Amruthadhaare ; ಅಕ್ಕಂಗೆ ಮಚ್ಚು ಕೊಡ್ರೋ - ಮಿಂಚು ಕಿಡ್ನಾಪ್, 'ಭದ್ರಕಾಳಿ'ಯಾದ ಭೂಮಿಕಾ

''ಅಮೃತಧಾರೆ'' ಧಾರಾವಾಹಿಯ ಕ್ಲೈಮ್ಯಾಕ್ಸ್‌ಗೆ ಪ್ರೇಕ್ಷಕರ ಒಂದು ವರ್ಗ ಕಾತುರದಿಂದ ಕಾಯುತ್ತಿದೆ. ಆದರೆ, ಅದಕ್ಕೆ ಮುಹೂರ್ತ ಮಾತ್ರ ಕೂಡಿ ಬರುತ್ತಿಲ್ಲ. ಧಾರಾವಾಹಿಯಲ್ಲಿ ಮಿಂಚು ಜನ್ಮ ರಹಸ್ಯದ ಕಥೆ ಮುಗೀತಾ ಮುಗಿಯುತ್ತಿಲ್ಲ.

ಸದ್ಯ ''ಅಮೃತಧಾರೆ'' ಧಾರಾವಾಹಿಯಲ್ಲಿ ಎಲ್ಲರೂ ನಿರೀಕ್ಷೆ ಮಾಡಿದಂತೆ ಮಿಂಚು ಕಿಡ್ನ್ಯಾಪ್ ಆಗಿದ್ದಾಳೆ. ಕಾನೂನು ಪ್ರಕಾರ ದತ್ತು ಪಡೆಯದ ಹಿನ್ನೆಲೆ ಗೌತಮ್ ಪೊಲೀಸರ ಅತಿಥಿಯಾಗಿದ್ದಾನೆ. ಅತ್ತ ದರಿ ಇತ್ತ ಪುಲಿ. ಧಾರಾವಾಹಿಯ ಆರಂಭದಿಂದಲೂ ಒಂದು ಕಷ್ಟದಿಂದ ತಪ್ಪಿಸಿಕೊಳ್ಳಲು ಹೋಗಿ ಮತ್ತೊಂದು ದೊಡ್ಡ ಆಪತ್ತಿನಲ್ಲಿ ಸಿಲುಕಿಕೊಳ್ಳುತ್ತಾ ಬಂದ ಭೂಮಿಕಾಗೆ ಸದ್ಯ ಇದೆಲ್ಲದರಿಂದ ಆಕಾಶ ಕಳಚಿ ಬಿದ್ದಂತಾಗಿದೆ.

Amruthadhare Mega Twist Bhoomika Unleashes Her Inner Bhadrakali to Save Kidnapped Minchu

ಹಾಗಂಥ ಭೂಮಿಕಾ ಕಣ್ಣೀರು ಹಾಕುತ್ತಾ ಕುಂತಿಲ್ಲ. ಬದಲಿಗೆ ಸಹಾಯಕ್ಕೆ ಪೊಲೀಸರೋ ಅಥವಾ ಮನೆಯ ಬೇರೆ ಗಂಡಸರಿಗೋ ಕಾಯದೆ,ಸೀದಾ ತಾನೇ ರಣರಂಗಕ್ಕೆ ಇಳಿದಿದ್ದಾಳೆ. ಬುದ್ದಿ ಉಪಯೋಗಿಸಿ ಹಳೆ ರೌಡಿಗಳ ಸಹಾಯ ಪಡೆದಿದ್ದಾಳೆ. ಮಿಂಚು ಇರುವ ಅಡುಗುತಾಣ ಪತ್ತೆ ಹಚ್ಚಿದ್ದಾಳೆ.

