Amruthadhaare ; ಮಲ್ಲಿ ವಠಾರಕ್ಕೆ ಬಂದೇ ಬಿಟ್ಟ ಜೈದೇವ್- ಕೆಡಿ ಕೈಯಲ್ಲಿ ಸಿಕ್ಕಿ ಬೀಳ್ತಾಳಾ ಭಾಗ್ಯಮ್ಮ ?

"ಅಮೃತಧಾರೆ" ಧಾರಾವಾಹಿಯಲ್ಲಿ ಗೌತಮ್ ಮತ್ತು ಭೂಮಿಕಾ ಒಂದೇ ವಠಾರದಲ್ಲಿದ್ದಾರೆ. ಆದರೆ, ನಡುವೆ ಇರುವ ಅಂತರ ಕಡಿಮೆಯಾಗುತ್ತಿಲ್ಲ. ಬದಲಿಗೆ ಇನ್ನೂ ಹೆಚ್ಚಾಗುತ್ತಲೇ ಇದೆ. ಅಪ್ಪು ವಿಚಾರದಲ್ಲಿ ಭೂಮಿಕಾ ತುಂಬಾ ಪೊಸೆಸಿವ್ ಆಗಿದ್ದು ಗೌತಮ್ ತನ್ನ ತಂದೆ ಎಂದು ತಿಳಿದರೆ ತನ್ನಿಂದ ಎಲ್ಲಿ ದೂರವಾಗುತ್ತಾನೆ ಎನ್ನುವ ಆತಂಕ ಕಾಡುತ್ತಿದೆ. ಹೀಗಾಗಿ ಗೌತಮ್ ನ ಕರೆದು ಆಕಾಶ್ ನಿಂದ....

ಅಂತರ ಕಾಪಾಡಿಕೊಳ್ಳುವಂತೆ ಹೇಳಿದ್ದಾಳೆ. ಭೂಮಿಕಾ ಆಡಿದ ಮಾತುಗಳಿಂದ ಗೌತಮ್ ನೊಂದುಕೊಂಡಿದ್ದು ಏನೂ‌ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾನೆ. ಆಕಾಶ್ ನ ದೂರ ಮಾಡುತ್ತಿದ್ದಾನೆ.

amruthadhaare-update-nov-30-bhagyamma-s-shock-exit-jaidev-s-desperate-hunt-ends-at-malli-s-door

ಗೌತಮ್ ನಲ್ಲಾದ ಈ ಬದಲಾವಣೆ ಗಮನಿಸಿರುವ ಆಕಾಶ್ ಮತ್ತು ಮಿಂಚು ಅಪ್ಪ ಯಾಕೆ ಹೀಗೆ ಮಾಡ್ತಿದ್ದಾರೆ ಎಂದು ಚಿಂತೆ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಆನಂದ್ ಎದುರು ಅಪರ್ಣಾ ತನ್ನ ಅಸಮಾಧಾನ ಹೊರ ಹಾಕಿದ್ದಾಳೆ. ಗೌತಮ್​ ಮತ್ತು ಭೂಮಿಕಾ ಒಂದೇ ವಠಾರದಲ್ಲಿದ್ದಾರೆ. ಎದುರು ಬದುರು ಮನೆಯಲ್ಲಿದ್ದಾರೆ. ಆದರೂ ಹೀಗೆ ದೂರ ದೂರು ಇರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾಳೆ.

ಆಕಾಶ್ ಎಷ್ಟು ಮುದ್ದಾಗಿದ್ದಾನೆ. ನೋಡಿದರೆ ಮುದ್ದಾಡಬೇಕು ಅನ್ಸುತ್ತೆ ಆದರೆ ಆ ಖುಷಿ ಕಿತ್ತುಕೊಳ್ಳುವುದು ಎಷ್ಟು ಸರಿ ಎನ್ನುವ ಅಪರ್ಣಾ ಇದೇ ವೇಳೆ ಮಿಂಚು ವಿಚಾರವನ್ನು ಕೂಡ ಪ್ರಸ್ತಾಪಿಸುತ್ತಾಳೆ.

ಆನಂದ್ ಮತ್ತು ಅಪರ್ಣಾ ನಡುವಿನ ಈ‌ ಮಾತುಕತೆಯನ್ನು ಭಾಗ್ಯಮ್ಮ ಕೇಳಿಸಿಕೊಂಡು ಆಘಾತಕ್ಕೀಡಾಗಿದ್ದಾಳೆ. ಗೌತಮ್ ಮತ್ತು ಭೂಮಿಕಾನ ಹೇಗಾದರೂ ಒಂದು ಮಾಡಬೇಕೆನ್ನುವ ಉದ್ದೇಶದಿಂದಲೋ, ಮೊಮ್ಮಗನ ನೋಡಬೇಕೆಂಬ ಆಸೆಯಿಂದಲೋ.. ಭಾಗ್ಯಮ್ಮ ಮನೆ ಬಿಟ್ಟು ಹೋಗಿದ್ದಾಳೆ.

