Amruthadhaare ; 5ವರ್ಷದ ವನವಾಸಕ್ಕೆ ಅಂತ್ಯ ಹಾಡಿದ ಮೊಂಬತ್ತಿ, ಕತ್ತಲಲ್ಲಿ ಗೌತಮ್-ಭೂಮಿಕಾ ನಡುವೆ ಅರಳಿತು ಮತ್ತೆ ಪ್ರೀತಿ
'ಅಮೃತಧಾರೆ' ಧಾರಾವಾಹಿಯಲ್ಲಿ ಗೌತಮ್ ಇರುವ ವಠಾರಕ್ಕೆ ಭೂಮಿಕಾ ಬಂದಿದ್ದಾಳೆ. ಆದರೆ.. ತಾನು ಇಲ್ಲಿ ಬಂದಿದ್ದು ಕಾಕತಾಳಿಯ ಅಲ್ಲ. ಬದಲಿಗೆ ಇದರ ಹಿಂದೆ ಮಲ್ಲಿಯ ಕೈವಾಡ ಇದೆ ಎನ್ನುವುದು ಭೂಮಿಕಾಗೆ ಗೊತ್ತಿಲ್ಲ. ಗೌತಮ್‌ಗೆ ಕೂಡ ನಮ್ಮ ಇಬ್ಬರನ್ನು ಒಂದು ಮಾಡಲು ಮಲ್ಲಿ ಮತ್ತು ಕಾವೇರಿ ಮಾಡುತ್ತಿರುವ ಕೆಲಸ ಇದು ಎನ್ನುವುದು ಗೊತ್ತಿಲ್ಲ. ಸದ್ಯ ತನ್ನ ಪ್ರೀತಿ ತನ್ನ...
ಕಣ್ಣೆದುರು ಇರುವುದಕ್ಕೆ ಗೌತಮ್ ಸಮಾಧಾನಗೊಂಡಿದ್ದಾನೆ. ಒಂದು ಕಡೆ ಮಗಳಂತಹ ಅದೃಷ್ಟ ದೇವತೆ.. ಇನ್ನೊಂದು ಕಡೆ ತನ್ನ ಮಗ ಆಕಾಶ.. ಮತ್ತೊಂದು ಕಡೆ ಜೀವಜ್ಜೀವದಂತೆ ಇರುವ ಭೂಮಿಕಾ.. ವಾಸಸ್ಥಳ ಬೇರೆ ಬೇರೆ ಆದರೂ ಕೂಡ ಒಂದೇ ವಠಾರದಲ್ಲಿ ಇರುವ ಹಿನ್ನೆಲೆ ಗೌತಮ್ ನೆಮ್ಮದಿಯಾಗಿದ್ದಾನೆ.

ವಠಾರದವರೆಗೆ ಹೇಗೂ ಭೂಮಿಕಾಳನ್ನು ಕರೆತಂದಿರುವ ಮಲ್ಲಿ ಸದ್ಯ ಗೌತಮ್ ಮತ್ತು ಭೂಮಿಕಾಳನ್ನು ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದಾಳೆ. ಕಾವೇರಿ ಜೊತೆ ಸೇರಿ ದಿನಕ್ಕೊಂದು ಪ್ಲ್ಯಾನ್ ಮಾಡುತ್ತಿದ್ದಾಳೆ.
ಇದರ ಮುಂದುವರೆದ ಭಾಗವೆಂಬಂತೆ ಸದ್ಯ ಮಲ್ಲಿ ಹೇಗಾದರೂ ಮಾಡಿ ಇಬ್ಬರನ್ನು ಒಂದು ಮಾಡಬೇಕೆಂದು ಕಾವೇರಿಗೆ ಹೇಳಿದ್ದಾಳೆ. ಅಪ್ಪುಗೆ ಕತ್ತಲೆ ಅಂದರೆ ಭಯ.. ಕರೆಂಟ್ ಹೋದರೆ ಅವನು ಪಕ್ಕಾ ಕಿರುಚುತ್ತಾನೆ ಎಂದು ಹೇಳುತ್ತಾಳೆ.
ಮಲ್ಲಿಯ ಈ ಮಾತು ಕೇಳಿ ಈಗೇನು ಕತ್ತಲೆ ಬೇಕು ತಾನೇ ಹೇಳಿ ಇಡೀ ವಠಾರದ ವಿದ್ಯುತ್ ಸಂಪರ್ಕ ತೆಗೆದಿದ್ದಾಳೆ. ಮಲ್ಲಿಯ ಈ ಪ್ಲ್ಯಾನ್ ವರ್ಕ್ ಆಗಿದ್ದು ಮಲ್ಲಿ ಅಂದುಕೊಂಡಂತೆಯೇ ಆಕಾಶ್ ಕಿರುಚಿದ್ದಾನೆ.
ಕತ್ತಲಿನಲ್ಲಿ ಕ್ಯಾಂಡಲ್ ಹುಡುಕಲು ಭೂಮಿಕಾ ಮುಂದಾಗಿದ್ದು ಮೇಲಿಂದ ಪಾತ್ರೆ ಬೀಳುತ್ತೆ. ಇದರಿಂದ ಭೂಮಿಕಾ ಕೂಡ ಹೆದರಿಕೊಂಡು ಅಡುಗೆ ಮನೆಯಿಂದ ಓಡಿ ಹೊರಗಡೆ ಬರುತ್ತಾಳೆ. ಆಗ ಕತ್ತಲಿನಲ್ಲಿ ಮೇಣದ ಬತ್ತಿ ಸಮೇತ ಗೌತಮ್ ಎದುರು ಬಂದಿದ್ದು ಗೌತಮ್‌ನ ಭೂಮಿಕಾ ಬಿಗಿದಪ್ಪಿದಾಳೆ. ಮೇಣದ ಬತ್ತಿ ಬೆಳಕಿನಲ್ಲಿ ಬೆಚ್ಚಿ ಬಿದ್ದಿರುವ ಭೂಮಿಕಾ ಮುಖವನ್ನು ಗೌತಮ್ ನೋಡಿದ್ದು ಆಕಾಶ್ ಕಣ್ಣನ್ನು ಮಲ್ಲಿ ಮುಚ್ಚುತ್ತಾಳೆ.

