Amruthadhaare ; ಅಯ್ಯೋ ದೇವಾ, ಜೈದೇವ್ ಕಣ್ಣೇದುರು ಭಾಗ್ಯಮ್ಮ - ಅತ್ತ ಗೌತಮ್ ಇತ್ತ ಭೂಮಿಕಾ, ಮುಂದೇನು ?

"ಅಮೃತಧಾರೆ" ಧಾರಾವಾಹಿಯಲ್ಲಿ ಆನಂದ್ ಮನೆಯನ್ನು ಭಾಗ್ಯಮ್ಮ ತೊರೆದಿದ್ದಾಳೆ. ಇದರಿಂದ ಆನಂದ್-ಅಪರ್ಣಾ ಗಾಬರಿಯಾಗಿದ್ದು ಗೌತಮ್ ಗೆ ಆನಂದ್ ವಿಷಯ ತಲುಪಿಸಿದ್ದಾನೆ. ಅಮ್ಮ ಮನೆಯಲ್ಲಿ ಇಲ್ಲ ಎನ್ನುವ ವಿಚಾರ ತಿಳಿದ ಗೌತಮ್ ಸಹಜವಾಗಿಯೇ ಆತಂಕಕ್ಕೀಡಾಗಿದ್ದಾನೆ. ಆದರೆ.. ಗೌತಮ್ ನ ಈ ತಲ್ಲಣ-ತಳಮಳ ಮಿಂಚುಗಾಗಲಿ.. ಆಕಾಶ್ ಗಾಗಲಿ.. ಭೂಮಿಕಾಗಾಗಲಿ ಅಥವಾ ಮಲ್ಲಿಗಾಗಲಿ ಯಾರಿಗೂ ಗೊತ್ತಿಲ್ಲ. ಹೀಗಾಗಿಯೇ ನಿರಾತಂಕವಾಗಿರುವ ಭೂಮಿಕಾ ಸದ್ಯ.....

ದೇವಸ್ಥಾನಕ್ಕೆ ಹೋಗಲು ಸಿದ್ಧವಾಗಿದ್ದಾಳೆ. ದೇವಸ್ಥಾನಕ್ಕೆ ಬರಲ್ಲ ಎಂದ ಆಕಾಶ್ ಗೆ ಗದರಿದ್ದಾಳೆ. ದೇವಸ್ಥಾನಕ್ಕೆ ಹೋಗುತ್ತಿರುವ ವಿಚಾರವನ್ನು ಮಿಂಚುಗೆ ಆಕಾಶ್ ಹೇಳಿದ್ದು ಗೌತಮ್ ಬಳಿ ಮಿಂಚು ನಾವು ದೇವಸ್ಥಾನಕ್ಕೆ ಹೋಗೋಣ ಎಂದು ಹಠ ಹಿಡಿದಿದ್ದಾಳೆ. ಗೌತಮ್ ಗದರಿದ್ದಾನೆ.

amruthadhaare-update-dec-2-jaidev-stunned-bhagyamma-s-unexpected-arrival-rocks-the-temple-drama


ಮತ್ತೊಂದು ಕಡೆ ದಿಯಾ ದೆಸೆಯಿಂದ ಹಗಲು ಕುಡುಕನಾಗಿರುವ ಜೈದೇವ್ ಮೇಲೆ ಶಕುಂತಲಾ ಕೆಂಡ ಕಾರಿದ್ದು ಹೀಗೆ ಕುಡಿತಿದ್ದರೆ ಸರ್ವನಾಶ ಆಗ್ತೀಯಾ ಎಂದು ಹೇಳಿದ್ದಾಳೆ. ದೇವಸ್ಥಾನಕ್ಕೆ ಹೋಗಿ ಬರುವಂತೆ ಹೇಳಿದ್ದಾಳೆ. ಶಕುಂತಲಾ ಮಾತುಗಳಿಗೆ ಜೈದೇವ್ ವ್ಯಂಗ್ಯವಾಡಿದ್ದು, ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ಜವಾಬ್ದಾರಿ ನಿನ್ನದು ಎಂದು ದಿಯಾಗೆ ಶಕುಂತಲಾ ಖಡಕ್ ಎಚ್ಚರಿಕೆ ನೀಡಿದ್ದಾಳೆ.

