Amruthadhaare : ಮಲ್ಲಿ-ಸುನಿ ಮಧುಚಂದ್ರಕ್ಕೆ ಮೃತ್ಯುದೂತರನ್ನು ಕಳಿಸಿದ ಜೈದೇವ್ ; ನವಜೋಡಿಯನ್ನು ಕಾಪಾಡ್ತಾರಾ ಗೌತಮ್, ಭೂಮಿಕಾ ?

''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿ ಮತ್ತು ಸುನಿಯ ಮದುವೆ ನಡೆದಿದೆ. ಮಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ಜೈದೇವ್ ನೆಮ್ಮದಿಗೆ ಕೊಳ್ಳಿ ಬಿದ್ದಿದೆ. ಮಲ್ಲಿಯ ಬದುಕನ್ನು ಹೇಗಾದರೂ ಮಾಡಿ ಹಾಳು ಮಾಡಬೇಕೆಂದುಕೊಂಡ ಕನಸು ಕಮರಿದೆ.

ಹಾಗಂಥ, ಜೈದೇವ್ ಸುಮ್ಮನೆ ಕೂರುವ ವ್ಯಕ್ತಿಯಲ್ಲ. ಒಂದಿಲ್ಲೊಂದು ಪ್ಲಾನ್ ಮಾಡುವ ಕೇಡಿ. ಅವರೆಲ್ಲಾ ನಾನು ಸೋತೆ ಎಂದುಕೊಂಡು ಖುಷಿ ಪಡುತ್ತಿರಬಹುದು, ಆದರೆ...ಸೋತಿರುವನ ಪ್ರತೀಕಾರ ಗೆದ್ದಿರುವನ ಜಯಕ್ಕಿಂತ ಭಯಂಕರವಾಗಿರುತ್ತೆ ಎಂದೆಲ್ಲಾ ದಿಯಾ ಎದುರು ಡೈಲಾಗ್ ಹೊಡೆದಿರುವ ಜೈದೇವ್ ಈಗ ತನ್ನ ಮತ್ತೊಂದು ಪ್ಲಾನ್‌ನ ಕಾರ್ಯರೂಪಕ್ಕೆ ತರಲು ಅಣಿಯಾಗಿದ್ದಾನೆ.

Amruthadhaare Twist Jaidev s Deadly Honeymoon Trap Can Gautam-Bhoomika Stop Disaster

ಹೌದು, ಗೌತಮ್ ಮತ್ತು ಭೂಮಿಕಾ ನವಜೋಡಿಯನ್ನು ಮನೆ ತುಂಬಿಸಿಕೊಂಡಿದ್ದಾರೆ. ಮಲ್ಲಿ ಮತ್ತು ಸುನಿಯನ್ನು ಹನಿಮೂನ್‌ಗೆ ಕಳಿಸುವ ತಯಾರಿಯಲ್ಲಿದ್ದಾರೆ. ಗೌತಮ್‌ ಕೆಲವು ಹನಿಮೂನ್‌ ಸ್ಥಳಗಳನ್ನು ಆಯ್ಕೆ ಮಾಡಿದ್ದು, ಮಲ್ಲಿ ನಾವು ಹನಿಮೂನ್‌ಗೆ ಹೋಗಬೇಕೆಂದರೆ ನೀವು ಇಬ್ಬರೂ ಕೂಡ ನಮ್ಮ ಜೊತೆ ಬರಬೇಕೆಂದು ಬೇಡಿಕೆ ಇಟ್ಟಿದ್ದಾಳೆ.

ಮಲ್ಲಿಯ ಈ ಬೇಡಿಕೆಗೆ ಮನ್ನಣೆ ಸಿಕ್ಕಿದ್ದು ನವಜೋಡಿ ಜೊತೆಯಲ್ಲಿ ಭೂಮಿಕಾ ಮತ್ತು ಗೌತಮ್ ಕೂಡ ಹೋಗಿದ್ದಾರೆ. ತಮ್ಮ ಹಳೆಯ ಆ ಸುಂದರ ಸುಮಧುರ ದಿನಗಳನ್ನು ಮೆಲಕು ಹಾಕುತ್ತಿದ್ಧಾರೆ. ಮತ್ತೊಂದು ಕಡೆ ಮದುವೆ ಸಂಭ್ರಮ ಮುಗಿಸಿಕೊಂಡು ಮನೆಗೆ ಬಂದ ಪಾರ್ಥ ಮತ್ತು ಅಪೇಕ್ಷಾ, ಗಾಯದ ಮೇಲೆ ಬರೆ ಎಳೆಯುವಂತೆ ಮಾತನಾಡಿದ್ದಾರೆ. ಜೈದೇವ್‌ಗೆ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ.

ಗೌತಮ್ ನಿನ್ನ ತಪ್ಪುಗಳನ್ನೆಲ್ಲಾ ಕ್ಷಮಿಸುತ್ತಾ ಬಂದಿದ್ದಾನೆ. ಹಾಗಂಥ ಮತ್ತೆ ಮತ್ತೆ ತಪ್ಪು ಮಾಡಬೇಡ, ನಿನ್ನ ಪಾಪದ ಕೊಡ ತುಂಬಿದೆ ಎಂದು ಇಬ್ಬರು ಹೇಳಿದ್ದು ಬದಲಾಗಿ ಇಲ್ಲಾ ತುಂಬಾ ದೊಡ್ಡ ಬೆಲೆ ತೆರಬೇಕಾಗುತ್ತೆ ಎಂದಿದ್ದಾರೆ.

