Amruthadhaare ; ಅತಿಯಾದರೆ ಅಮೃತವೂ ವಿಷ - ಭೂಮಿಕಾ ವಿರುದ್ದ ಸಿಡಿದೆದ್ದ ಪ್ರೇಕ್ಷಕರು..!
''ಅಮೃತ ಧಾರೆ'' ಧಾರಾವಾಹಿಯಲ್ಲಿ ಬೆನ್ನ ಹಿಂದೆ ಬಿದ್ದ ಬೇತಾಳದಂತೆ ಮಲ್ಲಿಯನ್ನು ಜೈದೇವ್ ಕಾಡುತ್ತಿದ್ದಾನೆ. ಮಲ್ಲಿಯ ಆಸ್ತಿ ಲಪಟಾಯಿಸಲು ನಾನಾ ಪ್ರಯತ್ನ ಮಾಡುತ್ತಿದ್ದಾನೆ. ಆದರೆ ಮಲ್ಲಿ ಕೈಗೆ ಸಿಕ್ತಿಲ್ಲ. ಸಿಕ್ಕರೂ ಕೂಡ ಜೈದೇವ್ ಮಾತುಗಳನ್ನು ಮಲ್ಲಿ ಒಪ್ತಿಲ್ಲ. ಹೀಗಾಗಿ ದಿಕ್ಕೆಟ್ಟು ಕುಂತ ಜೈದೇವ್ ಸದ್ಯ ಮಲ್ಲಿ ಇರುವ ಪ್ರದೇಶಕ್ಕೆ ಮಾವ ಲಕ್ಕಿ ಲಕ್ಷ್ಮೀಕಾಂತ್ ಜೊತೆ ಬಂದಿದ್ದಾನೆ.
ಜೈದೇವ್ ನ ಕಣಕಣವನ್ನೂ ಬಲ್ಲ ಲಕ್ಷ್ಮೀಕಾಂತ್, ಮಲ್ಲಿ ಇಲ್ಲೆಲ್ಲಿ ಇರುತ್ತಾಳೆ ಸದಾಶಿವನಗರ.. ಡಾಲರ್ಸ್ ಕಾಲೋನಿಯ ಯಾವುದೋ ಭವ್ಯ ಅರಮನೆಯಲ್ಲಿ ಇರುತ್ತಾಳೆ ಎಂದು ಜೈದೇವ್ ದಾರಿ ತಪ್ಪಿಸುವ ಪ್ರಯತ್ನ ಮಾಡಿದರು ಪ್ರಯೋಜನವಾಗಲ್ಲ. ನನಗೆ ಸಿಕ್ಕಿರುವ ಖಚಿತ ಮಾಹಿತಿ ಇದು ಎಂದು ಹೇಳುತ್ತಾ ಮಲ್ಲಿಯನ್ನು ಹುಡುಕುತ್ತಿದ್ದಾನೆ.

ಆದರೆ, ಹಣೆಬರಹಕ್ಕೆ ಹೊಣೆ ಯಾರು ಎಂಬಂತೆ ಇದೇ ವೇಳೆ ಮಕ್ಕಳಿಗೆ ಐಸ್ಕ್ರೀಮ್ ಕೊಡಿಸಲು ಮಲ್ಲಿ ಮಾಲ್ ಪ್ರವೇಶಿಸಿದ್ದಾಳೆ.ಅದೃಷ್ಟವಶಾತ್ ಮಲ್ಲಿಯನ್ನು ಲಕ್ಷ್ಮೀಕಾಂತ್ ಪಾರು ಮಾಡಿದ್ದಾನೆ. ಆದರೆ.. ದುರಾದೃಷ್ಟವಶಾತ್ ಜೈದೇವ್ ಕೈಗೆ ಆಕಾಶ್ ಮತ್ತು ಮಿಂಚು ಸಿಕ್ಕಿ ಬಿದ್ದಿದ್ದಾರೆ.