ಆದರೆ, ಆಗಲೇ ಹೇಳಿದಂತೆ ಈ ಕಥೆ ಮುಗೀತಾ ಮುಗಿಯುತ್ತಿಲ್ಲ. ಇನ್ನೇನು ಭೂಮಿಕಾ ಮಡಿಲನ್ನು ಮಿಂಚು ಸೇರಬೇಕು. ಅಷ್ಟರಲ್ಲಿ ಕಿಡ್ನ್ಯಾಪರ್ಸ್‌ ಪೊಲೀಸರಿಗೆ ಮತ್ತು ಭೂಮಿಕಾಗೆ ಚಳ್ಳೆ ಹಣ್ಣು ತಿನ್ನಿಸಿ ಅಲ್ಲಿಂದ ಪೇರಿ ಕಿತ್ತಿದ್ದಾರೆ.

ಇದರಿಂದ ಇನ್ನೂ ಕೆರಳುವ ಭೂಮಿಕಾ, ಸದ್ಯ ಕಿಡ್ನಾಪರ್ ಗಳನ್ನು ಅಡ್ಡ ಹಾಕಿದ್ಧಾಳೆ. ಮೊನ್ನೆಯವರೆಗೆ ಶಾಂತವಾಗಿ, ತಾಳ್ಮೆಯಿಂದ ಸಂಸಾರವನ್ನು ನಿಭಾಯಿಸುತ್ತಿದ್ದ ಭೂಮಿಕಾ ಉಗ್ರಾವತಾರ ತಾಳಿದ್ದಾಳೆ. ನಿಗಿನಿಗಿ ಕೆಂಡದಂತಾಗಿರುವ ಭೂಮಿಕಾ ಎದುರು ಬಂದ ರೌಡಿಗಳೆಲ್ಲಾ ಕೊಟ್ಟಿರುವ ಹೊಡೆತಕ್ಕೆ ಚೆಲ್ಲಾಪಿಲ್ಲಿಯಾಗಿದ್ದಾರೆ.

ಭೂಮಿಕಾಳ ಈ ಭದ್ರಕಾಳಿ ಅವತಾರ ಕಂಡು ಪ್ರೇಕ್ಷಕರು ಕೂಡ ಬೆಚ್ಚಿ ಬಿದ್ದಿದ್ದಾರೆ. ಕೆಲವರು ಇದು ಅತಿಯಾಯ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರೆ, ಮತ್ತೂ ಕೆಲವರು ಅಕ್ಕಂಗೆ ಮಚ್ಚು ಕೊಡ್ರೋ ಎಂದು ತಮಾಷೆ ಮಾಡುತ್ತಿದ್ಧಾರೆ.

Amruthadhare Mega Twist Bhoomika Unleashes Her Inner Bhadrakali to Save Kidnapped Minchu

ಪ್ರೇಕ್ಷಕರ ಅಭಿಪ್ರಾಯ

*ಡಿಎನ್‌ಎ ಟೆಸ್ಟ್ ಆಗಬೇಕು ಭೂಮಿಕಾ ಗೌತಮ್, ಮುದ್ದಿನ ಮಗಳು ಮಿಂಚು

* ನಮ್ಮ ಭೂಮಿ ಬೆಂಕಿ. ಈ ಬೆಂಕಿ ಪ್ರೋಮೋ ನೋಡಿ ಯಾರಿಗೆಲ್ಲ ಖುಷಿ ಆಗಿ ಪದೇ ಪದೇ ನೋಡ್ತಾನೆ ಇದೀರಾ ಲೈಕ್ ಮಾಡಿ

*ನಮ್ಮ ಭೂಮಿ ಬೆಂಕಿ ಮೋಡ್

*ಧಾರವಾಹಿ ನೋಡೋದು ಅಲ್ಲ ಸುಮ್ನೆ ಅದರಲ್ಲಿ ಬರೋ ಪ್ರತಿಯೊಂದು ಸಂದರ್ಭ ನಾ ಎಲ್ಲರು ಅನ್ವಯಿಸಿಕೊಳ್ಳಬೇಕು

