Amruthadhaare ; ಅಯ್ಯೋ ಜೈದೇವ್‌ಗೆ ಗೊತ್ತಾಗೇ ಹೋಯ್ತು ಮಗುವಿನ ರಹಸ್ಯ ; ಗೌತಮ್ ಪ್ರಾಣಕ್ಕೆ ಆಪತ್ತು ?

''ಅಮೃತಧಾರೆ'' ಧಾರಾವಾಹಿಯಲ್ಲಿ ಗೌತಮ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವುದರಲ್ಲಿ ಮುಳುಗಿ ಹೋಗಿದ್ದಾನೆ. ಅಖಿಲಾಂಡೇಶ್ವರಿಯ ಕರೆಯನ್ನು ಸ್ವೀಕರಿಸಿಲ್ಲ. ಆದರೆ ಮಗು ಸಿಕ್ಕಿರುವ ವಿಚಾರವನ್ನು ಹೇಗಾದರೂ ಮಾಡಿ ಗೌತಮ್‌ಗೆ ಕೂಡಲೇ ಹೇಳಬೇಕೆಂದುಕೊಂಡಿರುವ ಅಖಿಲಾಂಡೇಶ್ವರಿ ಆಫೀಸ್‌ಗೆ ಕರೆ ಮಾಡಿದ್ದಾಳೆ.

ಇದೇ ವೇಳೆ ಮಾವ ಲಕ್ಷ್ಮೀಕಾಂತ್ ಅಖಿಲಾಂಡೇಶ್ವರಿಯ ಜೊತೆ ಮಾತನಾಡಿದ್ದಾನೆ. ಮಗು ಎಲ್ಲಿದೆ ಎನ್ನುವ ವಿಷಯವನ್ನು ಅಖಿಲಾಂಡೇಶ್ವರಿ ಹೇಳಿದ್ದು ಲಕ್ಷ್ಮೀಕಾಂತ್ ಅಡ್ರೆಸ್ ಬರೆದುಕೊಂಡಿದ್ದಾನೆ. ಮಗು ಸಿಕ್ಕಿರುವ ವಿಷಯ ಗೌತಮ್‌ಗೆ ಗೊತ್ತಾಗುತ್ತಾ..? ಅನ್ನುವುದೇ ಸದ್ಯದ ಕುತೂಹಲ.

Amruthadhare Twist Jaidev Plots a Dangerous Wild Card Entry Into Gautam s Life

ಉಂಡ ಮನೆಗೆ ದ್ರೋಹ

ಯಾಕೆಂದರೆ ಅಖಿಲಾಂಡೇಶ್ವರಿ ಹೇಳಿದ ಅಡ್ರೆಸ್‌ನ ಲಕ್ಷ್ಮೀಕಾಂತ್ ಏನೋ ಬರೆದುಕೊಂಡಿದ್ದಾನೆ. ಆದರೆ ಗೌತಮ್ ದಿವಾನ್ ಸಾಮ್ರಾಜ್ಯದಲ್ಲಿ ಉಂಡ ಮನೆಗೆ ಕನ್ನ ಹಾಕುವರ ಸಂತತಿ ಇನ್ನೂ ಹಾಗೇ ಇದೆ.

ಹೌದು, ಅಸಲಿಗೆ ಜೈದೇವ್‌ಗೆ ಮಗುವಿನ ವಿಚಾರ ಲಕ್ಷ್ಮೀಕಾಂತ್ ಹೇಳ್ತಾನೆ ಎಂದು ಎಲ್ಲರು ಅಂದುಕೊಂಡಿದ್ದರು. ಲಕ್ಷ್ಮೀಕಾಂತ್ ಮತ್ತು ಶಕುಂತಲಾ ಬದಲಾಗಿಲ್ಲ ಎಂದೇ ವಾದ ಮಾಡುತ್ತಿದ್ದರು. ಆದರೆ, ಗೌತಮ್‌ಗೆ ಈ ಖುಷಿಯ ವಿಷಯ ಹೇಳಬೇಕೆಂದುಕೊಂಡು ಲಕ್ಷ್ಮೀಕಾಂತ್ ಹೋಗಿದ್ದಾನೆ. ಆದರೆ ಲಕ್ಷ್ಮೀಕಾಂತ್ ಮತ್ತು ಅಖಿಲಾಂಡೇಶ್ವರಿಯ ಸಂಭಾಷಣೆ ಪೂರ್ತಿ ಕೇಳಿಸಿಕೊಂಡಿರುವ ಆಫೀಸ್‌ನಲ್ಲಿ ಕೆಲಸ ಮಾಡುವ ವ್ಯಕ್ತಿ ಜೈದೇವ್‌ಗೆ ಕರೆ ಮಾಡಿದ್ದಾನೆ. ಮಗು ವಿಚಾರ ಹೇಳಿದ್ದಾನೆ. ಈ ಮೂಲಕ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ.

