Amruthadhaare ; ಪೈಲ್ವಾನ್ ಸುನಿ ಪ್ರಾಣಕ್ಕೆ ಸಂಚಕಾರ - ಗೌತಮ್ ಹೇಳಿದ ಸತ್ಯದಿಂದ ಆಘಾತಕ್ಕೊಳಗಾದ ಭೂಮಿಕಾ
''ಅಮೃತಧಾರೆ'' ಧಾರಾವಾಹಿಯಲ್ಲಿ ಲಕ್ಷ್ಮೀಕಾಂತ್ ನಮ್ಮ ಪರವಾಗಿ ಅಲ್ಲ ಬದಲಿಗೆ ಗೌತಮ್ ಮತ್ತು ಭೂಮಿಕಾ ಪರ ಇದ್ದಾನೆ ಎನ್ನುವ ವಿಚಾರ ಜೈದೇವ್ ಗೆ ಗೊತ್ತಾಗಿದೆ. ಶಕುಂತಲಾ ನಂಬದೇ ಇದ್ದರೂ ಜೈದೇವ್ ತನ್ನ ವಾದವನ್ನು ಸಾಕ್ಷಿ ಸಮೇತ ಮಾಡಿದ್ದು ಲಕ್ಷ್ಮೀಕಾಂತ್ ನ ಕೂಡಿ ಹಾಕಿದ್ದಾನೆ. ತನ್ನ ಪುಡಿ ರೌಡಿಗಳ ಕಣ್ಗಾವಲಿನಲ್ಲಿ ಇಟ್ಟಿದ್ದಾನೆ.
ಮತ್ತೊಂದು ಕಡೆ ಗೌತಮ್ ಮತ್ತು ಪಾರ್ಥ ಎದುರು ಸುನಿ ಬಣ್ಣ ಬಯಲಾಗಿದ್ದು ಕೊನೆ ಕ್ಷಣದಲ್ಲಿ ಮದುವೆಯಾಗಲು ಹಿಂದೇಟು ಹಾಕುವಂತೆ ಸುನಿಗೆ ಜೈದೇವ್ ಹೇಳಿದ್ದಾನೆ. ಆದರೆ ಮತ್ತೊಂದು ಕಡೆ ಮದುವೆಯಿಂದ ಹಿಂದೆ ಸರಿಯದಂತೆ ಸುನಿಗೆ ಗೌತಮ್ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಸುನಿ ಸಂದಿಗ್ಧ ಪರಿಸ್ಥಿತಿಯಲ್ಲಿದ್ದು ಇದೇ ಸಮಯದಲ್ಲಿ ಮರಿ ಡುಮ್ಮ ಆಕಾಶ್ ಮತ್ತು ಮಿಂಚು ಸುನಿಯ ಬೇರು ಕಂಡು ಹಿಡಿದಿದ್ದಾರೆ. ಭೂಮಿಕಾ ಬಳಿ ತೆರಳಿ ವಿಚಾರವನ್ನು ಹೇಳಿದ್ದಾರೆ.

ಇದರಿಂದ ಇಲ್ಲಿಯವರೆಗೆ ಸೇಡಿನ ಜ್ವಾಲೆಯಿಂದ ತಪ್ಪಿಸಿಕೊಳ್ಳುತ್ತಾ, ತಾನಾಯ್ತು, ತನ್ನ ಮನೆ ಆಯ್ತು, ಗಂಡ ಮಕ್ಕಳಾಯ್ತು ಎಂದುಕೊಂಡು ಸುಮ್ಮನೆ ಇದ್ದ ಭೂಮಿಕಾ ಕೆರಳಿ ಕೆಂಡವಾಗಿದ್ದಾಳೆ. ಮದುವೆಯ ಸಂಭ್ರಮ ಮರೆತು ಸೀದಾ ಜೈದೇವ್ ಬಳಿ ತೆರಳಿದ್ದಾಳೆ.