ಸದ್ಯ ಒಂದೇ ದೇವಸ್ಥಾನಕ್ಕೆ ಭೂಮಿಕಾ, ಮಲ್ಲಿ, ಆಕಾಶ್, ಗೌತಮ್ , ಭಾಗ್ಯಮ್ಮ ಮತ್ತು ಜೈದೇವ್ ಬಂದಿದ್ದಾರೆ. ಆದರೆ.. ಜೈದೇವ್ ಎಣ್ಣೆಯ ಅಮಲಿನಲ್ಲಿದ್ದು ಜೈದೇವ್ ಕಣ್ಣೆದುರೇ ಭೂಮಿಕಾ, ಮಲ್ಲಿ ಮತ್ತು ಆಕಾಶ್ ಹಾದು ಹೋಗಿದ್ದಾರೆ. ಆದರೆ.. ಜೈದೇವ್‌ಗೆ ಮಾತ್ರ ಗೊತ್ತಾಗಿಲ್ಲ.

ಇದೇ ವೇಳೆ ಭಾಗ್ಯಮ್ಮ ಕೂಡ ದೇವಸ್ಥಾನಕ್ಕೆ ಬಂದಿದ್ದು ಜೈದೇವ್ ಕಣ್ಣಿಗೆ ಭಾಗ್ಯಮ್ಮ ಬಿದ್ದಿದ್ದಾಳೆ. ಭಾಗ್ಯಮ್ಮ ಕಂಡು ಅರೆ ಕ್ಷಣ ಶಾಕ್ ಆಗಿರುವ ಜೈದೇವ್ ಕಣ್ಣು ಉಜ್ಜಿಕೊಂಡು ನೋಡಿದ್ದಾನೆ. ಪರಾವಲಂಬಿ ಸ್ವಾವಲಂಬಿಯಾಗಿ ಹೋದ್ಳಾ ಎಂದು ತನ್ನನ್ನು ತಾನೇ ಪ್ರಶ್ನೆ ಮಾಡಿಕೊಳ್ತಾನೆ.ಒಂದು ವೇಳೆ ನಿಜಕ್ಕೂ ನನ್ನ ಕಣ್ಣಿಗೆ ಕಂಡಿದ್ದು ಭಾಗ್ಯಮ್ಮ ಆದರೆ ಜಾಕ್ ಪಾಟ್ ಎಂದುಕೊಂಡು ಕಾರಿಂದ ಇಳಿಯುತ್ತಾನೆ. ದೇವಸ್ಥಾನದೊಳಗೆ ಹೋಗುತ್ತಾನೆ.

ಇನ್ನೊಂದು ಕಡೆ ಇದ್ಯಾವುದರ ಪರಿವೆ ಇಲ್ಲದ ಭೂಮಿಕಾ ದೇವರ ಬಳಿ ದೇವರೇ ನನ್ನ ಉದ್ದೇಶ ಯಾರಿಗೂ ಕಟ್ಟು ಹಾಕುವುದಲ್ಲ, ಯಾರ ಮನಸಿಗೂ ನೋವು ಮಾಡುವುದಲ್ಲ, ಗೌತಮ್ ಅವರಿಗೆ ಎಲ್ಲಿ ಏನಾಗುತ್ತೆ ಎನ್ನುವುದಷ್ಟೇ ನನ್ನ ಚಿಂತೆ, ಅದಕ್ಕೆ ನಾನು ಈ ರೀತಿ ಇರೋದು ಎಂದು ಹೇಳುತ್ತಾಳೆ. ನಾನ್ಯಾಕೇ ಇಷ್ಟು ಕಲ್ಲು ಮನಸು ಮಾಡಿಕೊಂಡಿದ್ದೇನೆ ಎಂದು ಅನಿಸಬಹುದು ಆದರೆ ನನ್ನೊಳಗಾದ ಯುದ್ದ, ನನ್ನ ಒದ್ದಾಟ ನನಗೆ ಮಾತ್ರ ಗೊತ್ತು ಎನ್ನುತ್ತಾಳೆ.

amruthadhaare-update-dec-2-jaidev-stunned-bhagyamma-s-unexpected-arrival-rocks-the-temple-drama

ಮತ್ತೊಂದು ಕಡೆ ಮಲ್ಲಿ ನಮ್ಮ ಅಕ್ಕ-ಭಾವನ ಆದಷ್ಟು ಬೇಗ ಒಂದು ಮಾಡು ದೇವರೇ ಎಂದು ಮಲ್ಲಿ ಪ್ರಾರ್ಥನೆ ಮಾಡುತ್ತಾಳೆ. ನನ್ನ ಜೊತೆ ಮೊದಲಿನಂತೆ ನನ್ನ ಅಪ್ಪ ಮಾತಾಡುವಂತೆ ಮಾಡು ಎಂದು ಆಕಾಶ್ ಪ್ರಾರ್ಥನೆ ಮಾಡುತ್ತಾನೆ.

