Amruthadhaare ; ಮಲ್ಲಿಯನ್ನೂ ಗೌತಮ್ ಕಾಪಾಡಿದರೂ ಡ್ಯಾಮೇಜ್ ಆಯ್ತು ಇಮೇಜ್ - ಕಿಡಿ ಕಾರಿದ ಪಾರ್ಥ
''ಅಮೃತಧಾರೆ'' ಧಾರಾವಾಹಿಯಲ್ಲಿ ಮಲ್ಲಿಯ ಕನಸಿಗೆ ಕಲ್ಲು ಹಾಕುವ ಪ್ರಯತ್ನವನ್ನು ಜೈದೇವ್ ಮಾಡಿದ್ದಾನೆ. ತನ್ನ ಚೇಲಾಗಳನ್ನು ಮಲ್ಲಿಯ ಹಿಂದೆ ಕಳಿಸಿದ್ದಾನೆ. ಮಲ್ಲಿ ರೌಡಿಗಳ ಕಪಿ ಮುಷ್ಟಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಆದರೆ ವಿಫಲವಾಗಿ ಸಿಕ್ಕಿಕೊಂಡಿದ್ದಾಳೆ. ಆದರೆ ಸಿಕ್ಕಿಹಾಕಿಕೊಳ್ಳುವ ಮೊದಲು ಗೌತಮ್ ಗೆ ಕರೆ ಮಾಡಿ ಎಲ್ಲ ವಿಷಯ ಹೇಳಿದ್ದಾಳೆ.
ಮಲ್ಲಿಯ ಕೈ ಸುಡುವಂತೆ ಜೈದೇವ್ ಹೇಳಿದ್ದು ತಮ್ಮ ಬಾಸ್ ನ ಆಜ್ಞೆಯನ್ನು ಶಿರಸಾವಹಿಸಿ ಪಾಲನೆ ಮಾಡಲು ಸಿದ್ದರಾಗಿದ್ದಾರೆ. ಬೆಂಕಿ ಗೀರಿದ್ದಾರೆ. ಇದೇ ಸಮಯದಲ್ಲಿ ಗೌತಮ್ ಎಂಟ್ರಿಯಾಗಿದ್ದು ಪುಡಿ ರೌಡಿಗಳನ್ನು ಹೊಡೆದುರುಳಿಸಿದ್ದಾನೆ. ಪುಡಿ ರೌಡಿಗಳಿಂದ ಮಲ್ಲಿಯನ್ನೂ ಗೌತಮ್ ಏನೋ ಕಾಪಾಡಿದ್ದಾನೆ.

ಆದರೆ ಇದಕ್ಕೂ ಮೊದಲು ವ್ಯಾಪಾರಿ ಗೌತಮ್ ಇಮೇಜ್ ಗೆ ಧಕ್ಕೆಯಾಗಿದೆ. ಸಮಯಕ್ಕೆ ಮಹತ್ವ ನೀಡುವ ಗೌತಮ್ ಇದೇ ಮೊದಲ ಬಾರಿ ಸಮಯಕ್ಕೆ ಸರಿಯಾಗಿ ಮೀಟಿಂಗ್‌ಗೆ ಹೋಗಲು ಸಾಧ್ಯವಾಗಿಲ್ಲ.
ಈ ಹಿನ್ನೆಲೆ ಗೌತಮ್‌ನ ನಂಬಿದ ವ್ಯಕ್ತಿ ಫೋನ್ ಮಾಡಿ ಕಿಡಿ ಕಾರಿದ್ದಾನೆ. ನೀವು ಅಂದರೆ ಟೈಮ್, ಟೈಮ್ ಅಂದರೆ ನೀವು ಅಂತಾ ನಂಬಿದ್ದೇ ಎಂದೆಲ್ಲಾ ಹೇಳಿ ಫೋನ್ ಕಟ್ ಮಾಡಿದ್ದಾನೆ.
ಮತ್ತೊಂದು ಕಡೆ ಜೈದೇವ್ ಗೆ ಪಾರ್ಥ ಸಂಬಂಧದ ಪಾಠ ಮಾಡಿದ್ದಾನೆ. ಒಳ್ಳೆಯತನ ಇಲ್ಲದ ಮನೆ ಸ್ಮಶಾನಕ್ಕೆ ಸಮ ಎಂಬ ಅರ್ಥದಲ್ಲಿ ಮಾತನಾಡಿದ್ದಾನೆ. ಕಣ್ಣೇದುರು ಸಾಮ್ರಾಜ್ಯ ಕುಸಿಯುತ್ತಿದೆ ಆದರೆ ನಿನಗೆ ಕಾಣ್ತಿಲ್ಲ ಎಂದು ಹೇಳಿದ್ದಾನೆ.