ಇನ್ನೊಬ್ಬ ಗಂಡಸನ್ನು ಹೆಂಡತಿಯ ಹಿಂದೆ ಬಿಟ್ಟವ ನಿನ್ನಂಥವರನ್ನು ಗಂಡಸು ಅನ್ನುವುದಿಲ್ಲ ಎಂದು ಭೂಮಿಕಾ ಡೈಲಾಗ್ ಹೊಡೆದಿದ್ದು ಭೂಮಿಕಾ ರೌದ್ರಾವತಾರ ಕಂಡು ಜೈದೇವ್ ನಲುಗಿದ್ದಾನೆ.
ಆದರೂ ಎಗರಾಡಲು ಜೈದೇವ್ ಮುಂದಾಗಿದ್ದು ಭೂಮಿಕಾ ಧಗಧಗಿಸಿದ್ದಾಳೆ. ನೀನೇನು ಅವಳ ಮದುವೆ ನಿಲ್ಲಿಸೋದು, ನಾನೇ ನಿಲ್ಲಿಸುತ್ತೇನೆ ಎಂದು ಕೆಂಡ ಕಾರಿದ್ದಾಳೆ. ಭೂಮಿಕಾ ಮಾತುಗಳನ್ನು ಕೇಳಿ ವಿಚಲಿತಗೊಂಡಿರುವ ಜೈದೇವ್ ಸದ್ಯ ಸುನಿಗೆ ಫೋನ್ ಮಾಡಿದ್ದಾನೆ.
ಭೂಮಿಕಾಗೆ ನಮ್ಮ ಬಂಡವಾಳ ಎಲ್ಲ ಗೊತ್ತಾಗಿದೆ ಅವಳು ಅಲ್ಲಿ ಬರುವ ಮೊದಲು ಅಲ್ಲಿಂದ ಓಡಿ ಹೋಗು ಎಂದು ಹೇಳಿದ್ದಾನೆ. ಆದರೆ ಸುನಿ ಓಡಿ ಹೋಗಲಾರದ ಸ್ಥಿತಿಯಲ್ಲಿದ್ದು ಈಗ ಭೂಮಿಕಾ ಮದುವೆ ಮಂಟಪಕ್ಕೆ ಬಂದಿದ್ದಾಳೆ.

ಭೂಮಿಕಾ ರೌದ್ರವತಾರ ಕಂಡು ಸುನಿ ಬೆಚ್ಚಿ ಬಿದ್ದಿದ್ದು, ಭೂಮಿಕಾಗೆ ಸತ್ಯ ಗೊತ್ತಾಗಿದೆ ಎನ್ನುವ ವಿಚಾರ ಗೌತಮ್ ಗೆ ಗೊತ್ತಾಗಿದೆ. ಹೀಗಾಗಿ ಭೂಮಿಕಾ ಮದುವೆ ನಿಲ್ಲಿಸಿದರೆ ಕಷ್ಟ ಎನ್ನುವುದನ್ನು ಮನಗಂಡ ಗೌತಮ್ ಮಾತನಾಡಲು ಭೂಮಿಕಾಳನ್ನು ಕರೆದೊಯ್ದಿದ್ದಾನೆ.
ಇದೇ ಸಮಯದಲ್ಲಿ ಭೂಮಿಕಾ ತನಗೆ ಗೊತ್ತಾದ ಸತ್ಯ ಹೇಳಲು ಮುಂದಾಗಿದ್ದು ನನಗೆಲ್ಲಾ ಗೊತ್ತು ಎಂದು ಗೌತಮ್ ಹೇಳಿದ್ದಾನೆ. ಈ ಮಾತು ಕೇಳಿ ಭೂಮಿಕಾ ಶಾಕ್ ಆಗಿದ್ದಾಳೆ.ಇದೆಲ್ಲದರ ನಡುವೆ ಸುನಿಗರ ಜೈದೇವ್ ಕಾಲ್ ಮಾಡ್ತಿದ್ದಾನೆ.