ಜೈದೇಬ್ ನಯವಾಗಿ ಆಕಾಶ್ ಹತ್ತಿರ ಮಾತನಾಡಿಸುವ ಪ್ರಯತ್ನ ಮಾಡಿದ್ದು ಜೈದೇವ್ ಮಾತುಗಳಿಗೆ ಆಕಾಶ್ ತಿರುಗೇಟು ನೀಡಿದ್ದಾನೆ. ಆಕಾಶ್ ಮಾತುಗಳನ್ನು ಕೇಳಿ ಜೈದೇವ್‌ಗೆ ಗೌತಮ್ ನೆನಪಾಗಿದ್ದಾನೆ. ಕೊನೆಗೆ ಆಕಾಶ್ ಎದುರು ವಾದ ಮಾಡಲಾಗದೇ ಜೈದೇವ್ ನಿಮ್ಮಿಂದ ಹೆಲ್ಪ್ ಆಗಬೇಕಿತ್ತು. ನೀವು ಸಹಾಯ ಮಾಡಿದ್ರೆ ಏನು ಬೇಕಾದರೂ ಕೊಡ್ತೇನೆ ಎಂದು ಹೇಳುತ್ತಾನೆ. ಮಲ್ಲಿಯ ಫೋಟೊವನ್ನು ತೋರಿಸಿ ಇವರು ಗೊತ್ತಾ ಎಂದು ಕೇಳಿದ್ದಾನೆ. ಮಲ್ಲಿಯ ಫೋಟೊ ನೋಡಿ ಆಕಾಶ್ ಮತ್ತು ಮಿಂಚು ಶಾಕ್ ಆಗಿದ್ದಾರೆ.
ಮತ್ತೊಂದು ಕಡೆ ಗೌತಮ್ ತನ್ನ ತಂದೆ ಎಂದು ತಿಳಿದ ಕ್ಷಣದಿಂದ ಆಕಾಶ್ ಕಾಲು ಮನೆಯಲ್ಲಿ ನಿಲ್ತಿಲ್ಲ. ನೆಪ ಮಾಡಿಕೊಂಡು ಗೌತಮ್ ಮನೆಗೆ ಹೋಗುತ್ತಿದ್ದಾನೆ. ಗೌತಮ್ ಜೊತೆಯಲ್ಲಿಯೇ ಹೆಚ್ಚಿನ ಕಾಲ ಕಳೆಯುತ್ತಿದ್ದಾನೆ. ಗೌತಮ್ ಮನೆಯಲ್ಲಿಯೇ ಮಲಗುತ್ತಿದ್ದಾನೆ. ಬದಲಾದ ಆಕಾಶ್‌ನ ಈ ವರ್ತನೆಯಿಂದ ಭೂಮಿಕಾ ಚಿಂತೆಗೀಡಾಗಿದ್ದಾಳೆ. ಮಗ ತನ್ನಿಂದ ದೂರವಾಗುತ್ತಿದ್ದಾನೆ ಎನ್ನುವ ಆತಂಕ ಭೂಮಿಕಾಗೆ ಕಾಡುತ್ತಿದೆ.
ಹೀಗಾಗಿಯೇ ಗೌತಮ್ ಜೊತೆ ಭೂಮಿಕಾ ಮಾತನಾಡಿದ್ದಾಳೆ. ನೀವು, ಆಕಾಶ್‌ಗೆ ತುಂಬಾ ಹತ್ತಿರ ಆಗ್ತಿದ್ದೀರಾ, ನೀವೇ ಅವನ ತಂದೆ ಎಂದು ಆಕಾಶ್‌ಗೆ ನಾಳೆ ದಿನ ಗೊತ್ತಾದರೆ, ಅವನು ನನ್ನನ್ನು ದ್ವೇಷ ಮಾಡ್ತಾನೆ, ಅವನಿಂದ ದೂರ ಇರಿ ಎಂದು ಹೇಳುತ್ತಾಳೆ. ಭೂಮಿಕಾ ಆಡಿದ ಈ ಮಾತುಗಳಿಂದ ಸಹಜವಾಗಿ ಗೌತಮ್ ಹೃದಯ ಮತ್ತೊಮ್ಮೆ ನುಚ್ಚು ನೂರಾಗಿದೆ.

