Amruthadhaare ; ನಾವ್ ಅಂದ್ರೆ ಸುಮ್ನೆನಾ ಗುರೂ - ಜೈದೇವ್‌ನ ಮಕ್ಕರ್ ಮಾಡಿದ ಮಾಯಾಜಿಂಕೆ ಮಲ್ಲಿ

''ಅಮೃತಧಾರೆ'' ಧಾರಾವಾಹಿಯಲ್ಲಿ ಭಾಗ್ಯಮ್ಮ‌ ನೇರವಾಗಿ ಭೂಮಿಕಾ‌ ಮನೆಗೆ ಬಂದಿದ್ದಾಳೆ. ಮನೆಗೆ ಬರುವ ಮುನ್ನ ಆನಂದ್ ಎದುರು ನನ್ನದು ಹೆತ್ತ ಕರುಳು, ಗುಂಡು ಏನೋ ಹೇಳಿದ ಎಂದ ಮಾತ್ರಕ್ಕೆ.. ಭೂಮಿಕಾ ಏನೋ‌ ಮಾತನಾಡಿದಳು ಅಂದ ಮಾತ್ರಕ್ಕೆ.. ನಾನು ಸುಮ್ಮನೆ ಇರೋದಕ್ಕೆ ಆಗಲ್ಲ ಎಂದು ಹೇಳುವ ಭಾಗ್ಯಮ್ಮ ನಾನು ನನ್ನ ಪ್ರಯತ್ನ ಮಾಡಲೇಬೇಕು ಎಂದು ವಾದ ಮಾಡಿ ಒಂದು ಮಾಡಲು ಪ್ರಯತ್ನ ಪಡುವುದಾಗಿ ಹೇಳಿ ಬಂದಿದ್ದಾಳೆ.

ಭಾಗ್ಯಮ್ಮನನ್ನು ಮನೆಯ ಬಾಗಿಲಿನಲ್ಲಿ ಕಂಡು ಭೂಮಿಕಾ ಖುಷಿಯಾಗಿದ್ದಾಳೆ. ಆದರೂ ಕೂಡ ಮನದಲ್ಲಿ ಆತಂಕ ಇದೆ. ಆಕಾಶ್ ಗೆ ಸತ್ಯ ಗೊತ್ತಾದರೆ ಎನ್ನುವ ಭಯ ಇದೆ.ಮತ್ತೊಂದು ಕಡೆ ಜೈದೇವ್ ಇಂಗು ತಿಂದ ಮಂಗನಂತಾಗಿದ್ದಾನೆ. ಎಣ್ಣೆ ಏಟಿನಲ್ಲಿ ದೇವಸ್ಥಾನಕ್ಕೆ ಹೋದಾಗ ಹಿಂದೆಯಿಂದ ಬಂದು ತಲೆಗೆ ಜೋರಾಗಿ ಹೊಡೆದವರು ಯಾರು ಎಂದು ತಲೆ ಕೆಡಿಸಿಕೊಂಡು ಕುಂತಿದ್ದಾನೆ.

Amruthadhaare TRUTH EXPLOSION Jaidev Knows All Can Bhagyamma Save Bhoomika s Marriage

ಆದರೆ.. ಜೈದೇವ್ ಸಾವನ್ನು ಬಯಸುತ್ತಿರುವ ದಿಯಾ ಮಾತ್ರ ಜೈದೇವ್ ಮಾತುಗಳಿಗೆ ಬೆಲೆ ಕೊಡ್ತಿಲ್ಲ. ಯಾರೋ ಹೊಡೆದಿದ್ದರಿಂದ ಬಿದ್ದೆ ಎಂದು ಜೈದೇವ್ ಹೇಳಿದರೂ ನಂಬ್ತಿಲ್ಲ.

ಇದೇ ಸಮಯದಲ್ಲಿ ಡಾಕ್ಟರ್ ಜೈದೇವ್ ಗೆ ಕರೆ ಮಾಡಿದ್ದು ನೀವು ಕಂಠಪೂರ್ತಿ ಕುಡಿದು ಬಿದ್ದಿಲ್ಲ ಬದಲಿಗೆ ನಿಮ್ಮ ತಲೆಗೆ ಯಾರೋ ಹೊಡೆದಿದ್ದಾರೆ ಹೀಗಾಗಿಯೇ ನೀವು ಬಿದ್ದಿದ್ದು ಎನ್ನುತ್ತಾನೆ.

