Amruthadhaare ; ಮಲ್ಲಿಗೆ ಮಣ್ಣು ಮುಕ್ಕಿಸಿದ ಭ್ರಮೆಯಲ್ಲಿ ಗಹಗಹಿಸಿದ ಜೈದೇವ್ ; ಗೌತಮ್, ಭೂಮಿಕಾ ಗೇಮ್ ಪ್ಲಾನ್-ಕೇಡಿಗೆ ಮುಖಭಂಗ
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿಯ ಮದುವೆ ನಿಲ್ಲಿಸಲು ಭೂಮಿಕಾ ಮುಂದಾಗಿದ್ದಾಳೆ. ಆದರೆ ಗೌತಮ್ ತಡೆದಿದ್ದಾನೆ. ಮಲ್ಲಿಗೆ ಅವನು ತಾಳಿ ಕಟ್ಟಿದ್ದರೆ ಆತ ನಂಬಿಕೆಹೆ ಅರ್ಹ ಎಂದರ್ಥ ಎಂದು ಹೇಳಿದ್ದಾನೆ. ಗೌತಮ್ ಆಡಿದ ಈ ಮಾತುಗಳಿಂದ ಭೂಮಿಕಾ ಕನ್ವಿನ್ಸ್ ಆಗಿದ್ದು ಇದೇ ಸಮಯದಲ್ಲಿ ಸುನಿಗೆ ಜೈದೇವ್ ಫೋನ್ ಮಾಡಿದ್ದಾನೆ. ನಮ್ಮ ಬಂಡವಾಳ ಎಲ್ಲವೂ ಭೂಮಿಕಾಗೆ ಗೊತ್ತಾಗಿದೆ ಎಂದು ಹೇಳುತ್ತಾನೆ. ಪ್ಲ್ಯಾನ್ ಪ್ರಕಾರ ಮದುವೆಯಿಂದ ಹಿಂದೆ ಸರಿಯುವಂತೆ ಹೇಳುತ್ತಾನೆ.
ಆದರೆ.. ತನ್ನ ಯಜಮಾನನಿಗೆ ಪೈಲ್ವಾನ್ ಉಲ್ಟಾ ಹೊಡೆದಿದ್ದಾನೆ. ಇದರಿಂದ ಜೈದೇವ್ ಪ್ಲ್ಯಾನ್ ಫ್ಲಾಪ್ ಆಗಿದ್ದು ಮಲ್ಲಿ ಮತ್ತು ಸುನಿಯ ಮದುವೆ ನಡೆದಿದೆ. ಇದೇ ವೇಳೆ ಮಲ್ಲಿಗೆ ತನ್ನ ಮದುವೆಯ ಸುತ್ತ ನಡೆದ ಡ್ರಾಮಾ ಕೂಡ ಗೊತ್ತಾಗಿದೆ.

ಮತ್ತೊಂದು ಕಡೆ ತನ್ನ ಯೋಚನೆ ಮತ್ತು ಯೋಜನೆಯೇ ಬೇರೆ ಎಂದು ಜೈದೇವ್‌ಗೆ ಸುನಿ ಹೇಳಿದ್ದು ಸೀದಾ ನವವಧು ಮಲ್ಲಿಯನ್ನು ಕರೆದುಕೊಂಡು ಜೈದೇವ್ ಮನೆಗೆ ಬಂದಿದ್ದಾನೆ.
ಜೈದೇವ್ ಎಂದಿನಂತೆ ಮಲ್ಲಿಯ ಎದುರು ಗಹಗಹಿಸಿದ್ದು ನೀನು ಸೋತೆ ನಾನು ಗೆದ್ದೆ ಎಂದು ಹೇಳುತ್ತಾನೆ. ತಾನು ಅಂದುಕೊಂಡಂತೆ ಮಲ್ಲಿಯನ್ನು ಮಣ್ಣು ಮುಕ್ಕಿಸಿದೆ ಎಂದುಕೊಂಡು ಎಲ್ಲವೂ ನನ್ನದೇ ಗೇಮ್ ಪ್ಲಾನ್ ಎಂದು ಹೇಳುತ್ತಾನೆ. ಅವನಿಗೆ ನಿನ್ಮೇಲೆ ಎಳ್ಳಷ್ಟು ಪ್ರೀತಿ ಇಲ್ಲ ಎನ್ನುತ್ತಾನೆ.
ತನ್ನ ಈ ಎಲ್ಲ ಮಾತುಗಳನ್ನು ಕೇಳಿ ಮಲ್ಲಿ ಶಾಕ್ ಆಗುತ್ತಾಳೆ. ಕಣ್ಣೀರು ಹಾಕುತ್ತಾಳೆ ಎಂದು ಜೈದೇವ್ ಅಂದುಕೊಂಡಿದ್ದ. ಆದರೆ ಆಗಿದ್ದೇ ಬೇರೆ. ಮಲ್ಲಿ ಕೇಕೆ ಹಾಕಿದ್ದು ಇದೇ ಸಮಯದಲ್ಲಿ ಗೌತಮ್ ಮತ್ತು ಭೂಮಿಕಾ ರಂಗಪ್ರವೇಶವಾಗಿದೆ.
ಹೀಗೆ ಬಂದ ಗೌತಮ್ ನಿನ್ನನ್ನು ನೀನು ಕಿಲಾಡಿ ಅಂದುಕೊಂಡಿದ್ದೆ. ಆದರೆ ನೀನೆ ದೊಡ್ಡ ಫೂಲ್ ಆಗಿಬಿಟ್ಟೆ. ಇನ್ನು ಹೋರಾಡಲ್ಲ. ಏನೇ ಇದ್ದರೂ ನೇರವಾಗಿ ಜಡ್ಜ್‌ಮೆಂಟ್ ಕೊಡ್ತೀನಿ ಎಂದು ಗೌತಮ್, ಕೇಡಿ ಜೈದೇವ್‌ಗೆ ಎಚ್ಚರಿಕೆಯನ್ನು ನೀಡಿದ್ದಾನೆ. ಇನ್ನು ಈ ಹಿಂದೆಯೇ ಪ್ರೋಮೋದಲ್ಲಿ ತೋರಿಸಿದಂತೆ
ಹೆಣ್ಣಿನ ಕಣ್ಣೀರು, ಯುದ್ಧದ ಆರಂಭ ಎಂದು ಮಲ್ಲಿ ಖಡಕ್ ವಾರ್ನಿಂಗ್‌ನ್ನೂ ಕೂಡ ನೀಡಿದ್ದಾಳೆ.

