Amruthadhaare ; ಹಣದ ಮೇಲಿನ ವ್ಯಾಮೋಹ,ಅತಿಯಾಸೆ,ಜೈದೇವ್ ಕುತಂತ್ರ-ಮನೆಯಿಂದ ಕಾಣೆಯಾದ ಅಜ್ಜಿ
''ಅಮೃತಧಾರೆ'' ಧಾರಾವಾಹಿಯಲ್ಲಿ ಅಜ್ಜಿಯ ಆಸ್ತಿಗಾಗಿ ಜೈದೇವ್ ಹಪಹಪಿಸುತ್ತಿದ್ದಾನೆ. ಅಜ್ಜಿಗೆ ಕಷಾಯ ರೆಡಿ ಮಾಡಿದ್ದು ಕಷಾಯದಲ್ಲಿ ನಿದ್ದೆ ಬರುವ ಮಾತ್ರೆ ಹಾಕಿದ್ದಾನೆ. ಅಜ್ಜಿ ಕಷಾಯ ಕುಡಿದು ಮಲಗಿದ್ದು, ಒಂದು ಕ್ಷಣಕ್ಕೂ ನನ್ನ ಪ್ರೀತಿಯಿಂದ ನೋಡಿಲ್ಲ ನೀನು, ಹಾಗಿದ್ದ ಮೇಲೆ ನಿನ್ನ ಮೊಮ್ಮಗನ ಸಾಲ ತೀರಿಸುವ ದರ್ದು ನನಗ್ಯಾಕೆ ಎಂದು ಹೇಳುತ್ತಾನೆ. ತಪ್ಪಲ್ವಾ, ಅದೇನೋ ಫ್ಯಾಮಿಲಿ ಪಾಲಿಟಿಕ್ಸ್ ..
ಡ್ರಾಮಾ .. ವಗೈರಾ ವಗೈರಾ ಅಂದುಕೊಳ್ಳೋಣ, ಆದರೆ ನಿನ್ನ ನಿಜವಾದ ಮೊಮ್ಮಗ ಎಂದು ನೀನೇನು ಕರೀತಿಯಾ ಗುಂಡು ಅವನು ಸಾಲ ಮಾಡಿ ಹೋಗೋದು ಅಂತೆ ನಾನು ತೀರಿಸೋದು ಅಂತೆ ಎಂದು ಹೇಳುತ್ತಾನೆ. ಮಲಗಿರುವ ಅಜ್ಜಿಯ ಬಳಿ ಎಲ್ಲಾ ಆಸ್ತಿಯ ಪೇಪರ್ಗೆ ಹೆಬ್ಬೆಟ್ಟಿನ ಸಹಿ ಹಾಕಿಸಿಕೊಳ್ಳುತ್ತಾನೆ.

ಆದರೆ, ಇದ್ಯಾವುದರ ಅರಿವು ಇಲ್ಲದ ಭಾಗ್ಯಮ್ಮ. ಸದ್ಯ ಅಜ್ಜಿ ಬಂದ ಸುದ್ದಿಯನ್ನು ಕೇಳಿ ಖುಷಿಯಾಗಿದ್ದಾಳೆ. ನೂರು ಆನೆ ಬಲ ಬಂದಂತಾಯ್ತು ಎಂದು ಆನಂದ್ ಎದುರು ಹೇಳಿದ್ದಾಳೆ. ಅಜ್ಜಿ ಹೇಳಿದರೆ ಮುಗೀತು ಗೌತಮ್ ಕೂಡ ಕೇಳಬೇಕು ಭೂಮಿಕಾ ಕೂಡ ಕೇಳಬೇಕು ಎಂದಿದ್ದಾಳೆ. ಇಷ್ಟೇ ಅಲ್ಲ ತನ್ನ ಅತ್ತೆಯನ್ನು ನೋಡುವ ಆಸೆಯನ್ನು ಕೂಡ ಭಾಗ್ಯಮ್ಮ ವ್ಯಕ್ತಪಡಿಸಿದ್ದಾಳೆ.
ಹೀಗಾಗಿ ಲಕ್ಷ್ಮೀಕಾಂತ್‌ಗೆ ಫೋನ್ ಮಾಡಿರುವ ಆನಂದ್ ಅಜ್ಜಿಯನ್ನು ಮನೆಗೆ ಕರೆದುಕೊಂಡು ಬರುವಂತೆ ಹೇಳಿದ್ದಾನೆ. ಆ ಮನೆಯಿಂದ ಅಜ್ಜಿಯನ್ನು ಹೇಗೆ ಕರೆದುಕೊಂಡು ಬರಬೇಕು ಎನ್ನುವುದಕ್ಕೆ ಪ್ಲಾನ್ ಕೂಡ ಹೇಳಿದ್ದಾನೆ. ಆನಂದ್ ಮಾತುಗಳನ್ನು ಕೇಳಿ ಲಕ್ಷ್ಮೀಕಾಂತ್ ಕೂಡ ಖುಷಿಯಾಗಿದ್ದು ಅಜ್ಜಿಯ ಕೋಣೆಗೆ ಹೋಗುತ್ತಾನೆ.