ಆದರೆ, ಜೈದೇವ್‌ನದ್ದು ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ವ್ಯಕ್ತಿತ್ವ. ಹೀಗಾಗಿಯೇ ಬದಲಾಗುವ ಮನಸು ಮಾಡದ ಜೈದೇವ್ ಸದ್ಯ ಮಲ್ಲಿ ಮತ್ತು ಸುನಿಯ ಮಧುಚಂದ್ರ ಕೆಡಿಸಲು ಸುಪಾರಿ ಹಂತಕರನ್ನು ಕಳಿಸಿದ್ದಾನೆ. ಆದರೆ, ಮಾವ ಲಕ್ಷ್ಮೀಕಾಂತ್‌ನ ಇದೇ ವೇಳೆ ಮರೆತಿದ್ದಾನೆ. ಜೈದೇವ್‌ನ ಕಪಿಮುಷ್ಠಿಯಿಂದ ಲಕ್ಷ್ಮೀಕಾಂತ್ ಪಾರಾಗಿದ್ಹೇಗೆ..? ಎನ್ನುವುದು ಇನ್ನೂ ಗೊತ್ತಾಗಿಲ್ಲವಾದರೂ ಸದ್ಯ ಜೈದೇವ್‌ನ ಪ್ಲಾನ್‌ನ ಆನಂದ್ ಬಳಿ ಬಂದು ಲಕ್ಷ್ಮೀಕಾಂತ್ ಹೇಳಿದ್ದಾನೆ.

Amruthadhaare Twist Jaidev s Deadly Honeymoon Trap Can Gautam-Bhoomika Stop Disaster

ಮುಂದೇನು..?

ಲಕ್ಷ್ಮೀಕಾಂತ್ ಮಾತು ಕೇಳಿ ಆನಂದ್ ಗಾಬರಿಯಾಗಿದ್ದು, ಈ ವಿಚಾರವನ್ನು ಗೌತಮ್‌ಗೆ ಆನಂದ್ ಹೇಳುತ್ತಾನಾ..? ಅಷ್ಟರಲ್ಲಿ ನಡೆಯಬಾರದ ಅನಾಹುತ ನಡೆದು ಹೋಗಿರುತ್ತಾ..? ಗೌತಮ್ ಮತ್ತು ಭೂಮಿಕಾ ನವ ಜೋಡಿಯನ್ನು ಈ ಅಪಾಯದಿಂದ ಪಾರು ಮಾಡುತ್ತಾ..? ಜೈದೇವ್ ಅಟ್ಟಹಾಸಕ್ಕೆ ಕಡಿವಾಣ ಬೀಳುವುದು ಯಾವಾಗ..? ಜೈದೇವ್‌ಗೆ ಗೌತಮ್ ಮತ್ತು ಭೂಮಿಕಾ ಬುದ್ದಿ ಕಲಿಸುವುದು ಯಾವಾಗ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಇಷ್ಟೆಲ್ಲಾ ನಡೆಯುತ್ತಿದ್ದರೂ ಕೂಡ ಶಕುಂತಲಾ ಕಾಣ್ತಿಲ್ಲವಲ್ಲ ಎನ್ನುವ ಪ್ರಶ್ನೆ ಕೂಡ ಸದ್ಯ ಹಲವರನ್ನು ಕಾಡುತ್ತಿದೆ.

ಪ್ರೇಕ್ಷಕರ ಅಭಿಪ್ರಾಯ

ಇಲ್ಲಿ ಜೈ ಜೊತೆಗೆ ಎಳಸು ಸುನಿ ಯ ತಪ್ಪು ಇದೆ ಪಕ್ಷಾಂತರ ಪಕ್ಷಿ ಈತ ಎಂದು ಒಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ, ಜೈದೇವ್ ಸಾವು ಯಾವಗ..? ಎಂಬ ಪ್ರಶ್ನೆಯನ್ನು ಡೈರೆಕ್ಟರ್ ಗೆ ಇನ್ನೊಬ್ಬರು ಕೇಳಿದ್ದಾರೆ. ಧಾರವಾಹಿ ಸ್ಟಾರ್ಟ್ ಆದಾಗಿಂದ ಅವನು ಸಾಯ್ತಾನೆ ಇವನು ಸಾಯ್ತಾನೆ ಅದೇ ಆಯ್ತು ಸ್ಟೋರಿ ಇಲ್ಲ ಡೈರೆಕ್ಟರ್ ಧಾರವಾಹಿ ಎಂಡ್ ಮಾಡಿ ಎಂಬ ಮನವಿಯನ್ನು ಮತ್ತೊಬ್ಬರು ಮಾಡಿಕೊಂಡಿದ್ಧಾರೆ.

ಒಟ್ನಲ್ಲಿ ಸದ್ಯ ''ಅಮೃತಧಾರೆ'' ಧಾರಾವಾಹಿಯ ಇಂದಿನ ಸಂಚಿಕೆ ಕುತೂಹಲ ಕೆರಳಿಸಿದ್ದು, ಜೈದೇವ್ ತನ್ನ ಪ್ಲಾನ್‌ನಲ್ಲಿ ಯಶಸ್ವಿಯಾಗ್ತಾನಾ..? ಅಥವಾ ಮತ್ತೊಮ್ಮೆ ಜೈದೇವ್ ಗೆ ಮುಖಭಂಗವಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Jaidev's revenge takes a dark turn! As Suni and Malli head for their honeymoon, a deadly plan unfolds. Will Gautam and Bhoomika save them? Get the latest Amruthadhaare spoilers, casting rumors, and episode updates here!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X