ಇದರಿಂದ ಜೈದೇವ್ ಕೆರಳಿದ್ದು ನಾನು ಹೇಳಿಲ್ವಾ ಯಾರೋ ನನ್ನ ತಲೆಗೆ ಹೊಡೆದಿದ್ದರಿಂದಲೇ ನಾನು ಬಿದ್ದಿದ್ದು ಎಂದು ತನ್ನ ವಾದವನ್ನೇ ದಿಯಾ ಎದುರು ಮಂಡಿಸುತ್ತಾನೆ. ಈಗಲಾದರೂ ನನ್ನ ಮಾತಿನ ಮೇಲೆ ನಂಬಿಕೆ ಬಂತಾ ಎಂದು ದಿಯಾಗೆ ಕೇಳುತ್ತಾನೆ. ಭಾಗ್ಯಮ್ಮ ಹೊಡೆಯಲು ಸಾಧ್ಯ ಇಲ್ಲ. ಆ ಧೈರ್ಯ ಇಲ್ಲ ಎಂದು ಹೇಳುವ ಜೈದೇವ್ ನಾನು ದೇವಸ್ಥಾನದಲ್ಲಿ ಮಲ್ಲಿಯನ್ನು ನೋಡಿದ್ದೇನೆ ಎನ್ನುವ ಬಲವಾದ ನಂಬಿಕೆ ನನಗೆ ಇದೆ. ಹೀಗಾಗಿ ಈ ಕೆಲಸ ಅವಳದ್ದೇ ಎಂದು ಹೇಳುತ್ತಾನೆ. ಸುಮ್ಮನೆ ಯಾಕೆ ತಲೆಗೆ ಹುಳ ಬಿಟ್ಕೊಳ್ಳೋದು ದೇವಸ್ಥಾನಕ್ಕೆ ಹೋಗಿ ಸಿಸಿಟಿವಿ ನೋಡಿದರೆ ಎಲ್ಲ ವಿಚಾರ ಗೊತ್ತಾಗುತ್ತೆ ಎಂದು ಹೇಳುತ್ತಾನೆ.

ಇದೇ ವೇಳೆ ಜೈದೇವ್‌ಗೆ ದಿಯಾ ಕುಮ್ಮಕ್ಕು ನೀಡಿದ್ದು ಹೌದು ಹಾಗೇ ಮಾಡಿ ನಿಮಗೆ ಈ ತರ ಮಾಡಿದಾರೆ ಅಂದರೆ ಅವರನ್ಮು ಸುಮ್ಮನೆ ಬಿಡೋಕಾಗುತ್ತಾ ? ನಿಮಗೇನಾದರೂ ಆಗಿದ್ದರೆ ನಾನೇನು ಮಾಡಬೇಕಿತ್ತು, ಅವರಿಗೆ ಒಳ್ಳೆಯ ಪಾಠ ಕಲಿಸಿ ಎಂದು ಹೇಳುತ್ತಾಳೆ. ನೋಡ್ತೀರು ಎಂತಹ ಪಾಠ ಕಲಿಸ್ತೀನಿ ಎಂದು ಜೈದೇವ್ ಎದ್ದು ಹೊರಡುತ್ತಾನೆ.

amruthadhaare-truth-explosion-jaidev-knows-all-can-bhagyamma-save-bhoomikas-marriage

ಜೈದೇವ್ ಮತ್ತು ದಿಯಾ ನಡುವಿನ ಈ ಸಂಭಾಷಣೆಯನ್ನು ಮಾವ ಲಕ್ಷ್ಮೀಕಾಂತ್ ಮರೆಯಲ್ಲಿ ನಿಂತು ಕೇಳಿಸಿಕೊಂಡಿದ್ದಾನೆ. ಈ ಕೆಡಿಯನ್ನು ಯಾರು ಹೊಡೆದಿದ್ದು ಭೂಮಿಕಾ ಹೊಡೆಯಲು ಸಾಧ್ಯ ಇಲ್ಲ ಮಲ್ಲಿ ಹೊಡೆದಿರಬಹುದಾ ಎಂದು ಮಲ್ಲಿಗೆ ಫೋನ್ ಮಾಡುತ್ತಾನೆ.ನಿಜಾ ಹೇಳು ಇದರ ಹಿಂದೆ‌ ನಿನ್ನದೇ ಕೈವಾಡ ಇದೆ ತಾನೇ ಎನ್ನುತ್ತಾನೆ. ಆಗ ವಿಧಿ ಇಲ್ಲದೇ ಮಲ್ಲಿ ಸತ್ಯ ಹೇಳುತ್ತಾಳೆ.