ಜೈದೇವ್ ವೈಲ್ಡ್ ಕಾರ್ಡ್ ಎಂಟ್ರಿ

ಇನ್ನು ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ವ್ಯಕ್ತಿತ್ವ ಜೈದೇವ್‌ನದ್ದು. ಬೀದಿಗೆ ಬಿದ್ದು ದಿಯಾ ಬೇಬಿಯ ಮನೆಯಾಳು ಆದರೂ ಕೂಡ ಜೈದೇವ್ ಸೇಡಿಗೆ ಹಾತೊರೆಯುತ್ತಿದ್ದಾನೆ. ಹೀಗಾಗಿ ಜೈದೇವ್ ಗೆ ಈಗ ಲಡ್ಡು ಬಂದು ಬಾಯಿಗೆ ಬಿದ್ದಂತಾಗಿದೆ. ತಲೆ ಉಪಯೋಗಿಸಿ ಅಡ್ರೆಸ್ ಪಡೆಯುವಲ್ಲಿ ಯಶಸ್ವಿಯಾಗಿರುವ ಜೈದೇವ್ ಇದು ಹೊಸ ವೈಲ್ಡ್ ಕಾರ್ಡ್ ಎಂಟ್ರಿ ಎಂದು ಅಬ್ಬರಿಸಿದ್ದಾನೆ.

ಆದರೆ ಪ್ರೇಕ್ಷಕರಿಗೆ ಮಾತ್ರ ಜೈದೇವ್ ನ ಈ ಅಬ್ಬರ ಸುತಾರಾಂ ಇಷ್ಟ ಆಗಿಲ್ಲ. ಯಾಕೆಂದರೆ ಹಲವರು ''ಅಮೃತಧಾರೆ'' ಸುಖಾಂತ್ಯವನ್ನು ಬಯಸುತ್ತಿದ್ದಾರೆ. ಮುಕ್ತಾಯದ ಹಂತದಲ್ಲಿರುವ ''ಅಮೃತಧಾರೆ'' ತೀವ್ರ ನಿರಾಸೆ ಮಾಡದೆ ಬೇಗ ಮುಕ್ತಾಯವಾಗಲಿ ಎಂದು ಆಶಿಸುತ್ತಿದ್ಧಾರೆ. ಹೀಗಾಗಿಯೇ ಹಲವರು ಮತ್ತೇ ಅದೇ ಕಥೆ ಪುನರಾವರ್ತನೆ ಮಾಡಬೇಡಿ ಎಂಬ ಮನವಿಯನ್ನು ಮಾಡಿಕೊಳ್ಳುತ್ತಿದ್ದಾರೆ.

Amruthadhare Twist Jaidev Plots a Dangerous Wild Card Entry Into Gautam s Life

ಪ್ರೇಕ್ಷಕರ ಅಭಿಪ್ರಾಯ

*ಮತ್ತೆ ಶುರು ಆಯ್ತು ಗೋಳು. ಕೆ. ಡಿ. ಜಯದೇವ ಕುತಂತ್ರ.