ಹೀಗೆ 5 ವರ್ಷಗಳ ನಂತರ ಭೇಟಿಯಾಗಿ ಮತ್ತೆ ದೂರವಾಗಿ ಮತ್ತೆ ಹತ್ತಿರವಾದ ಗೌತಮ್ ಮತ್ತು ಭೂಮಿಕಾ ಈಗ ಒಂದಾಗುವ ದಿನ ಸನ್ನಿಹಿತ ಬಂದಂತೆ ಇದೆ. 5 ವರ್ಷಗಳಿಂದ ಒಂದು ಕ್ಷಣ ಭೂಮಿಕಾ ಜೊತೆ ಕಳೆಯಬೇಕೆಂದು ಹಾತೊರೆಯುತ್ತಿದ್ದ ಗೌತಮ್ ಈಗ ಭೂಮಿಕಾ ಪಕ್ಕದಲ್ಲಿಯೇ ಒಂದು ಇಡೀ ದಿನ ಕುಂತಿದ್ದಾನೆ. ಗೌತಮ್ ಕೈಯಲ್ಲಿದ್ದ ಮೊಂಬತ್ತಿಯಿಂದ ಈಗ ಇಬ್ಬರ ನಡುವೆ ಮತ್ತೆ ಪ್ರೀತಿ ಅರಳಿದ್ದು, ಮೊನ್ನೆಯವರೆಗೆ ಗೌತಮ್ ಕಂಡರೆ ಮುಖ ತಿರುಗಿಸುತ್ತಿದ್ದ ಭೂಮಿಕಾ ಈಗ ಮತ್ತೆ ಗೌತಮ್‌ನ ಪ್ರೀತಿಗೆ ಕರಗಿದ್ದಾಳೆ. ಕಣ್ಣೀರು ಹಾಕಿದ್ದಾಳೆ. ಗೌತಮ್‌ನ ಅಪ್ಪಿಕೊಂಡು ಬೆಳಗ್ಗೆ ನನ್ನನ್ನು ಇಲ್ಲಿಂದ ದೂರ ಕರೆದುಕೊಂಡು ಹೋಗಿ ಎಂದು ಮನವಿಯನ್ನು ಮಾಡಿದ್ದಾಳೆ.
ಸದ್ಯ ಇಂದು ಬಿಡುಗಡೆಯಾದ ಈ ಪ್ರೋಮೋಗೆ ಬಗೆ ಬಗೆಯ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮಕ್ಕಳು ಆದಮೇಲೆ ಗಂಡ ಹೆಂಡತಿ ಮತ್ತೆ ಲವ್ ಆಗುತ್ತಿದೆ. ನೋಡೋಕೆ ಚೆಂದ ಚೆಂದ. ಗುಂಡು ಭೂಮಿ ಎಂದು ಒಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರೆ ಮತ್ತೊಬ್ಬರು ಬೆಳಕಿನ ಹಬ್ಬದಲ್ಲಿ ಗೌತಮ್ ಭೂಮಿ ಬದುಕಲ್ಲಿ ಬೆಳಕು ಮೂಡಲಿ ಎಂದು ಆಶಿಸಿದ್ದಾರೆ.
ಇದು ಕನಸು ಮಾತ್ರ ಮಾಡಬೇಡಿ ಆದಷ್ಟು ಬೇಗ ಇಬ್ಬರು ಒಂದು ಆಗಲಿ, ಅವರ ಅಭಿಮಾನಿಗಳು ಕಾಯುತ್ತಾ ಇದ್ದಿವಿ ಈ ಘಳಿಗೆಗೆ ಎಂದು ಮತ್ತೊಬ್ಬರು ಮನವಿಯನ್ನು ಮಾಡಿಕೊಂಡಿದ್ದಾರೆ. ಈ ವಾರದ ಕಿಚ್ಚನ ಚಪ್ಪಾಳೆ ಮಲ್ಲಿಗೆ ಎಂದು ಕೂಡ ಕಾಮೆಂಟ್ ಮಾಡಿದ್ದಾರೆ.


Click it and Unblock the Notifications











