Amruthadhaare ; ಭೂಮಿಕಾ ಒಡಲಿಗೆ ಬಿದ್ದ ಬೆಂಕಿ, ಭಾಗ್ಯಮ್ಮ ಮೌನ ಮಾತಾಯ್ತು-ಶಕುಂತಲಾ ದೌರ್ಜನ್ಯದ ಕಥೆ ಬಯಲಾಗುತ್ತಾ ?
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಹತ್ತಿರದಲ್ಲಿದ್ದಾರೆ. ಆದರೂ ದೂರ ಇದ್ದಾರೆ. ಇಬ್ಬರಲ್ಲಿ ಮೊದಲಿದ್ದ ಆತ್ಮೀಯತೆ ಈಗ ಇಲ್ಲ. ಮನದಲ್ಲಿ ಪ್ರೀತಿ ಇದ್ದರೂ ಗೌತಮ್ ಎದುರು ಭೂಮಿಕಾ ಕೇವಲ ಎಚ್ಚರಿಕೆಯ ಗಂಟೆಯನ್ನು ಮಾತ್ರ ಬಾರಿಸುತ್ತಿದ್ದಾಳೆ. ಬೇರೆ ದಾರಿ ಇಲ್ಲದೇ ಗೌತಮ್ ತನ್ನ ಮಗ ಆಕಾಶ್ ನ ದೂರ ಮಾಡ್ತಿದ್ದಾನೆ. ಗೌತಮ್‌ನ ಬದಲಾದ ಈ ನಡಾವಳಿಯಿಂದ...
ಅಪ್ಪು ತಲೆ ಮೇಲೆ ಆಕಾಶವೇ ಕಳಚಿ ಬಿದ್ದಂತಾಗಿದ್ದು ಮಿಂಚು ಜೊತೆ ಈ ಕುರಿತು ಚರ್ಚೆ ಮಾಡಿದ್ದಾನೆ. ಮತ್ತೊಂದು ಕಡೆ ಆನಂದ್ ಎದುರು ಅಪರ್ಣಾ ತನ್ನ ಅಸಮಾಧಾನ ಹೊರ ಹಾಕಿದ್ದಾಳೆ. ಗೌತಮ್ ಮತ್ತು ಭೂಮಿಕಾ ಒಂದೇ ವಠಾರದಲ್ಲಿದ್ದಾರೆ. ಎದುರು ಬದುರು ಮನೆಯಲ್ಲಿದ್ದಾರೆ. ಆದರೂ ಹೀಗೆ ದೂರ ದೂರು ಇರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾಳೆ.

ಮುಂದುವರೆದು ಆಕಾಶ್ ಎಷ್ಟು ಮುದ್ದಾಗಿದ್ದಾನೆ. ನೋಡಿದರೆ ಮುದ್ದಾಡಬೇಕು ಅನ್ಸುತ್ತೆ ಆದರೆ ಆ ಖುಷಿ ಕಿತ್ತುಕೊಳ್ಳುವುದು ಎಷ್ಟು ಸರಿ ಎನ್ನುವ ಅಪರ್ಣಾ ಇದೇ ವೇಳೆ ಮಿಂಚು ವಿಚಾರವನ್ನು ಕೂಡ ಪ್ರಸ್ತಾಪಿಸುತ್ತಾಳೆ.
ಆನಂದ್ ಮತ್ತು ಅಪರ್ಣಾ ನಡುವಿನ ಈ ಮಾತುಕತೆಯನ್ನು ಭಾಗ್ಯಮ್ಮ ಕೇಳಿಸಿಕೊಂಡು ಆಘಾತಕ್ಕೀಡಾಗಿದ್ದಾಳೆ. ಗೌತಮ್ ಮತ್ತು ಭೂಮಿಕಾನ ಹೇಗಾದರೂ ಒಂದು ಮಾಡಬೇಕೆನ್ನುವ ಉದ್ದೇಶದಿಂದ ಭಾಗ್ಯಮ್ಮ ಮನೆ ಬಿಟ್ಟು ಹೋಗಿದ್ದಾಳೆ.
