ಹಳೇಬೀಡಿನ ಸೊಸೆಯಾದ ಶ್ವೇತಾ ಗೌಡ ; ರೈತನನ್ನೇ ಮದುವೆಯಾಗಬೇಕೆಂದುಕೊಂಡಿದ್ದೇಕೆ ಅಮೃತಧಾರೆ ದಿಯಾ ?

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ.

ಇಂತಹ ಬಂಧನಕ್ಕೆ ಈ ವರ್ಷ ನಂದ ಗೋಕುಲದ ರಕ್ಷಾ.. ಗತ ವೈಭವದ ಹೀರೋ ದುಷ್ಯಂತ್ .. ಕನ್ನಡ ಕಿರುತೆರೆಯ ಜೋಡಿ ಹಕ್ಕಿ ತೇಜಸ್ವಿನಿ ಆಚಾರ್ ಮತ್ತು ವಿರಾಟ್ ವತ್ಸಲ್.. ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ.. ಅಲ್ಲು ಶಿರೀಶ್ ಮತ್ತು ನಯನಿಕಾ ರೆಡ್ಡಿ.. ನಿಮಿಕಾ ರತ್ನಾಕರ್.. ಮೆಹ್ರೀನ್ ಪಿರ್ಜಾದಾ.. ಭಾರತಿ ಹೆಗಡೆ.. ಹೀಗೆ ಹಲವರು ಈ ವರ್ಷ ಒಳಗಾಗಿದ್ದಾರೆ. ಈ ಸಾಲಿಗೆ ಈಗ ಅಮೃತಧಾರೆ ಧಾರಾವಾಹಿಯ ದಿಯಾ ಬೇಬಿ ಅಲಿಯಾಸ್ ಶ್ವೇತಾ ಗೌಡ ಕೂಡ ಸೇರಿಕೊಂಡಿದ್ದಾರೆ.

amruthadhaare-s-diya-baby-aka-shwetha-gowda-marries-a-farmer-stunning-wedding-pics-go-viral

ಹೌದು, ಶ್ವೇತಾ ಗೌಡ ಬೆಂಗಳೂರಿನ ಚೆಲುವೆ. ಕೇವಲ ನಟಿ ಮಾತ್ರ ಅಲ್ಲ ಮಾಡೆಲ್ ಕೂಡ ಹೌದು. ಬೆಂಗಳೂರು ಯುನಿವರ್ಸಿಟಿಯಲ್ಲಿ ಎಂಕಾಂ ಪದವಿಯನ್ನು ಪಡೆದಿರುವ ಶ್ವೇತಾ ಗೌಡ ಹಲವಾರು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ರ್‍ಯಾಂಪ್ ಮೇಲೆ ಬೆಕ್ಕಿನ ನಡಿಗೆಯನ್ನು ಕೂಡ ಮಾಡಿದ್ದಾರೆ. ''ಪುಣ್ಯವತಿ'' ಮತ್ತು ''ರಾಧಿಕಾ'' ಇವರ ಧಾರಾವಾಹಿಗಳು.

ಆದರೆ ಜನಪ್ರಿಯತೆ ಇವರಿಗೆ ಸಿಕ್ಕಿದ್ದು ''ಅಮೃತಧಾರೆ'' ಧಾರಾವಾಹಿಯ ಮೂಲಕ ಕೇಡಿ ಜೆಡಿಯ ಪತ್ನಿ ದಿಯಾ ಆಗಿ ಮನ ಮತ್ತು ಮನೆಗಳನ್ನು ಶ್ವೇತಾ ಗೌಡ ಈ ಧಾರಾವಾಹಿಯ ಮೂಲಕ ತಲುಪಿದ್ದಾರೆ. ಇಂಥಾ ಶ್ವೇತಾ ಗೌಡ ಸದ್ಯ ಯದುವೀರ್‌ ಸುನೀಲ್‌ ಚಂದ್ರ ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.

amruthadhaare-s-diya-baby-aka-shwetha-gowda-marries-a-farmer-stunning-wedding-pics-go-viral


ಸುನಿಲ್ ಚಂದ್ರ ಯಾರು ? ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..?

ಶ್ವೇತಾ ಗೌಡ ಅವರ ಕೈ ಹಿಡಿದಿರುವ ಸುನಿಲ್ ಚಂದ್ರ, ಹಾಸನ ಜಿಲ್ಲೆ ಬೇಲೂರು ತಾಲೂಕಿನ ಐತಿಹಾಸಿಕ ಹಳೇಬೀಡು ಸಮೀಪದ ಬಸ್ತೀಹಳ್ಳಿ ಗ್ರಾಮದವರು. ವಿಶೇಷ ಅಂದರೆ ಇವರು ಶ್ವೇತಾ ಗೌಡ ಅವರ ತಂದೆಯ ದೂರದ ಸಂಬಂಧಿ ಕೂಡ ಹೌದು. ಇನ್ನೂ ವಿಶೇಷ ಅಂದರೆ ಶ್ವೇತಾ ಗೌಡ ಅವರ ಅಜ್ಜಿ ಮನೆ ಮತ್ತು ಸುನಿಲ್ ಅವರ ಮನೆಗೆ ಕೇವಲ 500 ಮೀಟರ್ ಅಂತರ ಇದೆ ಅಷ್ಟೇ.

