂದು ನಿಮಗೆ ಎಂಗೇಜ್‌ಮೆಂಟ್ ಆಗಿದೆ ಎಂದರೆ ನೀವು ಎಂಗೇಜ್ ಆಗಿದ್ದೀರಾ ಎಂದರ್ಥ ಎನ್ನುತ್ತಾನೆ.

ಈ ಮಾತನ್ನು ಕೇಳಿದ ಆನಂದ್ ಸಂತಸದಿಂದ ಭೂಮಿಕಾ ನಿನಗೆ ಸರಿ ಎಂದು ಹೇಳಿ ಕಳಿಸುತ್ತಾನೆ. ಗೌತಮ್ ಕನ್ಫ್ಯೂಷನ್‌ನಲ್ಲೇ ಜೀವನ್‌ನನ್ನು ಭೇಟಿ ಮಾಡುತ್ತಾನೆ.

Amruthadhaare, Zee Kannada Serial

ಜೀವನ್‌ನನ್ನು ಭೇಟಿ ಮಾಡಿದ ಗೌತಮ್

ಗೌತಮ್ ಜೀವನ್‌ಗೆ ಮಹಿಮಾ ನಿನ್ನನ್ನು ಬಿಟ್ಟಿರೋದಕ್ಕೆ ಅಗುವುದಿಲ್ಲ. ನನಗೆ ಜೀವನ್ ಬೇಕೆ ಬೇಕು ಎಂದು ಹಠ ಮಾಡುತ್ತಿದ್ದಾಳೆ. ಮೊನ್ನೆ ನಡೆದ ಘಟನೆ ಮತ್ತೆ ನಡೆಯದಂತೆ ನೋಡಿಕೊಳ್ಳುವುದಾಗಿ ಮಾತು ಕೊಡು. ನನಗೆ ನನ್ನ ಪುಟ್ಟಿ ಎಂದರೆ ಜೀವ. ಅವಳಿಗೆ ಸ್ವಲ್ಪ ನೋವಾದರೂ ಸಹಿಸಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾನೆ. ಜೀವನ್ ಕೂಡ ನನಗೂ ಮಹಿಮಾಳನ್ನು ಬಿಟ್ಟಿರಲು ಸಾಧ್ಯವಿಲ್ಲ. ಆದರೆ, ಆಕ್ಸಿಡೆಂಟಲ್ ಆಗಿ ಆ ಘಟನೆ ನಡೆದು ಹೋಯ್ತು. ನನ್ನನ್ನು ಕ್ಷಮಿಸಿ ಎಂದು ಹೇಳುತ್ತಾನೆ. ನಂತರ ಜೀವನ್ ಮಹಿಮಾಳನ್ನು ಭೇಟಿ ಮಾಡಲು ಹೊರಡುತ್ತಾನೆ.

ಮಹಿಮಾ ಮನೆಗೆ ಬಂದ ಜೀವನ್

ಇತ್ತ ಮಹಿಮಾ ಇನ್ನೆರಡು ತಿಂಗಳಿನಲ್ಲಿ ಹೊಟ್ಟೆ ಮುಂದೆ ಬರುತ್ತೆ. ಏನು ಮಾಡೋದು ಎಂದು ಯೋಚಿಸುತ್ತಿರುತ್ತಾಳೆ. ಅಷ್ಟರಲ್ಲಿ ಶಕುಂತಲಾ ಬರುತ್ತಾಳೆ. ಮಹಿಮಾ ತನಗೆ ಮಗು ಆಗುತ್ತಿರುವ ಬಗ್ಗೆ ಜೀವನ್ ಬಳಿ ಹೇಳುತ್ತೇನೆ ಎಂದಾಗ, ಶಕುಂತಲಾ "ಬೇಡ ಜೀವನ್ ಖುಷಿಯಲ್ಲಿ ನಿಮ್ಮ ಅಣ್ಣನ ಬಳಿ ಹೇಳಿದರೆ, ಗೌತಮ್‌ಗೆ ನಿನ್ನ ಮೇಲಿರುವ ಪ್ರೀತಿಯಲ್ಲ ಹಾಳಾಗುತ್ತದೆ. ಮದುವೆ ಆಗುವವರೆಗೂ ಸುಮ್ಮನಿದ್ದು, ಬಳಿಕ ಇದರ ಬಗ್ಗೆ ನಿರ್ಧಾರ ಮಾಡು" ಎಂದು ಹೇಳುತ್ತಾಳೆ. ಅಷ್ಟರಲ್ಲಿ ಜೀವನ್ ಮನೆಗೆ ಬರುತ್ತಾನೆ. ಶಕುಂತಲಾ ಇಬ್ಬರನ್ನೂ ಮಾತನಾಡಲು ಬಿಟ್ಟು ಹೋಗುತ್ತಾಳೆ. ಆದರೆ, ಬಾಗಿ ಬಳಿ ನಿಂತು ಆತಂಕದಲ್ಲಿ ಅವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳಲು ಯತ್ನಿಸುತ್ತಾಳೆ. ಇಬ್ಬರೂ ಒಂದಾದರೆ ಸಾಕು ಎಂಬ ಆತಂಕದಲ್ಲಿರುತ್ತಾಳೆ.