ಭಾಗ್ಯಮ್ಮ ಮನೆಯಲ್ಲಿ ಕಾಣದಿರುವ ಹಿನ್ನೆಲೆ ಆನಂದ್ ಮತ್ತು ಅಪರ್ಣಾ ಗಾಬರಿಯಾಗಿದ್ದಾರೆ.ಗೌತಮ್‌ಗೆ ವಿಷಯ ತಿಳಿಸಿದ್ದಾರೆ. ಗೌತಮ್ ಕೂಡ ಆತಂಕಕ್ಕೀಡಾಗಿದ್ದು ತಾಯಿಯನ್ನು ಹುಡುಕುತ್ತಿದ್ದಾನೆ. ಆನಂದ್ ಕೂಡ ಭಾಗ್ಯಮ್ಮ ಫೋಟೋ ತೋರಿಸುತ್ತಾ ಗಲ್ಲಿ ಗಲ್ಲಿ ಸುತ್ತುತ್ತಿದ್ದಾನೆ.
ಇನ್ನೊಂದು ಕಡೆ ಬೀದಿ ಅಲೆಯುತ್ತಿರುವ ಭಾಗ್ಯಮ್ಮ ಕಣ್ಣಿಗೆ ಭೂಮಿಕಾ ಬಿದ್ದಿದ್ದಾಳೆ. ಭಾಗ್ಯಮ್ಮ ಓಡಿಕೊಂಡು ಹೋಗಿದ್ದಾಳಾದರೂ ಆಟೋದಲ್ಲಿರುವ ಭೂಮಿಕಾ ಗಮನಿಸಿದೇ ಹಾಗೇ ಹೋಗಿದ್ದಾಳೆ.

ಆದರೂ ಭಾಗ್ಯಮ್ಮ ಕುಗ್ಗಿಲ್ಲ. ಸೊಸೆಯನ್ನು ಹುಡುಕಲೇಬೇಕು ಎಂದು ಹುಡುಕುತ್ತಾ ಭಾಗ್ಯಮ್ಮ ಸದ್ಯ ಬೆಂಗಳೂರಿನ ಬಂಡಿಮಹಾಕಾಳಿ ದೇವಸ್ಥಾನಕ್ಕೆ ಬಂದಿದ್ದಾಳೆ. ಅಲ್ಲಿ ಭೂಮಿಕಾ ಕೂಡ ಬಂದಿದ್ದು ಭಾಗ್ಯಮ್ಮ ಕಣ್ಣಿಗೆ ಬಿದ್ದಿದ್ದಾಳೆ. ಖುಷಿಯಿಂದ ಭೂಮಿಕಾ ಬಳಿ ಹೋಗುವ ಪ್ರಯತ್ನವನ್ನು ಭಾಗ್ಯಮ್ಮ ಮಾಡುತ್ತಾಳೆ. ಆದರೆ ಸಾಧ್ಯವಾಗುತ್ತಿಲ್ಲ.
ಹೀಗಿರುವಾಗ ಭೂಮಿಕಾ ಒಡಲಿಗೆ ಬೆಂಕಿ ತಗುಲಿದ್ದು ಭಾಗ್ಯಮ್ಮ ಬೆಚ್ಚಿ ಬಿದ್ದಿದ್ದಾಳೆ. ಭೂಮಿಕಾನ ಎಚ್ಚರಿಸುವ ಪ್ರಯತ್ನ ಮಾಡುತ್ತಾಳೆ. ಇದೇ ವೇಳೆ ಪವಾಡ ಸಂಭವಿಸಿದ್ದು ಭಾಗ್ಯಮ್ಮ ಮೌನ ಮಾತಾಗಿದೆ.
