Amruthadhaare ; ಮಲ್ಲಿ - ಸುನಿ ಮಧುಚಂದ್ರದ ಮೇಲೆ ಹಂತಕರ ನೆರಳು - ಪೈಲ್ವಾನ್‌ನ ಕಾಪಾಡ್ತಾನಾ ಆನಂದ್ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿಯ ಮದುವೆ ಏನೋ ಆಗಿದೆ. ಆದರೆ.. ಅಪಾಯ ಇನ್ನೂ ತಪ್ಪಿಲ್ಲ. ಮಲ್ಲಿಯ ಮೇಲಿನ ಸೇಡಿನಿಂದ ಜೈದೇವ್ ಈಗ ಸುನಿಯ ಪ್ರಾಣದ ಹಿಂದೆ ಬಿದ್ದಿದ್ದಾನೆ. ನಂಬಿಕೆ ದ್ರೋಹ ಮಾಡಿದ ಸುನಿಯ ಜೀವ ಬಲಿ ಪಡೆಯಲೇಬೇಕೆಂದು ನಿರ್ಧಾರ ಮಾಡಿ ಸುಪಾರಿ ಹಂತಕರನ್ನು ಕಳಿಸಿದ್ದಾನೆ.
ಆದರೆ, ಹಂತಕರು ಅಲ್ಲಿ ಹೋಗುವವರೆಗೆ ಮಲ್ಲಿ ಮತ್ತು ಸುನಿ ಹನಿಮೂನ್‌ಗೆ ಹೋಗಿದ್ದಾರೆ. ಕೇವಲ ಮಲ್ಲಿ ಮತ್ತು ಸುನಿ ಮಾತ್ರವಲ್ಲ ಗೌತಮ್, ಭೂಮಿಕಾ, ಆನಂದ್, ಅಪರ್ಣಾ, ಶಕುನಿ ಮಾವ ಲಕ್ಷ್ಮೀಕಾಂತ್, ಅಜ್ಜಿ, ಸುಧಾ ಹೀಗೆ ಎಲ್ಲರು ಜೊತೆಯಲ್ಲಿ ನವ ಜೋಡಿಯ ಜೊತೆ ಹೋಗಿದ್ದಾರೆ. ಹೀಗಾಗಿ ಹಂತಕರ ಕೈಗೆ ಯಾರು ಸಿಕ್ಕಿಲ್ಲ. ಎಲ್ಲಿದ್ದಾರೆ ಎನ್ನುವ ಸುಳಿವು ಕೂಡ ಜೈದೇವ್‌ಗೆ ಸಿಕ್ತಿಲ್ಲ. ಈ ಹಿನ್ನೆಲೆ ಜೈದೇವ್ ತಲೆ ಕೆಡಿಸಿಕೊಂಡಿದ್ದಾನೆ.

ಈ ಕಡೆ ಜೈದೇವ್‌ನ ಲೆಕ್ಕಾಚಾರ ಆನಂದ್ ಮತ್ತು ಲಕ್ಷ್ಮೀಕಾಂತ್‌ಗೆ ಮಾತ್ರ ಗೊತ್ತಿದೆ. ಆದರೆ ಬೇರೆಯವರಿಗೆ ಗೊತ್ತಿಲ್ಲ. ಹೀಗಾಗಿ ಎಲ್ಲರು ಜಾಲಿ ಮೂಡಿನಲ್ಲಿದ್ದು ಭೂಮಿಕಾ ತಮ್ಮ ಮನಸ್ಸಿನಲ್ಲಿ ಇರೋದನ್ನೆಲ್ಲಾ ಹೇಳಿಕೊಳ್ಳಲಿ ಎಂದು ಆನಂದ್ ಕೂಲ್ ಡ್ರಿಂಕ್ಸ್ನಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾನೆ. ಇದನ್ನರಿಯದ ಭೂಮಿಕಾ ಕೂಲ್ ಡ್ರಿಂಕ್ಸ್ ಕುಡಿದು ತೂರಾಡಿ ವಾಲಾಡಿದ್ದಾಳೆ. ಗೌತಮ್ ದಿವಾನ್ ಭೂಮಿಕಾಗೆ ಮೋಸ ಮಾಡಿದ್ದಾರೆ, ನನಗೆ ನ್ಯಾಯ ಬೇಕು ಎಂದೆಲ್ಲಾ ಬಡಬಡಿಸಿದ್ದಾಳೆ.
ಮತ್ತೊಂದು ಕಡೆ ಜೈದೇವ್ ಹಂತಕರ ಮೇಲೆ ಕೂಗಾಡಿದ್ದಾನೆ. ನನ್ನ ಶತ್ರುಗಳೆಲ್ಲಾ ನನ್ನ ಕಣ್ಣಿಗೆ ಕಾಣಿಸದೇ ನೆಮ್ಮದಿಯಿಂದ ಇದ್ದಾರೆ ಹೀಗಿರುವಾಗ ನನಗೆಲ್ಲಿ ನೆಮ್ಮದಿ ಎಂದು ದಿಯಾ ಎದುರು ಹೇಳಿದ್ಧಾನೆ. ಈ ಸಮಯದಲ್ಲಿ ದಿಯಾ ತನ್ನ ಪ್ಲ್ಯಾನ್ ಹೇಳಿದ್ದು ಜಿಪಿಎಸ್ ಟ್ಯ್ರಾಕರ್ ಇದೆ ಯಾಕೆ ತಲೆ ಕೆಡಿಸಿಕೊಳ್ತೀರಾ ಎಂದಿದ್ದಾಳೆ. ನಿಮ್ಮ ಮಾವ ಲಕ್ಷ್ಮೀಕಾಂತ್‌ನನ್ನು ಅಲ್ಲಿಂದ ಓಡಿಸಿದ್ದೇ ನಾನು, ಅವರ ನಂಬಿಕೆ ಗಳಿಸಿಕೊಳ್ಳೋಕೆ ಹೀಗೆ ಮಾಡಿದೆ ಎಂದು ಹೇಳಿರುವ ದಿಯಾ ನಾನು ನಿಮ್ಮ ಪರ ಎಂದೆಲ್ಲಾ ನಂಬಿಸಿದೀನಿ, ಈಗ ನಾನು ಅವರಿಗೆ ಫೋನ್ ಮಾಡಿದರೆ ಸಾಕು ಅವರೆಲ್ಲಿದ್ದಾರೆ ಎನ್ನುವುದು ಗೊತ್ತಾಗುತ್ತೆ ಎಂದಿದ್ದಾಳೆ.
