Amruthadhaare: ಶಕುಂತಲಾ ದೇವಿ ಡ್ರಾಮಕ್ಕೆ ಫುಲ್ ಸ್ಟಾಪ್ ಇಡುತ್ತಾಳಾ ಭೂಮಿಕಾ? ಗೌತಮ್ ಕಂಗಾಲಾಗಿದ್ದೇಕೆ?
ಭೂಮಿಕಾಗೆ ಮಲ್ಲಿಯಿಂದಾಗಿ ಎಲ್ಲಾ ವಿಚಾರ ತಿಳಿದು ಹೋಗಿದೆ. ಮಲ್ಲಿಗೆ ಶಕುಂತಲಾ ಬಂಡವಾಳ ತಿಳಿದು ಹೋಗಿದೆ. ಆಕೆಯ ಅಕ್ಕನ ಜೀವನ ಹಾಳಾಗುತ್ತದೆ ಎಂದು ತಿಳಿದಾಗ ಆಕೆಗೆ ಬಹಳ ನೋವು ಆಗುತ್ತದೆ. ಏನು ಮಾಡಬೇಕು ಎಂದು ತಿಳಿಯದಾಗುತ್ತೆ. ಕೊನೆಗೆ ಭೂಮಿಕಾ ಬಳಿ ಎಲ್ಲಾ ವಿಚಾರವನ್ನು ಹೇಳಿಕೊಳ್ಳುತ್ತಾಳೆ. ಭೂಮಿಕಾಗೆ ಅತ್ತೆಯ ನಡೆಯನ್ನು ಕಂಡು ಶಾಕ್ ಆಗುತ್ತದೆ .
"ಇವರು ಏನು ಮಾಡಲು ಹೊರಟಿದ್ದಾರೆ. ಗೌತಮ್ ನಿಮ್ಮನ್ನು ಎಷ್ಟು ನಂಬಿದ್ದರು. ಆದರೆ, ಅದನ್ನು ಉಳಿಸಿಕೊಳ್ಳುವಲ್ಲಿ ನೀವು ವಿಫಲರಾದಿರಿ" ಎಂದು ಮನಸಿನಲ್ಲಿಯೇ ಅಂದುಕೊಳ್ಳುತ್ತಾರೆ. ಅತ್ತೆಯನ್ನು ಪರೀಕ್ಷೆ ಮಾಡಲೇ ಬೇಕು ಎಂದು ತಿಳಿದು ಭೂಮಿಕಾ ಮಾತ್ರೆಯನ್ನು ಕೊಡಲು ಶಕುಂತಲಾ ದೇವಿ ರೂಮ್‌ಗೆ ಬರುತ್ತಾಳೆ. ಅವರಿಗೆ ಮಾತ್ರೆಯನ್ನು ಕೊಡುತ್ತಾಳೆ. ಭೂಮಿಕಾ ಕಣ್ಣು ತಪ್ಪಿಸಿ ಹೇಗಪ್ಪಾ ಮಾತ್ರೆ ಸೇವಿಸಲಿ ಎಂದು ಆಲೋಚನೆ ಮಾಡುತ್ತಿರುತ್ತಾರೆ. ಭೂಮಿಕಾ ಶಕುಂತಲಾ ದೇವಿಗೆ ಮಾತ್ರೆ ಕೊಡುತ್ತಾಳೆ. ಆದರೆ, ಅತ್ತ ಇತ್ತ ಎಲ್ಲಿ ಕೂಡ ಕದಲದೆ ಶಕುಂತಲಾ ದೇವಿ, ಭೂಮಿಕಾ ಮುಖ ನೋಡುತ್ತಾರೆ.

