Amruthadhaare ; ಗೌತಮ್‌ಗೆ ಗೊತ್ತಾಯ್ತು ಸುನಿಯ ರಹಸ್ಯ ? ಜೈದೇವ್‌ಗೆ ಉಲ್ಟಾ ಹೊಡೆಯುತ್ತಾನಾ ಪೈಲ್ವಾನ್ ?
ಜೀ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ 'ಅಮೃತಧಾರೆ' ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ದಿನಕ್ಕೊಂದು ಟ್ವಿಸ್ಟ್ ನೀಡುತ್ತಾ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಈ ಸೀರಿಯಲ್ ಯಶಸ್ವಿಯಾಗಿದೆ. ಸದ್ಯ ಬಿಡುಗಡೆಯಾಗಿರುವ ಹೊಸ ಪ್ರೊಮೊ ನೋಡುಗರಲ್ಲಿ ಸಂಚಲನ ಮೂಡಿಸಿದೆ. ಜೈದೇವ್ ಹಾಕಿರುವ ಹೊಸ ಪ್ಲಾನ್ ಗೌತಮ್ ಮತ್ತು ಭೂಮಿಕಾ ಜೀವನದಲ್ಲಿ ಬಿರುಗಾಳಿ ಎಬ್ಬಿಸುವ ಲಕ್ಷಣಗಳು ಕಾಣುತ್ತಿವೆ.
ಈಗಾಗಲೇ ಮನೆಯಲ್ಲಿ ಮದುವೆಯ ಸಂಭ್ರಮ ಮನೆಮಾಡಿದೆ. ಆದರೆ ಈ ಸಂಭ್ರಮದ ನಡುವೆಯೇ ಅನಾಹುತವೊಂದು ಕಾದಿದೆಯಾ ಎಂಬ ಅನುಮಾನ ಕಾಡ ತೊಡಗಿದೆ. ವಿಲನ್ ಜೈದೇವ್ ತನ್ನ ಕುತಂತ್ರಕ್ಕೆ ಈಗ ಸುನಿಯನ್ನು ಬಳಸಿಕೊಳ್ಳುತ್ತಿದ್ದಾನೆ.

ಜೈದೇವ್ ಮಾಸ್ಟರ್ ಪ್ಲಾನ್...
ಜೈದೇವ್ ಮೊದಲಿನಿಂದಲೂ ಗೌತಮ್ ಆಸ್ತಿಗೆ ಕಣ್ಣು ಹಾಕಿದ್ದಾನೆ. ಹೇಗಾದರೂ ಮಾಡಿ ಗೌತಮ್ ಗೌರವಕ್ಕೆ ಚ್ಯುತಿ ತರಬೇಕು ಎಂಬುದು ಅವನ ಉದ್ದೇಶ. ಈಗ ಅದಕ್ಕಾಗಿ ಒಬ್ಬ ಅಪರಿಚಿತ ಹುಡುಗನನ್ನು ಬಳಸಿಕೊಳ್ಳುತ್ತಿದ್ದಾನೆ. ಆ ಹುಡುಗನಿಗೆ ಹಣದ ಆಮಿಷವೊಡ್ಡಿ ಗೌತಮ್ ವಿರುದ್ಧ ಎತ್ತಿಕಟ್ಟುತ್ತಿದ್ದಾನೆ.
ಸದ್ಯ ಮಲ್ಲಿ ಮತ್ತು ಸುನಿಯ ಮದುವೆ ಸಂಭ್ರಮ ಮನೆ ಮಾಡಿದೆ. ಮದುವೆಗೆ ಇನ್ನೇನು ಕೆಲ ಗಂಟೆ ಬಾಕಿ ಇವೆ. ಆದರೂ ಕೂಡ ಸುನಿಯ ಅಸಲಿಯತ್ತು ಗೌತಮ್‌ಗೆ ಇನ್ನೂ ಗೊತ್ತಾಗಿಲ್ಲ. ಸುನಿ ತುಂಬಾನೇ ಅಮಾಯಕ, ಪ್ರಾಮಾಣಿಕ ವ್ಯಕ್ತಿಯೆಂದೇ ಗೌತಮ್ ಮತ್ತು ಭೂಮಿಕಾ ನಂಬಿದ್ದಾರೆ. ಆದರೆ ಈಗ ಈ ನಂಬಿಕೆ ಹುಸಿಯಾಗುವ ಕಾಲ ಸನ್ನಿಹಿತವಾಗಿದೆ.
ಮದುವೆ ಮಂಟಪ ಬಳಿ ಬಂದ ಜೈದೇವ್
ಜೈದೇವ್ ಸದ್ಯ ಮದುವೆ ಮನೆ ಬಳಿ ಬಂದಿದ್ದಾನೆ. ಇಲ್ಲಿಯವರೆಗೆ ಮಧುಮಗನ ದರ್ಶನ ಮಾಡದ ಪಾರ್ಥ ಈಗ ಸುನಿಯ ಮುಖ ಕಂಡು ಬೆಚ್ಚಿ ಬಿದ್ದಿದ್ದು, ಜೈದೇವ್‌ನ ಶಿಷ್ಯ ಇವನು ಎನ್ನುವ ಸತ್ಯವನ್ನು ಗೌತಮ್ ಗೆ ಹೇಳಿದ್ದಾನೆ. ಪಾರ್ಥ್‌ನ ಮಾತು ಕೇಳಿ ಗೌತಮ್‌ಗೆ ತಾನು ಎಡವಿರುವ ವಿಚಾರ ಅರಿವು ಆಗಿದ್ದು ಸುನಿಯ ಹಿಂದೆ ಹೋಗಿದ್ದಾರೆ. ಅಲ್ಲಿ ಜೈದೇವ್‌ನ ಭೇಟಿಯಾಗಿದ್ದಾನೆ ಪೈಲ್ವಾನ್ ಸುನಿ.
