Amruthadhaare ; ಅಪ್ಪುಗೆ ಅಪ್ಪ ಅಂದ್ರೆನೇ ಆಕಾಶ -ಗೌತಮ್,ಭೂಮಿಕಾ ಪ್ರೀತಿಗೆ ಮಕ್ಕಳೇ ಸೇತುವೆ ? ಪ್ರೇಕ್ಷಕರ ಹರುಷ
''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ನ ಆರೈಕೆಯನ್ನು ಭೂಮಿಕಾ ಮಾಡಿದ್ದಾಳೆ. ಇದೇ ಸಮಯದಲ್ಲಿ ತನ್ನ ಚಾರಿತ್ರ್ಯ.. ವ್ಯಕ್ತಿತ್ವದ ಕುರಿತು ಮಾತನಾಡಿದ ವಠಾರದವರ ಮೈಚಳಿಯನ್ನು ಭೂಮಿಕಾ ಬಿಡಿಸಿದ್ದು ಭೂಮಿಕಾ ಮಾತುಗಳಿಂದ ವಠಾರದವರಿಗೆ ಪಾಪಪ್ರಜ್ಞೆ ಕಾಡಿದೆ. ಹುಶಾರಿಲ್ಲ ಎಂದು ಒಂದು ಮಾತು ಹೇಳಬಾರದಾ ನಾವೆಲ್ಲ ನಿನಗೆ ಅಷ್ಟೊಂದು ಬೇಡ ಆಗಿದ್ದೇವಾ ಎಂದು ವಠಾರದವರೆಲ್ಲಾ ಗೌತಮ್ ಹತ್ತಿರ ಹೇಳಿದ್ದಾರೆ.
ಇನ್ನು ಗೌತಮ್ ಗುಣಮುಖವಾದ ಹಿನ್ನೆಲೆ ಭೂಮಿಕಾ ಖುಷಿಯಾಗಿದ್ದಾಳೆ. ಶಾಲೆಯ ಪ್ರಾಜೆಕ್ಟ್ ವರ್ಕ್ ಗೆ ಸಹಾಯ ಮಾಡುವುದಾಗಿ ಆಕಾಶ್ ಗೆ ಹೇಳುತ್ತಾಳೆ. ಆದರೆ ಇದಕ್ಕೆ ಒಪ್ಪದ ಆಕಾಶ್ ತಾನೇ ಮಾಡುವುದಾಗಿ ಹೇಳುತ್ತಾನೆ.

ಇದೇ ಸಮಯದಲ್ಲಿ ಮನೆಯಲ್ಲಿ ಕಪಾಟಿನ ಮೇಲ್ಭಾಗದ ಸೂಟ್‌ಕೇಸ್‌ನಲ್ಲಿ ಭೂಮಿಕಾ ಜತನದಿಂದ ಇಷ್ಟು ವರ್ಷ ಬಚ್ಚಿಟ್ಟಿದ್ದ ಫೋಟೊವನ್ನು ಆಕಾಶ್ ಅಚಾನಕ್ ಆಗಿ ನೋಡಿದ್ದು, ಶಾಕ್ ಆಗಿದ್ದಾನೆ. ನನ್ನ ಜೊತೆ ಸಲುಗೆಯಿಂದ ಮಾತಾಡುತ್ತಿದ್ದ ನನ್ನ ಆತ್ಮೀಯ ಫ್ರೆಂಡ್ ನನ್ನ ತಂದೆ ಎಂಬ ಸತ್ಯದ ಅರಿವು ಆಗಿದೆ.
ಮತ್ತೊಂದು ಕಡೆ ಆಕಾಶ್ ಜೊತೆ ಆತ್ಮೀಯವಾಗಿರುವ ಗೌತಮ್ ಫೋಟೊಗಳನ್ನು ಮಿಂಚು ನೋಡಿದ್ದು ನೊಂದುಕೊಂಡಿದ್ದಾಳೆ. ನನಗಿಂತ ನಿಮಗೆ ಆಕಾಶ್ ಮೇಲೆ ಜಾಸ್ತಿ ಪ್ರೀತಿ ಅಲ್ವಾ ಎಂದೆಲ್ಲಾ ಪ್ರಶ್ನೆಯನ್ನು ಗೌತಮ್ ಗೆ ಕೇಳಿದ್ದಾಳೆ. ಮಿಂಚು ಮಾತುಗಳಿಂದ ತಬ್ಬಿಬ್ಬಾಗುವ ಗೌತಮ್ ಆ ರೀತಿಯೆಲ್ಲಾ ಅಂದುಕೊಳ್ಳಬೇಡ ಎಂದು ಸಮಾಧಾನ ಮಾಡುತ್ತಾನೆ.
ಇನ್ನೊಂದು ಕಡೆ ಗೌತಮ್ ತನ್ನ ತಂದೆ ಎಂದು ತಿಳಿದ ಆಕಾಶ್ ಗೆ ಆಘಾತವಾಗಿದ್ದು ಬೇಸರದಲ್ಲಿ ಕುಳಿತಿದ್ದಾನೆ. ಬೇಸರದಲ್ಲಿರುವ ಆಕಾಶ್ ನ ಮಾತನಾಡಿಸುವ ಪ್ರಯತ್ನವನ್ನು ಮಲ್ಲಿ ಮಾಡಿದ್ದು ಮಲ್ಲಿಯ ಮೇಲೆ ಆಕಾಶ ಕೂಗಾಡಿ ಹೊರಗಡೆ ಅಳುತ್ತಾ ಕುಂತಿದ್ದಾನೆ.