*ಇದು ಇದು ಚೆನ್ನಾಗಿರೋದು

* ಅಕ್ಕಂಗೆ ಮಚ್ಚ ಕೊಡ್ರೋ

*ಹೌದು ಇದೊಂದು ಕಮ್ಮಿ ಇತ್ತು

*ಸ್ವಲ್ಪ ಒವರ್ ಅನಿಸಿಲ್ವ

*ಅಕ್ಕನಗೆ ಶಿವಣ್ಣನ ಮಚ್ಚು ಕೊಡ್ರೋ ಯಾರಾದ್ರೂ ಬೇಗ

*ಭೈರತಿ ರಣಗಲ್ ಅಲ್ಲಿ ಇವಳು ಶಿವಣ್ಣ ನ ತಂಗಿ ಅಲ್ವಾ.... ಅದುಕ್ಕೆ ಸ್ವಲ್ಪ ಅಣ್ಣ ನ ಮೈ ಮೇಲೆ ಬರಸಿಕೊಂಡಿದ್ದಾಳೆ.

ಮುಂದೇನು ?

ಈ ಹಿಂದೆ ಜ್ಯೋತಿಷಿ ನುಡಿದಂತೆ ಮಗಳಿಂದ ಗೌತಮ್‌ಗೆ ಕಂಟಕ ಎದುರಾಗಿದೆ. ಗೌತಮ್‌ ಈಗ ಪೊಲೀಸರ ಬಳಿ ಇದ್ದು, ಭೂಮಿಕಾ ಸದ್ಯ ಉಗ್ರರೂಪ ತಾಳಿದ್ದಾಳೆ. ಕಿಡ್ನ್ಯಾಪರ್ ಗಳ ಕಪಿಮುಷ್ಠಿಯಿಂದ ಮಿಂಚುನ ಭೂಮಿಕಾ ಪಾರು ಮಾಡುತ್ತಾಳಾ..? ಈ ವೇಳೆ ಜೈದೇವ್ ಮತ್ತು ಭೂಮಿಕಾ ಮುಖಾಮುಖಿಯಾಗ್ತಾರಾ..? ಗೌತಮ್ ಮತ್ತು ಭೂಮಿಕಾ ಇಬ್ಬರು ಸೇರಿ ಜೈದೇವ್ ಗ್ರಹಚಾರ ಬಿಡಿಸೋದು ಯಾವಾಗ ?

ಮಹಿಮಾ ಕಥೆ-ವ್ಯಥೆಗೆ ಪರಿಹಾರವೇನು..? ಮಿಂಚು ತಂದೆ ತಾಯಿ ಎಂದು ಹೇಳಿಕೊಂಡ ಬಂದ ಇಬ್ಬರು, ಜೈದೇವ್ ಕಳಿಸಿರುವ ಪಾತ್ರಧಾರಿಗಳು ಎನ್ನುವ ವಿಚಾರ ಗೌತಮ್ ಮತ್ತು ಭೂಮಿಕಾಗೆ ಗೊತ್ತಾಗಲು ಇನ್ನೆಷ್ಟು ದಿನ ಬೇಕು..? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇನ್ನೂ ಸಿಗಬೇಕಿದೆ. ''ಅಮೃತಧಾರೆ'' ಕ್ಲೈಮ್ಯಾಕ್ಸ್ ಇನ್ನೂ ದೂರ ಇದ್ದಂತೆ ಇದೆ. ಮುಂದೇನಾಗುತ್ತೆ..? ಧಾರಾವಾಹಿಯಲ್ಲಿ ಮತ್ಯಾವ ತಿರುವು ಎದುರಾಗುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

English summary
Amruthadhare unexpected turn! Bhoomika transforms into a fierce hero to save Minchu from ruthless kidnappers. See how far a mother will go in this mega twist. Read more!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X