Amruthadhaare ; ಅಪ್ಪ, ಮಗನ ಸಮ್ಮಿಲನ - ಭೂಮಿಕಾ ಕಣ್ಣೀರಧಾರೆ, ಮನೆಯಿಂದ ಓಡಿ ಹೋಗ್ತಾಳಾ ನೊಂದ ಮಿಂಚು ?

ದಿನಕ್ಕೊಂದು ತಿರುವು ಪಡೆಯುತ್ತಿರುವ ''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ನಡುವೆ ಇದ್ದ ವೈಮನಸ್ಸು ಕರಗಿದೆ. ಉಲ್ಲಾಸದ ವಾತಾವರಣ ಮನೆ ಮಾಡಿದೆ. ಗೌತಮ್ ಮನೆಗೆ ಹೋದ ವಿಚಾರವನ್ನು ಪ್ರಶ್ನೆ ಮಾಡಿದ್ದ ವಠಾರದವರ ಮೈಚಳಿಯನ್ನು ಭೂಮಿಕಾ ಬಿಡಿಸಿದ್ದು ಜ್ವರದಿಂದ ಬಳಲುತ್ತಿದ್ದ ಜ್ವರದಿಂದ ಬಳಲುತ್ತಿದ್ದ ಗೌತಮ್, ಭೂಮಿಕಾ ಆರೈಕೆಯಿಂದ ಗುಣಮುಖನಾಗಿದ್ದಾನೆ. ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಆಕಾಶ್ , ಗೌತಮ್ ಮುದ್ದಿನ ಮಗ.

ಆದರೆ ಆಕಾಶ್ ಗೆ ಈ ವಿಚಾರ ಗೊತ್ತಿಲ್ಲ. ದೂರದಿಂದಲೇ ತಂದೆಯ ಪ್ರೀತಿಯನ್ನು ಆಕಾಶ್ ಗೆ ಗೌತಮ್ ಕೊಡುತ್ತಿದ್ದಾನೆ. ಇದೇ ಸಮಯದಲ್ಲಿ ಮನೆಗೆ ಬಂದ ಅದೃಷ್ಟ ದೇವತೆ ಮಿಂಚು ವನ್ನೂ ಕೂಡ ಅಷ್ಟೇ ಪ್ರೀತಿಯಿಂದ ಗೌತಮ್ ಸಾಕಿ ಸಲುಹುತ್ತಿದ್ದಾನೆ. ಆದರೆ ಈಗ ಮಿಂಚುಗೆ ಆಗಾತವಾಗಿದೆ. ಮತ್ತೊಂದೆಡೆ ಆಕಾಶ್ ಗೆ ಖುಷಿಯಾಗಿದೆ. ಪ್ರೇಕ್ಷಕರು ಕಾಯುತ್ತಿದ್ದ ದಿವ್ಯ ಗಳಿಗೆಗೆ ಮುಹೂರ್ತ ಕೂಡಿ ಬಂದಿದೆ.

Amruthadhaare Update Akash Discovers GAUTHAM is His FATHER But How Will Heartbroken MINCHU React

ಹೌದು, ''ಅಮೃತಧಾರೆ'' ಧಾರಾವಾಹಿ ಮತ್ತೊಂದು ತಿರುವು ಪಡೆದಿದ್ದು, ಈ ತಿರುವಿನಲ್ಲಿ ಆಕಾಶ್‌ಗೆ ತನ್ನ ತಂದೆ ಗೌತಮ್ ಎನ್ನುವ ವಿಚಾರ ಗೊತ್ತಾಗಿದೆ. ಮನೆಯಲ್ಲಿ ಕಪಾಟಿನ ಮೇಲ್ಭಾಗದ ಸೂಟ್‌ಕೇಸ್‌ನಲ್ಲಿ ಭೂಮಿಕಾ ಜತನದಿಂದ ಇಷ್ಟು ವರ್ಷ ಬಚ್ಚಿಟ್ಟಿದ್ದ ಫೋಟೊವನ್ನು ಆಕಾಶ್ ಅಚಾನಕ್ ಆಗಿ ನೋಡಿದ್ದು, ಶಾಕ್ ಆಗಿದ್ದಾನೆ. ನನ್ನ ಜೊತೆ ಸಲುಗೆಯಿಂದ ಮಾತಾಡುತ್ತಿದ್ದ ನನ್ನ ಆತ್ಮೀಯ ಫ್ರೆಂಡ್‌ ನನ್ನ ತಂದೆ ಎಂಬ ಸತ್ಯದ ಅರಿವು ಆಗಿದೆ.

ಕೂಡಲೇ ಖುಷಿಯಿಂದ ಓಡಿ ಹೋಗಿರುವ ಆಕಾಶ್, ಗೌತಮ್‌ನನ್ನು ಕಂಡು ಅಪ್ಪಿಕೊಂಡಿದ್ದಾನೆ. ಅಪ್ಪ ಎಂದು ಕರೆದಿದ್ದಾನೆ. ಆಕಾಶ್‌ನ ಈ ನಡೆಯಿಂದ ಗೌತಮ್‌ಗೆ ಅಚ್ಚರಿಯಾದರೆ.. ಏನಾಯ್ತು ಎಂದು ಆಕಾಶ್ ಹಿಂದೆ ಓಡಿ ಬಂದ ಭೂಮಿಕಾಗೆ ಅಪ್ಪ ಮಗನ ಸಮ್ಮಿಲನ ಕಂಡು ಖುಷಿಯಾಗಿದೆ.

