Amruthadhare ; ಸಂಗಮ ಅಲ್ಲ ಸಂಗ್ರಾಮ - ರಣಕಹಳೆ ಊದಿದ ಭೂಮಿಕಾ

"ಅಮೃತಧಾರೆ " ಧಾರಾವಾಹಿಯಲ್ಲಿ ಹಣದಾಹಿ ಜೈದೇವ್ ಸದ್ಯ ಗೌತಮ್ ಮತ್ತು ಭೂಮಿಕಾನ ಮುದ್ದಿನ ಮಗ ಆಕಾಶ್ ನನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಆಕಾಶ ಕಾಣಿಸದ ಹಿನ್ನೆಲೆ ಭೂಮಿಕಾ ಆತಂಕಗೊಂಡಿದ್ದು ಮಿಂಚುಗೆ ಈ ಕೆಲಸದ ಹಿಂದೆ ಜೈದೇವ್ ಕೈವಾಡ ಇರಬಹುದು ಎನ್ನುವ ಅನುಮಾನ ಬಂದಿದೆ. ಕೂಡಲೇ ಮಿಂಚು ಚಿತ್ರವನ್ನು ಬಿಡಿಸಿ ಭೂಮಿಕಾಗೆ ತೋರಿಸಿದ್ದಾಳೆ.

ಜೈದೇವ್ ಚಿತ್ರವನ್ನು ನೋಡಿ ಭೂಮಿಕಾ ಆತಂಕ ಇನ್ನೂ ಹೆಚ್ಚಾಗಿದೆ.ಭೂಮಿಕಾಳನ್ನು ಮಲ್ಲಿ ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದು, ಇದೇ ಸಮಯದಲ್ಲಿ ಆಕಾಶ್ ಬಳಿ ನಂಬರ್ ತಗೊಂಡು ಮಲ್ಲಿಗೆ ಜೈದೇವ್ ಫೋನ್ ಮಾಡಿದ್ದಾನೆ. ಆಕಾಶ್ ನನ್ನ ಬಳಿ ಇದ್ದಾನೆ ಎಂದು ಹೇಳಿದ್ದಾನೆ.

amruthadhaare-update-dec-27-bhoomika-turns-into-goddess-kali-as-jaidev-targets-aakash-for-property

ಇಷ್ಟೇ ಅಲ್ಲ ನನ್ನಲ್ಲಿ ಇನ್ನೂ ಚೂರು ಪಾರು ಮಾನವೀಯತೆ ಇದೆ ಹೀಗಾಗಿ ಆಕಾಶ್ ಗೆ ನಾನೇನೂ ಮಾಡಲ್ಲ, ಮರು ಮಾತನಾಡದೇ ಬಂದು ಸಹೊ ಹಾಕುವಂತೆ ಹೇಳಿದ್ದಾನೆ. ಇಬ್ಬರಿಗೂ ನೆಮ್ಮದಿ ಮುಖ್ಯ ಎಂದು ಹೇಳಿದ್ದಾನೆ.

ಮತ್ತೊಂದು ಕಡೆ ತನ್ನನ್ನು ತಾನು ಹೊಗಳಿಕೊಳ್ಳುವ ಭರದಲ್ಲಿ ಆಕಾಶ್ ಎದುರು ಜೈದೇವ್ ಎಲ್ಲ ಕಥೆ ಹೇಳಿದ್ದಾನೆ. ನಿನ್ನ ಅಪ್ಪ- ಅಮ್ಮನ ಮನೆಯಿಂದ ಹೊರ ಹಾಕಿದ್ದೇ ನಾನು ಎಂದು ಹೇಳುತ್ತಾನೆ. ಆಗ ಓ ಇದಕ್ಕೆನಾ ಅಮ್ಮ ಕುಶಾಲನಗರಕ್ಕೆ ಕರೆದುಕೊಂಡು ಹೋಗಿದ್ದು ಎಂದು ಆಕಾಶ್ ಮನದಲ್ಲಿ ಅಂದುಕೊಳ್ಳುತ್ತಾನೆ.

ನಿನ್ನ ಅಪ್ಪ ಅಮ್ಮ ಏನೂ ಕಡಿಮೆ‌ ಕಾಟ ಕೊಟ್ಟಿದಾರಾ ನಮಗೆ ಆದರೂ ಕೊನೆಗೆ ಗೆದ್ದಿದ್ದು ನಾನೇ ಎನ್ನುತ್ತಾನೆ. ಇನ್ನೊಂದು ಕಡೆ ಜೈದೇವ್ ನ ಕಪಿ ಮುಷ್ಟಿಯಿಂದ ಮಗನನ್ನು ‌ಪಾರು ಮಾಡಲು ಹಲವು ವರ್ಷಗಳ ನಂತರ ದಿವಾನ್ ಮನೆತನದ ಮನೆಗೆ ಮಲ್ಲಿ ಜೊತೆ ಭೂಮಿಕಾ ಬಂದಿದ್ದು ಜೈದೇವ್ ನೀಡಿದ ಪೇಪರ್ ಮೇಲೆ ಭೂಮಿಕಾ ಮತ್ತು‌ ಮಲ್ಲಿ ಸಹಿ ಹಾಕಿದ್ದಾರೆ.