Amruthadhaare, Zee Kannada Serial

ಗೌತಮ್‌ನನ್ನು ಉಡ್ಬಿ ಎಂದ ಭೂಮಿಕಾ

ಭೂಮಿಕಾ ಹಾಗೂ ಕಿರಣ್ ಇಬ್ಬರೂ ಲಿಫ್ಟ್ ಬಳಿ ಭೇಟಿ ಆಗುತ್ತಾರೆ. ಆಗ ಕಿರಣ್ ನನಗೆ ಶೃತಿ ಮೇಲೆ ಮನಸ್ಸಿಲ್ಲ. ನಿನ್ನ ಎಂಗೇಜ್‌ಮೆಂಟ್ ಮತ್ತೆ ಕ್ಯಾನ್ಸಲ್ ಆಯ್ತು ಅಂತ ಗೊತ್ತಾಯ್ತು. ನನಗೆ ನೀನೇ ಸರಿ. ನಿನಗೂ ಗೌತಮ್ ಸೆಟ್ ಆಗುತ್ತಿರಲಿಲ್ಲ. ನಾವಿಬ್ಬರು ಮತ್ತೆ ಒಂದಾಗೋಣ ಎಂದು ಹುಚ್ಚುಚ್ಚಾಗಿ ಮಾತನಾಡುತ್ತಿರುತ್ತಾನೆ. ಈ ಮಾತುಗಳಿಂದ ಭೂಮಿಕಾಳಿಗೆ ಬೇಸರವಾಗುತ್ತದೆ. ನೀನು ಇಷ್ಟು ಕೆಟ್ಟವನು ಎಂದು ಗೊತ್ತಿರಲಿಲ್ಲ. ಹೀಗೆಲ್ಲಾ ಮಾತನಾಡಬೇಡ ಎನ್ನುತ್ತಾಳೆ. ಅಷ್ಟರಲ್ಲಿ ಗೌತಮ್ ಬರುತ್ತಾನೆ. ಭೂಮಿಕಾ ಬಳಿ ಬಂದು ಜೀವನ್ ಹಾಗೂ ಮಹಿಮಾ ಪ್ಯಾಚಪ್ ಆದರು. ನನ್ನ ನಿನ್ನ ಮದುವೆಯೂ ನಡೆಯುತ್ತದೆ ಎಂದು ಹೇಳುತ್ತಾನೆ. ಆಗ ಭೂಮಿಕಾ ಅನಿವಾರ್ಯವಾಗಿ ಕಿರಣ್‌ಗೆ ಗೌತಮ್ ದಿವಾನ್ ನನ್ನ ಉಡ್ಬಿ ಎಂದು ಪರಿಚಯ ಮಾಡಿಕೊಡುತ್ತಾಳೆ. ಅವಮಾನದಿಂದ ಕಿರಣ್ ಅಲ್ಲಿಂದ ಹೊರಟ ಮೇಲೆ ಭೂಮಿಕಾ ಗೌತಮ್‌ಗೆ ಬೈಯುತ್ತಾಳೆ. ನನ್ನ ಫೀಲಿಂಗ್ಸ್ ಅನ್ನು ಅರ್ಥ ಮಾಡಿಕೊಳ್ಳಿ. ಒಂದು ದಿನ ಬಂದು ಬೇಡ ಎನ್ನುತ್ತೀರಾ ಮತ್ತೆ ಬಂದು ಬೇಕು ಎನ್ನುತ್ತೀರಾ ಎಂದು ಹೇಳಿ ಬೇಸರದಲ್ಲೇ ಕಳಿಸಿಕೊಡುತ್ತಾಳೆ.

ಮನೆಯವರ ಖುಷಿಗೆ ಎಲ್ಲವೂ ಓಕೆ

ಇನ್ನು ಶಕುಂತಲಾ ಮಂದಾಕಿನಿಗೆ ಫೋನ್ ಮಾಡಿ ಇಬ್ಬರ ಮದುವೆಗೆ ಯಾವುದೇ ಅಡ್ಡಿ ಇಲ್ಲ ಎಂದು ಹೇಳುತ್ತಾಳೆ. ಈ ಖುಷಿಯನ್ನು ಮಂದಾಕಿನಿ ಮನೆಯವರ ಬಳಿ ಹಂಚಿಕೊಳ್ಳುತ್ತಾಳೆ. ಭೂಮಿಕಾಳಿಗೂ ಸಿಹಿ ತಿನ್ನಿಸುತ್ತಾಳೆ. ಆದರೆ, ಯಾರೋ ಭೂಮಿಕಾ ಭಾವನೆಗಳ ಬಗ್ಗೆ ಆಗಲೀ, ಅವಳ ಅಭಿಪ್ರಾಯ, ಇಷ್ಟ-ಕಷ್ಟಗಳನ್ನು ಕೂಡ ಕೇಳುವುದೇ ಇಲ್ಲ. ಭೂಮಿಕಾ ಕೂಡ ಮನೆಯವರಿಗಾಗಿ ಹಾಗೂ ಜೀವನ್ ಖುಷಿಗಾಗಿ ಎಲ್ಲವನ್ನು ಒಪ್ಪಿಕೊಂಡಿದ್ದಾಳೆ.

More from Filmibeat

English summary
Amruthadhaare Serial written update on July 13th episode. Mandakini again happy because Jeevan and her daughter Bhoomika marriage fixed, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X