ಆದರೆ ಅಲ್ಲಿ ಅಜ್ಜಿ ಕಾಣಿಸುವುದೇ ಇಲ್ಲ. ಆ ನಂತರ ಮನೆಯೆಲ್ಲ ಹುಡುಕಾಡುವ ಲಕ್ಷ್ಮೀಕಾಂತ್ ತಂಗಿ ಜೊತೆ ಇದ್ದರೂ ಇರಬಹುದು ಎಂದು ಶಕುಂತಲಾಗೆ ಫೋನ್ ಮಾಡುತ್ತಾನೆ. ಅಜ್ಜಿ ಮನೆಯಲ್ಲಿ ಎಲ್ಲಿಯೂ ಕಾಣ್ತಿಲ್ಲ, ನಿನ್ನ ಜೊತೆ ಇದ್ದಾರಾ..? ಎಂದು ಕೇಳುತ್ತಾನೆ. ಆಗ ಶಕುಂತಲಾ ಅಣ್ಣ ನಾನು ಕ್ಲಬ್ ಅಲ್ಲಿ ಇದ್ದೀನಿ ಅವರು ಯಾಕೆ ನನ್ನ ಜೊತೆ ಬರ್ತಾರೆ ಎಂದು ಮರು ಪ್ರಶ್ನೆ ಮಾಡಿ ಫೋನ್ ಕಟ್ ಮಾಡುತ್ತಾಳೆ. ಇದರಿಂದ ಆತಂಕಕ್ಕೊಳಗಾಗುವ ಲಕ್ಷ್ಮೀಕಾಂತ್, ಪಾರ್ಥನ ಕರೆಯುತ್ತಾನೆ. ಇಡೀ ಮನೆ ಹುಡುಕಾಡಿದೆ ಅಜ್ಜಿ ಎಲ್ಲಿಯೂ ಕಾಣ್ತಿಲ್ಲ ಎಂದು ಹೇಳುತ್ತಾನೆ. ಲಕ್ಷ್ಮೀಕಾಂತ್ ಮಾತುಗಳನ್ನು ಕೇಳಿ ಪಾರ್ಥ ಕೂಡ ಆತಂಕಕ್ಕೀಡಾಗಿದ್ದಾನೆ.

ಸದ್ಯ ಮಲಗಿದ್ದ ಅಜ್ಜಿ ಎಲ್ಲಿ ಹೋದಳು ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ. ಅಜ್ಜಿಯನ್ನು ಜೈದೇವ್ ಕಿಡ್ನ್ಯಾಪ್ ಮಾಡಿರಬಹುದಾ..? ಅಥವಾ ನಿದ್ದೆ ಮಾಡಿದಂತೆ ಆಕ್ಟ್ ಮಾಡಿ ಜೈದೇವ್ ಮಾತುಗಳನ್ನು ಕೇಳಿಸಿಕೊಂಡ ಅಜ್ಜಿ, ಜೈದೇವ್ ಕಣ್ಣಿಗೆ ಕಾಣಿಸದಂತೆ ಎಲ್ಲಾದರೂ ಹೋಗಿರಬಹುದಾ..? ಎನ್ನುವ ಚರ್ಚೆಯನ್ನು ಹಲವರು ಮಾಡುತ್ತಿದ್ದಾರೆ.
ಇನ್ನು ಆಸ್ತಿ ಪತ್ರದ ಮೇಲೆ ಜೈದೇವ್ ಹೆಬ್ಬೆಟ್ಟು ಬೇರೆ ಒತ್ತಿಸಿಕೊಂಡಿದ್ದಾನೆ. ಹೀಗಾಗಿ ಆ ಆಸ್ತಿ ಮುಂದೆ ಕೇಡಿಯ ಕೈಗೆ ಸೇರುತ್ತಾ ಎನ್ನುವ ಚಿಂತೆ ಕೂಡ ಹಲವರನ್ನು ಕಾಡುತ್ತಿದೆ. ಮತ್ತೂ ಕೆಲವರಿಗೆ ಅಷ್ಟು ದೊಡ್ಡ ಮನೆಯಲ್ಲಿ ಮನೇಲಿ ಸಿ ಸಿ ಟಿವಿ ಇರೋಲ್ವಾ ಎನ್ನುವ ಪ್ರಶ್ನೆ ಕೂಡ ಕಾಡುತ್ತಿದೆ. ಇದೆಲ್ಲದರ ನಡುವೆ ಅಜ್ಜಿ ಕಾಣ್ತಿಲ್ಲ ಎನ್ನುವ ವಿಚಾರ ಗೌತಮ್, ಭೂಮಿಕಾ ಅಥವಾ ಭಾಗ್ಯಮ್ಮಗೆ ಗೊತ್ತಾದರೆ ಅವರಿಗೆ ಬರಸಿಡಿಲು ಬಡಿಯುವುದು ಗ್ಯಾರಂಟಿ.
ಮತ್ತೊಂದು ಕಡೆ ವಠಾರದವರೆಲ್ಲರೂ ಸೇರಿ ಭೂಮಿಕಾ ಬರ್ತ್‌ಡೇ ಆಚರಿಸಿದ್ದಾರೆ. ಭೂಮಿಕಾ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಗೌತಮ್ ಮುನಿಸಿಕೊಂಡಿರುವ ತನ್ನ ಮನದರಸಿಗೆ ಕೇಕ್ ತಿನ್ನಿಸಿ ಒಳಗೊಳಗೆ ಖುಷಿ ಪಟ್ಟಿದ್ದಾನೆ. ಸದ್ಯ ಅಜ್ಜಿ ಕಾಣೆಯಾಗಿದ್ದು ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











