Amruthadhaare ; ಗೌತಮ್-ಭೂಮಿಕಾಗೆ ಆನಂದ್‌ನಿಂದ ಮುಜುಗರ - ಮಲ್ಲಿ ಪ್ರಾಣಕ್ಕೆ ಮತ್ತೆ ಸಂಚಕಾರ!
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್‌ಗೆ ಸಿಕ್ಕ ಅದೃಷ್ಟ ದೇವತೆಯನ್ನು ಭೂಮಿಕಾ ಮನೆಗೆ ಕರೆದಿದ್ದಾಳೆ. ಪ್ರೀತಿಯಿಂದ ಸಜ್ಜಪ್ಪ ತಿನ್ನಿಸಿದ್ದಾಳೆ. ಮಿಂಚು ಜೊತೆ ತನ್ನ ತಾಯಿಯ ಸಲುಗೆ ಮತ್ತು ಆತ್ಮೀಯತೆ .. ಪ್ರೀತಿಯನ್ನು ಕಂಡ ಮಗ ಆಕಾಶ್‌ಗೆ ಕೋಪ ಬಂದಿದೆ. ಹೀಗಾಗಿ ರೂಮ್‌ನಲ್ಲಿ ಮುಖ ಊದಿಸಿಕೊಂಡು ಕುಂತಿದ್ದಾನೆ. ಇದೇ ಸಮಯದಲ್ಲಿ ಮಲ್ಲಿ ಬಂದಿದ್ದು ಮಲ್ಲಿಗೆ ಮನೆಯಲ್ಲಿ ನಡೆದ ವಿಚಾರವನ್ನು ಆಕಾಶ್ ಹೇಳುತ್ತಾನೆ.
ಆಕಾಶ್ ಮಾತುಗಳನ್ನು ಕೇಳಿ ಖುಷಿಯಾಗುವ ಮಲ್ಲಿ ಅಕ್ಕೋರ ಮನದಲ್ಲಿ ಮತ್ತೊಮ್ಮೆ ಕಾಮನಬಿಲ್ಲು ಮೂಡಿದಂತೆ ಇದೆ. ಏನೋ ಶುರುವಾದಂತೆ ಇದೆ. ಅದಕ್ಕೆ ಈಗ ನಾನು ಕೀ ಕೊಡಬೇಕು ಎಂದು ಮನದಲ್ಲಿ ಅಂದುಕೊಂಡು ಸಂಭ್ರಮ ಪಡುತ್ತಾಳೆ. ಇನ್ನೂ.. ಮನೆಯ ಮಹಡಿಯ ಮೇಲೆ ಕುಳಿತ ಗೌತಮ್ ತನ್ನ ಮಗಳು ಮಿಂಚುಗೆ ತನ್ನದೇ ಜೀವನದ ಕಥೆಯನ್ನು ಹೇಳುತ್ತಾನೆ. ಕಥೆ ಇನ್ನೂ ಮುಂದುವರೆದಿದೆ ಎನ್ನುತ್ತಾನೆ. ಕಥೆ ಕೇಳಿ ಮಿಂಚು ಕೂಡ ಖುಷಿಯಾಗಿದ್ದು ಸೂಪರ್ ಅಪ್ಪ ಎಂದು ಹೇಳುತ್ತಾಳೆ.

ಮಿಂಚು ಮನೆಗೆ ಬಂದು ಹೋದ ವಿಚಾರವನ್ನು ಭೂಮಿಕಾ ಬಳಿ ಮಲ್ಲಿ ಕೇಳುತ್ತಾಳೆ. ಆಗ ಸಜ್ಜಪ್ಪ ಜಾಸ್ತಿಯಾಗಿತ್ತು ಹೀಗಾಗಿ ನಾನೇ ಅವಳನ್ನು ಮನೆಗೆ ಕರೆದಿದ್ದೇ ಎಂದು ಭೂಮಿಕಾ ನೆಪ ಹೇಳಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಭಾವ ಬಗ್ಗೆ ವಿಚಾರಿಸುತ್ತಿದ್ದೀರಿ ಅಂತೆ ಯಾಕೆ ಎಂದು ಮಲ್ಲಿ ಪ್ರಶ್ನೆ ಮಾಡಿದಾಗ ಇಲ್ಲೇ ಇರುವ ಸಾಂಬಾರ್‌ಗೆ ಒಗ್ಗರಣೆ ಹಾಕುವ ಪ್ರಯತ್ನ ಮಾಡಬೇಡ ಎನ್ನುತ್ತಾಳೆ.