ಸತ್ಯ ಹುಡುಕುತ್ತಾ ಜೈದೇವ್ ಮತ್ತೆ ದೇವಸ್ಥಾನಕ್ಕೆ ಬಂದಿದ್ದು, ನಾನು ಬಹುಮುಖ್ಯವಾದ ವಸ್ತು ಕಳೆದುಕೊಂಡಿದ್ದೇನೆ, ಸಿಸಿಟಿವಿ ದೃಶ್ಯಾವಳಿಯನ್ನೊಮ್ಮೆ ನೋಡಬಹುದಾ..? ಎಂದು ದೇವಸ್ಥಾನದ ಆಡಳಿತ ಮಂಡಳಿ ಬಳಿ ಕೇಳಿಕೊಳ್ಳುತ್ತಾನೆ. ಆಗ ಆಡಳಿತ ಮಂಡಳಿ ಅವರು ಸಿಸಿಟಿವಿ ಚೆಕ್ ಮಾಡಿದ್ದು ತಾಂತ್ರಿಕ ದೋಷದಿಂದ ನಿನ್ನೆಯ ಯಾವ ಫುಟೇಜ್ ಕೂಡ ರೆಕಾರ್ಡ್‌ ಆಗಿಲ್ಲ ಎಂದು ಹೇಳುತ್ತಾರೆ.

ಈ ಮಾತು ಕೇಳಿ ಜೈದೇವ್‌ಗೆ ನಿಂತ ನೆಲ ಕುಸಿದಂತಾಗಿದ್ದು, ಇನ್ನೊಮ್ಮೆ ನೋಡಿ ಎಂದು ಮನವಿ ಮಾಡಿಕೊಳ್ಳುತ್ತಾನೆ. ಆಗಲೂ ಕೂಡ ಉತ್ತರ ಒಂದೇ ಆಗಿರುತ್ತೆ. ಬೇರೆ ದಾರಿ ಇಲ್ಲದೇ ಜೈದೇವ್ ಅಲ್ಲಿಂದ ಹೊರಡುತ್ತಾನೆ. ಇದೇ ಸಮಯದಲ್ಲಿ ದಿಯಾಗೆ ಜೈದೇವ್ ಫೋನ್ ಮಾಡಿದ್ದು ಹೇಳಿ ಜೈ ಏನಾದರೂ ಸಾಕ್ಷಿ ಸಿಕ್ತಾ ಎಂದು ದಿಯಾ ಕೇಳುತ್ತಾಳೆ. ಆಗ ಕೆಂಡ ಕಾರುವ ಜೈದೇವ್ ಚೊಂಬು ಸಿಕ್ತು ಎಂದು ಹೇಳುತ್ತಾನೆ.

ಆದರೆ ಇದೆಲ್ಲದಕ್ಕೂ ಮೊದಲು ಅಲ್ಲಿ ಮಲ್ಲಿ ಬಂದಿರುತ್ತಾಳೆ. ದೇವಸ್ಥಾನದ ಆಡಳಿತ ಮಂಡಳಿ ಬಳಿ ಸಿಸಿಟಿವಿ ದೃಶ್ಯಾವಳಿ ಡಿಲೀಟ್ ಮಾಡುವಂತೆ ಹೇಳಿರುತ್ತಾಳೆ. ಜೈದೇವ್ ಬಂದು ಹೀಗೆಯೇ ಕೇಳುತ್ತಾನೆ ಎಂದು ಹೇಳಿ ತನ್ನ ಅಳಲು ತೋಡಿಕೊಂಡಿರುತ್ತಾಳೆ. ಮಲ್ಲಿಯ ಮಾತುಗಳಿಗೆ ಮಣಿದು ದೇವಸ್ಥಾನದ ಆಡಳಿತ ಮಂಡಳಿಯವರು ಜೈದೇವ್‌ಗೆ ಸಿಸಿಟಿವಿಯಲ್ಲಿ ಏನೆಂದರೆ ಏನೂ ಸೆರೆಯಾಗಿಲ್ಲ, ಟೆಕ್ನಿಕಲ್ ಪ್ರಾಬ್ಲಂ ಎಂದು ಹೇಳಿ ಕಳಿಸಿದ್ದಾರೆ. ಜೈದೇವ್‌ಗೆ ಮಾಯಾಜಿಂಕೆ ಮಲ್ಲಿಯ ಈ ತಂತ್ರ ಗೊತ್ತಾಗುತ್ತಾ..? ಬಾಲ ಸುಟ್ಟ ಬೆಕ್ಕಿನಂತೆ ಆಗಿರುವ ಜೈದೇವ್ ಮುಂದೇನು ಮಾಡುತ್ತಾನೆ..? ಭೂಮಿಕಾ ಮತ್ತು ಗೌತಮ್‌ನ ಭಾಗ್ಯಮ್ಮ ಮುಂಬರುವ ದಿನಗಳಲ್ಲಿ ಒಂದು ಮಾಡುತ್ತಾಳಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Amruthadhaare Crisis! Jaidev knows the truth, shattering the family peace. Bhagyamma fights for time to win over Bhoomika. Don't miss the Dec 6 update!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X