Amruthadhaare ; ಗೌತಮ್-ಭೂಮಿಕಾ ವೆಡ್ಡಿಂಗ್ ಆನಿವರ್ಸರಿ, ಹೊರ ಬಂತು ಎದೆಗೂಡಲ್ಲಿ ಬಚ್ಚಿಟ್ಟುಕೊಂಡ ಪ್ರೀತಿ

''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾನ ಒಂದು ಮಾಡುವ ಪ್ರಯತ್ನವನ್ನು ಮಲ್ಲಿ, ಕಾವೇರಿ ಮತ್ತು ಆನಂದ್ ಮಾಡುತ್ತಿದ್ದಾರೆ. ಆದರೆ ಇವರ ಪ್ರಯತ್ನಕ್ಕೆ ಫಲ ಸಿಗುತ್ತಿಲ್ಲ. ಹೀಗಿರುವಾಗ ಇದೀಗ ಇವರ ಪ್ರಯತ್ನಕ್ಕೆ ಶಕುಂತಲಾ ಅಣ್ಣ ಮತ್ತು ಕೆಡಿ ಜೈದೇವನ ಮಾವ ಲಕ್ಕಿ ಲಕ್ಷ್ಮೀಕಾಂತ್ ಕೂಡ ಕೈ ಜೋಡಿಸಿದ್ದು, ಗೌತಮ್ ಮತ್ತು ಭೂಮಿಕಾ ಮದುವೆಯ ವಾ‍ರ್ಷಿಕೋತ್ಸವದ ಪ್ರಯುಕ್ತ...

ಗೌತಮ್ ಮತ್ತು ಭೂಮಿಕಾ ಇಬ್ಬರನ್ನು ಪ್ರತ್ಯೇಕವಾಗಿ ಹೋಟೆಲ್‌ಗೆ ಕರೆದೊಯ್ಯುವ ಐಡಿಯಾ ನೀಡಿದ್ದಾನೆ. ಇನ್ನು ಮದುವೆಯ ವಾರ್ಷಿಕೋತ್ಸವದ ಹಿನ್ನೆಲೆ ಗೌತಮ್ ಇಡೀ ವಠಾರಕ್ಕೆ ಮಲ್ಲಿಗೆ ಹೂವನ್ನು ಹಂಚಿದ್ದು ಮಲ್ಲಿಯ ಮುಖಾಂತರ ಭೂಮಿಕಾಗೆ ಕೂಡ ಮಲ್ಲಿಗೆ ಹೂ ತಲುಪಿದೆ. ಮಲ್ಲಿಗೆ ಹೂ ಕಂಡು ಭೂಮಿಕಾ ಮನಸು ಕೂಡ ಮಿಡಿದಿದೆ. ಹಳೆಯ ನೆನಪುಗಳು ಕೂಡ ಮತ್ತೆ ಮರುಕಳಿಸಿವೆ.

Amruthadhaare The Anniversary Wish That Broke Hearts Goutham amp amp Bhoomika s Hotel Outing Ends in Tears

ಇನ್ನೂ ಭೂಮಿಕಾ ಮನೆಗೆ ಕಾವೇರಿ ಬಂದಿದ್ದು ಕೂಪನ್ ಸಿಕ್ಕಿದೆ ಹೋಟೆಲ್‌ಗೆ ಹೋಗೋಣ ಎಂದು ಹೇಳುತ್ತಾಳೆ. ಭೂಮಿಕಾ ಇವತ್ತು ನಾನು ಬರಲ್ಲ ನೀವು ಮಾತ್ರ ಹೋಗಿ ಬನ್ನಿ ಎಂದು ಹೇಳಿದ್ದು ಕಾವೇರಿ ಮತ್ತು ಮಲ್ಲಿ ಹಠ ಮಾಡುತ್ತಾರೆ.

ಆಕಾಶ್ ಕೂಡ ಕುಶಾಲನಗರದಿಂದ ಬಂದ ನಂತರ ನಾವೆಲ್ಲೂ ಹೊರಗಡೆ ಹೋಗಿಲ್ಲ ಹೋಗೋಣ ಎಂದು ಹಠ ಮಾಡುತ್ತಾನೆ. ಬೇರೆ ದಾರಿ ಇಲ್ಲದೆ ಕೊನೆಗೆ ಭೂಮಿಕಾ ಒಪ್ಪಿಕೊಳ್ಳುತ್ತಾಳೆ. ಮಲ್ಲಿಗೆ ಹೂವು ಮುಡಿದು ರೆಡಿಯಾಗಿದ್ದಾಳೆ. ಭೂಮಿಕಾಳ ಬದಲಾದ ಈ ರೂಪ ಕಂಡು ಆಕಾಶ್ ಆಶ್ಚರ್ಯಗೊಂಡಿದ್ದು ಮಲ್ಲಿ ಒಳಗೊಳಗೆ ಖುಷಿಯಾಗಿದ್ದಾಳೆ.

ಗೌತಮ್ ಮತ್ತು ಮಿಂಚು ಇರುವ ಹೋಟೆಲ್‌ಗೆ ಮಲ್ಲಿ, ಕಾವೇರಿ, ಆಕಾಶ್ ಜೊತೆ ಭೂಮಿಕಾ ಬಂದಿದ್ದು ಗೌತಮ್ ಮತ್ತು ಭೂಮಿಕಾ ಮತ್ತೊಮ್ಮೆ ಮುಖಾಮುಖಿಯಾಗಿದ್ದಾರೆ. ಇದೇ ಸಮಯದಲ್ಲಿ ಹೋಟೆಲ್‌ನಲ್ಲಿ ಸರಿಗಮಪ ಖ್ಯಾತಿಯ ಗಾಯಕ ಕಂಬದ ರಂಗಯ್ಯ ಅವರು ಹಾಡು ಹಾಡಿದ್ದು ಗೌತಮ್‌ ಮತ್ತು ಭೂಮಿಕಾಗೆ ಮೊದಲ ಭೇಟಿ ಮೊದಲ ಮಾತು ಎಲ್ಲವೂ ನೆನಪಾಗಿವೆ.