ಗೌತಮ್ ಗುಂಗಿನಲ್ಲಿಯೇ ಭೂಮಿಕಾ ಮಲಗಲು ಹೋಗಿದ್ದು, ಭೂಮಿಕಾ ಮನೆಗೆ ಗೌತಮ್ ಬಂದಿದ್ದಾನೆ. ನಿದ್ದೆಯಿಂದ ಎದ್ದು ಕುಂತ ಭೂಮಿಕಾ ನೀವು ಇಲ್ಲೇನು ಮಾಡ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ಧಾಳೆ. ಆಗ ಭೂಮಿಕಾ ಕೈ ಹಿಡಿದು ನನ್ನ ನೋಡಿದರೆ ನಿಮಗೇನು ಅನಿಸಲ್ವಾ..? ನನ್ನ ಕಂಡರೆ ನಿಮಗೆ ಪ್ರೀತಿ ಇಲ್ವಾ..? ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹೇಳಿ. ನಾನು ಕಾಣಿಸದೇ ಇದ್ದಾಗ, ನೋಡಬೇಕು ಅನಿಸಲ್ವಾ..? ನೋಡಿದರೆ ನನ್ನ ಜೊತೆ ಮಾತಾಡಬೇಕು ಅನಿಸಲ್ವಾ..? ಮಾತಾಡಿದರೆ ಪ್ರೀತಿ ಮಾಡಬೇಕು ಅಂತ ಅನಿಸಲ್ವಾ..? ಪ್ರೀತಿ ಮಾಡಿದರೆ ಅಪ್ಕೋಬೇಕು ಅನಿಸಲ್ವಾ..? ಎಂದು ಗೌತಮ್ ಡೈಲಾಗ್ ಹೊಡೆಯುತ್ತಾನೆ. ಎದ್ದೇಳಲು ಮುಂದಾಗುತ್ತಾನೆ. ಆಗ ಗೌತಮ್ ಕೈ ಹಿಡಿದು ಅಪ್ಪಿಕೊಳ್ಳುವ ಭೂಮಿಕಾ ನಿಮ್ಮಿಂದ ದೂರ ಇರೋಕೆ ನನ್ನಿಂದ ಆಗ್ತಿಲ್ಲ. ನನ್ನ ಕರ್ಕೊಂಡು ಎಲ್ಲಾದರೂ ದೂರ ಹೋಗಿ ಎಂದು ಹೇಳುತ್ತಾಳೆ.
ಗೌತಮ್ ಮತ್ತು ಭೂಮಿಕಾ ನಡುವಿನ ಈ ಸನ್ನಿವೇಶ ಬಹುತೇಕ ಭೂಮಿಕಾಳ ಕನಸಾಗಿರುವ ಸಾಧ್ಯತೆ ಇದ್ದು, ಇಂದು (ಅಕ್ಟೋಬರ್ 29) ಭೂಮಿಕಾ ಕಂಡಿದ್ದು ಕನಸಾ..? ನನಸಾ..? ಎನ್ನುವುದು ಗೊತ್ತಾಗಲಿದೆ. ಇನ್ನು ಇದರ ನಡುವೆ ಮಲ್ಲಿಯ ಹಿಂದೆ ಮತ್ತೆ ಜೈದೇವ್ ಬಿದ್ದಿದ್ದು ಪಕ್ಷ ಬದಲಿಸಿರುವ ಶಕುನಿ ಲಕ್ಷ್ಮೀಕಾಂತ್ ಆತಂಕಕ್ಕೀಡಾಗಿದ್ದಾನೆ.