ಪಾರ್ಥನ ಈ ಮಾತುಗಳಿಂದ ಕೆರಳಿರುವ ಜೈದೇವ್ ಇನ್ನೇನೂ ಪಾರ್ಥನ ವಿರುದ್ದ ತಿರುಗಿ ಬೀಳಬೇಕು, ಅಷ್ಟರಲ್ಲಿ ಬಂದ ಶಕುಂತಲಾ ಇದೇನು ವಾರ್ ಫೀಲ್ಡಾ ಎಂಬ ಪ್ರಶ್ನೆ ಕೇಳಿದ್ದಾಳೆ. ಪಾರ್ಥನ ಪರ ವಕಾಲತ್ತು ವಹಿಸಿದ್ದಾಳೆ. ಇದರಿಂದ ಜೈದೇವ್ ಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಪ್ರೇಕ್ಷಕರ ಅಭಿಪ್ರಾಯ
ಸದ್ಯ ಈ ಸಂಚಿಕೆಗೆ ಹಲವರು ಹಲವು ರೀತಿಯ ಕಮೆಂಟ್‌ಗಳನ್ನು ಮಾಡಿದ್ದು, ಫೋನ್ ಮಾಡಿದವರು ಯಾರು ಎಂದು ಗೌತಮ್ ಗೆ ಗೊತ್ತಾಗಬೇಕು, ಇದು ಸೀರಿಯಲ್ ಅಂದ್ರೆ ಸೂಪರ್ ಆಗಿದೆ ಎಪಿಸೋಡ್, ಜೈದೇವ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕಂಪ್ಲೇಟ್ ನೀಡಿ ಅರೆಸ್ಟ್ ಮಾಡಬೇಕಿತ್ತು, ಗೌತಮ್ ಆಕ್ಟಿಂಗ್ ಸೂಪರ್, ಹೀಗೆ ಹಲವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದಾರೆ.
ಮುಂದೇನು..?
ಸದ್ಯ ಮಲ್ಲಿಯನ್ನು ಗೌತಮ್ ಕಾಪಾಡಿದ್ದಾನೆ. ಮಲ್ಲಿ ಎಲ್ಲಾ ಅಡೆತಡೆಗಳನ್ನು ದಾಟಿ ಪರೀಕ್ಷೆಯನ್ನು ಕೂಡ ಬರೆದು ಆಗಿದೆ. ಇನ್ನೂ ಇದೆಲ್ಲದರ ಹಿಂದೆ ಜೈದೇವ್ ಕೈವಾಡ ಇದೆ ಅನ್ನೋದು ಇನ್ನೂ ಗೌತಮ್‌ಗೆ ಗೊತ್ತಿಲ್ಲ. ಒಂದು ವೇಳೆ ಗೊತ್ತಾದರೆ ಜೈದೇವ್‌ನ ಗೌತಮ್ ಇನ್ನೊಮ್ಮೆ ಸುಮ್ಮನೆ ಬಿಡ್ತಾನಾ? ಎನ್ನುವ ಪ್ರಶ್ನೆ ಕೂಡ ಸದ್ಯ ಹಲವರನ್ನು ಕಾಡುತ್ತಿದೆ.
ಮತ್ತೊಂದು ಕಡೆ ಪಾರ್ಥ ಕೂಡ ಅಪೇಕ್ಷಾ ಜೊತೆ ಮನೆಯಿಂದ ಹೊರ ಬರುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಹಾಗೊಂದು ವೇಳೆ ಆದರೆ ಶಕುಂತಲಾ ಯಾರ ಪರ ನಿಲ್ಲುತ್ತಾಳೆ ಎನ್ನುವ ಕುತೂಹಲ ಕೂಡ ಸದ್ಯ ಹಲವರಲ್ಲಿದೆ.
ಒಟ್ನಲ್ಲಿ ''ಅಮೃತಧಾರೆ'' ಧಾರಾವಾಹಿ ಸದ್ಯ ಕುತೂಹಲ ಕೆರಳಿಸುವಲ್ಲಿ ಯಶಸ್ವಿಯಾಗಿದ್ದು, ಮುಂಬರುವ ದಿನಗಳಲ್ಲಿ ಈ ಧಾರಾವಾಹಿ ಇನ್ಯಾವ ತಿರುವು ಪಡೆಯುತ್ತೆ..? ಮಲ್ಲಿ ಪರೀಕ್ಷೆ ಪಾಸಾಗ್ತಾಳಾ..? ಜೈದೇವ್‌ಗೆ ಗೌತಮ್ ಬುದ್ದಿ ಕಲಿಸುತ್ತಾನಾ..? ಅಥವಾ ಜೈದೇವ್‌ಗೆ ತನ್ನ ತಪ್ಪಿನ ಅರಿವು ಆಗುತ್ತಾ..? ಮಲ್ಲಿ ಮತ್ತು ಸುನಿ ಮದುವೆಯಾಗುತ್ತಾರಾ..? ಎನ್ನುವುದನ್ನು ಕೂಡ ಕಾದು ನೋಡಬೇಕಿದೆ.


Click it and Unblock the Notifications