ಹೀಗಾಗಿ ಭಾವುಕಗೊಳ್ಳುವ ಗೌತಮ್, ಭೂಮಿಕಾ, ನನ್ನ ನಿಮ್ಮ ಭೇಟಿ ಆಗಿದ್ದು ಹೀಗೆಯೇ. ನಾನು ಹಿಡಿ ಪ್ರೀತಿಗೋಸ್ಕರ ಹಂಬಲಿಸುತ್ತಿದ್ದೆ. ಆದರೆ ಈಗ ನನಗೆ ಸಿಕ್ಕ ಪ್ರೀತಿಯನ್ನು ನಾನು ಕಳೆದುಕೊಂಡು ನಿಂತಿದ್ದೇನೆ. ವಿಶ್‌ ಯು ಹ್ಯಾಪಿ ಆನಿವರ್ಸರಿ ಎಂದು ಹೇಳುತ್ತಾನೆ.

Amruthadhaare The Anniversary Wish That Broke Hearts Goutham amp amp Bhoomika s Hotel Outing Ends in Tears

ಗೌತಮ್ ಆಡಿದ ಈ ಮಾತುಗಳಿಂದ ಭೂಮಿಕಾ ಕಣ್ಣೀರಧಾರೆ ಹರಿಸಿದ್ದು, ಹ್ಯಾಪಿ ಆನಿವರ್ಸರಿ ಗೌತಮ್‌ ಅವರೇ ಎಂದು ಬಿಕ್ಕಿದ್ದಾಳೆ. ಸದ್ಯ ಇಂದು ಈ ಬಿಡುಗಡೆಯಾದ ಈ ಪ್ರೋಮೋಗೆ ಹಲವರು ಮನ ಸೋತಿದ್ದು, ತಮ್ಮ ಮನದ ಮಾತುಗಳನ್ನು ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳುತ್ತಿದ್ದಾರೆ.

ಮನಸ್ಸಲ್ಲಿ ಇಷ್ಟೊಂದ್ ಪ್ರೀತಿ ಇಟ್ಕೊಂಡ್ ಬೇರೆ ಬೇರೆ ಇರೋದು ಬೇಕಾ ಭೂಮಿಕಾ ಒಂದಾಗಿ ನಿಮಗೋಸ್ಕರ ಅಲ್ಲದೆ ಇದ್ರೂ ಮಕ್ಕಳಿಗೋಸ್ಕರ ಎಂದು ಒಬ್ಬರು ಹೇಳಿದರೆ, ಭೂಮಿ ಮತ್ತು ಡುಮ್ಮ ಸರ್ ಒಂದು ಮಾಡಲು ಕಂಬದ ರಂಗಯ್ಯ ಬಂದಿದ್ದಾರೆ ಸೂಪರ್ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಒಂದು ಕ್ಷಣ ಕಣ್ಣಲ್ಲಿ ನೀರು ಬಂತು ನನಗೆ ಅರಿವಾಗದೇನೆ...ಈಗಿನ ದಿನದಲ್ಲಿ ಇಂತಹ ಅನ್ಯನ್ಯ ಜೀವನ ಎಲ್ಲಾ ಹೊಸ ದಂಪತಿಗಳದು ಆಗಲಿ..ಕೊನೆಗೂ ಆನಿರ್ವಸರಿಯಂದು ಹಳೆಯ ಭೂಮಿಕಾಳನ್ನು ನೋಡುವ ಅವಕಾಶ ಸಿಕ್ತು.. ಪ್ಲೀಸ್ ಇಬ್ಬರನ್ನು ಆದಷ್ಟು ಬೇಗ ಒಂದು ಮಾಡಿ.. ಹೀಗೆ ಹಲವರು ಹಲವು ರೀತಿಯ ಅಭಿಪ್ರಾಯಗಳನ್ನು ಸದ್ಯ ವ್ಯಕ್ತಪಡಿಸಿದ್ದಾರೆ.

ಸದ್ಯ ಆನಿವರ್ಸರಿಯಂದು ಕಣ್ಣೀರಧಾರೆ ಹರಿದಿದ್ದು, ''ಅಮೃತಧಾರೆ''ಯಲ್ಲಿ ಮುಂದೇನಾಗುತ್ತೆ..? ಇಬ್ಬರು ಒಂದಾಗುವುದು ಯಾವಾಗ..? ಜೈದೇವ್ ಮತ್ತು ಶಕುಂತಲಾ ಇಬ್ಬರನ್ನು ದಿಯಾ ಹೇಗೆ ಬೀದಿಗೆ ತರುತ್ತಾಳೆ..? ಭೂಮಿಕಾ ಮತ್ತು ಮಲ್ಲಿಯನ್ನು ಹುಡುಕುತ್ತಿರುವ ಜೈದೇವ್ ಮುಂದೇನು ಮಾಡುತ್ತಾನೆ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Read the full written update of Amruthadhaare serial! Goutham and Bhoomika's hotel outing for their anniversary culminates in a powerful, tearful wish.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X