ಹೀಗೆ ಸಾಗುತ್ತಿರುವ ''ಅಮೃತಧಾರೆ'' ಧಾರಾವಾಹಿಯಲ್ಲಿ ಈಗ ಜೈದೇವ್, ಭಾಗ್ಯಮ್ಮ, ಮಲ್ಲಿ, ಗೌತಮ್, ಮತ್ತು ಆಕಾಶ್ ಎಲ್ಲರೂ ಒಂದೇ ದೇವಸ್ಥಾನದಲ್ಲಿದ್ದು ಈಗಾಗಲೇ ಮೊನ್ನೆ ( ಡಿಸೆಂಬರ್ 1) ತೋರಿಸಲಾದಂತೆ ಭೂಮಿಕಾ ಒಡಲಿಗೆ ಬೆಂಕಿ ತಗುಲಿದ್ದು ಭಾಗ್ಯಮ್ಮ ಬೆಚ್ಚಿ ಬಿದ್ದಿದ್ದಾಳೆ. ಭೂಮಿಕಾನ ಎಚ್ಚರಿಸುವ ಪ್ರಯತ್ನ ಮಾಡುತ್ತಾಳೆ. ಇದೇ ವೇಳೆ ಪವಾಡ ಸಂಭವಿಸಿದ್ದು ಭಾಗ್ಯಮ್ಮ ಮೌನ ಮಾತಾಗಿದೆ. ಭೂಮಿಕಾ ಎಂದು ಭಾಗ್ಯಮ್ಮ ಕೂಗಿದ್ದಾಳೆ. ಭಾಗ್ಯಮ್ಮ ಕೂಗು ಭೂಮಿಕಾಗೆ ಕೇಳಿಸಿದ್ದು ಅತ್ತೆಯನ್ನು ನೋಡಿ ಭೂಮಿಕಾ ಖುಷಿಯಾಗಿದ್ದಾಳೆ. ಇದೇ ಸಮಯದಲ್ಲಿ ಸೆರಗಿಗೆ ಹತ್ತಿಕೊಂಡ ಬೆಂಕಿ ನಂದಿಸುವ ಪ್ರಯತ್ನ ಮಾಡುತ್ತಾಳೆ.

ಇದೆಲ್ಲದರ ಹೊರತಾಗಿ ಸದ್ಯ ದೇವಸ್ಥಾನದಲ್ಲಿರುವ ಜೈದೇವ್ ಎಲ್ಲಿ ಭೂಮಿಕಾ ಮತ್ತು ಗೌತಮ್ ಕಣ್ತಪ್ಪಿಸಿ ಭಾಗ್ಯಮ್ಮಳನ್ನು ಕಿಡ್ಯಾಪ್ ಮಾಡುತ್ತಾನೆ ಎನ್ನುವ ಪ್ರಶ್ನೆ ಸದ್ಯ ಹಲವರನ್ನು ಕಾಡುತ್ತಿದೆ. ಜೈದೇವ್ ಕಪಿಮುಷ್ಠಿಯಿಂದ ಭಾಗ್ಯಮ್ಮ ಮತ್ತು ಆಕಾಶ್ ಸಮೇತ ಗೌತಮ್‌ ಮತ್ತು ಭೂಮಿಕಾ ಪಾರಾಗುತ್ತಾರಾ..? ಎನ್ನುವುದನ್ನು ಕಾದು ನೋಡಬೇಕಿದೆ. ಇದೆಲ್ಲದರ ನಡುವೆ ಮಾತು ಬಂದ ಭಾಗ್ಯಮ್ಮ ಯಾವೆಲ್ಲಾ ಸತ್ಯ ಹೇಳುತ್ತಾಳೆ ಎನ್ನುವುದನ್ನು ಕೂಡ ನೋಡಬೇಕಿದೆ.

More from Filmibeat

English summary
Don't miss the high-stakes drama in Amruthadhaare's Dec 2 update. Jaidev successfully sets a temple trap for Bhagyamma. Find out exactly how the confrontation plays out and what happens next!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X