Amruthadhaare ; ಕಲ್ಲು ಹೃದಯದ ಪತ್ನಿಗೆ ಗದರಿದ ಗೌತಮ್- ತಲೆ ತಗ್ಗಿಸಿದ ಭೂಮಿಕಾ
"ಅಮೃತಧಾರೆ" ಧಾರಾವಾಹಿಯಲ್ಲಿ ಆಕಾಶ್ ಮತ್ತು ಮಿಂಚು ಸ್ನೇಹಿತರಾಗಿದ್ದಾರೆ. ಗೌತಮ್ ಮತ್ತು ಭೂಮಿಕಾನ ಒಂದು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಭೂಮಿಕಾ ಮನೆಯಲ್ಲಿ ಕಡಿಮೆ ಆಕಾಶ್ ತನ್ನ ತಂದೆ ಗೌತಮ್ ಮನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದಾನೆ. ಅವರೆಕಾಳು ಉಪ್ಪಿಟ್ಟು ತಿಂದು ಗಡದ್ದಾಗಿ ಮಲಗಿದ್ದಾನೆ. ಇನ್ನೂ ಭೂಮಿಕಾ, ಆಕಾಶ್ ಮತ್ತು ಮಿಂಚುನ ಶಾಲೆಗೆ ಬಿಟ್ಟಿರುವ ಗೌತಮ್, ಸೀದಾ ತನ್ನ ಅತ್ತೆ....
ಮತ್ತು ಮಾವನನ್ನು ನೋಡಲು ಮನೆಗೆ ಹೋಗಿದ್ದಾನೆ. ಮನೆಯಲ್ಲಿ ಭೂಮಿಕಾ ಬರೆದ ಪತ್ರದ ವಿಚಾರ ಗೊತ್ತಾಗಿದ್ದು ಭೂಮಿಕಾ ತಾಯಿ ತನ್ನ ಅಳಿಯ ಗೌತಮ್ ಎದುರು ತನ್ನ ಮನದ ನೋವನ್ನು ಹಂಚಿಕೊಳ್ಳುತ್ತಾಳೆ. ಗೌತಮ್ ಹೋಗಿದ್ದು ಎಲ್ಲಿ ಎಂದು ಯೋಚನೆ ಮಾಡುವ ಭೂಮಿಕಾ ಕಾರಿನಲ್ಲಿ ಮರಳಿ ಬರುವಾಗ ಮಿಂಚುಗೆ ಎಲ್ಲಿ ಹೋಗಿದ್ದು ಎಂದು ಕೇಳಲು ಹೇಳುತ್ತಾಳೆ. ಆಗ ಗೌತಮ್ ಅತ್ತೆ ಮಾವನ ಮನೆಗೆ ಹೋದ ವಿಚಾರ ಹೇಳಿದಾಗ ಭೂಮಿಕಾ ಖುಷಿ ಪಡುತ್ತಾಳೆ. ಕಾರಿಂದ ಇಳಿದ ನಂತರ ಕುತೂಹಲದಿಂದ ಹೇಗಿದ್ದಾರೆ ಎಂದು ಕೇಳುತ್ತಾಳೆ.

ಭೂಮಿಕಾ ಕೇಳಿದ ಈ ಪ್ರಶ್ನೆಗೆ ಆರಂಭದಲ್ಲಿ ಹಂಗಿಸುವ ಗೌತಮ್ ಆ ನಂತರ ಬದುಕಿನ ಪಾಠವನ್ನು ಮಾಡುತ್ತಾನೆ. ಸಂಬಂಧದ ಮಹತ್ವವನ್ನು ತಿಳಿ ಹೇಳುವ ಪ್ರಯತ್ನ ಮಾಡುತ್ತಾನೆ.
ನೀವು ಎಷ್ಟೇ ಸಮಜಾಯಿಷಿ ಕೊಡಿ ಆದರೆ ನೀವು ತುಂಬಾನೇ ಸ್ವಾರ್ಥಿ ನೀವು, ಸ್ವಾರ್ಥ ಅನ್ನೋದು ಓನ್ ವೇ ಇದ್ದಂತೆ, ಲೆಟರ್ ವಿಚಾರದಲ್ಲಿ ನೀವು ಮಾಡಿದ್ದು ಅದೇ ಅಲ್ವಾ ? ಎಂದು ಪ್ರಶ್ನೆ ಮಾಡುತ್ತಾನೆ.
ನಿಮ್ಮ ಭಾವನೆಯನ್ನು ಪತ್ರದ ಮೂಲಕ ಹಂಚಿಕೊಂಡರಿ ಆದರೆ ಆ ಕಡೆ ಇದ್ದವರ ಬಗ್ಗೆ ಯೋಚನೆ ಮಾಡಿದೀರಾ ಎಂದು ಗದರುವ ಗೌತಮ್, ನಿಮ್ಮ ಮನಸಲ್ಲಿ ಇದ್ದಿದ್ದನ್ನು ಬರೆದಿರಿ ಅವರಿಗೂ ಅವಕಾಶ ಮಾಡಿ ಕೊಡಬೇಕಿತ್ತಲ್ವಾ..? ಎಂದು ಪ್ರಶ್ನೆ ಮಾಡುತ್ತಾನೆ.