*ಅಯ್ಯೋ ಪುನಃ ರೀಪೀಟ್ ಮಾಡಬೇಡಿ

*ಮತ್ತೆ ಹಳೆಯ ಕಥೆ ಶುರು ಆಗಿದೆ ಕ್ರಿಮಿನಲ್ ಜೇಡಿ ಕೇಡಿ ಶಕುನಿ ಮಾಮ ಇಬ್ಬರು ಶಕುನಿಗಳು ಸೇರಿ ಏನೋ ಸ್ಕೆಚ್ ರೆಡಿ ಮಾಡಿದ್ದಾರೆ

*ಜಟ್ಟಿ ಮಣ್ಣಿಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನೋ ಕ್ಯಾರೆಕ್ಟರ್ ಇವನದ್ದು

*ಯಾಕಿಷ್ಟು ಎಳಿತಾ ಇದೀರಾ ಮತ್ತೆ ನಮ್ ಭೂಮಿ ಗೌತಮ್ ಗೆ ತೊಂದ್ರೆ ಶುರು ಜೆಡಿ ಇಂದ

*ಇವ್ನು ಬುದ್ದಿ ಬಿಡಲ್ಲ ಇವ್ನು, ಇವ್ನ್ ಹೆಂಡ್ತಿನೇ ಸರಿ ಇವ್ನಿಗೆ

*ನಾಯಿ ಬಾಲ ನೆಟ್ಟಗೆ ಆಗೋದು ಜೈಗೆ ಬುದ್ಧಿ ಸರಿ ಆಗೋದು ಎರಡು ಒಂದೇ

*ಎಲ್ಲ ವಿಚಾರನೂ ಮೊದಲು ಈ ವಿಲನ್‌ಗೆ ಗೊತ್ತಾಗೋದು

ಮುಂದೇನು ..?

ಸದ್ಯ ಜೈದೇವ್‌ಗೆ ಮಗು ವಿಚಾರ ಗೊತ್ತಾಗಿದೆ. ಮಗು ಎಲ್ಲಿದೆ ಎನ್ನುವುದು ಕೂಡ ತಿಳಿದಿದೆ. ಈಗ ಜೈದೇವ್ ಆ ಮಗುವನ್ನು ಕಿಡ್ನ್ಯಾಪ್ ಮಾಡಬಹುದು. ಬ್ಲ್ಯಾಕ್ ಮೇಲ್ ಮಾಡಬಹುದು. ಪ್ರಾಣಕ್ಕೆ ಕುತ್ತು ತರಬಹುದು. ಆ ಮಗು ಮಿಂಚುನೇ ಆಗಿದ್ದರೂ ಆಗಿರಬಹುದು.

ಎಲ್ಲಕ್ಕಿಂತ ಮುಖ್ಯವಾಗಿ ಮಗಳಿಂದ ಕಂಟಕ ಇದೆ ಎಂದು ಈ ಹಿಂದೆ ಜ್ಯೋತಿಷಿ ಭವಿಷ್ಯ ನುಡಿದಿದ್ದಾನೆ. ಹೀಗಾಗಿ ಜೈದೇವ್‌ನ ಕಪಿಮುಷ್ಠಿಯಿಂದ ಮಗುವನ್ನು ಪಾರು ಮಾಡಲು ಹೋದಾಗ ಗೌತಮ್ ಪ್ರಾಣಕ್ಕೆ ಅಪಾಯವಾದರೂ ಆಗಬಹುದು.

ಒಟ್ನಲ್ಲಿ ''ಅಮೃತಧಾರೆ'' ಸದ್ಯ ರೋಚಕ ಹಂತಕ್ಕೆ ತಲುಪಿದೆ. ಕ್ಲೈಮ್ಯಾಕ್ಸ್ ಹಂತ ಬಂದಂತೆ ಇದೆ. ಮುಂದೆ ಮತ್ತೆ ಯಾವೆಲ್ಲ ತಿರುವುಗಳು ಎದುರಾಗುತ್ತವೆ..? ಎನ್ನುವುದನ್ನು ಕಾದು ನೋಡಬೇಕಿದೆ.

English summary
Will Jaidev ruin Gautam's world again? An office spy leaks the child's address, giving Jaidev the ultimate trump card for revenge. Find out what happens next!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X