ಇದೇ ಸಮಯದಲ್ಲಿ ಮಿಂಚುಗೆ ಕೂಡ ಮನೆಯಲ್ಲಿ ಆಲ್ಬಂ ಸಿಕ್ಕಿದ್ದು ತನಗೆ ಸಿಕ್ಕ ಆಲ್ಬಂನಲ್ಲಿ ಗೌತಮ್ ಮತ್ತು ಆಕಾಶ್ ಜೊತೆಯಲ್ಲಿರುವ ಫೋಟೊಗಳನ್ನು ಕಂಡು ಮಿಂಚು ಆಶ್ಚರ್ಯಗೊಂಡಿದ್ದಾಳೆ. ಆಘಾತಗೊಂಡಿದ್ದಾಳೆ. ಗೌತಮ್ ಮತ್ತು ಆಕಾಶ್ ಖುಷಿ ಖುಷಿಯಾಗಿ ಕಾಲ ಕಳೆಯುತ್ತಿರುವ ಫೋಟೊಗಳನ್ನು ನೋಡಿ ಮಿಂಚುಗೆ ತುಂಬಾ ನೋವಾಗಿದೆ.

ಸದ್ಯ ಬಿಡುಗಡೆಯಾದ ಈ ಪ್ರೋಮೋ ಕಂಡು ಹಲವರಿಗೆ ಹಲವು ರೀತಿಯ ಪ್ರಶ್ನೆಗಳು ಕಾಡಲು ಶುರುವಾಗಿವೆ. ತನ್ನ ಅಪ್ಪ ತನಗಿಂತ ಹೆಚ್ಚು ಆಕಾಶ್‌ನ ಇಷ್ಟ ಪಡುತ್ತಾರೆ, ಪ್ರೀತಿ ಮಾಡುತ್ತಾರೆ, ಎಂಬ ತಪ್ಪು ಕಲ್ಪನೆಯಲ್ಲಿ ನೊಂದು-ಬೆಂದು.. ಮಿಂಚು ಮನೆಯಿಂದ ಓಡಿ ಹೋಗುತ್ತಾಳಾ..? ಎನ್ನುವ ಚಿಂತೆ ಕೂಡ ಹಲವರನ್ನು ಈಗ ಕಾಡುತ್ತಿದೆ. ಅಪ್ಪ-ಮಗ ಒಂದಾದ ಹಿನ್ನೆಲೆ ಮಿಂಚು ಈಗ ಮಿಂಚಿನಂತೆ ಮಾಯವಾಗುವುದು ಧಾರಾವಾಹಿ ದೃಷ್ಟಿಯಿಂದ ಒಳ್ಳೆಯದು, ಹೀಗಾದಾಗಲೇ ಇನ್ನೂ ಕೆಲ ವರ್ಷ ಈ ಧಾರಾವಾಹಿ ಮುಂದುವರೆಸಬಹುದು ಎನ್ನುವ ಅಭಿಪ್ರಾಯ ಕೂಡ ಸದ್ಯ ವ್ಯಕ್ತವಾಗುತ್ತಿದೆ.

Amruthadhaare Update Akash Discovers GAUTHAM is His FATHER But How Will Heartbroken MINCHU React

ಇನ್ನು ಇದೇ ಸಮಯದಲ್ಲಿ ಅಪ್ಪ ಮತ್ತು ಮಗನ ಈ ಅಪ್ಪುಗೆಯ ದೃಶ್ಯ ಹಲವರ ಕಣ್ಣಂಚಿನಲ್ಲಿ ನೀರು ತರಿಸಿದ್ದು, ಒಬ್ಬರು ಸುಂದರ ರಸಘಳಿಗೆ ಹೀಗೆ ಮುಂದುವರೆಯಲಿ,ಆ ಸನ್ನಿವೇಶ ನೋಡುತ್ತಿದ್ದ ಹಾಂಗೇ ಕಣ್ಣೀರು ಬಂತು ಆನಂದದಲ್ಲಿ ಎಂದು ಹೇಳಿದರೆ, ಮತ್ತೊಬ್ಬರು ಒಂದು ಕ್ಷಣ ಕಣ್ಣಂಚಲ್ಲಿ ನೀರು ತುಂಬಿತು ಎಂದು ಹೇಳಿದ್ಧಾರೆ. ಎಷ್ಟೊಂದು ನಲುಮೆಯ ಸೊಗಸಿನ ಭಾವುಕ ದೃಶ್ಯ, ಚಂದ... ಚಂದ, ನಿಜ ನನ್ನ ಕಣ್ಣಲ್ಲೂ ನೀರು ಬಂತು ಸೊಗಸಾದ ದೃಶ್ಯ.. ಸೂಪರ್.. ಎಂದೆಲ್ಲಾ ಹಕವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಇನ್ನೂ ಕೆಲವರಲ್ಲಿ ಇದು ಕೂಡ ಕನಸಾ..? ಎಂಬ ಪ್ರಶ್ನೆ ಇದೆ.

ಒಟ್ನಲ್ಲಿ ಸದ್ಯ ''ಅಮೃತಧಾರೆ'' ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮ ಮತ್ಯಾವ ತಿರುವು ಪಡೆಯುತ್ತೆ..? ಜೈದೇವ್ ಮತ್ತು ಶಕುಂತಲಾಗೆ ಭೂಮಿಕಾ ಮತ್ತು ಗೌತಮ್ ಜೋಡಿ ಬುದ್ದಿ ಕಲಿಸುತ್ತಾ ? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Akash finally learns Gautam is his dad! But what does this mean for Minchu and the Diwan family? See the dramatic episode where heartbroken Minchu confronts the truth that changes everything in Amruthadhaare.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X