ಸದ್ಯ ಇಂದು ಬಿಡುಗಡೆಯಾದ ಪ್ರೋಮೊದಲ್ಲಿ ಭೂಮಿಕಾ ಶಾಲೆಯ ಕ್ಯಾಬ್ ಡ್ರೈವರ್ ಗೌತಮ್ ಆದ ಕಾರಣ ಭೂಮಿಕಾಳನ್ನು ಶಾಲೆಗೆ ಕರೆದುಕೊಂಡು ಬರುವಂತೆ ಗೌತಮ್‌ಗೆ ಹೇಳಲಾಗಿದೆ. ಆದರೆ, ಭೂಮಿಕಾ ಮಾತ್ರ ತಾನು ಆಟೋದಲ್ಲಿ ಬರುವುದಾಗಿ ಹೇಳುತ್ತಾಳೆ. ಆಗ ಆಟೋದಲ್ಲಿ ಬರುವುದಾದರೆ ಗೌತಮ್‌ನನ್ನು ನಾವು ಕೆಲಸದಿಂದ ತೆಗೆದು ಹಾಕುತ್ತೇವೆ ಎಂದು ಸ್ಕೂಲ್‌ನವರು ಹೇಳಿದಾಗ ವಿಧಿ ಇಲ್ಲದೇ ಭೂಮಿಕಾ ಒಪ್ಪಿಕೊಳ್ಳುತ್ತಾಳೆ.

ಭೂಮಿಕಾ, ಅಪ್ಪು ಮತ್ತು ಮಿಂಚುನ ಕರೆದುಕೊಂಡು ಗೌತಮ್ ಶಾಲಗೆ ಹೋಗುತ್ತಿರುವ ಸಮಯದಲ್ಲಿ ಆನಂದ್ ಫೋನ್ ಮಾಡಿದ್ದು ಬೇಡ ಅಂದರೂ ಮಿಂಚು ಫೋನ್ ಸ್ವೀಕರಿಸಿದ್ದಾಳೆ. ಲೌಡ್ ಸ್ಫೀಕರ್ ಹಾಕಿದ್ದಾಳೆ. ಆಗ ಆನಂದ್ ಗೊತ್ತಾಯ್ತು ಬಿಡು ಗೆಳೆಯ ವೇದನೆಯ ಕಟ್ಟೆ ಒಡೆಯಲೇಬೇಕು, ನೀನು ಅತ್ತಿಗೆ ಒಂದೇ ಕಾರಿನಲ್ಲಿ ಕುಂತುಕೊಂಡು, ಮುತ್ತಿನ ಮಳೆ ಸುರಿಸಿಕೊಂಡು ಎಂದು ಕಾಲೆಳೆಯುತ್ತಾನೆ. ಆನಂದ್‌ನ ಈ ಮಾತು ಕೇಳಿ ಗೌತಮ್ ಮತ್ತು ಭೂಮಿಕಾಗೆ ಮುಜುಗರವಾಗುತ್ತೆ.
ಮತ್ತೊಂದು ಕಡೆ ಮಲ್ಲಿಯನ್ನು ಹುಡುಕುತ್ತಿರುವ ಜೈದೇವ್ ಅವಳಿಗಾಗಿ ರಸ್ತೆಯಲ್ಲಿ ಕಾಯುತ್ತಿದ್ದು, ಮಲ್ಲಿ ಬರುತ್ತಿರುವುದನ್ನು ಲಕ್ಷ್ಮೀಕಾಂತ್ ನೋಡಿದ್ದಾನೆ. ಮುಂದೇನಾಗುತ್ತೆ ಎಂದು ಬೆಚ್ಚಿ ಬಿದ್ದಿದ್ದಾನೆ. ಜೈದೇವ್ ಕೈಗೆ ಈಗ ಮಲ್ಲಿ ಸಿಕ್ಕಿಹಾಕಿಕೊಳ್ಳುತ್ತಾಳಾ..? ಮಲ್ಲಿಯನ್ನು ಜೈದೇವ್ ಕಿಡ್ನ್ಯಾಪ್ ಮಾಡುತ್ತಾನಾ..? ಭೂಮಿಕಾ ಜೀವಕ್ಕೆ ಮತ್ತೆ ಆಪತ್ತು ಇದೆಯಾ..? ಗೌತಮ್ ಪ್ರಾಣಕ್ಕೆ ಶಕುಂತಲಾ ಮತ್ತು ಜೈದೇವ್ ಮತ್ತೆ ಸಂಚಕಾರ ತರಬಹುದು ಎಂಬ ಭಯದಿಂದ ಭೂಮಿಕಾ ಮತ್ತೆ ಓಡಿ ಹೋಗುತ್ತಾಳಾ..? ಈ ಪ್ರಶ್ನೆಗಳು ಕೂಡ ಹಲವು ಪ್ರೇಕ್ಷಕರನ್ನು ಕಾಡುತ್ತಿವೆ. ಮುಂದೇನಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