ದಿಯಾಳ ಈ ಮಾತು ಕೇಳಿ ಜೈದೇವ್ ಕಕ್ಕಾಬಿಕ್ಕಿಯಾಗಿದ್ದು, ಲಕ್ಷ್ಮೀಕಾಂತ್‌ಗೆ ದಿಯಾ ಫೋನ್ ಮಾಡಿದ್ಧಾಳೆ. ಜೈದೇವ್ ನಿಮಗೆ ಗೊತ್ತಲ್ವಾ..? ಅವನ ಕೈಗೆ ಮಾತ್ರ ಸಿಗಬೇಡಿ, ಬೆಂಗಳೂರಿನಲ್ಲಿಯೇ ಇರಬೇಡಿ, ಎಲ್ಲಾದರೂ ದೂರ ಹೋಗಿ ಎಂದೆಲ್ಲಾ ದಿಯಾ ಮಾತನಾಡಿದ್ಧಾಳೆ. ದಿಯಾಳ ಈ ಕುತಂತ್ರವನ್ನು ತಿಳಿಯದ ಲಕ್ಷ್ಮೀಕಾಂತ್ ಸತ್ಯ ಹೇಳಿದ್ದಾನೆ. ಅಜ್ಜಿ ಮನೆಯಲ್ಲಿರುವ ವಿಚಾರ ಬಾಯಿ ಬಿಟ್ಟಿದ್ದಾನೆ.
ಈ ಮಾತು ಕೇಳಿ ಜೈದೇವ್ ಫುಲ್ ಖುಷಿಯಾಗಿದ್ದು ಜೆಡಿ ಹೆಂಡ್ತಿಯಾಗಿದ್ದಕ್ಕೆ ಇವತ್ತು ಸಾರ್ಥಕ ಆಯ್ತು, ಸೂಪರ್ ಬೇಬಿ ನೀನು ಎಂದೆಲ್ಲಾ ಹೊಗಳಿ ತನ್ನ ಸುಪಾರಿ ಹಂತಕರಿಗೆ ವಿಷಯ ಹೇಳಿದ್ದಾನೆ. ಆ ಫೋಟೊದಲ್ಲಿರುವನು ಜೀವಂತವಾಗಿ ಬರಬಾರದು ಎಂದಿದ್ದಾನೆ.

ಸದ್ಯ ಹಂತಕರು ಮಲ್ಲಿ, ಸುನಿ, ಗೌತಮ್, ಭೂಮಿಕಾ, ಮತ್ತೆ ಎಲ್ಲರೂ ಇರುವ ಜಾಗಕ್ಕೆ ಬಂದಿದ್ದು ಕೊಲ್ಲುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ ಸಮಯದಲ್ಲಿ ಆನಂದ್ ಕೋವಿ ಹಿಡಿದುಕೊಂಡು ಬಂದು ರೌಡಿಗಳ ಎದುರು ನಿಂತಿದ್ದಾನೆ.
ಮುಂದೇನು ?
ಸದ್ಯ ಸುನಿಯ ಪ್ರಾಣವನ್ನು ಕಾಪಾಡಲು ಆನಂದ್ ತನ್ನ ಪ್ರಾಣವನ್ನು ಒತ್ತೆ ಇಟ್ಟಿದ್ದಾನೆ. ಆನಂದ್‌ನ ನೋಡಿ ಹಂತಕರು ಓಡಿ ಹೋಗುತ್ತಾರಾ..? ಅಥವಾ ಆನಂದ್ ಪ್ರಾಣಕ್ಕೆ ಸಂಚಕಾರ ಕಾದಿದೆಯಾ..? ಸರಿಯಾದ ಸಮಯಕ್ಕೆ ಬಂದು ಆನಂದ್ ಮತ್ತು ಸುನಿಯನ್ನು ಗೌತಮ್ ಕಾಪಾಡುತ್ತಾನಾ..? ಎನ್ನುವುದಕ್ಕೆ ಉತ್ತರ ಇಂದಿನ (ಏಪ್ರಿಲ್ 8) ಸಂಚಿಕೆಯಲ್ಲಿ ಸಿಗುವ ನಿರೀಕ್ಷೆ ಇದೆ. ಒಟ್ನಲ್ಲಿ ''ಅಮೃತಧಾರೆ'' ಕುತೂಹಲದ ಹಂತಕ್ಕೆ ತಲುಪಿದ್ದು ಮುಂದೇನಾಗುತ್ತೆ..? ಜೈದೇವ್‌ಗೆ ಗೌತಮ್ ಯಾವತ್ತು ಬುದ್ದಿ ಕಲಿಸುತ್ತಾನೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