ವೃತ್ತಿಯಲ್ಲಿ ಸುನಿಲ್ ಚಂದ್ರ ರೈತರಾಗಿದ್ದು ಬೆಂಗಳೂರಿನಲ್ಲಿ ಇವರದ್ದೊಂದು ಬೇಕರಿ ಇದೆ. ಇನ್ನು ಶ್ವೇತಾ ಮತ್ತು ಸುನಿಲ್ ಅವರದ್ದು ಪಕ್ಕಾ ಅರೆಂಜ್ ಮ್ಯಾರೇಜ್. ಶ್ವೇತಾ ಗೌಡ ಅವರ ತಂದೆ ಅನಾರೋಗ್ಯದಿಂದ ವಿಶ್ರಾಂತಿ ಪಡೆಯಲೆಂದು ತಮ್ಮೂರಿಗೆ ಹೋಗಿದ್ದರು. ಈ ಸಮಯದಲ್ಲಿ ವಿಶ್ರಾಂತಿ ಪಡೆಯುವ ಬದಲು ತಮ್ಮ ಮಗಳ ಸಂಬಂಧವನ್ನು ಕೂರಿಸಿದ್ದಾರೆ.

ಇನ್ನೂ ಶ್ವೇತಾ ಗೌಡ ಅವರಿಗೆ ಮೊದಲಿಂದ ಸೈನಿಕ, ರೈತ ಅಥವಾ ಪೊಲೀಸ್‌ ಇವರಲ್ಲಿ ಯಾರನ್ನಾದರೂ ಮದುವೆಯಾಗಬೇಕೆನ್ನುವ ಕನಸು ಇತ್ತು. ಸುನಿಲ್ ರೂಪದಲ್ಲಿ ನನಗೆ ಬೇಕಿದ್ದ ರೈತ ಸಿಕ್ಕ ಎಂದು ಹೇಳಿರುವ ಸಿಕ್ಕಾಗ ಇಲ್ಲ ಎನ್ನಲು ಯಾವ ಕಾರಣ ಇರಲಿಲ್ಲ ಎಂದು ಶ್ವೇತಾ ಗೌಡ ತಮ್ಮ ಮದುವೆಯ ಕಥೆಯನ್ನು ''ಸುವರ್ಣ ನ್ಯೂಸ್‌''ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ಶ್ವೇತಾ ಅವರಿಗೆ ಮುಂದೆ ಇನ್ನೂ ಓದಬೇಕೆನ್ನುವ ಆಸೆ ಇದೆ. ಇವರ ಈ ಆಸೆಗೆ ಇವರ ಪತಿ ಸುನಿಲ್ ಚಂದ್ರ ಮತ್ತು ಅತ್ತೆ ಮಾವ ಕೂಡ ಬೆಂಬಲ ಸೂಚಿಸಿದ್ದಾರೆ. ಬೆನ್ನೆಲುಬಾಗಿ ನಿಂತಿದ್ದಾರೆ. ಸದ್ಯ ಶ್ವೇತಾ ಸದ್ದಿಲ್ಲದೇ ತಮಿಳು ಚಿತ್ರವೊಂದನ್ನು ಕೂಡ ಮಾಡಿದ್ಧಾರೆ. ಅದರ ಹೆಸರು ''ಮ್ಯಾಜಿಕ್ ಮಶ್ರೂಮ್''. ಶೀಘ್ರದಲ್ಲಿಯೇ ಈ ಚಿತ್ರ ತೆರೆಗೆ ಬರಲಿದೆ. ಇದರ ಜೊತೆಯಲ್ಲಿ ಇನ್ನೊಂದು ಕನ್ನಡ ಚಿತ್ರವನ್ನು ಕೂಡ ಶ್ವೇತಾ ಮಾಡುತ್ತಿದ್ಧಾರೆ. ಅಂದ್ಹಾಗೇ ಶ್ವೇತಾ ಗೌಡ ಮೇ 14ರಂದು ಹಳೇಬೀಡಿನಲ್ಲಿ ಮದುವೆ ಆಗಿದ್ದಾರೆ. ಸದ್ಯ ಇವರ ಮದುವೆಯ ಸುಂದರ ಚಿತ್ರಗಳು ವೈರಲ್ ಆಗಿವೆ.

English summary
Amruthadhaare’s 'Diya Baby' aka Shwetha Gowda has tied the knot with Sunil Chandra! Click to see the viral wedding photos and beautiful moments.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X