ಸದ್ಯ "ಅಮೃತಧಾರೆ" ಯನ್ನು ತಪ್ಪದೇ ನೋಡುವ ಧಾರಾವಾಹಿ ಪ್ರೇಮಿಗಳು ಭೂಮಿಕಾಳ ಈ ನಡೆಗೆ ಕಿಡಿ ಕಾರುತ್ತಿದ್ದಾರೆ.ಈ ಸೀರಿಯಲ್ ತುಂಬಾ ಓವರ್ ಆಗ್ತಾ ಇದೆ ಮುಂದೆ ಸ್ವಲ್ಪನು ಚೆನ್ನಾಗಿರಲ್ಲ ಎಂದು ಒಬ್ಬರು ಅಂದರೆ, ಇವಳದು ಅತೀ ಆಯ್ತು ಇರೋ ವಿಷಯ ಇನ್ನೂ ಎಷ್ಟು ದಿನ ಮುಚ್ಚಿಡ್ತಾಳೆ ಸೀರಿಯಲ್ ಬೇಗ ಮುಗಿಸಿ ಬರೀ ಎಳೆಯೋದೇ ಆಯ್ತು ರೀ ಡೈರೆಕ್ಟರ್ ಅವರೇ ರಬ್ಬರ್ ನಂತೆ ಎಳಿಯದೆ ಬೇಗ ಮುಗಿಸಿ ಎಂದು ಇನ್ನೊಬ್ಬರು ಕಿಡಿ ಕಾರಿದ್ದಾರೆ. ಭೂಮಿಕಾ ಹುಚ್ಚಿಯಂತೆ ಮಾತಾಡುತ್ತಿದ್ದಾಳೆ ಎಂದು ಮತ್ತೊಬ್ಬರು ಹೇಳಿದರೆ ಇನ್ನೂ ಕೆಲವರು ನಿರ್ದೇಶಕರಿಗೆ ತಪರಾಕಿ ಹಾಕುತ್ತಿದ್ದಾರೆ. ಅತಿಯಾದರೆ ಅಮೃತ ಕೂಡ ವಿಷವಾಗುತ್ತೆ ಹೀಗಾಗಿ ''ಅಮೃತಧಾರೆ''ಯನ್ನು ಆದಷ್ಟು ಬೇಗ ಮುಗಿಸಿ ಎಂದು ಮನವಿಯನ್ನೂ ಕೂಡ ಮಾಡುತ್ತಿದ್ದಾರೆ.
ಒಟ್ನಲ್ಲಿ ಸದ್ಯ ಮಲ್ಲಿ ಹೆಜ್ಜೆ ಜಾಡು ಹಿಡಿದು ಜೈದೇವ್ ಹತ್ತಿರ ಬಂದಿದ್ದಾನೆ. ಮಲ್ಲಿ ನಡೆದ ಈ ವಿಚಾರವನ್ನು ಗೌತಮ್ ಮತ್ತು ಭೂಮಿಕಾಗೆ ಹೇಳುತ್ತಾಳಾ..? ಜೈದೇವ್ ಮುಂದೆ ಆಕಾಶ್ ಮತ್ತು ಮಿಂಚು, ಮಲ್ಲಿಯನ್ನು ಗುರುತು ಹಿಡಿಯುತ್ತಾರಾ..? ಅಥವಾ ಚಮಕ್ ಕೊಡುತ್ತಾರಾ..? ದಿಯಾ ನಡೆ ಏನು..? ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.


Click it and Unblock the Notifications