ಮುಂದುವರೆದು ಅವರ ಜೊತೆ ಇರಲು ನಿಮಗೆ ಇಷ್ಟ ಇಲ್ಲ ಆದರೆ ಕೊನೆಪಕ್ಷ ನೀವು ಎಲ್ಲಿದ್ದೀರಾ ಎಂದಾದರೂ ಹೇಳಬಹುದಲ್ವಾ..? ಎಂದು ಪ್ರಶ್ನೆ ಮಾಡುವ ಗೌತಮ್ ಇದರ ನಡುವೆ ನಿಮ್ಮ ಮಗನ ಅವರನ್ನು ಭೇಟಿ ಮಾಡಿಸುವ ಸರ್ಕಸ್ ಕೂಡ ಮಾಡ್ತೀರಾ ಎಂದು ಹೇಳುತ್ತಾನೆ. ಮೊಮ್ಮಗ ಎನ್ನುವ ವಿಚಾರ ಗೊತ್ತಾಗಿದ್ದರೆ ಖುಷಿ ಪಡುತ್ತಿದ್ದರು ಅವರಿಂದ ಆ ಸಂಭ್ರಮ ಕೂಡ ಕಿತ್ಕೊಂಡ್ರಲ್ಲಾ ಎನ್ನುತ್ತಾನೆ.

ಇಷ್ಟಕ್ಕೆ ಸುಮ್ಮನಾಗದ ಗೌತಮ್, ಬಾಗಿಲು ಹಾಕಿಕೊಳ್ಳಿ ಕೊನೆಪಕ್ಷ ಕಿಟಕಿಯಾದರೂ ತೆಗೆಯಬಹುದಲ್ವಾ ? ಯಾಕೆ ಇಷ್ಟು ಕತ್ತಲಿನಲ್ಲಿ ಬದುಕಬೇಕು ಎಂದು ಕೇಳುತ್ತಾನೆ. ಅವರ ಭಾವನೆಗಳಿಗೆ ಬೆಲೆಕೊಡಿ ನಿಮ್ಮನ್ನು ಹೆತ್ತು ಹೊತ್ತು ಬೆಳೆಸಿದ್ದಕ್ಕೆ ಇದೇನಾ ಅವರಿಗೆ ಕೊಡ್ತಿರುವ ಬಹುಮಾನ ಎಂದು ತನ್ನ ಅಸಮಾಧಾನ ಹೊರ ಹಾಕುತ್ತಾನೆ.
ಗೌತಮ್ ಕೇಳುವ ಈ ಪ್ರಶ್ನೆಗಳಿಗೆಲ್ಲಾ ಉತ್ತರ ಇರದ ಭೂಮಿಕಾ ತಲೆ ತಗ್ಗಿಸಿ ನಿಲ್ಲುತ್ತಾಳೆ. ಮತ್ತೊಂದು ಕಡೆ ಭೂಮಿಕಾ ಮೇಲೀನ ಕೋಪ, ಅಸಮಾಧಾನ, ಅಸಹಾಯಕತೆಯಿಂದ ಮನೆಗೆ ಬರುವ ಗೌತಮ್‌ಗೆ ಆನಂದ್ ಕರೆ ಮಾಡಿದ್ದು ಗೌತಮ್ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದಾನೆ. ನಾಣು ಈಗಲೇ ಬರ್ತಿದ್ದೇನೆ, ಹತ್ತು ನಿಮಿಷದಲ್ಲಿ ಭೇಟಿಯಾಗುವಂತೆ ಹೇಳಿದ್ದಾನೆ. ಇದಕ್ಕೆ ಒಪ್ಪುವ ಗೌತಮ್ ಮಿಂಚು ಮತ್ತು ಆಕಾಶ್‌ಗೆ ಒಂದು ಗಂಟೆಯಲ್ಲಿ ಬರುವುದಾಗಿ ಹೇಳುತ್ತಾನೆ. ಊಟ ಪಾರ್ಸಲ್ ತಗೊಂಡು ಬರುತ್ತೇನೆ ಎಂದು ಇಬ್ಬರ ಬಳಿ ಏನು ಊಟ ಮಾಡುತ್ತೀರಾ ಎಂದು ಕೇಳಿ ಹೊರಟಿದ್ದಾನೆ.
ಇದೆಲ್ಲದರ ನಡುವೆ ಜೈದೇವ್‌ನ ಮಗಿಸಲು ಸಂಚು ಹಾಕಿರುವ, ಅಮ್ಮ ಮತ್ತು ಮಗನ್ನ ಬೀದಿಯಲ್ಲಿ ನಿಲ್ಲಿಸುವ ಶಪಥ ಮಾಡಿರುವ ದಿಯಾ ದಿನನಿತ್ಯ ತನ್ನ ಗಂಡ ಜೈದೇವ್‌ಗೆ ಎಣ್ಣೆ ಕುಡಿಸಿ ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿದ್ದಾಳೆ. ಮಲ್ಲಿನ ಹಿಡಿದು ಆಸ್ತಿ ಪತ್ರದ ಮೇಲೆ ಸಹಿ ಮಾಡಿಸಿಕೊಳ್ಳಬೇಕಲ್ವಾ..? ಎಂದು ಪ್ರಚೋದನೆ ನೀಡುತ್ತಿದ್ದಾಳೆ. ಸದ್ಯ '' ಅಮೃತಧಾರೆ'' ಧಾರಾವಾಹಿ ಕುತೂಹಲ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಗೌತಮ್ ಮಾತುಗಳಿಂದ ಮನ ನೊಂದ ಭೂಮಿಕಾ ತಂದೆ ತಾಯಿಯನ್ನು ಭೇಟಿಯಾಗುತ್ತಾಳಾ..? ಜೈದೇವ್ ಹೇಳಿದಂತೆ ಮಲ್ಲಿ ಆಸ್ತಿ ಪತ್ರಕ್ಕೆ ಸಹಿ ಹಾಕುತ್ತಾಳಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