amruthadhaare-update-dec-27-bhoomika-turns-into-goddess-kali-as-jaidev-targets-aakash-for-property

ಇದೇ ವೇಳೆ ಗುಡುಗಿರುವ ಭೂಮಿಕಾ ಇನ್ನೇನಾದರೂ ಸಹಿ ಮಾಡಲು ಇದೆಯಾ ? ಅಥವಾ ನಮ್ಮಿಂದ ಇನ್ನು ಕಿತ್ಕೋಳ್ಳಲು ಇದೆಯಾ ? ಎಂದು ಪ್ರಶ್ನೆ ಮಾಡುತ್ತಾಳೆ. ಇವತ್ತೇ ಕೊನೆ, ಇನ್ಯಾವತ್ತು ನಾವು ನಿಮ್ಮ ಮುಖ ನೋಡಬಾರದು ಇವತ್ತೇ ಮುಗಿಸಿ ಎನ್ನುವ ಭೂಮಿಕಾ ಇನ್ಮುಂದೆ ನಮ್ಮನ್ನಾಗಲಿ.. ಮಲ್ಲಿಯನ್ನಾಗಲಿ.. ಹುಡುಕಿಕೊಂಡು ಬರುವ ಪ್ರಯತ್ನ ಮಾಡಬೇಡಿ ಎನ್ನುತ್ತಾಳೆ.

ಮುಂದುವರೆದು ತಾಳ್ಮೆ ಕಟ್ಟೆ ಒಡೆಯೋದು ಒಂದೇ, ಆಣೆಕಟ್ಟೆ ಒಡೆಯೋದು ಒಂದೆ ಎನ್ನುವ ಭೂಮಿಕಾ ಕೆಣಕಿದರೆ ಭೂಕಂಪ ಆಗತ್ತೆ, ಜ್ವಾಲಾಮುಖಿಯೂ ಒಡೆಯತ್ತೆ. ಇಷ್ಟು ವರ್ಷ ತಾಳ್ಮೆಯಿಂದ ಇದ್ದು ಬಂದೆ. ಇನ್ಮುಂದೆ ಆಗೋದು ಸಂಗಮ ಅಲ್ಲ ಸಂಗ್ರಾಮ ಎಂದು ವಾರ್ನಿಂಗ್‌ ನೀಡಿದ್ದಾಳೆ.

ಸದ್ಯ ಭೂಮಿಕಾಳ ಈ ನಡೆಗೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸೂಪರ್ ಭೂಮಿಕಾ ಸೂಪರ್ ಸೂಪರ್ ಆಕ್ಟಿಂಗ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಒಟ್ನಲ್ಲಿ ಸದ್ಯ ಜೈದೇವ್ ಮತ್ತು ಭೂಮಿಕಾ ಇನ್ನೊಮ್ಮೆ ಎದುರು ಬದರಾಗಿದ್ದು ಜೈದೇವ್‌ಗೆ ಭೂಮಿಕಾ ಎಚ್ಚರಿಕೆ ನೀಡಿದ್ದಾಳೆ. ಆಕಾಶ್‌ನ ಕರೆದುಕೊಂಡು ಹೋಗಿದ್ದಾಳೆ. ಇನ್ನು ಆಕಾಶ್‌ನ ಜೈದೇವ್‌ ಕರೆದುಕೊಂಡ ಹೋದ ವಿಚಾರ ಗೌತಮ್‌ಗೆ ಗೊತ್ತಾಗಿಲ್ಲ. ಗೊತ್ತಾದರೆ ಗೌತಮ್‌ ಹೇಗೆ ಪ್ರತಿಕ್ರಿಸುತ್ತಾನೆ ಎನ್ನುವದನ್ನು ಕೂಡ ಕಾದು ನೋಡಬೇಕಿದೆ. ಇದರ ನಡುವೆ ಇಷ್ಟು ಸುಲಭವಾಗಿ ಜೈದೇವ್‌ಗೆ ಎಲ್ಲ ಆಸ್ತಿ ಸಿಗಲು ಸಾಧ್ಯ ಇಲ್ಲ ಎನ್ನುವ ಅಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ. ''ಅಮೃತಧಾರೆ''ಯಲ್ಲಿ ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ. ರೋಚಕ ಹಂತ ತಲುಪಿರುವ ಈ ಧಾರಾವಾಹಿ ಮುಂದೆ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕೂಡ ನೋಡಬೇಕಿದೆ.

More from Filmibeat

English summary
Bhoomika’s worst nightmare! Jaidev holds Aakash hostage for property papers, but he wasn't prepared for a mother's fury. See the epic showdown in today's episode!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X