ಅಸಲಿ ಆಟ ತೋರಿಸು ಎಂದ ಜೈದೇವ್
ಇಲ್ಲಿ ಏನಾಗುತ್ತಿದೆ ಅಂತ ಒಂದೂ ಅಪ್‌ಡೇಟ್ ನೀನು ಕೊಡ್ತಾ ಇಲ್ಲ. ಯಾವಾಗ ಹಸೆಮಣೆ ಮೇಲೆ ನಿನ್ನ ಕೂರಿಸೋಕೆ ನೋಡ್ತಾರಲ್ಲ ಆಗ ನಿನ್ನ ಬುದ್ಧಿ ತೋರಿಸು. ಮಲ್ಲಿ ಲೈಫ್‌ಲಾಂಗ್ ಸಫರ್ ಆಗಬೇಕುʼ ಅಂತ ಹೇಳಿದ್ದಾನೆ. ಈ ಮಾತನ್ನು ಗೌತಮ್ ಕೇಳಿಸಿಕೊಂಡಿದ್ದಾನೆ. ಗೌತಮ್ ಮತ್ತು ಪಾರ್ಥನನ್ನು ಕಂಡು ಸುನಿ ಬೆಚ್ಚಿ ಬಿದ್ದಿದ್ದಾನೆ.

ಮುಂದೇನು ?
ಈಗ ಸುನಿ ಜೈದೇವ್ ಹೇಳಿದಂತೆ ಆಟವಾಡುತ್ತಿದ್ದಾನಾ ಅಥವಾ ಅವನದ್ದೇ ಆದ ಬೇರೆ ಯಾವುದಾದರೂ ಗುರಿ ಇದೆಯಾ ಎಂಬ ಅನುಮಾನ ಕಾಡುತ್ತಿದೆ. ಸುನಿ ಮದುವೆ ಮಂಟಪದಲ್ಲಿ ಮಾಡುವ ಒಂದು ಸಣ್ಣ ತಪ್ಪು ಇಡೀ ಮನೆಯ ಗೌರವವನ್ನು ಹರಾಜು ಹಾಕಬಹುದು.
ಜೈದೇವ್ ಅಂದುಕೊಂಡಂತೆ ಸುನಿ ಮಲ್ಲಿಯ ಜೀವನವನ್ನು ಹಾಳು ಮಾಡುತ್ತಾನಾ? ಅಥವಾ ಕೊನೆ ಕ್ಷಣದಲ್ಲಿ ಸುನಿ ಮನಸ್ಸು ಬದಲಾಗಿ ಜೈದೇವ್ ಅಸಲಿ ಮುಖವನ್ನು ಎಲ್ಲರ ಮುಂದೆ ಬಯಲು ಮಾಡುತ್ತಾನಾ? ಈ ಎಲ್ಲಾ ರೋಚಕ ಪ್ರಶ್ನೆಗಳಿಗೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ. ಪ್ರೇಕ್ಷಕರು ಮಾತ್ರ ಸುನಿಯ ಮುಂದಿನ ನಡೆ ಏನು ಎಂಬುದನ್ನು ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಬೆಂಕಿಯಾದ ಭೂಮಿಕಾ
ಮತ್ತೊಂದು ಕಡೆ ಗೌತಮ್ ಮುಂದೆ ಸುನಿ ಮುಖವಾಡ ಕಳಚಿ ಬಿದ್ದ ಬೆನ್ನಲ್ಲೇ ಜೈದೇವನ ಆಟ ಭೂಮಿಕಾಗೆ ಕೂಡ ಗೊತ್ತಾಗಿದೆ. ಮದುವೆಯ ನಾನೇ ನಿಲ್ಲಿಸುತ್ತೇನೆ ಎನ್ನುವ ಮಾತುಗಳನ್ನು ಭೂಮಿಕಾ ಆಡಿದ್ದಾಳೆ. ಹಾಗೊಂದು ವೇಳೆ ಮದುವೆ ನಿಲ್ಲಿಸಿದರೆ ಮಲ್ಲಿಯ ಕಥೆ ಏನು..? ಎನ್ನುವ ಪ್ರಶ್ನೆ ಸದ್ಯ ಹಲವರಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಲ್ಲಿಯ ಜೊತೆ ಮದುವೆಯಾಗಲು ಅಣಿಯಾಗಿರುವ ಸುನಿ ಗೊಂದಲದಲ್ಲಿದ್ದಾನೆ. ಜೈದೇವ್ ಹೇಳಿದ್ದಕ್ಕೆ ಹಿಂದೆ ಬಿದ್ದೆ ಎಂದು ಸುನಿ ತಪ್ಪೊಪ್ಪಿಕೊಂಡರು ಕೂಡ ಸುನಿ ಮನದಲ್ಲಿ ಮಲ್ಲಿಯ ಕುರಿತು ಭಾವನೆಗಳು ಇದ್ದಂತೆ ಇವೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