ಪ್ರೇಕ್ಷಕರ ಅಭಿಪ್ರಾಯ
ಸದ್ಯ ಇಂದಿನ (ಏಪ್ರಿಲ್ 1) ಪ್ರೋಮೋ ನೋಡಿ ಕರ್ನಾಟಕ ರಾಜಕೀಯದಲ್ಲಿ ಬೊಮ್ಮಾಯಿ ಕಠಿಣ ಕ್ರಮ ಕೈಗೊಳ್ಳಲಾಗುವದು , ಧಾರಾವಾಹಿಯಲ್ಲಿ ಗೌತಮ್ ದಿವಾನ್ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಮಲ್ಲಿಯ ಸಲುವಾಗಿ ಎಲ್ಲರೂ ಎಲ್ಲರು ತಪ್ಪದೆ ಈ ಎಪಿಸೋಡ್ ನೋಡಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ಧಾರೆ. ಬರೀ ಬಿಲ್ಡ್ ಅಪ್ ಕೊಟ್ಟು ಕೊಟ್ಟು ಮಾಡಿದ್ದು ಏನೂ ಇಲ್ಲ ಗೌತಮ್, ನಿನ್ನ ಜಡ್ಜ್‌ಮೆಂಟ್ ನೋಡಿ ನೋಡಿ ಸಾಕಾಗಿದೆ ಗೌತಮ್, ವಾರ್ನ್ ಮಾಡ್ಬೇಡ ಗೌತಮ್ ಡಿಸಿಷನ್ ಕೊಟ್ಟುಬಿಡು, ಪದೇ ಪದೇ ವಾರ್ನಿಂಗ್ ಅಂತ ಹೋದ್ರೆ ಯಾರ್ಗುದ್ರು ಚಟ್ಟ ಕಟೋದು ಗ್ಯಾರಂಟಿ ಅವ್ನು ಅದ್ಕೆ ಅವ್ನು ಸೊಂಟ ಮುರ್ದು ಹಾಸ್ಪೆಟಲ್ ಸೇರ್ಸೋದು ಒಳ್ಳೆದು, ಹೀಗೆ ಹಲವರು ತಮ್ಮ ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ಧಾರೆ.
ಮುಂದೇನು..?
ಸದ್ಯ ಗೌತಮ್ ಮಾತುಗಳನ್ನು ಕೇಳಿ ಜೈದೇವ್ ಇಂಗು ತಿಂದ ಮಂಗನಂತಾಗಿದ್ದು, ತಾನು ಸಾಕಿದ ಪೈಲ್ವಾನ್ ತನಗೆ ಉಲ್ಟಾ ಹೊಡೆದ ವಿಚಾರವನ್ನು ಜೈದೇವ್ ಹೇಗೆ ಅರಗಿಸಿಕೊಳ್ಳುತ್ತಾನೆ ಎನ್ನುವುದನ್ನು ಈಗ ಕಾದು ನೋಡಬೇಕಿದೆ. ಇನ್ನು ಜೈದೇವ್ ಸುಮ್ಮನೆ ಇರುವ ವ್ಯಕ್ತಿಯಂತೂ ಅಲ್ಲ. ಮುಂಬರುವ ದಿನಗಳಲ್ಲಿ ಮಲ್ಲಿಯನ್ನು ಖೆಡ್ಡಾಗೆ ಬೀಳಿಸಲು ಜೈದೇವ್ ಮತ್ತೊಂದು ಪ್ಲಾನ್ ಹೆಣೆಯುತ್ತಾನಾ ಅಥವಾ ಗೌತಮ್ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಬಾಲ ಮುದುರಿಕೊಂಡು ಕುಳಿತುಕೊಳ್ಳುತ್ತಾನಾ..? ಶಕುಂತಲಾಗೆ ಸದ್ಯ ಈ ಎಲ್ಲ ವಿಚಾರ ಗೊತ್ತಿಲ್ಲ. ಗೊತ್ತಾದ ನಂತರ ಆಕೆ ಹೇಗೆ ಪ್ರತಿಕ್ರಿಯಿಸುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ. ''ಅಮೃತಧಾರೆ'' ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆಯಾ ..? ಎನ್ನುವ ಅನುಮಾನ ಕೂಡ ಸದ್ಯ ಹಲವರನ್ನು ಕಾಡುತ್ತಿದೆ.


Click it and Unblock the Notifications