ಆದರೆ ಸುನಿ ಕರೆ ಸ್ವೀಕರಿಸುತ್ತಿಲ್ಲ. ಇದರಿಂದ ಜೈದೇವ್ ಒತ್ತಡಕ್ಕೊಳಗಾಗಿದ್ದು ದಿಯಾ ಉರಿಯುವ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದಾಳೆ. ಹಾಗಾದರೆ ನಿಜವಾಗಿಯೂ ಈ ಮದುವೆ ನಿಲ್ಲುತ್ತಾ ಎಂದು ಪ್ರಶ್ನೆ ಮಾಡಿದ್ದಾಳೆ.
ದಿಯಾಳ ಈ ಪ್ರಶ್ನೆಗೆ ಉತ್ತರ ನೀಡಿರುವ ಜೈದೇವ್ ಅವನೇ ಎದ್ದು ಬಂದು ಮದುವೆ ನಿಲ್ಲಿಸಿದರೆ ಸರಿ, ಇಲ್ಲವಾದಲ್ಲಿ ಅವನ ಹೆಣ ಬೀಳಿಸಿ ಆದರೂ ಮದುವೆ ನಿಲ್ಲಿಸುವ ಮಾತುಗಳನ್ನಾಡಿದ್ದಾನೆ. ತನ್ನ ರೌಡಿಗಳನ್ನು ಮದುವೆ ಮಂಟಪಕ್ಕೆ ಕಳಿಸಿದ್ದಾನೆ.
ಸದ್ಯ ಈ ಫ್ರೋಮೋ ಕುತೂಹಲ ಕೆರಳಿಸಿದ್ದು ತನ್ನ ಮಾತು ಕೇಳದ ತಾನೇ ಸಾಕಿದ ಪೈಲ್ವಾನ್ ಸುನಿಯ ಜೀವವನ್ನು ಜೈದೇವ್ ಬಲಿ ಪಡೆಯುತ್ತಾನಾ ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ.
ಮುಂದೇನು..?
ಮಲ್ಲಿಯ ಮದುವೆ ನಿಲ್ಲಿಸುವ ಶಪಥ ಮಾಡಿರುವ ಜೈದೇವ್ ತನ್ನ ಈ ಕೆಲಸಲದಲ್ಲಿ ಯಶಸ್ವಿಯಾಗ್ತಾನಾ..? ಮಲ್ಲಿ ಮದುವೆ ನಿಂತು ಹೋಗುತ್ತಾ..? ಅಥವಾ ಜೈದೇವ್ ವಿರುದ್ದ ತಿರುಗಿ ಬಿದ್ದು ಗೌತಮ್ ಮಾತಿಗೆ ಕಟ್ಟು ಬಿದ್ದು ಮಲ್ಲಿ ಜೊತೆ ಸುನಿ ಮದುವೆಯಾಗ್ತಾನಾ..? ಎಲ್ಲ ವಿಚಾರ ನನಗೆ ಗೊತ್ತು ಎಂಬ ಗೌತಮ್ ಮಾತುಗಳಿಗೆ ಭೂಮಿಕಾ ಹೇಗೆ ಪ್ರತಿಕ್ರಿಯಿಸುತ್ತಾಳೆ..? ಗೌತಮ್ ಮಾತನ್ನೂ ಮೀರಿ ಮಲ್ಲಿ ಮತ್ತು ಸುನಿ ಮದುವೆಯನ್ನು ಭೂಮಿಕಾ ನಿಲ್ಲಿಸುತ್ತಾಳಾ..? ಪೈಲ್ವಾನ್ ಸುನಿ ಪ್ರಾಣವನ್ನೇ ಜೈದೇವ್ ಬಲಿ ಪಡೆಯುತ್ತಾನಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