ಶಕುಂತಲಾ ದೇವಿ ಮೆತ್ತಗೆ ಮಾತ್ರೆ ನುಂಗುವ ಹಾಗೆ ನಾಟಕ ಮಾಡುತ್ತಿರುತ್ತಾರೆ. ಬಳಿಕ ಮಾತ್ರೆಯನ್ನ ದಿಂಬಿನ ಕೆಳಗೆ ಇಡುತ್ತಾರೆ. ಇದನ್ನು ನೋಡಿ ಭೂಮಿಕಾಗೆ ಅತ್ತೆ ನಾಟಕ ಮಾಡುತ್ತಿರೋದು ತಿಳಿದು ಹೋಗುತ್ತೆ. ಶಕುಂತಲಾ ದೇವಿ ಮಾತ್ರೆ ನುಂಗಿದ ಹಾಗೆ ನಟಿಸಿ, ವಾಶ್ ರೂಮಿಗೆ ಎಂದು ಎದ್ದು ಹೋದಾಗ ಭೂಮಿಕಾ ಮಾತ್ರೆಯ ಹುಡುಕಾಟ ಶುರುವಾಗುತ್ತೆ.
ಆನಂದ್ ಮೀಟ್ ಆದ ಭೂಮಿಕಾ
ಭೂಮಿಕಾ, ಗೌತಮ್ ಗೆಳೆಯ ಆನಂದ್‌ರನ್ನು ಮೀಟ್ ಆಗುತ್ತಾಳೆ. ತನ್ನ ಮನಸ್ಸಿನಲ್ಲಿರುವ ಡೌಟ್ ಅನ್ನು ಕ್ಲಿಯರ್ ಮಾಡಿಕೊಳ್ಳುತ್ತಾಳೆ. "ಗೌತಮ್ ಯಾರಿಗಾಗಿ ಈ ವ್ರತ ಮಾಡುತ್ತಿದ್ದಾರೆ?" ಎಂದು ಕೇಳಿದಾಗ, ಆತನಿಗೆ ಏನು ಹೇಳಬೇಕೋ ತಿಳಿಯದಾಗುತ್ತದೆ. ಕೊನೆಗೆ ಗೌತಮ್, ಭೂಮಿಕಾಗಾಗಿ ದೇವರ ಬಳಿ ಹರಕೆಯನ್ನು ಕೇಳಿಕೊಂಡಿದ್ದ. ಅದನ್ನ ತೀರಿಸಲು ಈ ರೀತಿಯಲ್ಲ ನಡೆದು ಕೊಂಡಿದ್ದಾನೆ" ಎಂದು ಹೇಳಿದಾಗ ಭೂಮಿಕಾ ನೊಂದು ಕೊಳ್ಳುತ್ತಾಳೆ.

ಶಕುಂತಲಾ ದೇವಿ ಮೇಲೆ ನಂಬಿಕೆ ಇಲ್ಲ
ಅತ್ತೆ ನಮ್ಮ ಜೀವನದಲ್ಲಿ ಈತರ ಆಟ ಆಡುತ್ತಾರೆ ಎನ್ನುವುದನ್ನು ಊಹೆ ಕೂಡ ಮಾಡಿಕೊಂಡಿರಲಿಲ್ಲ. ಆಕೆಗೆ ಅದಾಗಲೇ ಗೌತಮ್ ಆಸ್ತಿಗಾಗಿ ಇಷ್ಟೆಲ್ಲ ಕುತಂತ್ರ ನಡೆಯುತ್ತಿದೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಹಾಗೆಯೇ ತನ್ನ ತಾಯಿಯನ್ನು ಕರೆದುಕೊಂಡು ಜ್ಯೋತಿಷಿಯ ಬಳಿ ಹೋಗುತ್ತಾಳೆ. ಮದುವೆಗೆ ಮುನ್ನ ಇಬ್ಬರ ಜಾತಕವನ್ನು ಅವರ ಬಳಿಯೇ ತೋರಿಸಿರುವುದರಿಂದ ಕೊಂಚ ಅನುಮಾನ ಇರುತ್ತೆ. ಆಗ ಜ್ಯೋತಿಷಿ "ಮದುವೆಗೆ ಮುನ್ನ ನಾನು ಏನು ಹೇಳಿದ್ದೆನೋ ಅದನ್ನೇ ಹೇಳುತ್ತಿದ್ದೇನೆ. ನಿಮ್ಮ ಅಳಿಯ ಹಾಗೂ ಮಗಳ ಜೀವನ ತುಂಬಾ ಚೆನ್ನಾಗಿ ಇರುತ್ತದೆ. ಬಹಳ ಅದ್ಭುತ ಜೋಡಿ. ಇವರ ಜಾತಕದಲ್ಲಿ ಯಾವ ದೋಷವೂ ಕೂಡ ಇಲ್ಲ." ಎಂದು ಬಹಳ ಸ್ಪಷ್ಟವಾಗಿ ಹೇಳುತ್ತಾರೆ .
ಅನುಮಾನಕ್ಕೆ ತೆರೆ ಎಳೆದೆ ಜ್ಯೋತಿಷಿ
ಜ್ಯೋತಿಷಿ ಆಡಿದ ಮಾತು ಕೇಳಿ ಭೂಮಿಕಾಗೆ ಖುಷಿಯಾಗುತ್ತದೆ. ಇತ್ತ ಗೌತಮ್‌ಗೆ ತನ್ನ ಹೆಂಡತಿ ಕಷ್ಟದಲ್ಲಿ ಸಿಲುಕುತ್ತಾಳೆ ಎನ್ನುವ ಭಯ ಕಾಡುತ್ತಿರುತ್ತದೆ. ಆದರೆ, ಗೌತಮ್ ಪಡುತ್ತಿರುವ ಯಾತನೆ ನೋಡಿ ಶಕುಂತಲಾ ದೇವಿ ಖುಷಿ ಪಡುತ್ತಿದ್ದಾರೆ.


Click it and Unblock the Notifications