ಆಕಾಶ್ ಕಣ್ಣೀರು ಹಾಕುತ್ತಾ ಕುಂತಿರುವುದನ್ನು ಕಂಡು ಕೆಂಡ ಕಾರುತ್ತಿದ್ದ ಮಿಂಚು ಮನಸ್ಸು ಕೂಡ ಕರಗಿದ್ದು ಆಕಾಶ್ ಬಳಿ ಬಂದು ಯಾಕೆ ಅಳ್ತಿದ್ದೀಯಾ ಎಂದು ಕೇಳುತ್ತಾಳೆ. ನಾನು ಯಾರಿಗೂ ಹೇಳಲ್ಲ ಏನಾಯ್ತು ಎಂದು ಹೇಳು ಎನ್ನುತ್ತಾಳೆ. ಆಗ ದುಃಖ ತಡೆಯಲಾಗದ ಆಕಾಶ್ ಎಲ್ಲ ಸತ್ಯವನ್ನು ಮಿಂಚು ಬಳಿ ಹೇಳುತ್ತಾನೆ. ಇಬ್ಬರೂ ಚಾಳಿ ಟೂ ಬಿಟ್ಟಿದ್ದಾರೆ ಎನ್ನುತ್ತಾನೆ.

ಆಕಾಶ್ ಮಾತು ಕೇಳಿ ಮಿಂಚು ಇಬ್ಬರನ್ನೂ ಒಂದು ಮಾಡೋಣ ಎಂದು ಹೇಳಿದ್ದು ಆಕಾಶ್ ಖುಷಿಯಿಂದ ಮಿಂಚು ಜೊತೆ ಕೈ ಜೋಡಿಸಿದ್ದಾನೆ. ಸದ್ಯ ಈ ಸಂಚಿಕೆ ''ಅಮೃತಧಾರೆ'' ಧಾರಾವಾಹಿ ಪ್ರೇಕ್ಷಕರ ಮನ ಗೆದ್ದಿದ್ದು ಹಲವರು ತಮ್ಮ ಮನದ ಮಾತುಗಳನ್ನು ಹಂಚಿಕೊಳ್ತಿದ್ದಾರೆ.
ಅದಷ್ಟು ಬೇಗ ಒಂದು ಆಗಿ ಅಪ್ಪ ಅಮ್ಮ ಮಕ್ಕಳು ಎಲ್ಲ ಜೊತೇಲಿ ಇರೋ ತರ ಅಗಲಿ ಎಂದು ಒಬಬ್ರು ಬಯಸಿದರೆ, ಅಕ್ಕ ತಮ್ಮಬಂಧವ್ಯ ಮಾತ್ರ ಸೂಪರ್ ಎಂದು ಮತ್ತೊಬ್ಬರು ಹೇಳಿದ್ದಾರೆ. ಮಿಂಚು ಅಪ್ಪು ಭೂಮಿಕಾ ಗೌತಮ್ ಸರ್ ನ ಬೇಗ ಒಂದು ಮಾಡ್ತಾರೆ ..ಆದಷ್ಟು ಬೇಗ ಒಂದು ಆಗಿ ಅಪ್ಪ ಅಮ್ಮ ಮಕ್ಕಳು ಎಲ್ಲ ಜೊತೇಲಿ ಇರೋ ತರ ಅಗಲಿ.. ಮಿಂಚು ಮತ್ತು ಅಪ್ಪು ದೂರವಾದ ಭೂಮಿಕಾ ಮತ್ತು ಗೌತಮ್ ಸರ್ ನ ಬೇಗ ಒಂದು ಮಾಡ್ತಾರೆ..ಎಂದೆಲ್ಲಾ ಹಲವು ಕಾಮೆಂಟ್ ಮಾಡಿದ್ದಾರೆ.
ಒಟ್ನಲ್ಲಿ ಸದ್ಯ ''ಅಮೃತಧಾರೆ'' ದಿನದಿಂದ ದಿನಕ್ಕೆ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಕಾರ್ಯಕ್ರಮ ಮತ್ಯಾವ ತಿರುವು ಪಡೆಯುತ್ತೆ..? ಜೈದೇವ್ ಮತ್ತು ಶಕುಂತಲಾಗೆ ಭೂಮಿಕಾ ಮತ್ತು ಗೌತಮ್ ಜೋಡಿ ಬುದ್ದಿ ಕಲಿಸುತ್ತಾ ? ಆಸ್ತಿ ಪಡೆಯಲು ಜೈದೇವ್ ಏನೆಲ್ಲಾ ಮಾಡ್ತಾನೆ..? ಜೈದೇವ್ ಮತ್ತು ಶಕುಂತಲಾನ ದಿಯಾ ಬೀದಿಗೆ ತರುತ್ತಾಳಾ..? ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