ಭಾಗ್ಯಮ್ಮ ಮನೆಯಲ್ಲಿ ಕಾಣದಿರುವ ಹಿನ್ನೆಲೆ ಆನಂದ್​ ಮತ್ತು ಅಪರ್ಣಾ ಗಾಬರಿಯಾಗಿದ್ದಾರೆ. ಇನ್ನೊಂದು ಕಡೆ ಮಲ್ಲಿಯ ಹಿಂದೆ ಆಸ್ತಿಗೋಸ್ಕರ ಅಲೆದಾಡುತ್ತಿರುವ ಜೈದೇವ್ ಸದ್ಯ ಕುಡಿದ ಮತ್ತಿನಲ್ಲಿ ಮಲ್ಲಿ ಮತ್ತು ಭೂಮಿಕಾ ಇರುವ ವಠಾರದ ಕಡೆ ಬಂದಿದ್ದಾನೆ.

amruthadhaare-update-nov-30-bhagyamma-s-shock-exit-jaidev-s-desperate-hunt-ends-at-malli-s-door

ಜೈದೇವ್ ನ ನೋಡಿ ಮಿಂಚು ಮತ್ತು ಆಕಾಶ್ ಗಾಬರಿಯಾಗಿದ್ದು ಅವಿತುಕೊಂಡು ಕುಂತಿದ್ದಾರೆ.
ಸದ್ಯ "ಅಮೃತಧಾರೆ'' ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದ್ದು, ಜೈದೇವ್ ಕೈಗೆ ಮಲ್ಲಿ ಸಿಕ್ಕಿಹಾಕಿಕೊಂಡು ಬೀಳುತ್ತಾಳಾ..? ಅಥವಾ ಆಕಾಶ್ ಮತ್ತು ಮಿಂಚು ಇನ್ನೊಮ್ಮೆ ಜೈದೇವ್ ಕಣ್ಣಿಗೆ ಬೀಳ್ತಾರಾ ಎನ್ನುವ ಪ್ರಶ್ನೆ ಹಲವರನ್ನು ಕಾಡುತ್ತಿದೆ.

ಇನ್ನೂ ಆನಂದ್ ಮನೆಯಿಂದ ಓಡಿ ಬಂದ ಭಾಗ್ಯಮ್ಮ ಕೂಡ ಜೈದೇವ್ ಕಣ್ಣಿಗೆ ಬೀಳುವ ಸಾಧ್ಯತೆಯನ್ನು ಅಲ್ಲಗೆಳೆಯುವಂತೆ ಇಲ್ಲ. ವಠಾರದ ಬಳಿ ಬಂದ ಜೈದೇವ್ ನ ಗೌತಮ್ ಅಥವಾ ಭೂಮಿಕಾ ಕೂಡ ನೋಡಬಹುದು. ಜೈದೇವ್ ಕಂಡು ಭೂಮಿಕಾ ಹೆದರಲುಬಹುದು. ಆ ಸಾಧ್ಯತೆ ಕೂಡ ಇದೆ.

ಒಟ್ನಲ್ಲಿ ಸದ್ಯ " ಅಮೃತಧಾರೆ" ರೋಚಕಘಟ್ಟದತ್ತ ತಲುಪುತ್ತಿದ್ದು, ಪ್ರೇಕ್ಷಕರು ಮುಂದೇನಾಗಬಹುದು ಎಂದು ಗೆಸ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಗೌತಮ್‌ ಮತ್ತೊಮ್ಮೆ ಸತ್ಯ ಹೇಳುವಂತೆ ಭೂಮಿಕಾ ಬಳಿ ಕೇಳಿಕೊಂಡಿದ್ದಾನೆ. ಆದರೆ ಶಕುಂತಲಾ ಭಯ ಭೂಮಿಕಾ ಬಾಯಿಗೆ ಹೊಲಿಗೆ ಹೊಲಿದಿದೆ. ಎಷ್ಟೇ ಪ್ರಯತ್ನವನ್ನು ಗೌತಮ್ ಮಾಡಿದರೂ ಭೂಮಿಕಾ ಸತ್ಯ ಹೇಳುತ್ತಿಲ್ಲ. ಮುಂಬರುವ ದಿನಗಳಲ್ಲಾದರೂ ಭೂಮಿಕಾ ಸತ್ಯ ಹೇಳ್ತಾಳಾ ಗೊತ್ತಿಲ್ಲವಾದರೂ ಭೂಮಿಕಾ ತಲೆಯಲ್ಲಿ ಶಕುಂತಲಾ ಎಂಬ ಭೂತವನ್ನು ನಿರ್ದೇಶಕರು ಬಿಟ್ಟಿದ್ದಾರೆ ಎನ್ನುವ ಅಭಿಪ್ರಾಯವನ್ನು ಸದ್ಯ ಪ್ರೇಕ್ಷಕರು ವ್ಯಕ್ತಪಡಿಸುತ್ತಿದ್ದಾರೆ.

ಸದ್ಯ ಜೈದೇವ್ ವಠಾರದತ್ತ ಬಂದಿದ್ದು, ಮುಂದೆ "ಅಮೃತಧಾರೆ" ಯಾವ ತಿರುವು ಪಡೆಯುತ್ತೆ..? ಗೌತಮ್ ಗೆ ಸತ್ಯ ಗೊತ್ತಾಗುತ್ತಾ..? ಎನ್ನುವುದನ್ನು ಕಾದು ನೋಡಬೇಕಿದೆ.

More from Filmibeat

English summary
Will Bhagyamma find her children? Desperate Jaidev (JD) arrives near Malli's house, pushing the family to the brink. What secret are Akash and Minchu hiding now?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X