ಭೂಮಿಕಾ ಎಂದು ಭಾಗ್ಯಮ್ಮ ಕೂಗಿದ್ದಾಳೆ. ಭಾಗ್ಯಮ್ಮ ಕೂಗು ಭೂಮಿಕಾಗೆ ಕೇಳಿಸಿದ್ದು ಅತ್ತೆಯನ್ನು ನೋಡಿ ಭೂಮಿಕಾ ಖುಷಿಯಾಗಿದ್ದಾಳೆ. ಇದೇ ಸಮಯದಲ್ಲಿ ಸೆರಗಿಗೆ ಹತ್ತಿಕೊಂಡ ಬೆಂಕಿ ನಂದಿಸುವ ಪ್ರಯತ್ನ ಮಾಡುತ್ತಾಳೆ.
ವಿಶೇಷ ಅಂದರೆ ಇದೆಲ್ಲವೂ ನಡೆಯುವ ಸಮಯದಲ್ಲಿ ಗೌತಮ್ ಕೂಡ ಅದೇ ದೇವಸ್ಥಾನಕ್ಕೆ ಸದ್ಯ ಬಂದಿದ್ದಾನೆ. ಈಗ ಗೌತಮ್, ಭೂಮಿಕಾ, ಭಾಗ್ಯಮ್ಮ ಈ ಮೂವರು ಮುಖಾಮುಖಿಯಾಗುತ್ತಾರಾ..? ದೂರವಾದ ಮನಸುಗಳನ್ನು ಭಾಗ್ಯಮ್ಮ ಒಂದು ಮಾಡುತ್ತಾಳಾ..? ಎನ್ನುವುದನ್ನು ಕಾದು ನೋಡಬೇಕಿದೆ.
ಇನ್ನೂ ಎಲ್ಲರಿಗೆ ಗೊತ್ತಿರುವಂತೆ ಶಕುಂತಲಾಳಿಂದ ಅತೀ ಹೆಚ್ಚು ನರಳಿದವಳು ಭಾಗ್ಯಮ್ಮ. ಹೀಗಾಗಿ ಶಕುಂತಲಾ ತನ್ನ ಮೇಲೆ ಎಸಗಿದ ದೌರ್ಜನ್ಯದ ಕಥೆಯನ್ನು ಗೌತಮ್ ಎದುರು ಭಾಗ್ಯಮ್ಮ ಹೇಳುತ್ತಾಳಾ..? ಎಲ್ಲಕ್ಕಿಂತ ಮುಖ್ಯವಾಗಿ ಭೂಮಿಕಾ ಮನೆಯಿಂದ ಹೊರ ಬಂದ ಸತ್ಯ ಭಾಗ್ಯಮ್ಮಗೆ ಗೊತ್ತು. ಆ ಸತ್ಯ ತಿಳಿಯಲು ಪರದಾಡುತ್ತಿರುವ ಗೌತಮ್ ಗೆ ಭಾಗ್ಯಮ್ಮ ಸಹಾಯ ಮಾಡುತ್ತಾಳಾ..?ಇಂಚಿಂಚೂ ಬಿಡದಂತೆ ಎಲ್ಲವನ್ನೂ ಗೌತಮ್ ಗೆ ಹೇಳುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.
ಒಟ್ನಲ್ಲಿ ಸದ್ಯ ''ಅಮೃತಧಾರೆ'' ಧಾರಾವಾಹಿ ಕುತೂಹಲ ಕೆರಳಿಸಿದ್ದು, ಹಲವರು ಸೂಪರ್ ಭಾಗ್ಯಮ್ಮ ಎಂದು ಕಾಮೆಂಟ್ ಮಾಡಿದ್ದಾರೆ. ಅತ್ತೆಗೆ ಸೊಸೆ ಮೇಲೆ ಎಷ್ಟ ಪ್ರೀತಿ ಇದೆ ನೋಡಿ, ಭಾಗ್ಯಮ್ಮನೇ ಮಗ ಮತ್ತು ಸೊಸೆನಾ ಒಂದು ಮಾಡ್ತಾರೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಡೈರೆಕ್ಟರ್ ಗೆ ಈ ಸಲ ಅವಾರ್ಡ್ ಬರಲೇ ಬೇಕು ಅದ್ಭುತವಾದ ಕಥೆ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











